ಬೆಂಗಳೂರು: ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ದೆಹಲಿಗೆ ಆಹ್ವಾನಿಸಿದ್ದು, ಸಂಕ್ರಾಂತಿ ಬಳಿಕ ಅಲ್ಲಿಗೆ ತೆರಳಿ ಗೊಂದಲ ಬಗೆಹರಿಸಿಕೊಂಡು ಬರುತ್ತಾರೆ ಎಂದು ವಿಧಾನಸಭೆ ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್‌ಗಾಂಧಿ ಅವರು ಇಬ್ಬರು ನಾಯಕರ ಜತೆ ಮಂಗಳವಾರ ಏನೂ ಚರ್ಚೆ ಮಾಡಿಲ್ಲ. ದೆಹಲಿಗೆ ಬನ್ನಿ ಎಂದು ಕರೆದಿದ್ದಾರೆ ಅಷ್ಟೇ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ಹೋಗಲಿದ್ದು, ಆಗ ಶೇ.100 ರಷ್ಟು ಗೊಂದಲ ಬಗೆಹರಿಸುವ ವಿಶ್ವಾಸವಿದೆ ಎಂದು ಹೇಳಿದರು. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾವು ಅದಕ್ಕೆ ಬದ್ಧವಾಗಿದ್ದೇವೆ. ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಂಪುಟ ಪುನರ್‌ರಚನೆ ಆಗಬೇಕು ಎಂಬ ಆಸೆ ನಮಗೂ ಇದೆ, ಅದು ನಮ್ಮ ಬೇಡಿಕೆ ಕೂಡ. ಇವೆಲ್ಲದರ ಬಗ್ಗೆಯೂ ದೆಹಲಿಯಲ್ಲಿ ಚರ್ಚೆಯಾಗಲಿದೆ ಎಂದರು.

10:41 PM (IST) Jan 15
ಉತ್ತರಕನ್ನಡದ ಭಟ್ಕಳದಲ್ಲಿ ಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಮಕ್ಕಳಾಗದವರು ಸೇರಿದಂತೆ ಹರಕೆ ಹೊತ್ತ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಇಲ್ಲಿನ 'ಶೇಡಬರಿ ಮರ' ಏರಿ ಹರಕೆ ಒಪ್ಪಿಸುವುದು ಈ ಜಾತ್ರೆಯ ಪ್ರಮುಖ ವಿಶೇಷತೆಯಾಗಿದೆ.
10:21 PM (IST) Jan 15
ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರನ್ನು ಕರವೇ ಬೆಂಬಲಿಸುತ್ತಿರುವುದಕ್ಕೆ ವ್ಯಕ್ತವಾದ ಟೀಕೆಗಳಿಗೆ ಟಿ.ಎ. ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ. ಅಶ್ವಿನಿ ಕನ್ನಡ ಹೋರಾಟಗಾರ್ತಿ ಎಂದು ಸಮರ್ಥಿಸಿಕೊಂಡ ಅವರು, ಇಲ್ಲಸಲ್ಲದ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
10:02 PM (IST) Jan 15
Narayana Gowda Slams Trolls Over Sudeep Meeting & BBK12 Controversy ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಪರ ಬ್ಯಾಟಿಂಗ್ ಹಾಗೂ ಕಿಚ್ಚ ಸುದೀಪ್ ಭೇಟಿ ಕುರಿತಾದ ವಿವಾದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಖಡಕ್ ತಿರುಗೇಟು ನೀಡಿದ್ದಾರೆ.
09:13 PM (IST) Jan 15
08:40 PM (IST) Jan 15
07:15 PM (IST) Jan 15
ಮಾಗಳ-ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ 15 ದಿನಗಳಿಂದ ಸ್ಥಗಿತಗೊಂಡಿದೆ. ದೋಣಿಯ ತಳದಲ್ಲಿ ರಂಧ್ರ ಬಿದ್ದಿರುವುದರಿಂದ ಪ್ರಯಾಣಿಕರು 30-40 ಕಿ.ಮೀ. ಸುತ್ತುವರಿದು ಪ್ರಯಾಣಿಸುವಂತಾಗಿದ್ದು, ಇಲಾಖೆ ದುರಸ್ತಿಗೆ ಮುಂದಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
06:55 PM (IST) Jan 15
ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರ ದುರಸ್ತಿ ಕಾರ್ಯ 12 ದಿನಗಳಿಂದ ಮುಂದುವರೆದಿದ್ದು, ನೀರಿನ ಸೋರಿಕೆ ಸಂಪೂರ್ಣ ನಿಂತಿಲ್ಲ. ಈ ಅವಘಡದಿಂದ 3.5 ಟಿಎಂಸಿ ನೀರು ಪೋಲಾಗಿದ್ದು, ಎಲ್ಲಾ 22 ಗೇಟ್‌ಗಳನ್ನು ಬದಲಾಯಿಸಲು ಸ್ಥಳೀಯ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
06:26 PM (IST) Jan 15
ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದು, ತಾವೂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರ ಮನಸ್ಸಲ್ಲೂ ಇದೇ ಇದೆ ಎಂದಿದ್ದಾರೆ. ಪಕ್ಷದಲ್ಲಿ ಬದಲಾವಣೆ ತರಲು ಹೊರಬಂದಿರುವುದಾಗಿ ಹೇಳಿದರು,
06:08 PM (IST) Jan 15
05:59 PM (IST) Jan 15
2023ರಲ್ಲಿ ಕೆನಡಾದ ಟೊರಾಂಟೊ ವಿಮಾನ ನಿಲ್ದಾಣದಲ್ಲಿ ನಡೆದ 20 ಮಿಲಿಯನ್ ಡಾಲರ್ ಮೌಲ್ಯದ ಚಿನ್ನದ ದರೋಡೆ ಪ್ರಕರಣದ ಮುಖ್ಯ ಆರೋಪಿ, ಭಾರತೀಯ ಮೂಲದ ಸಿಮ್ರಾನ್ ಪ್ರೀತ್ ಪನೇಸರ್‌ನನ್ನು ಹಸ್ತಾಂತರಿಸುವಂತೆ ಕೆನಡಾ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.
05:47 PM (IST) Jan 15
ನಟಿ ಕಾರುಣ್ಯ ರಾಮ್,ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ಬೆಟ್ಟಿಂಗ್ ಆ್ಯಪ್ ಚಟ ಮತ್ತು ಸಾಲ, ವಂಚನೆ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಸುಮಾರು 25 ಲಕ್ಷ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದು, ಆಕೆ ಮಾಡಿದ ತಪ್ಪಿಗೆ ಇಂದು ಬೆದರಿಕೆ ಬರುತ್ತಿದೆ ಎಂದಿದ್ದಾರೆ.
05:39 PM (IST) Jan 15
ಜೀವನದಲ್ಲಿ ಒಳ್ಳೆ ಮತ್ತು ಕೆಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವರು ಬೇಗ ಮರೆತರೆ, ಇನ್ನು ಕೆಲವರು ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಸಣ್ಣ ವಿಷಯಗಳಿಗೂ ಬೇಜಾರಾಗುತ್ತಾರೆ. ಯಾಕೆ ಹೀಗೆ? ಇದರ ಬಗ್ಗೆ ಮನೋವಿಜ್ಞಾನ ಏನು ಹೇಳುತ್ತೆ? ಇಲ್ಲಿ ಓದಿ.
05:26 PM (IST) Jan 15
ಬಿಗ್ ಬಾಸ್ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಮಂಡ್ಯದ ಗಿಲ್ಲಿ ನಟನ ಪರವಾಗಿ ಹಳ್ಳಿ-ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಬೃಹತ್ ವೋಟಿಂಗ್ ಅಭಿಯಾನ ನಡೆಯುತ್ತಿದೆ. ಶಾಸಕರೂ ಸೇರಿದಂತೆ ಜನಸಾಮಾನ್ಯರು ಗಿಲ್ಲಿ ನಟನ ಗೆಲುವಿಗಾಗಿ ಕೈಜೋಡಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
05:21 PM (IST) Jan 15
ಬಿಗ್ಬಾಸ್ನ ಪ್ರಬಲ ಸ್ಪರ್ಧಿ ಎನಿಸಿರುವ ಗಿಲ್ಲಿ ನಟನ ಕುರಿತು ನಟ ಜಗ್ಗೇಶ್ ಈ ಹಿಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿವೆ. ಗಿಲ್ಲಿ ನಟನ ಬಗ್ಗೆ ಅಂದು ಜಗ್ಗೇಶ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗುತ್ತಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
04:54 PM (IST) Jan 15
ಧನುರ್ಮಾಸದ ಪೂಜೆಗೆಂದು ಹೋದ ಬೆಳ್ತಂಗಡಿಯ 16 ವರ್ಷದ ಬಾಲಕ ಸುಮಂತ್, ನಿಗೂಢವಾಗಿ ನಾಪತ್ತೆಯಾಗಿ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಹೊಡೆದಿರುವುದು ದೃಢಪಟ್ಟಿದ್ದು, ಇದೊಂದು ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
04:34 PM (IST) Jan 15
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸದಾ ಹಾವು-ಮುಂಗುಸಿಯಂತಿದ್ದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಒಂದಾಗಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಕ್ಕೆ ಗಿಲ್ಲಿ ನಟ ಅಶ್ವಿನಿಯವರ ಕ್ಷಮೆ ಕೇಳಿದರೆ, ಅಶ್ವಿನಿ ಧನ್ಯವಾದ ತಿಳಿಸಿದ್ದಾರೆ. ಆಗಿದ್ದೇನು?
04:28 PM (IST) Jan 15
Bengaluru to Mumbai in 18 Hours: Duronto Express Premium Service Soon ಕೆಎಸ್ಆರ್ ಬೆಂಗಳೂರನ್ನು ಸಿಎಸ್ಎಂಟಿ ಮುಂಬೈಗೆ 18 ಗಂಟೆಗಳಲ್ಲಿ ಸಂಪರ್ಕಿಸುವ ಪ್ರೀಮಿಯಂ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ.
04:22 PM (IST) Jan 15
04:18 PM (IST) Jan 15
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಯೊಬ್ಬರು ತಾನು ಸಿನಿಮಾಗಳಲ್ಲಿ ದೊಡ್ಡ ವಿಲನ್ ಆಗ್ತೇನೆ. ಆಗಲೂ ನೀವು ನನಗೆ ಬೆಂಬಲಿಸಬೇಕು ಎಂದು ಬಿಗ್ ಬಾಸ್ ವೀಕ್ಷಕರ ಮುಂದೆ ಬೆಂಬಲವನ್ನು ಕೋರಿದ್ದಾರೆ. ಆದರೆ ಈ ವ್ಯಕ್ತಿ ಮನೆಯೊಳಗೆ ಬರುವಾಗ ಇದ್ದ ಗುಣಗಳನ್ನು ಬದಲಿಸಿಕೊಂಡಿದ್ದಾರೆ.
04:01 PM (IST) Jan 15
ಶಿಡ್ಲಘಟ್ಟದಲ್ಲಿ ಫ್ಲೆಕ್ಸ್ ತೆರವು ವಿಚಾರವಾಗಿ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ.
03:36 PM (IST) Jan 15
Mangaluru to Maravanthe Coastal Ferry & ₹180 Cr Water Metro Planned ಮಂಗಳೂರಿನಿಂದ ಮರವಂತೆಗೆ ಕರಾವಳಿ ದೋಣಿ ಜಾಲವನ್ನು ಕರ್ನಾಟಕ ಯೋಜಿಸಿದೆ. ಅದರೊಂದೊಗೆ ಮಂಗಳೂರಿಗೆ 180 ಕೋಟಿ ರೂ.ಗಳ ಜಲ ಮೆಟ್ರೋ ಯೋಜನೆಯನ್ನು ರೂಪಿಸಿದೆ.
03:04 PM (IST) Jan 15
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜ ಕ್ಷೇತ್ರದ ಜನರಿಗೆ ಉಪದ್ರವ ನೀಡುವ ಜನಪ್ರತಿನಿಧಿಗಳು ಬೇಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಾ ಶೈಲಿಯೇ ಕಾರ್ಯಕರ್ತರ ದುರ್ವರ್ತನೆಗೆ ಕಾರಣ ಎಂದು ಆರೋಪಿಸಿದ್ದಾರೆ.
02:33 PM (IST) Jan 15
ಬಿಗ್‌ಬಾಸ್ ಸೀಸನ್ 12ರ ಮನೆಯಲ್ಲಿ ಜೆನ್ ಜಿ ಯಾರು ಎಂಬ ಬಗ್ಗೆ ಸ್ಪರ್ಧಿಗಳಾದ ಕಾವ್ಯಾ ಶೈವ, ರಘು, ಮತ್ತು ಗಿಲ್ಲಿ ನಟ ನಡುವೆ ಚರ್ಚೆ ನಡೆದಿದೆ. ಈ ಚರ್ಚೆಯ ಸಮಯದಲ್ಲಿ, ಕಾವ್ಯಾ ಶೈವ ತಮ್ಮ ನಿಜವಾದ ವಯಸ್ಸನ್ನು ಬಹಿರಂಗಪಡಿಸಿದ್ದಾರೆ. ಗಿಲ್ಲಿ ನಟನ ವಯಸ್ಸೆಷ್ಟು?
02:26 PM (IST) Jan 15
ರಾಹುಲ್ ಗಾಂಧಿ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರ ನಿಗೂಢ ಪೋಸ್ಟ್‌ಗಳು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ. ಸಂಕ್ರಾಂತಿ ನಂತರ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಚರ್ಚೆಗಳು ಶುರುವಾಗಿದೆ.
02:09 PM (IST) Jan 15
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ನಿಧಿಯು ಸರ್ಕಾರಕ್ಕೆ ಸಂತಸ ತಂದರೂ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ನಿಧಿ ಸಿಕ್ಕ ಕುಟುಂಬವು ಭಯದಿಂದ ಬೇರೆ ಜಾಗಕ್ಕೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
01:38 PM (IST) Jan 15
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2028ರ ವಿಧಾನಸಭಾ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಅವರು, ಅಧಿಕಾರಿಗಳ ಮೇಲಿನ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
01:34 PM (IST) Jan 15
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ, ಶಾಲೆಯ ಕ್ಷುಲ್ಲಕ ಜಗಳವೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಇನ್ಸ್ಟಾಗ್ರಾಮ್‌ನಲ್ಲಿ 'ಡಾನ್' ಆಗಿ ಮೆರೆಯುವ ಗೀಳಿನಿಂದ ಪ್ರೇರಿತರಾಗಿ ಮೂವರು ಅಪ್ರಾಪ್ತರು ಈ ಕೃತ್ಯ ಎಸಗಿದ್ದಾರೆ
01:28 PM (IST) Jan 15
ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಫಾರಂಹೌಸ್ನ ಕುದುರೆಯೊಂದಿಗೆ ಸಮಯ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಕಳೆದ ವರ್ಷದ ದರ್ಶನ್ ಜೊತೆಗಿನ ಸಂಭ್ರಮದ ಆಚರಣೆಯನ್ನು ನೆನಪಿಸಿದೆ.
12:41 PM (IST) Jan 15
ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್‌ನ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮಂಡ್ಯದಲ್ಲಿ 100 ಎಕರೆಗೂ ಹೆಚ್ಚು ಸರ್ಕಾರಿ ಜಾಗ ಲಭ್ಯವಿರುವುದನ್ನು ಗುರುತಿಸಲಾಗಿದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಕೆಐಎಡಿಬಿಗೆ ಸೂಚನೆ ನೀಡಿದೆ.
12:25 PM (IST) Jan 15
12:23 PM (IST) Jan 15
ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಮೂರನೇ ತ್ರೈಮಾಸಿಕದಲ್ಲಿ 29,720 ಕೋಟಿ ರೂ. ಆದಾಯ ಮತ್ತು 1,445 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.
12:19 PM (IST) Jan 15
ಕೋಲಾರದಲ್ಲಿ ವಿವಾಹಿತ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸಕ್ಕೆ ತೆರಳುತ್ತಿದ್ದ ನರ್ಸ್ ಸುಜಾತಾ ಕೊಲೆಗಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿ ಚಿರಂಜೀವಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
12:02 PM (IST) Jan 15
ಬೆಂಗಳೂರಿನ ಬೇಗೂರು ಬಳಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್‌ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲವಾದರೂ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿದೆ.
11:54 AM (IST) Jan 15
ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಧ್ರುವಂತ್ ಎಲಿಮಿನೇಟ್ ಆದ ನಂತರ ಅಶ್ವಿನಿ ಒಂಟಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷ ಪ್ರೋಮೋದಲ್ಲಿ, ನಾಲ್ವರು ಸ್ಪರ್ಧಿಗಳು ಮಾತ್ರ ಶುಭಾಶಯ ಕೋರಿದ್ದು, ಅಶ್ವಿನಿ ಮತ್ತು ರಕ್ಷಿತಾ ಕಾಣಿಸಿಕೊಳ್ಳದಿರುವುದು ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ.
11:28 AM (IST) Jan 15
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವಿರಾಮದ ವೇಳೆ ಈ ಘಟನೆ ನಡೆದಿದ್ದು, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
11:09 AM (IST) Jan 15
ಹಾಸನದ ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪುಷ್ಪಾ ಅರುಣ್‌ಕುಮಾರ್ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ನಿವೇಶನದ ಮಾಲೀಕತ್ವದ ಬಗ್ಗೆ ದೇವರಾಜು ಎಂಬುವವರ ಪರವಾಗಿ ನ್ಯಾಯಾಲಯ ಆದೇಶ ನೀಡಿದ್ದು, ಈ ಆದೇಶಕ್ಕೆ ತಡೆ ಕೋರಿ ಪುಷ್ಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.
10:50 AM (IST) Jan 15
ಕಾಗಿನೆಲೆ ಮಹಾಸಂಸ್ಥಾನದ ತಿಂಥಣಿ ಬ್ರಿಜ್ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ. ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಶ್ರೀಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಸರ್ಕಾರ ನಿರ್ಧರಿಸಿದೆ.
10:30 AM (IST) Jan 15
ರಾಜ್ಯ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹೆಣವನ್ನು ಹೊತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
10:21 AM (IST) Jan 15
09:56 AM (IST) Jan 15
ಸಿಎಂ ಸಿದ್ದರಾಮಯ್ಯ ಹಠಾತ್ ಜಂಟಿ ಅಧಿವೇಶನ ಕರೆಯುವ ಮೂಲಕ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಹೋರಾಟದ ಯೋಜನೆ ವಿಫಲಗೊಳಿಸಿದ್ದಾರೆ. ಜೊತೆಗೆ ಈ ನಿರ್ಧಾರ ಸ್ವಪಕ್ಷದಲ್ಲಿನ ಸಿಎಂ ಬದಲಾವಣೆಯ ಚರ್ಚೆಗೂ ತಾತ್ಕಾಲಿಕವಾಗಿ ತೆರೆ ಎಳೆದು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.