Published : May 20, 2026, 07:03 AM ISTUpdated : May 20, 2026, 11:12 PM IST

Karnataka News Live: Trisha - 'ಮೇ ಮ್ಯಾಜಿಕ್, ಇನ್ನೊಂದು ಗೆಲುವಿಗೆ' ಎಂದ ತ್ರಿಷಾ.. 'ದಳಪತಿ' ಗೆಲುವಿಗೆ ಕನೆಕ್ಟ್ ಮಾಡಿಕೊಂಡು ನೆಟ್ಟಿಗರು ಹೇಳ್ತಿರೋದೇನು?

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ ಮುಂದುವರಿದಿದ್ದು, ಮಂಗಳವಾರ ದಾವಣಗೆರೆ, ಬೀದರ್‌, ರಾಯಚೂರು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬಳ್ಳಾರಿಯಲ್ಲಿ ವರುಣನ ಆರ್ಭಟಕ್ಕೆ ಸುಮಾರು 500ಕ್ಕೂ ಅಧಿಕ ಮರಗಳು ಹಾಗೂ 76 ವಿದ್ಯುತ್ ಕಂಬಗಳು ಧರೆಗುರುಳಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಗುಡುಗು, ಮಿಂಚಿನ ಮಳೆಗೆ 20 ಅಡಕೆ ಮರಗಳು ಸುಟ್ಟುಹೋಗಿದೆ. ಇನ್ನೂ ರಾಯಚೂರಿನ ಮಾನ್ವಿ, ಮಸ್ಕಿ ಹಾಗೂ ಲಿಂಗಸುಗೂರು ಇತರೆ ಪ್ರದೇಶಗಳಲ್ಲಿ ವಿದ್ಯುತ್‌ ಕಂಬ, ಮರಗಳು ನೆಳಕ್ಕುರುಳಿವೆ.

ಕಾರವಾರದಲ್ಲಿ ಚಂಡಮಾರುತ, ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಗೋಕರ್ಣ, ಮುರು ಡೇಶ್ವರ, ಕಾರವಾರ ಬೀಚ್‌ಗಳಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಚಂಡಮಾರುತ ಹಾಗೂ ಭಾರಿ ಮಳೆ ಉಂಟಾಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿರುವುದರಿಂದ ಸುರಕ್ಷತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

11:12 PM (IST) May 20

Trisha - 'ಮೇ ಮ್ಯಾಜಿಕ್, ಇನ್ನೊಂದು ಗೆಲುವಿಗೆ' ಎಂದ ತ್ರಿಷಾ.. 'ದಳಪತಿ' ಗೆಲುವಿಗೆ ಕನೆಕ್ಟ್ ಮಾಡಿಕೊಂಡು ನೆಟ್ಟಿಗರು ಹೇಳ್ತಿರೋದೇನು?

ತ್ರಿಶಾ ಅವರ ಈ 'ಗಾಡ್ ಥಿಂಗ್ಸ್' ಹಿಂದೆ ನಿಜಕ್ಕೂ ವಿಜಯ್ ಇದ್ದಾರಾ? ಅಥವಾ ಇದು ಕೇವಲ ಅಭಿಮಾನಿಗಳ ಕಲ್ಪನೆಯಾ? ಕಾಲವೇ ಉತ್ತರಿಸಬೇಕು! ಆದರೆ ಸದ್ಯಕ್ಕಂತೂ ತ್ರಿಶಾ ಕೃಷ್ಣನ್ ಬಾಕ್ಸ್ ಆಫೀಸ್ ಹಾಗೂ ಸೋಷಿಯಲ್ ಮೀಡಿಯಾ ‘ಕ್ವೀನ್’  ಆಗಿ ಮೆರೆಯುತ್ತಿದ್ದಾರೆ.

Read Full Story

11:00 PM (IST) May 20

ಬಸ್‌ಗಳ ಬೆನ್ನಲ್ಲೇ ಈಗ ಬಿಎಂಟಿಸಿ ಟಿಕೆಟ್ ಹಿಂದೆಯೂ ಜಾಹೀರಾತು - ಆದಾಯ ಹೆಚ್ಚಳಕ್ಕೆ ಸಂಸ್ಥೆ ಮಾಸ್ಟರ್ ಪ್ಲಾನ್!

ಪ್ರಯಾಣ ದರ ರಹಿತ ಆದಾಯವನ್ನು ಹೆಚ್ಚಿಸಲು, ಬಿಎಂಟಿಸಿ ತನ್ನ ಬಸ್ ಟಿಕೆಟ್‌ಗಳ ಹಿಂಭಾಗದಲ್ಲಿ ಜಾಹೀರಾತುಗಳನ್ನು ಮುದ್ರಿಸಲು ಮತ್ತು ಸೀಟುಗಳ ಹಿಂದೆ ಕ್ಯೂಆರ್ ಕೋಡ್ ಅಳವಡಿಸಲು ಮುಂದಾಗಿದೆ. 'ಶಕ್ತಿ' ಯೋಜನೆಯ ಆರ್ಥಿಕ ಒತ್ತಡವನ್ನು ಸರಿದೂಗಿಸಲು ಸಂಸ್ಥೆಯು ಭೂಮಿ ನಗದೀಕರಣಕ್ಕೆ ಮುಂದಾಗುತ್ತದೆ.

Read Full Story

10:38 PM (IST) May 20

ಹುಬ್ಬಳ್ಳಿಯಲ್ಲಿ ದುರಂತ - ಕಾಣೆಯಾಗಿದ್ದ 9 ವರ್ಷದ ಬಾಲಕ ನಿರ್ಮಾಣ ಹಂತದ ಗುಂಡಿಯಲ್ಲಿ ಶವವಾಗಿ ಪತ್ತೆ

ಹುಬ್ಬಳ್ಳಿಯ ವಿಜಯನಗರದಲ್ಲಿ ಆಟವಾಡಲು ಹೋಗಿದ್ದ 9 ವರ್ಷದ ಬಾಲಕ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಸ್ನೇಹಿತರು ಭಯದಿಂದ ವಿಷಯ ಮುಚ್ಚಿಟ್ಟಿದ್ದು, ಪೋಷಕರು ದೂರು ನೀಡಿದ ನಂತರ ಪೊಲೀಸರ ತನಿಖೆಯಿಂದ ಈ ದುರಂತ ಘಟನೆ ಬೆಳಕಿಗೆ ಬಂದಿದೆ.
Read Full Story

09:27 PM (IST) May 20

ಪಕ್ಕದ ಮನೆಯವರ ಬಳಿ ಮೊಬೈಲ್​ ಕೇಳಿದ್ದಕ್ಕೆ ಬೈದ ಅಮ್ಮ - ಡೆತ್​ನೋಟ್​ ಬರೆದಿಟ್ಟು ಮಂಡ್ಯದ ಬಾಲೆಯರು ಕಣ್ಮರೆ

ಮಂಡ್ಯ ಜಿಲ್ಲೆಯಲ್ಲಿ, ತಾಯಿ ಗದರಿದ್ದಕ್ಕೆ ಇಬ್ಬರು ಸಹೋದರಿಯರು ಡೆತ್ ನೋಟ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾರೆ. ನಾವು ದೂರ ಹೋಗಿ ಸಾಯುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story

09:21 PM (IST) May 20

10 ಗಂಟೆ ಹಿಂದೆ ಫೇಸ್‌ಬುಕ್‌ ಪೋಸ್ಟ್, 4 ಗಂಟೆ ಹಿಂದೆ ಆಕ್ಟಿವ್‌ ಇದ್ದ ತೀರ್ಥಹಳ್ಳಿ ಟಿಜಿ ನಂದೀಶ್‌ ಇನ್ನಿಲ್ಲ!

T G Nandish Death: 47ನೇ ವಯಸ್ಸಿಗೆ ದಿಲೀಪ್‌ ರಾಜ್‌ ಅವರು ನಿಧನರಾದರು. ಈ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ 37ನೇ ವಯಸ್ಸಿಗೆ ಸಂಭಾಷಣೆಕಾರ ಟಿಜಿ ನಂದೀಶ್‌ ಅವರು ನಿಧನರಾಗಿದ್ದಾರೆ. ಮೊನ್ನೆ ಮೊನ್ನೆ ದಿಲೀಪ್‌ ಸಾವಿಗೆ ಸಂತಾಪ ಸೂಚಿಸಿದ್ದ ನಂದೀಶ್‌ ಈಗ ನೆನಪಾಗಿ ಉಳಿದಿದ್ದಾರೆ.

 

Read Full Story

08:39 PM (IST) May 20

ಕಣ್ಣೀರಿನ ನಡುವೆ ಮತ್ತೊಂದು ದುರಂತ - ಮಸಣದಿಂದ ಮರಳುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು

ಮಣ್ಣು ಕೊಟ್ಟು ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ಮಸಣ ಸೇರಿದ ದುರ್ಘಟನೆ ಬುಧವಾರ ಜರುಗಿದೆ. ತಾಲೂಕಿನ ರಾಜೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ.

Read Full Story

07:10 PM (IST) May 20

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜೀ ಪುತ್ರನ ಬಿಗ್ ಡೀಲ್ - ಬರೋಬ್ಬರಿ 45.71 ಕೋಟಿಗೆ ಐಷಾರಾಮಿ ಪೆಂಟ್‌ಹೌಸ್ ಖರೀದಿಸಿದ ತಾರಿಕ್ ಪ್ರೇಮ್‌ಜೀ!

ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಅವರ ಪುತ್ರ ತಾರಿಕ್ ಪ್ರೇಮ್‌ಜೀ, ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ₹45.71 ಕೋಟಿ ಮೌಲ್ಯದ ಐಷಾರಾಮಿ ಪೆಂಟ್‌ಹೌಸ್ ಖರೀದಿಸಿದ್ದಾರೆ. '27 ಸಮ್ಮಿಟ್' ಕಟ್ಟಡದಲ್ಲಿರುವ ಈ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್, 11 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಒಳಗೊಂಡಿದೆ.

Read Full Story

06:56 PM (IST) May 20

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ವಂಚನೆ ಪ್ರಕರಣ, ಈಗ ಹುಬ್ಬಳ್ಳಿ ಜನರಿಗೆ ಶಿವಾನಂದನದ್ದೇ ಚಿಂತೆ!

ಬಹುಕೋಟಿ ಹಗರಣದಲ್ಲಿ ಬಂಧಿತನಾದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಹುಟ್ಟೂರು ಹುಬ್ಬಳ್ಳಿಯೊಂದಿಗೂ ನಂಟು ಹೊಂದಿದ್ದ. ಈತನ ಆ್ಯಪ್‌ನಲ್ಲಿ ಹುಬ್ಬಳ್ಳಿಯವರೂ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ತನಿಖೆ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.
Read Full Story

06:56 PM (IST) May 20

ಗಂಗಾವತಿ ನ್ಯಾಯಾಲಯದಲ್ಲಿ ದುರಂತ - 25 ವರ್ಷದ ಯುವ ವಕೀಲ ಹೃದಯಾಘಾತದಿಂದ ಸಾವು!

ಯುವ ವಕೀಲ ಕನಕೇಶ್ ಮುರುಡಿ (25) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕನಕೇಶ ಮೃತಪಟ್ಟಿದ್ದಾರೆ. 

Read Full Story

06:23 PM (IST) May 20

Shocking - ಬಾಲ್ಯದ ಭೀಕರ ಕಿರುಕುಳ, ಗ್ಲಾಮರ್ ಲೋಕದ ಕರಾಳ ಮುಖ ಬಿಚ್ಚಿಟ್ಟ ಡಾ. ಅದಿತಿ ಗೋವಿತ್ರಿಕರ್!

ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. "ವಯ್ಯಾರಿ ಭಾಮ ನೀ ಹಂಸ ನಡಕ.." ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ. 

Read Full Story

05:17 PM (IST) May 20

ಬಿಡದಿ ಟೌನ್‌ಶಿಪ್ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಯಾಕೆ ಪತ್ರ ಬರೀತಾರೆ? ಅವರು ಮೋದಿಗೆ ಪತ್ರ ಬರೆಯಬೇಕು - ಡಿಕೆಶಿ

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ಕುಮಾರಸ್ವಾಮಿ ಕಾಲದ್ದೇ ಎಂದು ಸ್ಪಷ್ಟಪಡಿಸಿ, ರೈತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ್ದಾರೆ.  

Read Full Story

03:29 PM (IST) May 20

ಲಕ್ಕುಂಡಿ ರಹಸ್ಯ ಭೇದಿಸಲು ಇಸ್ರೋ ಎಂಟ್ರಿ - ಸ್ಯಾಟಲೈಟ್ ಕಣ್ಣಲ್ಲಿ ನೂರೊಂದು ದೇಗುಲಗಳ ಹುಡುಕಾಟ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನೂರೊಂದು ಬಾವಿ ಮತ್ತು ದೇವಾಲಯಗಳನ್ನು ಪತ್ತೆಹಚ್ಚಲು ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.  ಇತ್ತೀಚೆಗೆ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ.

Read Full Story

03:17 PM (IST) May 20

ಹೆಂಡ್ತಿಯೊಂದಿಗೆ ಜಗಳ; ಛದ್ಮವೇಶದಲ್ಲಿ ಫಸ್ಟ್ ಪ್ರೈಸ್ ಗೆದ್ದ 3 ವರ್ಷದ ಪುಟ್ಟ ಪೋರ; ಎಲ್ಲರಿಂದಲೂ ಚಪ್ಪಾಳೆ!

Funny husband wife fancy dress kid: ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ಇಡಲಾಗುವುದು. ಇತ್ತೀಚೆಗೆ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಶಾಲೆಯಲ್ಲಿ ಪ್ರಾಜೆಕ್ಟ್‌ ವರ್ಕ್‌, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಈಗ ಪುಟ್ಟ ಪೋರ ವಿಶೇಷ ಕಾಸ್ಟ್ಯೂಮ್‌ ಹಾಕಿ ಗಮನಸೆಳೆದಿದ್ದಾನೆ.

 

Read Full Story

03:16 PM (IST) May 20

ಬೆಳಗಾವಿ - ಶಿವಂ ಅಸೋಶಿಯೇಟ್ಸ್ 4500 ಕೋಟಿ ರೂ ಹಗರಣ, ನೀಲಣ್ಣವರ ವಿರುದ್ಧ ಪ್ರಪ್ರಥಮ ಖಾಸಗಿ ದೂರು ದಾಖಲು

ಶಿವಂ ಅಸೋಶಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧದ 4500 ಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಖಾಸಗಿ ದೂರು ದಾಖಲಾಗಿದೆ. ಶೇ.36ರಷ್ಟು ಬಡ್ಡಿಯ ಆಮಿಷಕ್ಕೆ ಒಳಗಾಗಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿ ವಂಚನೆಗೊಳಗಾದ ಹೂಡಿಕೆದಾರರೊಬ್ಬರು ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಐಡಿ ತನಿಖೆ ನಡೆಯುತ್ತಿರುವಾಗಲೇ ಈ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read Full Story

03:06 PM (IST) May 20

ಅಪ್ಪು PRK ಆಡಿಯೋದಿಂದ 'ರಗಡೋ ರಕ್ಕಿ' ಹಾಡು ರಿಲೀಸ್; Gen Z 'ರಕ್ಕಿ'ಯಲ್ಲಿ ಇವೆಲ್ಲಾ ಇವೆ!

ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್‌ನಿಂದ ಈ ಹಾಡು ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.

Read Full Story

02:45 PM (IST) May 20

ಷೇರುದಾರರಿಗೆ ಬಂಪರ್! ದಾಖಲೆಯ ₹2,998 ಕೋಟಿ ಆದಾಯ, ₹724 ಕೋಟಿ ಲಾಭ ಗಳಿಸಿದ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್

'ಬಿಎಲ್‌ಎಸ್‌ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿಮಿಟೆಡ್' 2026ನೇ ಆರ್ಥಿಕ ವರ್ಷದಲ್ಲಿ ಶೇ. 36.7ರಷ್ಟು ಆದಾಯ ಏರಿಕೆ ಮತ್ತು ಶೇ. 34.1ರಷ್ಟು ನಿವ್ವಳ ಲಾಭದೊಂದಿಗೆ ದಾಖಲೆಯ ಸಾಧನೆ ಮಾಡಿದೆ. ವೀಸಾ ಮತ್ತು ಡಿಜಿಟಲ್ ಸೇವೆಗಳ ವಿಭಾಗದಲ್ಲಿನ ಬೃಹತ್ ಬೆಳವಣಿಗೆಯು ಈ ಯಶಸ್ಸಿಗೆ ಕಾರಣವಾಗಿದ್ದು, ಕಂಪನಿಯು ಷೇರುದಾರರಿಗೆ ಲಾಭಾಂಶವನ್ನೂ ಘೋಷಿಸಿದೆ.
Read Full Story

02:35 PM (IST) May 20

ಕೋಟಿ ವಂಚಕನಿಗಿತ್ತು 'ಸ್ಯಾಂಡಲ್‌ವುಡ್' ಲಿಂಕ್; 'ಡಿಂಗರ್ ಬಿಲ್ಲಿ' ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು ಗೊತ್ತಾ?

ರಾಜ್ಯವೇ ಬೆಚ್ಚಿ ಬಿದ್ದಿರೋ ಬಹುಕೋಟಿ ಮಹಾ ವಂಚಕ, ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದ. 4500 ಕೋಟಿ ದೋಖಾ ಕೇಸ್ ​ರೂವಾರಿ ಈ ಶಿವಾನಂದ್​ನೀಲಣ್ಣನವರ್​, ಮಾಜಿ ನೀಲಿ ತಾರೆ ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು ಗೊತ್ತಾ? ಈ ಸ್ಟೋರಿ ನೋಡಿ.. 

Read Full Story

01:19 PM (IST) May 20

ಮೈಸೂರು - ಎಸ್​ ಟಿಜೆ ಗೋಲ್ಡ್​ ಮಾಲೀಕನಿಂದ 20 ಕೋಟಿಗೂ ಅಧಿಕ ವಂಚನೆ, ಗ್ರಾಹಕರು ಗಿರಿವಿ ಇಟ್ಟ ಚಿನ್ನ ಕರಗಿಸಿ ಗುಳುಂ!

ಮೈಸೂರಿನ 'ಎಸ್‌ಟಿಜೆ ಗೋಲ್ಡ್' ಮಾಲೀಕ ಸೌಂದರ್‌ರಾಜ್, ಗಿರವಿ ಇಟ್ಟ ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, BUDS ಕಾಯ್ದೆಯಡಿ 70ಕ್ಕೂ ಹೆಚ್ಚು ಸಂತ್ರಸ್ತರು ದೂರು ದಾಖಲಿಸಿದ್ದಾರೆ.
Read Full Story

01:15 PM (IST) May 20

ಸುಪ್ರೀಂ ತೀರ್ಪಿನ ಬಳಿಕ ಆತ್ಮ*ಹತ್ಯೆಗೆ ಯತ್ನಿಸಿದ್ರಾ ದರ್ಶನ್​? ಆತಂಕದಲ್ಲಿ ಫ್ಯಾನ್ಸ್​- ಡಿಜಿಪಿ ಏನು ಹೇಳಿದ್ರು

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

 

Read Full Story

12:49 PM (IST) May 20

ಚಿಕ್ಕಮಗಳೂರು - ಅಪಘಾತಕ್ಕೀಡಾದ ಯುವಕನಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು. 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಟ!

ಚಿಕ್ಕಮಗಳೂರಿನಲ್ಲಿ ಅಪಘಾತಕ್ಕೀಡಾದ ಯುವಕನೊಬ್ಬನಿಗೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಚಿಕಿತ್ಸೆ ಸಿಗದೆ 24 ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ನರಳಬೇಕಾಯಿತು. ಚಿಕ್ಕಮಗಳೂರು ಮತ್ತು ಮಂಗಳೂರಿನ ಹಲವು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ ಈ ಘಟನೆ, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆದಿದೆ.
Read Full Story

12:32 PM (IST) May 20

Kishore Mother Accident - 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!

ನಟ ಕಿಶೋರ್ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಿಶೋರ್‌ ಫೋನ್ ರಿಸೀವ್ ಮಾಡದ ಕಾರಣ ಆತಂತ ಸೃಷ್ಟಿಯಾಗಿತ್ತು. ಆದರೆ ಈಗ ಕಿಶೋರ್ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ನೋಡಿ.. 

Read Full Story

12:22 PM (IST) May 20

ಎಂಎಲ್‌ಸಿ ವಿಶ್ವನಾಥ ವಿರುದ್ಧ ಎಫ್‌ಐಆರ್ ಪ್ರಕರಣ - ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಹೇಳಿಕೆ

ಎಂಎಲ್‌ಸಿ ಎಚ್. ವಿಶ್ವನಾಥ್, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯರ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಸೇಡಿನ ರಾಜಕಾರಣ ಎಂದಿರುವ ಅವರು, ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
Read Full Story

10:53 AM (IST) May 20

ಶಾಪಿಂಗ್ ಬಂದು ಲಿಫ್ಟ್‌ ನಲ್ಲಿ ಸಿಲುಕಿದ ಪ್ರಕರಣಕ್ಕೆ ಅವಮಾನಕಾರಿ ಕಾಮೆಂಟ್‌ - ಕೆಪಿಟಿಸಿಎಲ್‌ ನೌಕರಳ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗದ ವಿಶಾಲ್‌ ಮಾರ್ಟ್‌ ಲಿಫ್ಟ್‌ ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಕೆಪಿಟಿಸಿಎಲ್‌ ನೌಕರ ಅವಮಾನಕಾರಿ ಕಾಮೆಂಟ್, ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.

 

Read Full Story

10:36 AM (IST) May 20

ತಾಯಿಗೆ ಅಪಘಾತ ಆಗಿದ್ದು ನಟ ಕಿಶೋರ್‌ಗೆ ಗೊತ್ತಿಲ್ಲ, ಫೋನ್‌ ಸ್ವೀಕರಿಸ್ತಿಲ್ಲ, ಮೆಸೇಜ್‌ ನೋಡ್ತಿಲ್ಲ - ದಯಾಳ್‌ ಪದ್ಮನಾಭನ್

Actor Kishore: ನಟ ಕಿಶೋರ್‌ ಅವರ ತಾಯಿಗೆ ಅಪಘಾತವಾಗಿದ್ದು, ಈ ಬಗ್ಗೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಟ ಕಿಶೋರ್‌ ಅವರು ಫೋನ್‌ ರಿಸೀವ್‌ ಮಾಡದ ಕಾರಣ, ಈ ರೀತಿಯಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

10:24 AM (IST) May 20

ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಯುವತಿಗೆ ಡಬಲ್ ಜಾಕ್‌ಪಾಟ್‌; ಯಾರಿಗುಂಟು ಈ ಅದೃಷ್ಟ?

ಬೆಂಗಳೂರಿನ ಮಂತ್ರಿಮಾಲ್‌ನಲ್ಲಿರುವ ಯುವತಿಗೆ ಡಬಲ್ ಜಾಕ್‌ ಪಾಟ್ ಸಿಕ್ಕಿದೆ.  ಈ 'ಡಬಲ್ ಜಾಕ್‌ಪಾಟ್' ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

Read Full Story

09:48 AM (IST) May 20

ಡಿಕೆ ಅಣ್ಣಾ ಮೂರು ವರ್ಷಗಳಿಂದ ಹರಿದಿದ್ದೇನು ಗೊತ್ತಾ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಮತ್ತು ಸಾಧನಾ ಸಮಾವೇಶವನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸನ್ನು ವ್ಯಂಗ್ಯವಾಡಿದ ಅವರು, ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದ್ದಾರೆ.

Read Full Story

09:44 AM (IST) May 20

PM Modi Italy visit - ಉತ್ಪಾದನೆದಿಂದ AI ವರೆಗೆ ಭಾರತ-ಇಟಲಿ ಹೊಸ ಒಪ್ಪಂದಗಳೇನು?

ಭಾರತ ‘ಮಾನವ್‌’ ಯೋಜನೆ ಜಾರಿಗೊಳಿಸಿದೆ. ಇಟಲಿಯು ನೈತಿಕತೆಯ ಆಧಾರದಲ್ಲಿ ಎಐ ಅಭಿವೃದ್ಧಿಪಡಿಸುತ್ತಿದೆ. ಎರಡೂ ದೇಶ ಸೇರಿಕೊಂಡು ಕೃತಕ ಬುದ್ಧಿಮತ್ತೆಯು ಸಾಮಾಜಿಕ ಸಬಲೀಕರಣವನ್ನು ದೃಢಪಡಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ.

ನರೇಂದ್ರ ಮೋದಿ ಭಾರತದ ಪ್ರಧಾನಿ

 

Read Full Story

09:30 AM (IST) May 20

ಇಷ್ಟು ಸಖತ್‌ ಆಗಿ ಕ್ರಿಕೆಟ್‌ ಆಡ್ತಿದ್ರೂ, ಬೆಂಗಳೂರಿನಲ್ಲಿ ತನಗಿರೋ ಕಾಯಿಲೆ ಬಗ್ಗೆ ಹೇಳಿದ Virat Kohli!

Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್‌ ಕೊಹ್ಲಿ ಅವರು ಇಂದು ಕೂಡ ಟಾಪ್‌ ಲೆವೆಲ್‌ ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.

 

Read Full Story

08:59 AM (IST) May 20

Bengaluru - ವಿಜಯಪುರದಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ವೇಗದೂತ ವಾಯುವಜ್ರ ಬಸ್ ಸಂಚಾರ ಆರಂಭ

ವಿಜಯಪುರದಿಂದ ಬೆಂಗಳೂರಿನ ಮೆಜೆಸ್ಟಿಕ್‌ಗೆ ಬಿಎಂಟಿಸಿ ವೇಗದೂತ ಬಸ್ ಸಂಚಾರ ಆರಂಭವಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ನೌಕರರು ಎದುರಿಸುತ್ತಿದ್ದ ದಟ್ಟಣೆಯ ಸಮಸ್ಯೆಗೆ ಪರಿಹಾರ ನೀಡಿದೆ. ಇದರೊಂದಿಗೆ, ನಾಗರಿಕರು ಈಗ ವಾಯುವಜ್ರ ಬಸ್ ಸೇವೆಗೂ ಒತ್ತಾಯಿಸುತ್ತಿದ್ದಾರೆ.
Read Full Story

08:30 AM (IST) May 20

Sadhana samavesha - 3 ವರ್ಷಗಳ ಸಾಧನೆಯಲ್ಲ, 300 ವೈಫಲ್ಯಗಳ ಸಾಧನೆ - ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ

ಸಂಸದ ರಮೇಶ ಜಿಗಜಿಣಗಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತವನ್ನು ಸಾಧನೆಯಲ್ಲ, ಬದಲಿಗೆ 300 ವೈಫಲ್ಯಗಳ ಸರಮಾಲೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಭ್ರಷ್ಟಾಚಾರ, ಮತ್ತು ಮಹಿಳೆಯರ ಅಸುರಕ್ಷತೆಯಂತಹ ವಿಷಯಗಳ ಬಗ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದರು.

Read Full Story

07:47 AM (IST) May 20

Gadag - ಬಟ್ಟೆ ತೊಳೆಯಲು ಹೋಗಿ ಕೃಷಿಹೊಂಡದಲ್ಲಿ ಬಿದ್ದು ಲಕ್ಷ್ಮವ್ವ, ಮುತ್ತವ್ವ ಸಾವು

ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ, ಬಟ್ಟೆ ತೊಳೆಯಲು ಕೃಷಿಹೊಂಡಕ್ಕೆ ತೆರಳಿದ್ದ ಇಬ್ಬರು ಬಾಲಕಿಯರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಲಕ್ಷ್ಮವ್ವ (15) ಮತ್ತು ಮುತ್ತವ್ವ (8) ಮೃತಪಟ್ಟಿದ್ದು, ಈ ಹೃದಯವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
Read Full Story

07:36 AM (IST) May 20

NRI arrested in Bangalore - ಅಮೆರಿಕದಿಂದ ಜೀವಂತ 7 ಗುಂಡು ತಂದಿದ್ದಅನಿವಾಸಿ ಭಾರತೀಯನ ಸೆರೆ!

ಬೆಂಗಳೂರಿನಲ್ಲಿ ಅನಿವಾಸಿ ಭಾರತೀಯನೊಬ್ಬನನ್ನು ಅಕ್ರಮವಾಗಿ ಜೀವಂತ ಗುಂಡುಗಳನ್ನು ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಅಮೆರಿಕದಿಂದ ತಂದಿದ್ದ ರಿವಾಲ್ವಾರ್ ಮ್ಯಾಗ್ಜಿನ್‌ ಅನ್ನು ಹೋಟೆಲ್‌ನಲ್ಲಿ ಮರೆತು ಹೋಗಿದ್ದು, ಸಿಬ್ಬಂದಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Read Full Story

More Trending News