Bigg Boss Kannada Season 12: ರಕ್ಷಿತಾ ಶೆಟ್ಟಿ ವಿರುದ್ಧ ಜಗಳ ಆಡಿ, ಬಾಯಿಗೆ ಬಂದ ಹಾಗೆ ಮಾತನಾಡಿ ಜಾಹ್ನವಿ, ಅಶ್ವಿನಿ ಗೌಡ ಅವರಿಗೆ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರಿಗೆ ಹೊರಗಡೆ ಯಾವ ರೀತಿ ಜನರು ನಮ್ಮನ್ನು ನೋಡ್ತಿದ್ದಾರೆ ಎಂದು ಅರಿವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಜಾಹ್ನವಿ ಅವರಿಗೆ ಹೊರಗಡೆ ಯಾವ ರೀತಿ ನಾವು ಕಾಣಿಸುತ್ತಿದ್ದೇವೆ? ನಮಗೆ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ ಎಂಬುದು ರಿಷಾ ಮೂಲಕ ಗೊತ್ತಾಗಿದೆ. ಈಗ ಅಸಲಿ ವಿಷಯ ಗೊತ್ತಾಗಿ ಅವರು ಅಳುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು ಆಟ ಆಡುತ್ತಿರುವ ಬಗೆ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ಈ ಬಗ್ಗೆ ವ್ಯಾಪಕ ನೆಗೆಟಿವ್ ಪ್ರತಿಕ್ರಿಯೆ ಸಿಗ್ತಿದೆ. ಇದೇ ವಿಚಾರವನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಿಷಾ ಅವರು ದೊಡ್ಮನೆಯಲ್ಲಿ ಹೇಳಿದ್ದಾರೆ. ಜಾಹ್ನವಿ ಜೊತೆ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.
ಬೆಡ್ ರೂಮ್ ಏರಿಯಾದಲ್ಲಿ ನಡೆದ ಮಾತುಕತೆ ಏನು?
ರಿಷಾ: ಹುಕ್ಕ ಥರ ಇದ್ದರೆ ಜಾಹ್ನವಿ ಕಳೆದು ಹೋಗ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಂಡು ಬಂದಿರ್ತೀರಾ. ನಿಮಗೆ ನೀವೇ ಮುಳ್ಳಾಗ್ತಿದ್ದೀರಾ
ಜಾಹ್ನವಿ: ನಮ್ಮ ಗುಂಡಿ ನೀವೆ ತೋಡಿಕೊಂಡ್ವಿ ಎನಿಸುತ್ತದೆ. ಹೊರಗಡೆ ಹೋಗುವಾಗ ನೆಗೆಟಿವಿಟಿ ಮಾಡ್ಕೊಂಡು ಹೋದರೆ?
ಅಶ್ವಿನಿ ಗೌಡ: ಬಿಗ್ ಬಾಸ್ ಮನೆಯಲ್ಲಿದ್ದವರು ಯಾರು ತಪ್ಪೇ ಮಾಡಿಲ್ವಾ? ನಮ್ಮ ವ್ಯಕ್ತಿತ್ವ ಅದಲ್ಲ. ಹೊರಗಡೆ ಬನ್ನಿ.
ರಿಷಾ: ನಾವು ಹೇಳಿ ಕೂಡ ಇವರು ದಡ್ಡರಾದರೆ, ಇವರು ರಿಯಲ್ ದಡ್ಡರು ಎಂದು ಸಾಬೀತಾಗುತ್ತದೆ.
ಬಿಗ್ ಬಾಸ್ ಮನೆಗೆ ಈಗಾಗಲೇ ಮ್ಯೂಟೆಂಟ್ ರಘು, ಸೂರಜ್, ರಿಷಾ ಅವರು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದರು. ರಿಷಾ ಅವರು ಈಗಾಗಲೇ ಎಲ್ಲರ ವ್ಯಕ್ತಿತ್ವ ಹೇಗಿದೆ? ಹೇಗೆ ಆಟ ಆಡುತ್ತಿದ್ದಾರೆ ಎಂದೆಲ್ಲ ಒಪನ್ ಆಗಿ ಹೇಳಿದ್ದರು. ಈಗ ಅವರು ಜಾಹ್ನವಿ ಬಳಿ ಹೋಗಿ, ಹೊರಗಡೆ ಜಗತ್ತಿಗೆ ಹೇಗೆ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅದೀಗ ಜಾಹ್ನವಿಗೆ ಬೇಸರ ತಂದಿದೆ.
ರಕ್ಷಿತಾ ಶೆಟ್ಟಿ ಜೊತೆ ಜಾಹ್ನವಿ, ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಜಗಳ ಆಡಿದ್ದರು. ಎಲ್ಲ ವಿಚಾರದಲ್ಲಿಯೂ ಇವರು ಮಾತನಾಡೋದು, ಜಗಳ ಮಾಡೋದು ಸ್ಪರ್ಧಿಗಳಿಗೆ ಬೇಸರ ತರಿಸಿತ್ತು. ಅಶ್ವಿನಿ ಗೌಡ ಅವರಂತೂ ಮಿತಿ ಮೀರಿ ಮಾತನಾಡಿದ್ದರು. ಇನ್ನು ತಾನೇ ಸುಂದರಿ ಎಂದು ಜಾಹ್ನವಿ ಅವರು ಹೇಳಿಕೊಳ್ಳೋದು ಅಥವಾ ಇಡೀ ದಿನ ಮೇಕಪ್ ಮಾಡಿಕೊಂಡು ಓಡಾಡೋದು ಕೂಡ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು. ಹೊರಗಡೆ ಡಿವೋರ್ಸ್ ಬಗ್ಗೆ ಜಾಹ್ನವಿ ಮಾತನಾಡಿದ್ದರೆ, ಹೊರಗಡೆ ಅವರ ಮಾಜಿ ಪತಿ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದರು.
ಜಾಹ್ನವಿ ಜೊತೆ ಯಾಕೆ ಮನಸ್ತಾಪ ಬಂತು? ಯಾಕೆ ಡಿವೋರ್ಸ್ ಆಯ್ತು ಎಂದು ಒಟ್ಟಾರೆಯಾಗಿ ಜಾಹ್ನವಿ ಆರೋಪಗಳಿಗೆ ಅವರು ತಿರುಗೇಟು ಕೊಟ್ಟಿದ್ದರು. ವೀಕ್ಷಕರಿಗೆ ನೆಗೆಟಿವ್ ಅಭಿಪ್ರಾಯ ಇರೋದಂತೂ ಹೌದು. ಇದನ್ನೇ ರಿಷಾ ಅವರು ದೊಡ್ಮನೆಯಲ್ಲಿ ಹೇಳಿದ್ದರು. ಅದೀಗ ಜಾಹ್ನವಿಗೆ ಬೇಸರ ತಂದಿದ್ದರೆ, ಅಶ್ವಿನಿ ಗೌಡ ಮಾತ್ರ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದರು.
