- Home
- Entertainment
- TV Talk
- ಆ ಮಾತು ಹೇಳಿದ್ದಕ್ಕೆ Bigg Boss ಮನೆಯಲ್ಲೇ ಮಹಿಳೆಯಿಂದ ಚಪ್ಪಲಿ ಏಟು ತಿಂದ ಸ್ಪರ್ಧಿ! ಯಾರದು?
ಆ ಮಾತು ಹೇಳಿದ್ದಕ್ಕೆ Bigg Boss ಮನೆಯಲ್ಲೇ ಮಹಿಳೆಯಿಂದ ಚಪ್ಪಲಿ ಏಟು ತಿಂದ ಸ್ಪರ್ಧಿ! ಯಾರದು?
Bigg Boss Show: ಬಿಗ್ ಬಾಸ್ ಕನ್ನಡ ಸೀಸನ್ 19ರಲ್ಲಿ ಭಾಗವಹಿಸಿರುವ ಶೆಹಬಾಜ್ ಅವರು, ತಮ್ಮ ಕಾಮಿಡಿಯಿಂದಲೇ ದೊಡ್ಮನೆಯಲ್ಲಿ ನಿತ್ಯವೂ ನಗು ತರಿಸುತ್ತಿದ್ದಾರೆ. ಇವರಿಂದಲೇ ಉಳಿದವರು ಕೂಡ ಸ್ವಲ್ಪ ಜಗಳ ಬಿಟ್ಟು, ನಗೋಕೆ ಆರಂಭಿಸಿದ್ದಾರೆ. ಕಾಮಿಡಿ ಮಾಡುತ್ತಿದ್ದ ಶೆಹಬಾಜ್‌ಗೆ ಈಗ ಚಪ್ಪಲಿ ಏಟು ಸಿಕ್ಕಿದೆ.

ತನ್ನನ್ನೇ ಕಾಮಿಡಿ ಮಾಡ್ಕೊಂಡ ಶೆಹಬಾಜ್
ಶೆಹಬಾಜ್ ಅವರಂತೂ ಬಿಗ್ ಬಾಸ್ ಮನೆಯಲ್ಲಿ ಅರ್ಧಂಬರ್ಧ ಇಂಗ್ಲಿಷ್ ಮಾತನಾಡುತ್ತ, ಬೊಜ್ಜು ಬಂದಿರುವ ಹೊಟ್ಟೆ ಮೇಲೆ ಮುಖದ ಸ್ಕೆಚ್ ಮಾಡಿ ಕೂಡ ಕಾಮಿಡಿ ಮಾಡಿದ್ದರು. ದಪ್ಪ ಆಗಿರುವ ಅವರು ಅದೇ ವಿಷಯವನ್ನು ಇಟ್ಟುಕೊಂಡು ಕಾಮಿಡಿ ಮಾಡಿದ್ದರು.
ಸ್ಪರ್ಧಿಗಳ ಆಟದ ವಿಮರ್ಶೆ ಮಾಡ್ತಾರೆ
ಶೆಹಬಾಜ್ ಅವರ ಕಾಮಿಡಿ ಶೈಲಿ, ಅನಾಯಾಸವಾಗಿ ಎಲ್ಲರ ಮುಖದಲ್ಲೂ ನಗು ತರಿಸುವ ಅವರ ಸಾಮರ್ಥ್ಯ ನಿಜಕ್ಕೂ ಮೆಚ್ಚಬೇಕಿದೆ. ಶೆಹಬಾಜ್ ಅವರು ನೈಸರ್ಗಿಕವಾಗಿ ಕಾಮಿಡಿ ಮಾಡುತ್ತಾರೆ. ಶೆಹಬಾಜ್ ಅವರು ಉಳಿದ ಸ್ಪರ್ಧಿಗಳ ಆಟವನ್ನು ಕೂಡ ವಿಮರ್ಶೆ ಮಾಡುತ್ತಾರೆ, ಸರಿಯಾಗಿ ಗ್ರಹಿಸುತ್ತಾರೆ.
ಕಾಮಿಡಿ ವಿಡಿಯೋಗಳು ವೈರಲ್
ಶೆಹಬಾಜ್ ಅವರು ಕಾಮಿಡಿ ಮಾಡಿದರೂ ಕೂಡ ಮಿತಿ ಮೀರಿಲ್ಲ. ಇನ್ನೊಂದು ಕಡೆ ಬಾಯಿ ತೆಗೆದರೆ ಸುಳ್ಳು ಹೇಳುವ ತಾನ್ಯಾ ಮಿತ್ತಲ್‌ಗೆ ಅವರು ಅವಕಾಶ ಸಿಕ್ಕಾಗೆಲ್ಲ ಕಾಮಿಡಿ ಮಾಡೋದುಂಟು. ಇವರ ಕಾಮಿಡಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುತ್ತವೆ.
ಕಾಮಿಡಿ ಮಾಡಿದ್ದೇನು?
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಮೋಡಿ ಮಾಡಿದ್ದ ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಅವರು ಭೋಜಪುರಿ ನಟಿ ನೀಲಂ ಗಿರಿ ಜೊತೆ ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಪದ್ಯದ ರೂಪದಲ್ಲಿ, “ನಿನ್ನನ್ನು ಮೊದಲು ನೋಡಿದಾಗ ಲವ್ ಆಗಿತ್ತು, ಆಗ ನಾನು ದೂರದಿಂದ ನೋಡಿದ್ದೆ, ಹತ್ತಿರದಿಂದ ನಾನು ನೋಡಿರಲೇ ಇಲ್ಲ. ನೀನು ನನ್ನ ಲವ್ ಮಾಡ್ತೀಯಾ? ಎಂದು ಕೇಳಿದ್ದಾರೆ. ಆಗ ನೀಲಂ ಅವರು, “ಇಲ್ಲ” ಎಂದಿದ್ದಾರೆ. ಆಗ ಶೆಹಬಾಜ್, “ಒಳ್ಳೆಯದಾಯ್ತು, ಇಲ್ಲ ಅಂದ್ರೆ ನಾನು ಕೆಳಮಟ್ಟಕ್ಕೆ ಹೋಗುತ್ತಿದ್ದೆ” ಎಂದಿದ್ದಾರೆ.
ಚಪ್ಪಲಿ ಎಸೆದಿದ್ದು ಸರಿಯೇ?
ಶೆಹಬಾಜ್ ಈ ಮಾತು ಆಡಿರೋದು ನೀಲಂಗೆ ಸಿಟ್ಟು ತರಿಸಿದೆ. ಹೀಗಾಗಿ ಅವರು ಕಾಲಿಗೆ ಹಾಕಿಕೊಂಡಿದ್ದ ಎರಡೂ ಚಪ್ಪಲಿಯನ್ನು ತೆಗೆದು, ನೀಲಂ ಮೇಲೆ ಎಸೆದಿದ್ದಾರೆ. ಇದು ಹಿಂದಿ ಬಿಗ್ ಬಾಸ್ ಶೋನಲ್ಲಿ ಆಗಿರೋದು. ಇದನ್ನು ಕಾಮಿಡಿಯಾಗಿ ತಗೊಳ್ಳಲಾಗಿದೆ. ಬಹುಶಃ ಕನ್ನಡದಲ್ಲಿ ಆಗಿದ್ದಿದ್ದರೆ ದೊಡ್ಡ ವಿವಾದವೇ ಆಗುತ್ತಿತ್ತು. ಹಾಗೆಂದು ಚಪ್ಪಲಿ ಎಸೆಯೋದು ಶುಭವಲ್ಲ.