Published : Oct 18, 2025, 07:37 AM ISTUpdated : Oct 18, 2025, 11:39 PM IST

State News Live: ಚಿಕ್ಕಮಗಳೂರು - ಭಾರೀ ಮಳೆ ನಡುವೆಯೂ ದೇವೀರಮ್ಮನ ಬೆಟ್ಟ ಹತ್ತಲು ಭಕ್ತರ ಸಜ್ಜು!

ಸಾರಾಂಶ

ಬೆಂಗಳೂರು (ಅ.18): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಡಿಸಿದ್ದ ಮತಗಳ್ಳತನ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳಂದ ಕ್ಷೇತ್ರದ ‘ವೋಟ್‍ ಚೋರಿ’ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ಚುರುಕುಗೊಂಡಿದೆ. ಶುಕ್ರವಾರ ಬಿಜೆಪಿಯ ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಅವರಿಗೆ ಸೇರಿದ ಮನೆ, ಬಾರ್ ಮತ್ತು ರೆಸ್ಟೋರೆಂಟ್, ನಗರದ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್‌ ಗುತ್ತೇದಾರ್‌ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್‌ ಹಾಗೂ ವಸಂತ ನಗರದಲ್ಲಿರುವ ಇನ್ನೋರ್ವ ಪುತ್ರ, ಉದ್ಯಮಿ ಸಂತೋಷ್ ಗುತ್ತೇದಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

Thousands of Devotees to Climb Deviramma Hill in Chikmagalur Amid Heavy Rain Alert

11:39 PM (IST) Oct 18

ಚಿಕ್ಕಮಗಳೂರು - ಭಾರೀ ಮಳೆ ನಡುವೆಯೂ ದೇವೀರಮ್ಮನ ಬೆಟ್ಟ ಹತ್ತಲು ಭಕ್ತರ ಸಜ್ಜು!

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯ ಎಚ್ಚರಿಕೆಯ ನಡುವೆಯೂ, ಸಾವಿರಾರು ಭಕ್ತರು 3800 ಅಡಿ ಎತ್ತರದ ದೇವೀರಮ್ಮನ ಬೆಟ್ಟ ಹತ್ತಲು ಸಜ್ಜು ಸಂಭಾವ್ಯ ಅಪಾಯ ಹಿನ್ನೆಲೆ, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಅಗ್ನಿಶಾಮಕ ಪೊಲೀಸ್ ಇಲಾಖೆ ಸನ್ನದ್ಧ

Read Full Story

11:03 PM (IST) Oct 18

ದೀಪಾವಳಿ ಹಬ್ಬದ ಹೊತ್ತಲ್ಲೇ ಅಚ್ಚರಿ - ದೆಹಲಿಯಲ್ಲಿ ಚಿನ್ನದ ದರ ಭಾರೀ ಕುಸಿತ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ, ದೇಶಾದ್ಯಂತ ಬಂಗಾರಕ್ಕೆ ಬೇಡಿಕೆ ಹೆಚ್ಚಿದ್ದರೂ ದೆಹಲಿಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಶನಿವಾರ 10 ಗ್ರಾಂ ಚಿನ್ನದ ಬೆಲೆ 2,400 ರೂ. ಕಡಿಮೆಯಾಗಿ 1,32,400 ರೂ.ಗೆ ತಲುಪಿದ್ದು, ಇದು ಹಬ್ಬದ ಖರೀದಿದಾರರಿಗೆ ಸಮಾಧಾನ ತಂದಿದೆ. ಬೆಲೆ ಏರಿಳಿತಕ್ಕೆ ಕಾರಣವೇನು?.

Read Full Story

10:36 PM (IST) Oct 18

ಉತ್ತರಕನ್ನಡ - ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ, ತಪ್ಪಿದ ಭಾರೀ ಅನಾಹುತ!

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ವಡ್ಡಿ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದೆ. ಬಳ್ಳಾರಿಯಿಂದ ಕುಮಟಾಕ್ಕೆ ತೆರಳುತ್ತಿದ್ದ ಬಸ್‌ನಲ್ಲಿದ್ದ ಚಾಲಕ, ನಿರ್ವಾಹಕ ಸೇರಿದಂತೆ 49 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

09:59 PM (IST) Oct 18

ಗಂಗಾವತಿ ಪ್ರಾಣೇಶ್ ತಾಯಿ ನಿಧನ, ಬದುಕು ಕಲಿಸಿದ ನನ್ನಮ್ಮ ಸೂರ್ತಿ ಎಂದ ಹಾಸ್ಯ ಭಾಷಣಕಾರ

ಗಂಗಾವತಿ ಪ್ರಾಣೇಶ್ ತಾಯಿ ನಿಧನ, ಬದುಕು ಕಲಿಸಿದ ನನ್ನಮ್ಮ ಸೂರ್ತಿ ಎಂದ ಹಾಸ್ಯ ಭಾಷಣಕಾರ, ಕನ್ನಡ ಜನತೆಗೆ ಹಾಸ್ಯ ಉಣಬಡಿಸುತ್ತಾ ಅತ್ಯಂತ ಜನಪ್ರಿಯ ಹಾಸ್ಯ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಪ್ರಾಣೇಶ್‌ಗೆ ಮಾತೃವಿಯೋಗ.

Read Full Story

09:46 PM (IST) Oct 18

ನಿಮ್ಮ ಕುತ್ತಿಗೆಯ ಮೇಲೆ ಈ ಚಿಹ್ನೆಗಳು ಕಾಣಿಸಿಕೊಂಡರೆ, ಕಿಡ್ನಿಗೆ ಅಪಾಯ ಎಚ್ಚರ!

early signs kidney problem symptoms on face: ಇಂದಿನ ಜೀವನಶೈಲಿಯಿಂದ ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗುತ್ತಿವೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅದರ ಕೆಲವು ಆರಂಭಿಕ ಚಿಹ್ನೆಗಳು ಮುಖ ಮತ್ತು ಕುತ್ತಿಗೆಯ ಮೇಲೆ ಕಾಣಿಸಿಕೊಳ್ಳಬಹುದು. ಅವುಗಳನ್ನು ಗುರುತಿಸುವುದು ಹೇಗೆ ತಿಳಿಯಿರಿ

Read Full Story

09:19 PM (IST) Oct 18

ಲೋಹದ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ತಿರುವು, ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ! ಕಾರಣವೇನು?

ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದ ಆತಂಕ ಕಡಿಮೆಯಾಗಿದ್ದು ಮತ್ತು ಹೂಡಿಕೆದಾರರು ಲಾಭ ವಸೂಲಿಗೆ ಮುಂದಾಗಿದ್ದರಿಂದ ಬೆಳ್ಳಿಯ ಬೆಲೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಜಾಗತಿಕ ಆರ್ಥಿಕ ನೀತಿಗಳಿಂದಾಗಿ ದೀರ್ಘಾವಧಿಯಲ್ಲಿ ಈ ಲೋಹಗಳ ಮೌಲ್ಯ ಬಲವಾಗಿಯೇ ಉಳಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read Full Story

09:12 PM (IST) Oct 18

ಖ್ಯಾತ ಸಾಹಿತಿ, ನಾಟಕಕಾರ ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ದುಬೈಯಲ್ಲಿ ಶ್ರದ್ಧಾಂಜಲಿ ಸಭೆ

ಖ್ಯಾತ ಬರಹಗಾರ ಮತ್ತು ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿಧನದ ಸ್ಮರಣಾರ್ಥ, ಧ್ವನಿ ಪ್ರತಿಷ್ಠಾನವು ದುಬೈಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಅವರ ಸಾಹಿತ್ಯ ಮತ್ತು ರಂಗಭೂಮಿ ಕೊಡುಗೆಗಳನ್ನು ಸ್ಮರಿಸಿ, ಅವರ ಅಪೂರ್ಣ ಕನಸುಗಳನ್ನು ಮುಂದುವರಿಸುವ ಸಂಕಲ್ಪ ಮಾಡಲಾಯಿತು.
Read Full Story

08:20 PM (IST) Oct 18

ಆರ್‌ಎಸ್‌ಎಸ್‌ ಬಿಸಿಬಿಸಿ ಚರ್ಚೆಗೆ ಕಿಚ್ಚು ಹಚ್ಚಿದ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ

ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಆರ್ ಎಸ್ ಎಸ್ ಬೆಂಬಲಿಸುವವರು ದೇಶ ವಿರೋಧಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನವರು ಗಾಂಧಿ, ಬಸವಣ್ಣ, ಅಂಬೇಡ್ಕರ್, ರಾಷ್ಟ್ರ ಧ್ವಜವನ್ನು ಒಪ್ಪುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Read Full Story

08:05 PM (IST) Oct 18

ಟ್ರಾಫಿಕ್ ಪೊಲೀಸರಿಗೆ ನೂತನ ಬೈಕ್ ವಿತರಿಸಿದ ಗೃಹ ಸಚಿವ ಪರಮೇಶ್ವರ್

ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹೋಂಡಾ ಇಂಡಿಯಾ ಫೌಂಡೇಶನ್ ನೀಡಿದ 50 ಗಸ್ತು ವಾಹನಗಳನ್ನು ಹಸ್ತಾಂತರಿಸಿದರು. ಈ ವೇಳೆ, ಬೆಂಗಳೂರಿನ ಸಂಚಾರ ವ್ಯವಸ್ಥೆ, ಹೊಸ 'ಬಿಟಿಪಿ ಅಸ್ತ್ರಂ ಇ-ಆ್ಯಕ್ಸಿಡೆಂಟ್' ಆವಿಷ್ಕಾರ, ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಾತನಾಡಿದರು.

Read Full Story

07:43 PM (IST) Oct 18

ಡಿಸಿಎಂ ಡಿಕೆಶಿ ಜೊತೆಗೆ ಸಭೆ - ಗುತ್ತಿಗೆದಾರರ ಹೋರಾಟಕ್ಕೆ ಜಯ, ಶೇ.10 ಎಫ್‌ಡಿಆರ್ ವಾಪಸ್ಸು ಕೊಡುವ ಭರವಸೆ

ಗುತ್ತಿಗೆದಾರರ ಸಂಘದ ತೀವ್ರ ಒತ್ತಡದ ನಂತರ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ 10% ಎಫ್‌ಡಿಆರ್ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಕಿ ಹಣ ಬಿಡುಗಡೆ ಮತ್ತು ಟೆಂಡರ್ ಪ್ಯಾಕೇಜ್ ಸಿಸ್ಟಮ್ ಬಗ್ಗೆಯೂ ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

Read Full Story

07:01 PM (IST) Oct 18

ಬೆಂಗಳೂರು ಪೊಲೀಸರಿಗೆ ಸರ್ಕಾರದಿಂದ ಮತ್ತಷ್ಟು ಬಲ, ಅಪಘಾತದ ಬಗ್ಗೆ ತಿಳಿಯಲು ಅಸ್ತ್ರಂ ಆ್ಯಪ್ ಬಿಡುಗಡೆ

ಬೆಂಗಳೂರು ನಗರದ ಸಂಚಾರ ನಿರ್ವಹಣೆ ಸುಧಾರಿಸಲು, ಟ್ರಾಫಿಕ್ ಪೊಲೀಸರಿಗೆ 50 ಹೊಸ ಗಸ್ತು ಬೈಕ್‌ಗಳನ್ನು ವಿತರಿಸಲಾಗಿದೆ. ಇದರೊಂದಿಗೆ, ಸಾರ್ವಜನಿಕರು ಅಪಘಾತಗಳನ್ನು ವರದಿ ಮಾಡಲು 'ಅಸ್ತ್ರಂ' ಎಂಬ ಹೊಸ ಮೊಬೈಲ್ ಆಪ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಿಡುಗಡೆ ಮಾಡಿದ್ದಾರೆ. 

Read Full Story

06:59 PM (IST) Oct 18

ತುಮಕೂರು - 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ!

ashtriya Swayamsevak Sangh Tumkur:  ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ನಿಷೇಧದ ಚರ್ಚೆಯ ನಡುವೆಯೇ, ತುಮಕೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಬೃಹತ್ ಪಥಸಂಚಲನ ನಡೆಸಿತು. 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ!

Read Full Story

06:20 PM (IST) Oct 18

ಶಿಕ್ಷಕರ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್, ಸರ್ಕಾರದಿಂದ ದೀಪಾವಳಿಗೆ ಭರ್ಜರಿ ಗಿಫ್ಟ್!

Government teacher jobs in Karnataka: ಶಿಕ್ಷಣ ಇಲಾಖೆಯು ಶಿಕ್ಷಕರ ಅರ್ಹತಾ ಪರೀಕ್ಷೆಗೆ (TET) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 23 ರಿಂದ ನವೆಂಬರ್ 9ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಯು ಡಿಸೆಂಬರ್ 7 ರಂದು ನಡೆಯಲಿದೆ..

Read Full Story

06:20 PM (IST) Oct 18

ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದ Brahmagantu ಸೌಂದರ್ಯ ರಿಯಲ್​ ಫ್ಯಾಮಿಲಿ ಜೊತೆ ಕಾಣಿಸಿಕೊಂಡಾಗ

'ಬ್ರಹ್ಮಗಂಟು' ಧಾರಾವಾಹಿಯ ಖಳನಟಿ ಸೌಂದರ್ಯ ಪಾತ್ರಧಾರಿ ಪ್ರೀತಿ ಶ್ರೀನಿವಾಸ್, ಇತ್ತೀಚೆಗೆ ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದಿದ್ದಾರೆ. ತೆರೆಯಲ್ಲಿ ಮಕ್ಕಳನ್ನು ದ್ವೇಷಿಸುವ ಇವರು, ನಿಜ ಜೀವನದಲ್ಲಿ ಓರ್ವ ಮಗನ ತಾಯಿಯಾಗಿದ್ದು, ಹಲವು ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
Read Full Story

06:11 PM (IST) Oct 18

ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ ಗುಜರಾತ್ ಉದ್ಯಮಿ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆ

ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ ಗುಜರಾತ್ ಉದ್ಯಮಿ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆ, ಈ ಉದ್ಯಮಿ ಕೇರಳಕ್ಕೆ ವ್ಯವಹಾರ ಸಲುವಾಗಿ ತೆರಳಿದ್ದ, ಬಳಿಕ ನದಿ ಫೋಟೋ ಹಾಕಿ ಸತ್ತನೆಂದು ನಂಬಿಸಿದ್ದ, ಇದೀಗ ಬೆಂಗಳೂರಲ್ಲಿ ಉಬರ್ ಚಾಲಕನಾಗಿ ಪತ್ತೆಯಾಗಿ ರೋಚಕ ಘಟನೆ ಬಹಿರಂಗವಾಗಿದೆ.

Read Full Story

05:30 PM (IST) Oct 18

ಮರ್ಯಾದೆ ಅನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ; ಸುದೀಪ್​ ಕೆಂಡಾಮಂಡಲ- Bigg Boss ಸ್ಪರ್ಧಿಗಳಿಗೆ ಕ್ಲಾಸ್​

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ, ಅಶ್ವಿನಿ ಮತ್ತು ಜಾನ್ವಿ ನಡುವೆ ಮಧ್ಯರಾತ್ರಿ ನಡೆದ ಜಗಳ ವೈಯಕ್ತಿಕ ನಿಂದನೆಯ ಹಂತ ತಲುಪಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 'ಮರ್ಯಾದೆ ಯಾರ ಅಪ್ಪನ ಆಸ್ತಿನೂ ಅಲ್ಲ' ಎಂದಿದ್ದಾರೆ. 

Read Full Story

05:30 PM (IST) Oct 18

ಸೀನಿಯರ್ ಪ್ರೀತಿಸುವಂತೆ ಕಿರುಕುಳ, ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್ ನೇಣಿಗೆ ಶರಣು!

ಬೆಂಗಳೂರಿನಲ್ಲಿ 19 ವರ್ಷದ ಬಿಬಿಎ ವಿದ್ಯಾರ್ಥಿನಿ ಸನಾ ಪರ್ವಿನ್, ಸೀನಿಯರ್ ವಿದ್ಯಾರ್ಥಿ ಪ್ರೀತಿಸುವಂತೆ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ತನ್ನ ಪಿಜಿಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಮೂಲದ ಯುವತಿಯ ಪೋಷಕರು ಕೇರಳ ಮೂಲದ ಯುವಕ ರೀಫಾಸ್ ವಿರುದ್ಧ  ಎಫ್ಐಆರ್ ದಾಖಲಾಗಿದೆ.

Read Full Story

05:14 PM (IST) Oct 18

ಮಸೀದಿಯ ಗಂಧ ಮಹೋತ್ಸವದಲ್ಲಿ ಪೊಲೀಸರ ಮೇಲೆ ಹಣ ಎರಚಿ ಸನ್ಮಾನ! ವಿಡಿಯೋ ವೈರಲ್

Channapatna mosque controversy: ಚನ್ನಪಟ್ಟಣದ ಮಸೀದಿಯೊಂದರಲ್ಲಿ ನಡೆದ ಗಂಧ ಮಹೋತ್ಸವದಲ್ಲಿ, ಪೊಲೀಸ್ ಸಿಬ್ಬಂದಿಯ ಮೇಲೆ ಹಣದ ಮಳೆ ಸುರಿಸಿದ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರಿ ನೌಕರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ತೀವ್ರ ಚರ್ಚೆ.. 

Read Full Story

05:11 PM (IST) Oct 18

ವಾರದ ಭವಿಷ್ಯ; ಹಂಸ ರಾಜಯೋಗದಿಂದ ಬೆಳಗಲಿದೆ 5 ರಾಶಿಗಳ ಅದೃಷ್ಟ, ಸಂಸಾರದಲ್ಲಿ ಸುಖ, ಸಂಪತ್ತು

Weekly Horoscope Tarot Reading 20 to 26 October 2025: ಹಂಸ ರಾಜಯೋಗ ಸೃಷ್ಟಿಯಾಗಿದ್ದು, ಇದು ಆರ್ಥಿಕ ಲಾಭ ಮತ್ತು ಸಾಂಸಾರಿಕ ಸುಖಕ್ಕೆ ಕಾರಣವಾಗಲಿದೆ. ಈ ಯೋಗದಿಂದ ವಿಶೇಷವಾಗಿ 5 ರಾಶಿಗಳಿಗೆ ಅದೃಷ್ಟ ಒಲಿಯಲಿದ್ದು, ಈ ಲೇಖನವು ಎಲ್ಲಾ 12 ರಾಶಿಗಳ ಮೇಲಿನ ಇದರ ಪ್ರಭಾವವನ್ನು ವಿವರಿಸುತ್ತದೆ.

Read Full Story

04:34 PM (IST) Oct 18

ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುವವರು ಸಂಸ್ಕೃತಿ ರಕ್ಷಕರಾ? ಆರೆಸ್ಸೆಸ್ ವಿರುದ್ಧ ಯತೀಂದ್ರ ವಾಗ್ದಾಳಿ!

ತುಮಕೂರಿನಲ್ಲಿ ಮಾತನಾಡಿದ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಆರೆಸ್ಸೆಸ್ ಒಂದು ನೋಂದಣಿ ಆಗದ ರಾಜಕೀಯ ಸಂಘಟನೆ ಎಂದು ವಾಗ್ದಾಳಿ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆಗೆ ಬಂದಿರುವ ಜೀವ ಬೆದರಿಕೆಯನ್ನು ಖಂಡಿಸಿದರು ತಮ್ಮನ್ನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂಬ ಹೇಳಿಕೆಗೆ ವೈಯಕ್ತಿಕ ಅಭಿಪ್ರಾಯ ಎಂದರು.

Read Full Story

04:09 PM (IST) Oct 18

'ಅಪ್ಪನ ಬರ್ತಡೇ ಇವತ್ತು, ಪೂಜೆ ಮಾಡು' ಎಂದು ತಂಗಿಗೆ ಸೂಚಿಸಿದ ರಾಯನ್​ - ಚಿರು ಸರ್ಜಾ ಕಂದನ ಮುದ್ದು ಮಾತಿಗೆ ಫ್ಯಾನ್ಸ್​ ಭಾವುಕ

ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದು, ಪತ್ನಿ ಮೇಘನಾ ರಾಜ್ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅಪ್ಪನ ಕುರಿತು ರಾಯನ್ ಆಡಿದ ಮುದ್ದು ಮಾತುಗಳು ಎಲ್ಲರನ್ನೂ ಭಾವುಕರನ್ನಾಗಿಸಿದೆ.

Read Full Story

04:03 PM (IST) Oct 18

ರಾಜ್ಯದಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ನೌಕರರ ಆತ್ಮ*ಹತ್ಯೆ, ಸರ್ಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

ರಾಜ್ಯದಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ನೌಕರರ ಆತ್ಮ8ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು  ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.

Read Full Story

04:03 PM (IST) Oct 18

ಆರೆಸ್ಸೆಸ್ ಚಟುವಟಿಕೆ ನಿಷೇಧ - ಬಿಜೆಪಿಯೇ ಜಾರಿಗೆ ತಂದಿತ್ತು, ಈಗ ಅನುಷ್ಠಾನಕ್ಕೆ ಬಂದಿದೆ - ಸಚಿವ ಪಾಟೀಲ್

ಸರಕಾರಿ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ ಎಂಬ ನಿಯಮವನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಈ ನಿಯಮವನ್ನು ಹಿಂದಿನ ಬಿಜೆಪಿ ಸರ್ಕಾರವೇ ಜಾರಿಗೆ ತಂದಿತ್ತು ಎಂದ ಅವರು, ಪ್ರಿಯಾಂಕ್ ಖರ್ಗೆ ಆರೆಸ್ಸೆಸ್‌ ನಿಷೇಧದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story

04:02 PM (IST) Oct 18

ಪೊಲೀಸರು ಎಸೆದ ಕಸವನ್ನು ಪೊಲೀಸರ ಕೈಲೇ ಹೆಕ್ಕಿಸಿದ ಕೊಡಗಿನ ಜನ

Kodagu locals: ಕಾವೇರಿ ಸಂಕ್ರಮಣದ ವೇಳೆ ಕೊಡಗಿನ ತಲಕಾವೇರಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ರಸ್ತೆ ಬದಿ ಕಸ ಎಸೆದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಂದಲೇ ಆ ಕಸವನ್ನು ಎತ್ತಿಸಿ ಸ್ವಚ್ಛತೆಯ ಪಾಠ ಹೇಳಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:56 PM (IST) Oct 18

ರಿಷಬ್ ಶೆಟ್ಟಿ ಕ್ರಿಕೆಟ್ ಜ್ಞಾನವೇ ಇಲ್ವಾ? ಸಿಂಪಲ್ ಪ್ರಶ್ನೆಗೆ ಉತ್ತರಿಸದೇ ಕೆಬಿಸಿಯಲ್ಲಿ ಎಡವಿದ್ದೇಕೆ?

ಬೆಂಗಳೂರು: ಕಾಂತಾರ ಚಾಪ್ಟರ್ 1 ದೇಶಾದ್ಯಂತ ತಮ್ಮ ಅಮೋಘ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಇನ್ನು ಇದೆಲ್ಲದರ ನಡುವೆ ಕೌನ್ ಬನೇಗಾ ಕರೋರ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ, ಕ್ರಿಕೆಟ್ ಕುರಿತಾದ ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೇ ಎಡವಿದ್ದಾರೆ.

 

Read Full Story

03:09 PM (IST) Oct 18

ಬೆಂಗಳೂರಿಗೆ ಬೇಕಿರುವುದು ಫ್ಲೈಓವರ್‌ಗಳಲ್ಲ, ಇನ್ನೊಂದು ನಗರ!

Bengaluru Needs a New Satellite City ಸ್ಪಾರ್ಟ್‌ಅಪ್‌ ಸಹಸಂಸ್ಥಾಪಕ ಸಾರಾಂಶ್ ಆನಂದ್ ಅವರ ಪ್ರಕಾರ, ಬೆಂಗಳೂರಿನ ಸಮಸ್ಯೆಗೆ ಮತ್ತಷ್ಟು ಫ್ಲೈಓವರ್‌ಗಳು ಪರಿಹಾರವಲ್ಲ. ಬದಲಾಗಿ, ದೆಹಲಿಗೆ ಗುರ್‌ಗಾಂವ್ ಇದ್ದಂತೆ, ಬೆಂಗಳೂರಿನಿಂದ 30-40 ಕಿ.ಮೀ ಅಂತರದಲ್ಲಿ ಹೊಸ ನಗರವನ್ನು ನಿರ್ಮಿಸುವುದು ಅನಿವಾರ್ಯ.

Read Full Story

02:59 PM (IST) Oct 18

ಕೆಇಎ ಅಪ್ಡೇಟ್ - ವೈದ್ಯಕೀಯ ಆಕಾಂಕ್ಷಿಗಳೇ ಗಮನಿಸಿ, ಸೀಟು ಹಂಚಿಕೆಯ ಅಚ್ಚರಿಯ ತಿರುವು

ಈ ವರ್ಷ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಯುಜಿ ಮತ್ತು ಪಿಜಿ ಸೀಟುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರ ಪ್ರಕಾರ, ಯುಜಿ ಹಂತದಲ್ಲಿ 1,277 ಮತ್ತು ಪಿಜಿ ಹಂತದಲ್ಲಿ 422 ಸೀಟುಗಳು ಹೆಚ್ಚಾಗಿದೆ.

Read Full Story

02:44 PM (IST) Oct 18

ಅನುಮಾನದಿಂದ ಬಯಲಾಯ್ತು ಕೊಲೆ ರಹಸ್ಯ - ಹೆಬ್ಬಗೋಡಿ ಪೊಲೀಸರ ತನಿಖೆಗೆ ಪಾಪಿ ಪತಿ ಬಾಯಿಬಿಟ್ಟ!

Anekal Husband Arrested for Wifes Murder ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿ, ಆಕೆ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದ. ಆದರೆ, ಮೃತರ ಮಗಳು ನೀಡಿದ ಸಣ್ಣ ಸುಳಿವಿನ ಮೇರೆಗೆ ತನಿಖೆ ನಡೆಸಿದ ಹೆಬ್ಬಗೋಡಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. 

Read Full Story

02:04 PM (IST) Oct 18

ಎನ್‌ಟಿಆರ್‌ಗೆ ಗೊತ್ತಿದ್ದೇ ಇದೆಲ್ಲಾ ನಡೀತಾ? ಚಿರಂಜೀವಿಗೆ ಘೋರ ಅವಮಾನ.. 9 ವರ್ಷದಲ್ಲಿ ಸೀನ್‌ ರಿವರ್ಸ್‌!

ಎನ್‌ಟಿಆರ್ ಮತ್ತು ಚಿರಂಜೀವಿ 'ತಿರುಗುಲೇನಿ ಮನಿಷಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇನ್ನೊಂದು ಸಿನಿಮಾದಲ್ಲೂ ಇಬ್ಬರೂ ನಟಿಸಬೇಕಿತ್ತು. ಆದರೆ ಅವಮಾನಕರವಾಗಿ ಆ ಚಿತ್ರದಿಂದ ಚಿರಂಜೀವಿಯನ್ನು ತೆಗೆದುಹಾಕಲಾಯಿತು.

 

Read Full Story

01:41 PM (IST) Oct 18

ಸಿನಿಮಾ ನಟನೆ ಧರ್ಮಕ್ಕೆ ವಿರುದ್ಧ ಎಂದಿದ್ದ ದಂಗಲ್‌ ನಟಿ ಜೈರಾ ವಾಸೀಮ್‌ ವಿವಾಹ!

Zaira Wasim Dangal Actress Who Quit Films for Faith Gets Married ದಂಗಲ್ ಖ್ಯಾತಿಯ ನಟಿ ಜೈರಾ ವಾಸೀಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಪತಿಯ ಗುರುತನ್ನು ಬಹಿರಂಗಪಡಿಸಿಲ್ಲ.

Read Full Story

01:41 PM (IST) Oct 18

ಆರ್‌ಎಸ್‌ಎಸ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರಿಯಾಂಕ್ ಖರ್ಗೆಗೆ ಬಿಜೆಪಿಯ ಮಣಿಕಂಠ ರಾಥೋಡ್ ಬೆದರಿಕೆ!

RSS ವಿರುದ್ಧ ಕಾನೂನು ಹೋರಾಟ ಸಚಿವ ಪ್ರಿಯಾಂಕ್ ಖರ್ಗೆಯ ಹೋರಾಟಕ್ಕೆ ವಕೀಲರಿಂದ ಬೆಂಬಲ ವ್ಯಕ್ತವಾಗಿದೆ. ಈ ನಡುವೆ, ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ರಿಂದ ಬೆದರಿಕೆ ಎದುರಾಗಿದ್ದು, ಚಿತ್ತಾಪುರದ ಧ್ವಜ ವಿವಾದದ ಬಗ್ಗೆ ಖರ್ಗೆ ಸ್ಪಷ್ಟನೆ ನೀಡುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story

01:34 PM (IST) Oct 18

ನನ್ನ ಸೊಸೆಯಂದಿರು ಅದ್ಭುತ.. ಶೋಭಿತಾ, ಜೈನಬ್ ಬಗ್ಗೆ ಮೊದಲ ಬಾರಿಗೆ ಅಮಲಾ ಅಕ್ಕಿನೇನಿ ಹೇಳಿದ್ದೇನು?

ಅಮಲಾ ಅಕ್ಕಿನೇನಿ ತಮ್ಮ ಸೊಸೆಯಂದಿರಾದ ಶೋಭಿತಾ ಧೂಳಿಪಾಲ ಮತ್ತು ಜೈನಬ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ತಾನು ಡಿಮ್ಯಾಂಡ್ ಮಾಡುವ ಅತ್ತೆಯಲ್ಲ ಎಂದು ಅಮಲಾ ಹೇಳಿದ್ದಾರೆ.

 

Read Full Story

01:26 PM (IST) Oct 18

ಉಗುರು ತೆಗೆಯೋಕೆ ಇಷ್ಟು ರೇಟಾ? ಸಲೂನ್​ನಲ್ಲಿ Bigg Boss ಮಲ್ಲಮ್ಮ ತಬ್ಬಿಬ್ಬು- ಮುಂದೇನಾಯ್ತು ನೋಡಿ

ಬಿಗ್​ಬಾಸ್​ ಮನೆಯಲ್ಲಿ ತಮ್ಮ ಮುಗ್ಧತೆಯಿಂದಲೇ ಎಲ್ಲರ ಮನಗೆದ್ದಿರುವ ಮಲ್ಲಮ್ಮ, ಶೋಗೆ ಬರುವ ಮುನ್ನ ಸಲೂನ್​ಗೆ ಭೇಟಿ ನೀಡಿದಾಗ ನಡೆದ ಸ್ವಾರಸ್ಯಕರ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಅಲ್ಲಿನ ದುಬಾರಿ ರೇಟ್​ ಕೇಳಿ ಹಾಗೂ ಸಿಬ್ಬಂದಿಯ ಸೇವೆಗೆ  ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತವಾಗಿದೆ.  

Read Full Story

01:20 PM (IST) Oct 18

BBK 12 - ಬುದ್ದಿ ಕಲಿಸದೇ ಬಿಡೋದೇ ಇಲ್ಲ - ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಗುಡುಗು

ಈ ವಾರದ ಬಿಗ್‌ಬಾಸ್ ಮನೆಯಲ್ಲಿ 'ಗೆಜ್ಜೆ ಸದ್ದು' ವಿವಾದ ಸೃಷ್ಟಿಸಿದ್ದು, ಈ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಜಾನ್ವಿ, ರಕ್ಷಿತಾ ಶೆಟ್ಟಿಯನ್ನು ಗುರಿ ಮಾಡಿದ್ದಾರೆ. ಸುದೀಪ್ ಈ ವಿಷಯವನ್ನು ಕೈಗೆತ್ತಿಕೊಂಡು ತಪ್ಪಿತಸ್ಥರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.

Read Full Story

01:14 PM (IST) Oct 18

Viral Video - 38 ವರ್ಷಗಳ ಕಾಲ ಶಾಲೆಯ ಗಂಟೆ ಬಾರಿಸಿದ ವ್ಯಕ್ತಿಗೆ ಭಾವುಕ ವಿದಾಯ ನೀಡಿ ಬಿಷಪ್‌ ಕಾಟನ್‌ ಗರ್ಲ್ಸ್‌, ಕಣ್ಣೀರಿಟ್ಟ ದಾಸ್‌ ಅಂಕಲ್‌!

Viral Video: Bishop Cotton Girls School Bids Tearful Farewell to Das Uncle ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ 38 ವರ್ಷಗಳಿಂದ ಗಂಟೆ ಬಾರಿಸುತ್ತಿದ್ದ 'ದಾಸ್ ಅಂಕಲ್' ಅವರಿಗೆ ವಿದ್ಯಾರ್ಥಿನಿಯರು ಭಾವುಕ ವಿದಾಯ ನೀಡಿದ್ದಾರೆ. 

 

Read Full Story

01:03 PM (IST) Oct 18

ರಾಘವೇಂದ್ರ ರಾವ್‌ಗೆ ಶ್ರೀದೇವಿ ಕೇಳಿದ ಕೊನೆಯ ಆಸೆ ಏನು? ಆಕೆಗೆ ಅಂಥ ಸಾವು ಬರಬಾರದಿತ್ತು ಎಂದ ನಿರ್ದೇಶಕ!

ಶ್ರೀದೇವಿಯ ಕೊನೆಯ ಆಸೆ ಏನೆಂದು ರಾಘವೇಂದ್ರ ರಾವ್ ಬಹಿರಂಗಪಡಿಸಿದ್ದಾರೆ. ಆ ಆಸೆ ಈಡೇರುವ ಮುನ್ನವೇ ಶ್ರೀದೇವಿ ನಿಧನರಾದರು. ರಾಘವೇಂದ್ರ ರಾವ್ ನಿಜವಾಗಿ ಏನು ಹೇಳಿದ್ದಾರೆಂದು ಈ ಲೇಖನದಲ್ಲಿ ತಿಳಿಯೋಣ. 

Read Full Story

12:40 PM (IST) Oct 18

ಕಳಪೆ ವಾಹನ ಮಾರಿದ ಕಿಯಾ ಮೋಟಾರ್ಸ್ ಕಂಪನಿ - ಹೊಸ ಕಾರು ನೀಡಲು ಧಾರವಾಡ ಆಯೋಗ ಸೂಚನೆ

ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದ ಮಹಮ್ಮದ್‌ ತಾಹೀರ್ ತಂಬೋಳಿ ಎನ್ನುವವರು ಹುಬ್ಬಳ್ಳಿಯ ಅಮರಗೋಳದ ನಾಗಶಾಂತಿ ಮೋಟರ್ಸ್‌ರವರಿಂದ 16,60,000/- ಖರ್ಚು ಮಾಡಿ ಕಿಯಾ ವಾಹನ ಖರೀದಿಸಿದ್ದರು.

Read Full Story

12:38 PM (IST) Oct 18

Amruthadhaare - ವಠಾರದ ಕರೆಂಟ್​ ತೆಗೆದ ಮಲ್ಲಿ - ಕತ್ತಲಲ್ಲಿ ಕುಚ್​ ಕುಚ್​ ಆಗೋಯ್ತು- ಹೃದಯ ಬಡಿತನೂ ಜೋರಾಯ್ತು

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡಲು ಮಲ್ಲಿ ಹೊಸ ಪ್ಲ್ಯಾನ್ ಮಾಡಿದ್ದಾಳೆ. ಗೌತಮ್ ಇರುವ ವಠಾರಕ್ಕೆ ಭೂಮಿಕಾಳನ್ನು ಕರೆತಂದು, ಕತ್ತಲಲ್ಲಿ ಇಬ್ಬರೂ ಅನಿರೀಕ್ಷಿತವಾಗಿ ಭೇಟಿಯಾಗಿ ತಬ್ಬಿಕೊಳ್ಳುವಂತೆ ಮಾಡಿದ್ದಾಳೆ.  

Read Full Story

12:32 PM (IST) Oct 18

25ನೇ ವಯಸ್ಸಿಗೆ ಬಿಜೆಪಿ ಟಿಕೆಟ್ ಪಡೆದ ಗಾಯಕಿ ಮೈಥಿಲಿ ಠಾಕೂರ್ ಆಸ್ತಿ ಎಷ್ಟು? ಆದಾಯದ ಮೂಲವೇನು?

ಖ್ಯಾತ ಗಾಯಕಿ ಮೈಥಿಲಿ ಠಾಕೂರ್, 25ನೇ ವಯಸ್ಸಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಆದಾಯದ ಮೂಲವನ್ನು ಬಹಿರಂಗಪಡಿಸಿದ್ದು, ಈ ವಿವರಗಳು ವೈರಲ್ ಆಗಿವೆ.
Read Full Story

12:20 PM (IST) Oct 18

ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರಣೆ ಅ.29ಕ್ಕೆ ಮುಂದೂಡಿಕೆ, ನ್ಯಾಯಾಂಗ ನಿಂದನೆ ಅರ್ಜಿ ಅದೇಶ ಇಂದು

Renukaswamy Murder Case Hearing Adjourned to Oct 29 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಅಕ್ಟೋಬರ್ 29ಕ್ಕೆ ಮುಂದೂಡಿದೆ. ದರ್ಶನ್‌ಗೆ ಕನಿಷ್ಠ ಸೌಲಭ್ಯ ನೀಡಿಲ್ಲ ಎಂಬ ದೂರಿನ ಬಗ್ಗೆ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

Read Full Story

More Trending News