LIVE NOW
Published : Jun 02, 2026, 06:48 AM ISTUpdated : Jun 02, 2026, 10:55 PM IST

Karnataka News Live: ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ

ಸಾರಾಂಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್‌ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ. ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ. ಹೀಗಾಗಿ ಆ ಹುದ್ದೆಯನ್ನು ಪಡೆಯಲು ಸತೀಶ್‌ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಪಕ್ಷಕ್ಕೆ ದೀರ್ಘಕಾಲದಿಂದ ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಕಾಂಗ್ರೆಸ್‌ ವರಿಷ್ಠರಲ್ಲಿದೆ. ಆದ ಕಾರಣ ಹರಿಪ್ರಸಾದ್‌ ಹೆಸರನ್ನು ಕೆಲ ವರಿಷ್ಠ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಹಾಗೂ ಹರಿಪ್ರಸಾದ್‌ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

siddaramaiah kc venugopal

10:55 PM (IST) Jun 02

ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್‌ಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿದೆ.

Read Full Story

10:33 PM (IST) Jun 02

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪೀಕ್ ಹವರ್‌ನಲ್ಲಿ 7 ನಿಮಿಷಕ್ಕೊಂದು ಯೆಲ್ಲೋ ಟ್ರೈನ್

ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಪೀಕ್ ಹವರ್‌ನಲ್ಲಿ ಯೆಲ್ಲೋ ಲೈನ್‌ನಲ್ಲಿ ಕಾಯುವಿಕೆ ಅವಧಿ ಕಡಿತಗೊಂಡಿದೆ.

Read Full Story

09:49 PM (IST) Jun 02

14 ಸಚಿವರ ಸೇರ್ಪಡೆ ಕುರಿತು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮೀಟಿಂಗ್, ಯಾರು ಹೆಸರು ಫೈನಲ್?

ಕರ್ನಾಟಕ ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಡಿಕೆಶಿ ಜೊತೆ ಸಚಿವ ಸಂಪುಟ ಸೇರುತ್ತಿರುವ ಕುರಿತು ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ನಡೆಯುತ್ತಿದೆ. 14+1 ಆಯ್ಕೆ ಕುರಿತು ರಾಹುಲ್ ನೀಡಿದ ಸೂಚನೆ ಏನು?

Read Full Story

09:49 PM (IST) Jun 02

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿರುವುದು‌ ನನ್ನ ಅದೃಷ್ಟ - ಶಾಸಕ ಇಕ್ಬಾಲ್ ಹುಸೇನ್

ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ‌ ಪಾಲಿನ‌ ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.

Read Full Story

08:02 PM (IST) Jun 02

₹100 ಕೋಟಿ ಸಿನಿಮಾ... ಆದರೆ OTT ಹಕ್ಕು ಕೇವಲ ₹7 ಕೋಟಿ - ಕನ್ನಡ ಚಿತ್ರರಂಗದಲ್ಲಿ ಏನಾಗುತ್ತಿದೆ?

ಕನ್ನಡದ ಸ್ಟಾರ್‌ ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್‌ ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು.

Read Full Story

07:41 PM (IST) Jun 02

Eye Care Routine - ಕಾಂತದಂತೆ ಸೆಳೆಯುವ ಕಣ್ಣುಗಳು ನಿಮ್ಮದಾಗಬೇಕೆ? ಈ ಟಿಪ್ಸ್ ಫಾಲೋ ಮಾಡಿ

ಒಬ್ಬರ ಮುಖದಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಕಣ್ಣುಗಳು. ಡಲ್ ಆದ ಕಣ್ಣು, ಕಪ್ಪು ವರ್ತುಲ, ಕಣ್ಣಿನ ಕೆಳಗೆ ಊತ... ಇವೆಲ್ಲಾ ಮುಖದ ಅಂದವನ್ನೇ ಹಾಳು ಮಾಡುತ್ತೆ. ಕೆಮಿಕಲ್ ತುಂಬಿದ ಐ-ಕ್ರೀಮ್‌ಗಳ ಬದಲು, ನ್ಯಾಚುರಲ್ ಆಗಿ ಕಣ್ಣುಗಳನ್ನು ಕಾಂತದಂತೆ ಸೆಳೆಯುವಂತೆ ಮಾಡಲು ಇಲ್ಲಿವೆ ಕೆಲವು ಸೂಪರ್ ಟಿಪ್ಸ್!

Read Full Story

07:40 PM (IST) Jun 02

ಸಾನ್ವಿಯ ಮದುವೆ ಮಾಡಲ್ಲ - ಬಹುದೊಡ್ಡ ಗುಟ್ಟು ರಿವೀಲ್‌ ಮಾಡಿದ ಅಮ್ಮ ಪ್ರಿಯಾ ಸುದೀಪ್‌ ಹೇಳಿದ್ದೇನು

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ 'ಜಿಮ್ಮಿ' ಚಿತ್ರದ ಮೂಲಕ ಗಾಯಕಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ನಟನೆ ಮತ್ತು ಸಿನಿಮಾ ಮೇಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸಾನ್ವಿ,  , ತಮಗೆ ಪುಷ್ಪರಾಜ್‌ನಂತಹ ಗಂಡ ಬೇಕು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

Read Full Story

07:32 PM (IST) Jun 02

Karna Serial ನಿಧಿಗೆ ಡಬಲ್​ ಧಮಾಕಾ - ಒಂದೇ ಬಾರಿ ಎರಡೆರಡು ಅವಾರ್ಡ್​ ಪಡೆದ ಭವ್ಯಾ ಗೌಡ

ಕರ್ಣ ಸೀರಿಯಲ್‌ನಲ್ಲಿ ಕರ್ಣನೊಂದಿಗೆ ನಿಧಿ ಪಾತ್ರಧಾರಿ ಭವ್ಯಾ ಗೌಡರ ಮದುವೆಯಾಗಿದೆ. ಇತ್ತೀಚೆಗೆ SITSA ಅವಾರ್ಡ್ಸ್ 2026ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಚಿತ್ತಾರ ಅವಾರ್ಡ್​ ಪಡೆದ ಇವರು,   ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

07:11 PM (IST) Jun 02

ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಠಾಣೆಗೂ ಮುತ್ತಿಗೆ - ಬಿ.ವೈ.ವಿಜಯೇಂದ್ರ ಎಚ್ಚರಿಕೆ

ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್‌ ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.

Read Full Story

06:04 PM (IST) Jun 02

ಜೂನ್ 4 ರಿಂದ ಈ ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಅಲರ್ಟ್

ಜೂನ್ 4 ರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಾಳಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಅಲರ್ಟ್ ನೀಡಲಾಗಿದೆ.

Read Full Story

05:47 PM (IST) Jun 02

ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ; ಬಿಜೆಪಿ ಕಾರ್ಯಕರ್ತರಿಗೆ ರೇಣುಕಾಚಾರ್ಯ ಕರೆ

ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

Read Full Story

05:31 PM (IST) Jun 02

ಕರಾವಳಿಗೆ ಖುಷಿ, ಸೂರತ್-ಮಂಗಳೂರು ಸ್ಪೆಷಲ್ ರೈಲು ಶಾಶ್ವತ ಸೇವೆಗೆ ಪರಿವರ್ತಿಸಿದ ರೈಲ್ವೆ ಇಲಾಖೆ, ಗೋವಾ ಈಗ ಹತ್ತಿರ!

ಪಶ್ಚಿಮ ರೈಲ್ವೆಯು ಸೂರತ್ ಮತ್ತು ಮಂಗಳೂರು ನಡುವಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಶಾಶ್ವತ ವಾರಕ್ಕೆ ಎರಡು ಬಾರಿಯ ಸೇವೆಗೆ ಪರಿವರ್ತಿಸಿದೆ. ಜೂನ್ 2026 ರಿಂದ ನಿಯಮಿತ ಸಂಚಾರ ಆರಂಭಿಸಲಿರುವ ಈ ರೈಲು, ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.
Read Full Story

05:22 PM (IST) Jun 02

ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಸಮೀಕ್ಷೆ ಸರಿಯಲ್ಲ - ಗುಡುಗಿದ ಕೆ.ಎಸ್.ಈಶ್ವರಪ್ಪ

ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು.

Read Full Story

04:52 PM (IST) Jun 02

Viral Video - ಮೂಡ್ ಆಫ್ ಆಗಿದೆಯಾ? ಈ ಅಪ್ಪ-ಮಗಳ ವಿಡಿಯೋ ಒಮ್ಮೆ ನೋಡಿ!

ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಮನಗೆದ್ದಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಿದೆ.

Read Full Story

04:50 PM (IST) Jun 02

ಮಂಗಳೂರು ಪಾಲಿಕೆ ಚುನಾವಣೆ ವಿಳಂಬ, 15 ತಿಂಗಳಾದರೂ ಚುನಾವಣೆ ನಡೆಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 15 ತಿಂಗಳು ವಿಳಂಬವಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಈ ವಿಳಂಬದಿಂದ ನಗರದ ಆಡಳಿತ ಕುಸಿದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
Read Full Story

04:26 PM (IST) Jun 02

ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ - ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿ ಅಂತಿಮ, ಇಲ್ಲಿದೆ ಸಂಪುಟ ಪಟ್ಟಿ!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಅನುಮೋದಿಸಿದ ಈ ಪಟ್ಟಿಯಲ್ಲಿ ಹಿರಿಯರು, ಯುವಕರು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.
Read Full Story

04:04 PM (IST) Jun 02

ಬಿಜೆಪಿ, ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಸೇರಿದ್ಯಾಕೆ? ಟ್ರೋಲರ್ಸ್‌ಗೆ ಬಿಗ್‌ಬಾಸ್‌ ಜಾಹ್ನವಿ ಕೊಟ್ರು ಖಡಕ್‌ ಉತ್ತರ

ಖ್ಯಾತ ನಿರೂಪಕಿ ಜಾಹ್ನವಿ ಅವರು ಇತ್ತೀಚೆಗೆ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಒಂದು ಮಣ್ಣಿನ ಪಕ್ಷವಾಗಿದ್ದು, ದೇವೇಗೌಡರ ಸಾಧನೆ ಮತ್ತು ಕುಮಾರಸ್ವಾಮಿಯವರ ರೈತ ಹಾಗೂ ಮಹಿಳಾ ಪರ ಕಾಳಜಿಯಿಂದ ಪ್ರೇರಿತರಾಗಿ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.

Read Full Story

03:53 PM (IST) Jun 02

ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್‌,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

Read Full Story

02:38 PM (IST) Jun 02

ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ - ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ರಜೆ ಘೋಷಣೆ!

ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಜೂ.3 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಇದೇ ವೇಳೆ, ವಿಧಾನಸಭೆ ಸಚಿವಾಲಯದ ನೌಕರರಿಗಾಗಿ ಸಭಾಧ್ಯಕ್ಷರು ವಿಶೇಷ ಭೋಜನ  ಆಯೋಜಿಸಿದ್ದಾರೆ.

Read Full Story

02:35 PM (IST) Jun 02

ಜೂನ್ 3ರಂದು ನಿಗದಿಯಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!

ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ವಲಯವು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದೆ. ಶಿರಾಡಿ ಘಾಟ್‌ನ ಕಠಿಣ ಮಾರ್ಗದಲ್ಲಿ ಸುರಕ್ಷತೆಗೆ ಅಗತ್ಯವಾದ AEB ವ್ಯವಸ್ಥೆಯ ಕೊರತೆ ಮತ್ತು ಇತರ ತಾಂತ್ರಿಕ ಸವಾಲುಗಳು ಈ ತಾತ್ಕಾಲಿಕ ಹಿನ್ನಡೆಗೆ ಕಾರಣವೆಂದು ಹೇಳಲಾಗುತ್ತಿದೆ.
Read Full Story

01:20 PM (IST) Jun 02

ಮೇ 26ಕ್ಕೆ ಕೈಕೊಟ್ಟ ಮುಂಗಾರು, ಜೂ.4ಕ್ಕೆ ಆಗಮನ ಮುಹೂರ್ತ ಫಿಕ್ಸ್; ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ ಅಬ್ಬರ!

ನೈಋತ್ಯ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ, ಚಂಡಮಾರುತದ ಸುಳಿ ಹಾಗೂ ಟ್ರಫ್ ಪ್ರಭಾವದಿಂದಾಗಿ ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.

Read Full Story

01:17 PM (IST) Jun 02

1.92 ಲಕ್ಷದಿಂದ 57.8 ಲಕ್ಷ ರೂ. ಸಂಬಳಕ್ಕೆ ಜಂಪ್ - ಸಿಎ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಬೆಂಗಳೂರು ಹುಡುಗನ ಯಶೋಗಾಥೆ!

ಬೆಂಗಳೂರಿನ ಅನಿರುದ್ಧ್ ರಾಪೋಲ್, 10ವರ್ಷಗಳಲ್ಲಿ ತಮ್ಮ ಸಿಎ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಕೆಪಿಎಂಜಿ ಸಂಸ್ಥೆಯಲ್ಲಿ 1.92ಲಕ್ಷ ರೂ. ಸ್ಟೈಫಂಡ್‌ನಿಂದ ಆರಂಭಿಸಿ, ಸ್ವೀಡನ್‌ನಲ್ಲಿ 57.8ಲಕ್ಷ ರೂ. ವಾರ್ಷಿಕ ವೇತನದವರೆಗೆ ಬೆಳೆದ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಅವರು ಹಂಚಿಕೊಂಡಿದ್ದಾರೆ.

Read Full Story

01:05 PM (IST) Jun 02

Seetharaama Serial ತಂದುಕೊಟ್ಟ ಜನಪ್ರಿಯತೆ; ಬಾಲನಟಿ ರೀತು ಸಿಂಗ್‌ ಪಾಲಿಗೆ ಸಿಹಿ ದಿನಗಳ ಟೈಮ್!

Nan Magle Superstar Movie Ritu Singh: ಹನಿ ಫಿಲಂಸ್ ಲಾಂಛನದಲ್ಲಿ ಎನ್ ಎ ಶಿವಕುಮಾರ್(ಕುಮಾರ್ ನೊಣವಿನಕೆರೆ) ನಿರ್ಮಿಸಿರುವ, ಆಯುರ್ ನಿರ್ದೇಶಿಸಿರುವ ಸಿನಿಮಾವೇ ‘ನನ್‌ ಮಗಳೇ ಸೂಪರ್‌ಸ್ಟಾರ್’.‌ ಈ ಸಿನಿಮಾದಲ್ಲಿ ‘ಸೀತಾರಾಮ’ ಧಾರಾವಾಹಿ ಸಿಹಿ ಪಾತ್ರಧಾರಿ ನಟಿಸುತ್ತಿದ್ದಾರೆ.

Read Full Story

01:00 PM (IST) Jun 02

'ಮಗಳು ಇಡೀ ಜಗತ್ತು ಗೆಲ್ಲಲು ಸಿದ್ದವಾಗಿದ್ದಾಳೆ..' ಖುಷಿಯಿಂದ ಸಂಭ್ರಮಿಸಿದ ಗಾಯಕಿ ಅರ್ಚನಾ ಉಡುಪ

ಖ್ಯಾತ ಗಾಯಕಿ ಅರ್ಚನಾ ಉಡುಪ ಅವರ ಪುತ್ರಿ ವಿಭಾ, ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಸಂತಸದ ಕ್ಷಣವನ್ನು ಅರ್ಚನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗಳ ಬಾಲ್ಯವನ್ನು ನೆನೆದು ಭಾವುಕರಾಗಿದ್ದಾರೆ ಮತ್ತು ಆಕೆಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
Read Full Story

12:55 PM (IST) Jun 02

ಮೊಮ್ಮಗನಿಗೆ ಜಗ್ಗೇಶ್ ಕೊಟ್ರು ಗಿಫ್ಟ್; 5 ಪೈಸೆಯನ್ನು ನೆನೆದು ಭಾವುಕರಾದ್ರು ನವರಸ ನಾಯಕ

ನವರಸ ನಾಯಕ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್‌ನ 11ನೇ ಹುಟ್ಟುಹಬ್ಬಕ್ಕೆ ಲ್ಯಾಪ್‌ಟಾಪ್ ಉಡುಗೊರೆಯಾಗಿ ನೀಡಿದ್ದಾರೆ. ಮೊಮ್ಮಗನ ಸಂತೋಷವನ್ನು ಕಂಡು, ತಮ್ಮ ಬಾಲ್ಯದಲ್ಲಿ ತಾತ ನೀಡುತ್ತಿದ್ದ 5 ಪೈಸೆಯನ್ನು ನೆನೆದು ಜಗ್ಗೇಶ್ ಭಾವುಕರಾಗಿದ್ದಾರೆ. 

Read Full Story

12:42 PM (IST) Jun 02

DK Suresh Meets Zameer - ವೈರಲ್‌ ಆಡಿಯೋ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಡಿಕೆ ಸುರೇಶ್ ದಿಢೀರ್ ಭೇಟಿ!

ಸಂಪುಟ ರಚನೆ ಹೊತ್ತಲ್ಲಿ ಜಮೀರ್ ಅವರ ವಿರುದ್ಧದ ವೈರಲ್ ಆಡಿಯೋ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ ಈ ನಡುವೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ದಿಢೀರ್ ಭೇಟಿ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

 

Read Full Story

12:24 PM (IST) Jun 02

ಕೈ-ಕಾಲು ಕತ್ತರಿಸಿದರೆ ಮಾತ್ರ ಜನರಿಗೆ ಕಾನೂನಿನ ಬಗ್ಗೆ ಭಯ ಬರುತ್ತೆ - ಕರ್ನಾಟಕ ಹೈಕೋರ್ಟ್‌

ಅ*ತ್ಯಾಚಾರ ಆರೋಪ ಎದುರಿಸುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ದೇಶದ ಕಾನೂನು ವ್ಯವಸ್ಥೆಯು ದುರ್ಬಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

Read Full Story

12:15 PM (IST) Jun 02

ಗುಲಾಮಗಿರಿ ಇಷ್ಟ ಆಗಲ್ಲ, ಅದಿಕ್ಕೆ ಯಾವುದೇ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ - Karna Serial ತಾತ‌ ನಟ ಅಶೋಕ್

Karna Kannada Serial: ಕರ್ಣ ಧಾರಾವಾಹಿ ಆರಂಭದಲ್ಲಿ ನಟ ಅಶೋಕ್‌ ಅವರು ಅಭಿನಯಿಸಿದ್ದರು. ಇಲ್ಲಿ ಅವರಿಗೆ ಕೆಲವೇ ದಿನಗಳ ಕಾಲ ಪಾತ್ರ ಇತ್ತು. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಶೋಕ್‌ ಅವರೀಗ ಅಷ್ಟಾಗಿ ಸೀರಿಯಲ್‌ನಲ್ಲಿ ನಟಿಸೋದಿಲ್ಲ, ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

 

Read Full Story

11:13 AM (IST) Jun 02

ಕಾರ್‌ನಲ್ಲಿ ಗರ್ಭಿಣಿ ಪತ್ನಿಯೇ ಇರಲಿಲ್ಲ; ರಸ್ತೆಮಧ್ಯೆ ಪ್ರತಿಭಟಿಸಿದ ವ್ಯಕ್ತಿಯ ಡ್ರಾಮಾ ಬಯಲು

ರಾಜ್ಯಪಾಲರ ಮಾರ್ಗದಲ್ಲಿ ವಾಹನ ತಡೆದಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಎಂದು  ಹೇಳಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಕಾರಿನಲ್ಲಿ ಪತ್ನಿ ಇರಲಿಲ್ಲ ಎಂಬ ಸತ್ಯಾಂಶ ಬಯಲಾಗಿದೆ.

Read Full Story

10:42 AM (IST) Jun 02

ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್‌ಗೆ ತಾಳಿ ಕಟ್ಟಿದ್ದ ಭೂಪ‌; ವಿದೇಶದಿಂದ ಬರುತ್ತಿದ್ದಂತೆ ಶಾಕ್!

ಬೆಂಗಳೂರಿನಲ್ಲಿ, "ಲವ್ ಮಾಕ್ಟೇಲ್" ಸಿನಿಮಾದಂತೆ ತನ್ನ ಪತ್ನಿ ಕ್ಯಾನ್ಸರ್‌ನಿಂದ ನಿಧನಳಾಗಿದ್ದಾಳೆ ಎಂದು ಸುಳ್ಳು ಹೇಳಿ ಪವನ್ ಎಂಬಾತ ನರ್ಸ್ ಒಬ್ಬರನ್ನು ಮದುವೆಯಾಗಿದ್ದಾನೆ. ಮದುವೆಯಾದ ಎಂಟು ತಿಂಗಳ ನಂತರ, ಅಪರಿಚಿತ ಮಹಿಳೆಯ ಕರೆಯಿಂದ ಪವನ್‌ನ ಮೊದಲ ಪತ್ನಿ ಜೀವಂತವಿರುವ ಸತ್ಯ ಬಯಲಾಗಿದೆ.

Read Full Story

10:26 AM (IST) Jun 02

ಮುಗಿದಿಲ್ಲ ಹಿಜಾಬ್ v ಕೇಸರಿ ವಿವಾದ - ಹುಬ್ಬಳ್ಳಿಯ ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಹಂಚಿ ಶ್ರೀರಾಮ ಸೇನೆ ಪ್ರತಿಭಟನೆ!

ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ, ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚಿ ಪ್ರತಿಭಟಿಸಿತು. ಸರ್ಕಾರ ಈ ನಿರ್ಧಾರ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

Read Full Story

10:10 AM (IST) Jun 02

Exclu Photos - ವಿದೇಶದಲ್ಲಿರುವ ಹುಡುಗನನ್ನು ಕೋಲಾರದಲ್ಲಿ ಮದುವೆಯಾದ 'ಸೀತಾರಾಮ' ಧಾರಾವಾಹಿ ನಟಿ!

ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್‌ ತಂಗಿ ಪಾತ್ರಧಾರಿ ನಟಿ ಅನುಷಾ ಪರಮೇಶ್ವರಪ್ಪ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ.

 

Read Full Story

08:41 AM (IST) Jun 02

ಮಹಿಳೆಯರೇ 'ಗೃಹಲಕ್ಷ್ಮಿ' 3 ಲಕ್ಷ ಸಾಲದ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ; ಇಲ್ಲಿದೆ ಸತ್ಯಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.

Read Full Story

08:32 AM (IST) Jun 02

₹1.10 ಕೋಟಿಗೆ ಸೇಲ್, ಗಳಿಸಿದ್ದು ಬರೋಬ್ಬರಿ ₹3 ಕೋಟಿ! 15ರ ಹುಡುಗ ವೈಭವ್ ಸೂರ್ಯವಂಶಿಗೆ ಐಪಿಎಲ್ ಜಾಕ್‌ಪಾಟ್

ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ, ಈ ಬಾರಿಯ ಐಪಿಎಲ್‌ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ತನ್ನ 1.10 ಕೋಟಿ ರೂ. ಮೂಲ ಬೆಲೆಗಿಂತಲೂ ಹೆಚ್ಚಾಗಿ, ಪಂದ್ಯ ಶುಲ್ಕ ಮತ್ತು ವಿವಿಧ ಪ್ರಶಸ್ತಿಗಳ ಮೂಲಕ ಈ ಸೀಸನ್ ಒಂದರಲ್ಲೇ ಸುಮಾರು 3 ಕೋಟಿ ರೂ. ಸಂಪಾದಿಸಿ ಎಲ್ಲರ ಗಮನ ಸೆಳೆದಿದ್ದಾರೆ.
Read Full Story

08:27 AM (IST) Jun 02

DK Shivakumar - ತಣ್ಣಗಾಯ್ತು ಮೈಲಾರ ಲಿಂಗೇಶ್ವರನ ಮುನಿಸು, ನನಸಾಯ್ತು ಡಿಕೆಶಿ ಸಿಎಂ ಕನಸು!

2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಹಾರಿಸಿ ದೋಷಕ್ಕೆ ಒಳಗಾಗಿದ್ದ ಡಿ.ಕೆ. ಶಿವಕುಮಾರ್, ಬಳಿಕ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದರು. ಈಗ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಈ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ.

Read Full Story

08:25 AM (IST) Jun 02

ಬೆಂಗಳೂರು-ತುಮಕೂರು ಚತುಷ್ಪಥ ರೈಲ್ವೆ ಮಾರ್ಗಕ್ಕೆ 6000 ಕೋಟಿಯ ಕ್ರಿಯಾ ಯೋಜನೆ ಘೋಷಣೆ

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ಚತುಷ್ಪಥ ರೈಲ್ವೆ ಮಾರ್ಗಕ್ಕೆ 6000 ಕೋಟಿ ರೂ. ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ. ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದಲ್ಲಿ ರೈಲ್ವೆ ಕೆಳಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ತುಮಕೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ರೈಲ್ವೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
Read Full Story

08:13 AM (IST) Jun 02

ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ; ಜೊತೆಯಾಗಿಯೇ ಇಬ್ಬರ ಅಂತ್ಯಕ್ರಿಯೆ

ಗದಗ ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ಚಿಕಿತ್ಸೆ ಕೊಡಿಸಿ ಮರಳುತ್ತಿದ್ದ ತಮ್ಮ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ಸುದ್ದಿ ಕೇಳಿದ ಆಘಾತಕ್ಕೆ ಅಕ್ಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Read Full Story

07:55 AM (IST) Jun 02

ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್‌ ಈ ರೀತಿಯಾಗಿರಲಿದೆ

ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
Read Full Story

07:40 AM (IST) Jun 02

ಬೆಂಗಳೂರಿನಲ್ಲಿದ್ದ ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವಗೆ ಕೋರ್ಟ್‌ ಚಾಟಿ

ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯೊಬ್ಬನ ವಿರುದ್ಧದ ಫೋರ್ಜರಿ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲಸವಾಗಿದ್ದು, ದೇಶದ ವ್ಯವಸ್ಥೆಯನ್ನೇ ನಾಶಮಾಡುತ್ತಿದೆ ಎಂದು ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Read Full Story

07:30 AM (IST) Jun 02

ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು ?

ರಾಜ್ಯದಲ್ಲಿ ಹೊಸ ಆಲ್ಕೋಹಾಲ್‌ ಇನ್‌ ಬೇವರೇಜ್‌ (ಎಐಬಿ) ಪದ್ಧತಿಯಿಂದ ಬಿಯರ್‌ ಬೆಲೆ ಗಣನೀಯವಾಗಿ ಇಳಿದಿದೆ. ಆದರೆ, ಕೆಲವು ಅಂಗಡಿಗಳು ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದು, ಹೆಚ್ಚಿದ ಬೇಡಿಕೆಯಿಂದಾಗಿ ಜನಪ್ರಿಯ ಬ್ರ್ಯಾಂಡ್‌ಗಳ ಬಿಯರ್‌ ಸ್ಟಾಕ್ ಕೊರತೆ ಎದುರಾಗಿದೆ.
Read Full Story

More Trending News