- Home
- Entertainment
- TV Talk
- Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್ ಯಾರು? ಕೆನಡಾದಿಂದ ಬಂದದ್ಯಾಕೆ?
Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್ ಯಾರು? ಕೆನಡಾದಿಂದ ಬಂದದ್ಯಾಕೆ?
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಸೂರಜ್ ಸಿಂಗ್ಎಂ ಟ್ರಿ ಕೊಟ್ಟಿದ್ದಾರೆ. ಕೆನಡಾದಲ್ಲಿ ಐಟಿ ಉದ್ಯೋಗಿಯಾಗಿದ್ದ ಇವರು, ಫಿಟ್ನೆಸ್ ಫ್ರೀಕ್ ಮತ್ತು ಮಾಡೆಲ್ ಆಗಿದ್ದು, ತಮ್ಮ ಸ್ಟೈಲಿಶ್ ಎಂಟ್ರಿ ಮೂಲಕವೇ ಗಮನ ಸೆಳೆದಿದ್ದಾರೆ. ಇವರು ಯಾರು, ಹಿನ್ನೆಲೆ ಏನು?

ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ
Bigg Boss ಮನೆಯಿಂದ ಡಾಗ್ ಸತೀಶ್, ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್.ಎಸ್ ಈ ಮೂವರು ಹೋಗುತ್ತಿದ್ದಂತೆಯೇ ಮತ್ತೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ಸೂರಜ್ ಸಿಂಗ್ (Bigg Boss Sooraj Singh)
ಷರ್ಟ್ ಬಿಚ್ಚಿ ಪೋಸ್
ನಿನ್ನೆ ಇವರು ಎಂಟ್ರಿ ಕೊಟ್ಟಿದ್ದೇ ವಿಭಿನ್ನ ಸ್ಟೈಲ್ನಲ್ಲಿ. ನೀರಿನಲ್ಲಿ ಮುಳುಗಿ ಮೇಲೆದ್ದು ಬಂದು, ಅಲ್ಲಿದ್ದ ಸ್ಪರ್ಧಿಗಳ ಎದುರೇ ಷರ್ಟ್ ಬಿಚ್ಚಿ ಪೋಸ್ ಕೊಟ್ಟಿದ್ದರು. ಇದನ್ನು ನೋಡಿ ಅಲ್ಲಿದ್ದ ಯುವತಿಯರು, ಆಂಟಿಗಳು ಎಲ್ಲರೂ ವಾವ್ಹ್ ಎನ್ನುವ ಮೂಲಕ ಸೂರಜ್ ಅವರನ್ನೇ ಬಿಟ್ಟ ಕಣ್ಣುಗಳಿಂದ ನೋಡಿದರು.
ಕಾವ್ಯಾ ಶೈವ ಫಿದಾ
ಅದರಲ್ಲಿಯೂ ಕಾವ್ಯಾ ಶೈವ (Kavya Shaiva) ಅವರ ನೋಟ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸೂರಜ್ ಅವರನ್ನು ಕಂಡು ಅವರ ಬಾಡಿ ಲ್ಯಾಂಗ್ವೇಜೇ ಬೇರೆ ಆಗಿ ಹೋಗಿತ್ತು. ಸೂರಜ್ ಅವರು ಷರ್ಟ್ ಬಿಚ್ಚಿ ಪುನಃ ಹಾಕಿಕೊಂಡಾಗ ಕಾವ್ಯಾ ಅವರೇ ನಾಚಿ ನೀರಾಗಿದ್ದನ್ನೂ ಪ್ರೊಮೋದಲ್ಲಿ ನೋಡಬಹುದಾಗಿದೆ.
ಸೂರಜ್ ಸಿಂಗ್ ಯಾರು?
ಹಾಗಿದ್ದರೆ ಬಿಗ್ಬಾಸ್ ಹುಡುಗಿಯರ ಎದೆ ಬಡಿತ ಏರುವಂತೆ ಮಾಡಿ, ಎದೆ ಬಡಿತ ಹೆಚ್ಚುವಂತೆ ಮಾಡಿದ ಈ ಸೂರಜ್ ಸಿಂಗ್ ಯಾರು ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲವಿದೆ. ಬಿಗ್ಬಾಸ್ನಲ್ಲಿ ಚೆಂದದ ಹುಡುಗಿ ಯಾರು ಕೇಳಿದಾಗ ರಿಷಿಕಾಗೆ ಗುಲಾಬಿ ಕೊಟ್ಟ ಈ ಯುವಕನ ಹಿನ್ನೆಲೆ ಏನು?
ಕೆನಡಾದಲ್ಲಿ ಶಿಕ್ಷಣ
ಮೈಸೂರಿನ ಸೂರಜ್, ಹಲವು ವರ್ಷ ಕೆನಡಾನಲ್ಲಿದ್ದರು. ಐಟಿ ಉದ್ಯೋಗಿ ಇವರು. ಫಿಟ್ನೆಸ್ ಫ್ರೀಕ್, ಮಾಡೆಲ್ ಕೂಡ ಆಗಿರೋ ಸೂರಜ್ ಉನ್ನತ ಶಿಕ್ಷಣಕ್ಕೆ ಕೆನಡಾಕ್ಕೆ ಹೋಗಿದ್ದರು.
ಅಮ್ಮನ ಕಾರಣ ವಾಪಸ್
ಆದರೆ ಇಲ್ಲಿ ಅಮ್ಮ ಒಬ್ಬರೇ ಇರುವ ಕಾರಣ ವಾಪಸ್ ಬಂದರಂತೆ. ನನ್ನ ಅಕ್ಕನಿಗೆ ಮದುವೆ ಆಯ್ತು, ನನ್ನ ತಾಯಿ ಒಬ್ರೇ ಇರ್ತಾರೆ. ಹಾಗಾಗಿ ಬಂದೆ. ಈ ಸಮಯದಲ್ಲಿ ನಾನು ಅವರ ಜೊತೆಗೆ ಇರಬೇಕು. ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿದ್ದಾರೆ ನಮ್ಮಮ್ಮ ಎಂದು ಹೇಳಿಕೊಂಡಿದ್ದಾರೆ.
ಫ್ಯಾಷನ್ ಪ್ರಿಯ
ಅವರೇ ಹೇಳಿಕೊಂಡಿರೋ ಹಾಗೆ ಅವರೊಬ್ಬ ಫ್ಯಾಷನ್ ಪ್ರಿಯ. ಚೆನ್ನಾಗಿ ರೆಡಿ ಆಗಿ ಪಾರ್ಟಿಗಳಿಗೆ ಕಾರ್ಯಕ್ರಮಗಳಿಗೆ ಹೋಗುವುದು ಅವರ ಅಭ್ಯಾಸವಂತೆ. ತಮ್ಮ ಫ್ಯಾಷನ್ ಜ್ಞಾನವನ್ನು ಎಲ್ಲರಿಗೂ ಹಂಚಬೇಕು ಎಂದುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಅದು ಹಿಟ್ ಆಗಿ ಅವರಿಗೆ ಒಳ್ಳೆಯ ಫಾಲೋವರ್ಗಳು ಸಿಕ್ಕಿದ್ದಾರೆ.
ಸ್ಪರ್ಧಿಗಳಿಗೆ ವಾರ್ನಿಂಗ್
ನನಗೆ ಚೆನ್ನಾಗಿ ಅಡುಗೆ ಸಹ ಮಾಡಲು ಬರುತ್ತೆ ಎಂದಿರುವ ಸೂರಜ್, ಶೆಫ್ ಆಗಿಯೂ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ನನ್ನೊಟ್ಟಿಗೆ ಯಾರು ಚೆನ್ನಾಗಿ ಇರುತ್ತಾರೆಯೋ ಅವರೊಟ್ಟಿಗೆ ನಾನೂ ಚೆನ್ನಾಗಿ ಇರುತ್ತೇನೆ. ಆದರೆ ನನ್ನೊಟ್ಟಿಗೆ ಯಾರು ಕೆಟ್ಟದಾಗಿ ನಡೆದುಕೊಳ್ಳುತ್ತಾರೊ ಅವರ ಜೊತೆ ನಾನು ಇನ್ನೂ ಕೆಟ್ಟದಾಗಿ ನಡೆದುಕೊಳ್ಳುತ್ತೇನೆ. ನನ್ನನ್ನು ಎದುರು ಹಾಕಿಕೊಂಡವರು ಬಹಳ ಕಷ್ಟಪಡಬೇಕಾಗುತ್ತದೆ ಎಂದೂ ಹೇಳುವ ಮೂಲಕ ಸಹ ಸ್ಪರ್ಧಿಗಳಿಗೆ ವಾರ್ನಿಂಗ್ ಮಾಡಿದ್ದಾರೆ.