ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಆರ್ ಎಸ್ ಎಸ್ ಬೆಂಬಲಿಸುವವರು ದೇಶ ವಿರೋಧಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನವರು ಗಾಂಧಿ, ಬಸವಣ್ಣ, ಅಂಬೇಡ್ಕರ್, ರಾಷ್ಟ್ರ ಧ್ವಜವನ್ನು ಒಪ್ಪುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಈಗ ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ಬಿಸಿಬಿಸಿ ಚರ್ಚೆಯ ಮಧ್ಯೆಯೇ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾರೂ ಆರ್ ಎಸ್ ಎಸ್ ಒಪ್ಕೋತಾರೆ ಅವರು ದೇಶ ವಿರೋಧಿಗಳು ಎಂದು ಕೊಪ್ಪಳದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ದೇಶಭಕ್ತಿ ಸಂಘಟನೆ ಅಂತಾ ಯಾವ ಮೂಲದಿಂದ ಒಪ್ಕೋತಿರಿ. ಇವರು ಗಾಂಧಿ, ಬಸವಣ್ಣ, ಬುದ್ದ ಯಾರನ್ನೂ ಒಪ್ಪಲ್ಲ. ಬಸವಣ್ಣರನ್ನ ಎಲ್ಲರೂ ಒಪ್ಕೋತಾರೆ. ಆದ್ರೆ ಆರ್ ಎಸ್ ಎಸ್ ನವರು ಒಪ್ಪಲ್ಲ. ಇವರು ಅಂಬೇಡ್ಕರ್ ಅವರನ್ನು ಒಪ್ಪಲ್ಲ, ರಾಷ್ಟ್ರ ದ್ವಜ ಒಪ್ಪಲ್ಲ, ರಾಷ್ಟ್ರಗೀತೆ ಒಪ್ಪಲ್ಲ. ಮೋದಿ, ಅಶೋಕ, ಯತ್ನಾಳ ಎಲ್ಲರೂ ಆರ್ ಎಸ್ ಎಸ್ ಅಂತಾರೆ. ಯಾವ ಮೂಲೆಯಿಂದ ನಾವು ರಾಷ್ಟ್ರಭಕ್ತ ಸಂಘಟನೆ ಅಂತಾ ಹೇಳ್ತೀರಿ. ಬೇರೆ ಯಾರಾದರೂ ಆಯುಧ ಹಿಡಿದುಕೊಂಡು ಓಡಾಡಿದ್ರೆ ಎಫ್ ಐ ಆರ್ ಮಾಡ್ತೀರೀ. ಇವರು ಬಡಿಗೆ ದೊಣ್ಣೆ ಹಿಡಿದು ಕೊಂಡು ಓಡಾಡಿದ್ರೆ ಯಾಕೆ ಎಫ್ ಐ ಆರ್ ಮಾಡಬಾರದು ಎಂದು ತಂಗಡಗಿ ಪ್ರಶ್ನಿಸಿದ್ದಾರೆ.
ಡಿಕೆಶಿ ಆರ್‌ಎಸ್‌ಎಸ್ ಒಪ್ಕೊಂಡಿಲ್ಲ
ಡಿಕೆ ಶಿವಕುಮಾರ್ ಆರ್ ಎಸ್ ಎಸ್ ಒಪ್ಕೊಂಡಿಲ್ಲ. ಸಮಯಕ್ಕೆ ತಕ್ಕಂತೆ ಹಾಡಿದ್ದಾರೆ. ನಮತ್ಸೆ ಸದಾ ವತ್ಸಲೆ ಹಾಡಿದ್ರೆ ಏನಾಯ್ತು? ರಾಷ್ಟ್ರಗೀತೆ ಒಪ್ಪಕೊಳಲ್ಲ ಅಂದರೆ ಏನ ಅನಬೇಕಾ? ಆರ್ ಎಸ್ ಎಸ್ ಕಚೇರಿ ಮೇಲೆ ಯಾಕೆ ದ್ವಜ ಹಾರಿಸಲ್ಲ. ನಾನ ಎಲ್ಲವನ್ನೂ ನೋಡಿ ಬಂದಿದ್ದೇನೆ. ನನಗೆ ಗೊತ್ತಾದ ಮೇಲೆ ಬಿಜೆಪಿ ಬಿಟ್ಟಿದ್ದೇನೆ ಎಂದು ತಂಗಡಗಿ ಹೇಳಿದ್ದಾರೆ.
ಹಿಂದೆ ಆರ್ ಎಸ್ ಎಸ್ ಬ್ಯಾನ್ ಮೂರು ಸಲ ಮಾಡಿದ್ರು, ಈ ಬಾರಿ ಪ್ರೀಯಾಂಕ್ ಖರ್ಗೆ ಬ್ಯಾನ್ ಮಾಡಬೇಕು ಅಂತಾ ಹೇಳಿಲ್ಲ. ಕೇವಲ ಆರ್ ಎಸ್ ಎಸ್ ಅಲ್ಲ ಯಾವ ಸಮಯದಾಯವರ ಮಾಡಿದ್ರು,ಕಾರ್ಯಕ್ರಮ ಮಾಡಿದ್ರು, ಅನುಮತಿ ಕಡ್ಡಾಯ. ನಮಾಜ್ ಗೂ ಅನುಮತಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ತಂಗಡಗಿ ಅವರಿಗೂ ಇನ್ನ ಮುಂದೆ ಅನುಮತಿ ಕಡ್ಡಾಯ ಎಂದರು.
ನಾನು ಗೊತ್ತಾದ ಮೇಲೆ ಬಿಟ್ಟಿದ್ದೇನೆ
ನಮಗೆ ಎಲ್ಲರೂ ಸಮಾನರೇ. ದೇಶ ಭಕ್ತಿ ಎಂದರೇನು. ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗಿಯಾಗಿದ್ದಾರಾ? ನಾನ ಯಾವುದೇ ಮೂಲ ಇರಲಿ, ಗೊತ್ತಾದ ಮೇಲೆ ಬಿಟ್ಟಿದ್ದೇನೆ. ಆರ್ ಎಸ್ ಎಸ್ ಅನ್ನೋದು ರಿಜಿಸ್ಟರ್ ಆಗಿಲ್ಲ. ಆರ್ ಎಸ್ ಎಸ್ ಅನ್ನೋದು ಕೋಮುವಾದ ಸಂಸ್ಥೆ ಇದು ದೇಶಭಕ್ತಿ ಸಂಸ್ಥೆ ಅಲ್ಲ. ನಾನು ಇದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದರಲ್ಲಿ ಎರಡ ಮಾತೇ ಇಲ್ಲ. ಪಥ ಸಂಚಲನದಲ್ಲಿ ಯಾಕೆ ದ್ವಜ ಇಲ್ಲ. ಯಾವ ಅರ್ಥದಲ್ಲಿ ನೀವು ದೇಶ ಪ್ರೇಮಿಗಳು. ಸಿಟಿ ರವಿ ಆರ್ ಎಸ್ ಎಸ್ ನಲ್ಲಿ ಓದಿದ್ರೆ ದೇಶ ಪ್ರೇಮಿನಾ? ಮೋದಿ ಆರ್ ಎಸ್ ಎಸ್ ನಿಂದ ಬಂದರೆ ದೇಶ ಪ್ರೇಮಿನಾ? ನಾವ ಬ್ಯಾನ್ ಮಾಡಲು ಹೇಳಿಲ್ಲ,ಅನುಮತಿ ತೆಗೆದುಕೊಳ್ಳಲು ಹೇಳಿದ್ದೇವೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಯಾವ ಅರ್ಥದಲ್ಲಿ ದೇಶ ಪ್ರೇಮಿ ಸಂಘಟನೆ ?
ಜಗದೀಶ್ ಶೆಟ್ಟರ್ ಕಾಲದಲ್ಲಿ ಏನು ಆಗಿದೆ ಅದನ್ನು ಕೊಡತೀವಿ. ನನ್ನ ಪ್ರಶ್ನೆ ಆರ್ ಎಸ್ ಎಸ್ ಮುಖ್ಯಸ್ಥರಿಗೆ, ಯಾವ ಅರ್ಥದಲ್ಲಿ ದೇಶ ಪ್ರೇಮಿ ಸಂಘಟನೆ ? ದೇಶ ಪ್ರೇಮಿ ದೇಶ ಪ್ರೇಮಿ ಅಂದ್ರೆ ಯಾವ ಅರ್ಥದಲ್ಲಿ ದೇಶ ಪ್ರೇಮಿ? ಆರ್ ಎಸ್ ಎಸ್ ಹಿಂದೆ ಮೂರು ಸಲ ಬ್ಯಾನ್ ಆಗಿತ್ತು, ನಾವು ಬ್ಯಾನ್ ಮಾಡತೀವಿ ಅಂತಾ ಹೇಳಿಲ್ಲ. ನಮ್ಮ ಕೈಯಲ್ಲಿ ಅಧಿಕಾರವೂ ಇಲ್ಲ. ದೇಶ ಪ್ರೇಮದ ಯಾವ ಕೆಲಸ ನೀವೂ ಮಾಡಿದ್ದೀರಿ. ಬ್ಯಾನ್ ಬಗ್ಗೆ ಚರ್ಚೆನೆ ಆಗಿಲ್ಲ, ದೇಶಕ್ಜೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಬ್ಯಾನ್ ಮಾಡಾಕ ಆಗತ್ತಾ? ನವೆಂಬರ್ ಕ್ರಾಂತಿ ಕೇವಲ ಮಾಧ್ಯಮಗಳ ಕ್ರಾಂತಿ ನಾವೆಲ್ಲ ಅರಾಮ್ ಇದೀವಿ ಎಂದು ತಂಗಡಗಿ ಹೇಳಿದ್ದಾರೆ.
ಸಮೀಕ್ಷೆ ಬಗ್ಗೆ ಸಿಎಂ ಸಭೆ ನಂತರ ತೀರ್ಮಾನ ಮಾಡ್ತೀವಿ
ಸಮೀಕ್ಷೆ ವಿಚಾರಕ್ಕೆ ನಾಳೆ ಸಿಎಮ್ ಸಭೆ ಕರೆದಿದ್ದಾರೆ. ನಾಳೆ ಸಿಎಂ ಸಭೆ ನಂತರ ತೀರ್ಮಾನ ಮಾಡ್ತೀವಿ ಎಂದ ತಂಗಡಗಿ, ಸುಧಾ ಮೂರ್ತಿ ಅವರೇ ಮಾಹಿತಿ ಬಹಿರಂಗ ಮಾಡಿದ್ದಾರೆ. ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಅಲ್ಲ. ಎಲ್ಲ ಸಮುದಾಯವರ ಸಮೀಕ್ಷೆ. ಸುಧಾ ಮೂರ್ತಿ ಬ್ರಾಹ್ಮಣ ಸಮುದಾಯದವರು. ಬ್ರಾಹ್ಮಣ ಸಮುದಾಯದಲ್ಲಿ ಬಡವರ ಇಲ್ವಾ? ಸುಧಾ ಮೂರ್ತಿ, ಜೋಶಿ ಅವರು ಸಮೀಕ್ಷೆ ವಿಫಲ ಮಾಡಲು ಹೊರಟಿದ್ದಾರೆ. ಜನ ಬುದ್ದಿವಂತರಿದ್ದಾರೆ ಎಂದು ತಂಗಡಗಿ ಹೇಳಿಕೆ ನೀಡಿದ್ದಾರೆ.
