Published : Oct 13, 2025, 06:52 AM ISTUpdated : Oct 13, 2025, 11:29 PM IST

Karnataka News Live: BBK 12 - ಇದ್ದಕ್ಕಿದ್ದಂತೆ ಧ್ರುವಂತ್‌ಗೆ ಮೈಮೇಲೆ ದೆವ್ವ ಏನಾದರೂ ಬಂತಾ? ಕೊಚ್ತೀನಿ, ಮಸಾಲೆ ಅರಿತೀನಿ ಎಂದ ನಟ

ಸಾರಾಂಶ

ಮಡಿಕೇರಿ: ಬಿಜೆಪಿಯಲ್ಲಿ ಇರುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಬಗ್ಗೆ ಆಸಕ್ತಿ ಏಕೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ನಡೆಯುತ್ತೋ ಇಲ್ಲೋ, ಹಾಗೇ ಸಂಕ್ರಾಂತಿ ನಡೆಯುತ್ತೋ ಇಲ್ಲೋ ಆದರೆ ಸಿಎಂ ಸ್ಥಾನ ಬದಲಾವಣೆ ಆಗುವುದು ಖಚಿತ ಎನ್ನುವ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇದು ಶ್ರೀರಾಮುಲು ಅವರಿಗೆ ಬೇಕಿಲ್ಲದ ವಿಚಾರ ಎಂದರು. ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಚಿವ ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದರು.

bbk 12 dhruvanth

11:29 PM (IST) Oct 13

BBK 12 - ಇದ್ದಕ್ಕಿದ್ದಂತೆ ಧ್ರುವಂತ್‌ಗೆ ಮೈಮೇಲೆ ದೆವ್ವ ಏನಾದರೂ ಬಂತಾ? ಕೊಚ್ತೀನಿ, ಮಸಾಲೆ ಅರಿತೀನಿ ಎಂದ ನಟ

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಇಷ್ಟುದಿನ ಸೈಲೆಂಟ್‌ ಆಗಿದ್ದ ಧ್ರುವಂತ್‌, ಸ್ಪಂದನಾ ಸೋಮಣ್ಣ ಜೊತೆಗೆ ಜಗಳ ಆಡಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇಷ್ಟುದಿನ ಒಳ್ಳೆಯವನು ಎಂದು ನಾಟಕ ಮಾಡ್ತಿದ್ದೆ, ಈಗ ಒಳ್ಳೆಯತನ ಏನು ಎಂದು ತೋರಿಸ್ತೀನಿ ಎಂದಿದ್ದಾರೆ.

 

Read Full Story

10:50 PM (IST) Oct 13

ಮೊದಲೇ ಮೂವರು ಮಕ್ಕಳನ್ನು ಕಳ್ಕೊಂಡ್ರು, ಗಂಡನನ್ನು ಕಳ್ಕೊಂಡ್ರು - ಮಲ್ಲಮ್ಮ ಬಗ್ಗೆ ಪುತ್ರರು ಏನಂದ್ರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಲ್ಲಮ್ಮ ಈ ಸೀಸನ್‌ನ ಹಿರಿಯ ಸ್ಪರ್ಧಿ. ಕೆಲ ವಿಷಯಗಳು ಅರ್ಥ ಆಗೋದಿಲ್ಲ ಎಂದು ಮುಗ್ಧವಾಗಿ ಕಾಣಿಸಿಕೊಳ್ಳುವ ಮಲ್ಲಮ್ಮ ಆಗಾಗ ಕೂಗಿದ್ದು ಉಂಟು. ಇವರ ಮಕ್ಕಳು ಯಾರು? ಏನು ಮಾಡುತ್ತಿದ್ದಾರೆ ಎಂದು ಅನೇಕರಿಗೆ ಕುತೂಹಲ ಇದೆ.

 

Read Full Story

10:35 PM (IST) Oct 13

ಅವ್ರ ಹತ್ರ ಇದ್ದಿದ್ದು ಇವ್ರ ಹತ್ರ ಇಲ್ಲ, ಸ್ವಲ್ಪ ಮೋಷನ್​ ಉಂಟು - ಇವ್ಳು Bigg Boss ರಕ್ಷಿತಾ ಶೆಟ್ಟಿ ಅಲ್ಲ ಮಾರಾಯ್ರೆ- ವಿಡಿಯೋ ನೋಡಿ

ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಅರ್ಧಂಬರ್ಧ ಕನ್ನಡದಿಂದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರೊಂದಿಗೆ 'ಮೋಷನ್-ಇಮೋಷನ್' ಬಗ್ಗೆ ಮಾತನಾಡಿ ನಗೆಗಡಲಲ್ಲಿ ತೇಲಿಸಿದ್ದು, ಇದೇ ಸಂಭಾಷಣೆಯನ್ನು ಬಳಸಿ ಮುದ್ದಾದ ಎಐ ವಿಡಿಯೋವನ್ನು ರಚಿಸಲಾಗಿದೆ.
Read Full Story

10:01 PM (IST) Oct 13

Toxic​ ಚಿತ್ರದ ವಿಡಿಯೋ ಲೀಕ್​? ಯಶ್​ ಸಿಕ್ಸ್​ ಪ್ಯಾಕ್​ ಮಾಸ್​ ಲುಕ್​ಗೆ ಫ್ಯಾನ್ಸ್​ ಫಿದಾ- ಎಲ್ಲೆಡೆ ವೈರಲ್​

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಸೆಟ್‌ನಿಂದ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಯಶ್ ಅವರ ಸಿಕ್ಸ್ ಪ್ಯಾಕ್ ಹಾಗೂ ಧೂಮಪಾನ ಮಾಡುವ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ  ನಿರೀಕ್ಷೆ ಮೂಡಿಸಿದೆ.  

Read Full Story

09:30 PM (IST) Oct 13

ಟಾಟಾ ಟ್ರಸ್ಟ್‌ನೊಳಗೆ ಅಧಿಕಾರದ ಹೋರಾಟ - ಮಲ ಸಹೋದರ ನೋಯೆಲ್ ಟಾಟಾಗೆ ಸೋಲು ಮುಂದಿನ ನಡೆ ಏನು?

ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಟಾಟಾ ಟ್ರಸ್ಟ್‌ನ ಮಂಡಳಿ ಹೋರಾಟದಲ್ಲಿ ಸೋಲು ಕಂಡಿದ್ದಾರೆ. ಮೆಹ್ಲಿ ಮಿಸ್ತ್ರಿ ಬಣದ ವಿರೋಧದಿಂದಾಗಿ ಈ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ ಪಟ್ಟಿ ಮಾಡುವ ಒತ್ತಡ ಹೆಚ್ಚಾಗಿದೆ. 

Read Full Story

09:30 PM (IST) Oct 13

'ಡಿಪಿಆರ್‌ನಲ್ಲಿ ಭಾರೀ ಲೋಪ..' ಬೆಂಗಳೂರು ಸುರಂಗ ರಸ್ತೆಗೆ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದಲೇ ವಿರೋಧ!

Expert Committee Flags Major Flaws in DPR of Bengaluru Tunnel Road ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ ಪ್ರಸ್ತಾವಿತ ಸುರಂಗ ಮಾರ್ಗದ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಗಂಭೀರ ಲೋಪಗಳಿವೆ ಎಂದು ತಜ್ಞರ ಸಮಿತಿಯು ಕಳವಳ ವ್ಯಕ್ತಪಡಿಸಿದೆ. 

Read Full Story

09:29 PM (IST) Oct 13

ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!

Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌, ಭೂಮಿಕಾ ದೂರ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ. ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್‌ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಹಾಕುತ್ತಿದ್ದರು, ಅದಕ್ಕೆ ಛಾಯಾ ಸಿಂಗ್‌ ತಿರುಗೇಟು ಕೊಟ್ಟಿದ್ದಾರೆ.

 

Read Full Story

09:25 PM (IST) Oct 13

Kantara ಸಕ್ಸಸ್​ ಬೆನ್ನಲ್ಲೇ ಸೌಂಡ್​ ಮಾಡ್ತಿದೆ ರಿಷಬ್​ ಶೆಟ್ಟಿ ಮದ್ವೆ ವಿಡಿಯೋ - ರಕ್ಷಿತ್​- ರಶ್ಮಿಕಾ ಫುಲ್ ಮಿಂಚಿಂಗ್​

'ಕಾಂತಾರ' ಚಿತ್ರದ ಯಶಸ್ಸಿನ ನಡುವೆ, ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರ 2017ರ ಮದುವೆ ವಿಡಿಯೋ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಶುರುವಾದ ಇವರ ಪ್ರೇಮಕಥೆ, ಮದುವೆ ಹಾಗೂ 'ಕಾಂತಾರ' ಚಿತ್ರದ ಯಶಸ್ಸಿನಲ್ಲಿ ಪ್ರಗತಿಯವರ ಪಾತ್ರದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story

09:21 PM (IST) Oct 13

ಬಿಜೆಪಿ ಅಂದರೆ ತಾಲಿಬಾನ್ ಮನಸ್ಥಿತಿ; RSS ಬ್ಯಾನ್ ಖರ್ಗೆ ಹೇಳಿಕೆಗೆ ಪುಷ್ಠಿ ಕೊಟ್ಟ ಸಚಿವ ಸಂತೋಷ್ ಲಾಡ್

ಸಚಿವ ಸಂತೋಷ್ ಲಾಡ್ ಅವರು ಬಿಜೆಪಿಯನ್ನು 'ತಾಲಿಬಾನ್ ಮನಸ್ಥಿತಿ'ಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸುವ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಅವರು, ಈ ಹಿಂದೆ ಸರ್ದಾರ್ ಪಟೇಲ್ ಅವರೇ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದರು.

Read Full Story

08:59 PM (IST) Oct 13

BBK 12 - ಮುಂದಿನ ವಾರ ನಡೆಯಲಿರೋ ಫಿನಾಲೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಸಿಗೋ ಬಹುಮಾನ ಎಷ್ಟು?

Bigg Boss Kannada Season 12 Mid week Finale: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಮಿಡ್‌ ಎಲಿಮಿನೇಶನ್‌ ನಡೆಯಲಿದೆ. ದೊಡ್ಡ ಸಂಖ್ಯೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೂಡ ಆಗಲಿದೆ. ಅಂದಹಾಗೆ ಈಗ ವಿನ್ನರ್‌ ಆಗುವವರಿಗೆ ಸಿಗೋ ಬಹುಮಾನ ಏನು? 

 

Read Full Story

08:44 PM (IST) Oct 13

ನಾಲ್ಕೈದು ಗಂಟೆ ಮೇಕಪ್‌, ನಿದ್ದೆಗಳಿಲ್ಲದ ರಾತ್ರಿ - ವಿಡಿಯೋ ಮೂಲಕ Kantara-1 ಕಷ್ಟ ತೆರೆದಿಟ್ಟ ನಟ ಮ್ಯೂಟೆಂಟ್‌ ರಘು

'ಕಾಂತಾರ ಚಾಪ್ಟರ್‌-1' ಚಿತ್ರದಲ್ಲಿ ಮ್ಯೂಟಂಟ್ ರಘು ಖ್ಯಾತಿಯ ರಾಘವೇಂದ್ರ ಹೊಂಡದಕೇರಿ ತಮ್ಮ ಪಾತ್ರದ ಮೇಕಪ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿದಿನ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವೇಷಭೂಷಣಗಳೊಂದಿಗೆ ಚಿತ್ರೀಕರಣದ ಸವಾಲುಗಳನ್ನು ವಿವರಿಸಿದ್ದಾರೆ.

Read Full Story

08:32 PM (IST) Oct 13

Brahmagantu - ದಿಶಾನೇ ದೀಪಾ ಎನ್ನೋ ಸತ್ಯ ಅಕ್ಕ ರೂಪಂಗೆ ಗೊತ್ತಾಗತ್ತಾ? ಏನಿದು ಟ್ವಿಸ್ಟ್‌?

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾ ಈಗ ದಿಶಾಳಾಗಿ ಸೌಂದರ್ಯಗೆ ಸವಾಲು ಹಾಕುತ್ತಿದ್ದಾಳೆ. ತನ್ನ ಸಹೋದರಿ ರೂಪಾಳನ್ನು ಸೌಂದರ್ಯ ಅವಮಾನಿಸಿದಾಗ, ದೀಪಾ ಅವಳನ್ನು ತಡೆದು ಬುದ್ಧಿ ಹೇಳುತ್ತಾಳೆ. ಆದರೆ, ದಿಶಾಳೇ ತನ್ನ ತಂಗಿ ದೀಪಾ ಎಂಬ ಸತ್ಯ ರೂಪಾಳಿಗೆ ಗೊತ್ತಾಗತ್ತಾ? 

Read Full Story

08:24 PM (IST) Oct 13

ರಂಗಾಯಣದಲ್ಲಿ ರಾಜು ತಾಳಿಕೋಟೆ ಅಂತಿಮ ದರ್ಶನ; ಅಪ್ಪನ ಕೊನೆ ಆಸೆಯಂತೆಯೇ ಅಂತ್ಯಕ್ರಿಯೆ - ಪುತ್ರ ಭರತ್

ರಾಜು ತಾಳಿಕೋಟೆ ಅವರು ಉಡುಪಿಯ ಹೆಬ್ರಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪುತ್ರ ಭರತ್ ತಾಳಿಕೋಟೆ ಈ ಸುದ್ದಿಯನ್ನು ಖಚಿತಪಡಿಸಿದ್ದು, ಅಂತಿಮ ಸಂಸ್ಕಾರವು ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Read Full Story

08:18 PM (IST) Oct 13

ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು

ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮದೇ ಸಿನಿಮಾದಲ್ಲಿ ನಟಿಸುತ್ತಿದ್ದ ರಾಜು ತಾಳಿಕೋಟೆ ಅಗಲಿಕೆ ನಾಯಕ ನಟ ಶೈನ್ ಶೆಟ್ಟಿಗೆ ತೀವ್ರ ನೋವುಂಟು ಮಾಡಿದೆ.

Read Full Story

07:54 PM (IST) Oct 13

ಜಪಾನ್‌ನಲ್ಲಿ ಫ್ಲೂ ಆತಂಕ, ಇದ್ದಕ್ಕಿದ್ದಂತೆ 6 ಸಾವಿರ ದಾಟಿದ ಪ್ರಕರಣ, ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ!

ಜಪಾನ್‌ನಲ್ಲಿ ಫ್ಲೂ ಸಾಂಕ್ರಾಮಿಕವು ನಿಗದಿತ ಸಮಯಕ್ಕಿಂತ ಐದು ವಾರಗಳ ಮುಂಚಿತವಾಗಿ ಪ್ರಾರಂಭವಾಗಿದ್ದು, ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಸಾವಿರಾರು ಪ್ರಕರಣಗಳು ವರದಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ H3N2 ವೈರಸ್ ಹರಡುವಿಕೆಯು, ಮುಂಬರುವ ಚಳಿಗಾಲದಲ್ಲಿ ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.

Read Full Story

07:45 PM (IST) Oct 13

ರಾಜ ರಾಣಿ ವೇದಿಕೆಯಲ್ಲಿ 'ರಾಜು ತಾಳಿಕೋಟೆ'ಯವರ ಒಡೆದ ಸಂಸಾರ ಒಂದುಗೂಡಿಸಿದ್ದ ನಟಿ ತಾರಾ!

ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಟಕ ಮತ್ತು ಸಿನಿಮಾ ಮೂಲಕ ನಗಿಸುತ್ತಿದ್ದ ರಾಜು ಅವರ ಕುಟುಂಬದಲ್ಲಿ ನಗುವೇ ಇರಲಿಲ್ಲ. ರಾಜರಾಣಿ ರಿಯಾಲಿಟಿ ಶೋನಲ್ಲಿ ನಟಿ ತಾರಾ ಮಧ್ಯಸ್ಥಿಕೆಯಲ್ಲಿ ರಾಜು ಅವರ ಒಡೆದ ಕುಟುಂಬವನ್ನು ಒಂದುಗೂಡಿಸಲಾಗಿತ್ತು.

Read Full Story

07:44 PM (IST) Oct 13

ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ

ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ ಮಾಹಿತಿ ಬಹಿರಂಗವಾಗಿದೆ. ಎಲ್ಲರ ನಗಿಸುತ್ತಿದ್ದ ರಾಜು ತಾಳಿಕೋಟೆ ಮನಸ್ಸಿನಲ್ಲಿ ನೋವೇ ತುಂಬಿಕೊಂಡಿತ್ತು. ಉಡುಪಿಯಲ್ಲಿ ಶೂಟಿಂಗ್ ಪ್ರಕ್ರಿಯೆಯಲ್ಲಿದ್ದ ರಾಜು ತಾಳಿಕೋಟೆ ಅಂತಿಮ ಕ್ಷಣದಲ್ಲಿ ಏನಾಯ್ತು?

Read Full Story

06:56 PM (IST) Oct 13

ಬಿಗ್‌ಬಾಸ್‌ ವೇದಿಕೆಯಲ್ಲಿ ರಾಜು ತಾಳಿಕೋಟೆ ಮಕ್ಕಳನ್ನು ಎಣಿಸಿಯೇ ಸುಸ್ತಾಗಿ ಹೋಗಿದ್ದ ಸುದೀಪ್‌!

Veteran Kannada Actor Raju Talikote Passes Away ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾದರು. 'ಮನಸಾರೆ' ಚಿತ್ರದ ಪಾತ್ರದಿಂದ ಜನಪ್ರಿಯರಾಗಿದ್ದ ಅವರು, ಬಿಗ್‌ಬಾಸ್‌ನಲ್ಲಿ ತಮ್ಮ ಇಬ್ಬರು ಪತ್ನಿಯರ ಕುಟುಂಬವನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು.

Read Full Story

06:55 PM (IST) Oct 13

ಗ್ಯಾರಂಟಿ ಯೋಜನೆ ವಿರುದ್ಧ ನಾನೆಲ್ಲಿಯೂ ಮಾತನಾಡಿಲ್ಲ; ಪತ್ರಿಕಾ ವರದಿ ತಪ್ಪೆಂದ ಶಾಸಕ ಆರ್.ವಿ. ದೇಶಪಾಂಡೆ!

ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜನಪರ ನಿಲುವು ಶ್ಲಾಘಿಸಿದ್ದಾಗಿ, ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

Read Full Story

06:35 PM (IST) Oct 13

ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ 'ರಾಜು ತಾಳಿಕೋಟೆ' ಆಗಿದ್ದು ಹೇಗೆ?

How Rajesaba Maktumasab Yankanchi Became Raju Talikote ಕನ್ನಡದ ಪ್ರಸಿದ್ಧ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮನಸಾರೆ, ಪಂಚರಂಗಿ ಚಿತ್ರಗಳಲ್ಲಿನ ಪಾತ್ರಗಳಿಂದ ಜನಪ್ರಿಯರಾಗಿದ್ದ ಅವರು, ನಟನೆಗೆ ಬರುವ ಮುನ್ನ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು. 

Read Full Story

06:28 PM (IST) Oct 13

ಶಿಕ್ಷಕರಿಗೆ ಫುಲ್ ಸಮೀಕ್ಷೆ ಡ್ಯೂಟಿ ರಾಜ್ಯಾದ್ಯಂತ ಶಾಲೆಗಳು ಬಂದ್ - ಮತ್ತೆ ರೀ ಓಪನ್ ಆಗೋದ್ಯಾಗ?

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರಣದಿಂದಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಸಮೀಕ್ಷೆಯ ಗಡುವನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ 

Read Full Story

06:21 PM (IST) Oct 13

ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ - ಉತ್ತರ ಕರ್ನಾಟಕದ 'ಅಸಲಿ ಕುಡುಕ'ನ ಪಯಣ ಅಂತ್ಯ!

ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ 'ಖಾಸ್ಗತೇಶ್ವರ' ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು.

Read Full Story

05:52 PM (IST) Oct 13

ನಟ ದರ್ಶನ್ ಜೊತೆಗೆ 'ಒಂದೇ ಒಂದು ಸಲ' ಹಾಡು ಶೂಟಿಂಗ್ ರಹಸ್ಯ ಬಿಚ್ಚಿಟ್ಟ ಡೆವಿಲ್ ನಟಿ ರಚನಾ ರೈ!

'ಡೆವಿಲ್' ಸಿನಿಮಾದ 'ಒಂದೇ ಒಂದು ಸಲ' ಹಾಡಿನ ಯಶಸ್ಸಿನ ಬೆನ್ನಲ್ಲೇ, ಸಹನಟಿ ರಚನಾ ರೈ ಅವರು ದರ್ಶನ್ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ವೃತ್ತಿಪರತೆ, ತಾಳ್ಮೆ ಮತ್ತು ಸೌಜನ್ಯವನ್ನು ಶ್ಲಾಘಿಸಿದ್ದಾರೆ.

Read Full Story

05:41 PM (IST) Oct 13

ಕಾರ್ಪೋರೇಟ್ ಕೆಲಸ ಬಿಟ್ಟು ಉಬರ್ ಡ್ರೈವರ್ ಆದ ಬೆಂಗಳೂರಿಗ, ನಿಮ್ಮನ್ನೂ ಕಾಡಲಿದೆ ಕಾರಣ

ಕಾರ್ಪೋರೇಟ್ ಕೆಲಸ ಬಿಟ್ಟು ಉಬರ್ ಡ್ರೈವರ್ ಆದ ಬೆಂಗಳೂರಿಗ, ನಿಮ್ಮನ್ನೂ ಕಾಡಲಿದೆ ಕಾರಣ, ಈತನಿಗೆ ತಿಂಗಳಿಗೆ 40 ಸಾವಿರ ರೂ ವೇತನ, ಖಾಯಂ ಕೆಲಸವಿದ್ದರೂ ಅದೆಲ್ಲಾ ಬಿಟ್ಟು ಉಬರ್ ಚಾಲಕನಾಗಿ ಕೆಲಸ ಮಾಡುತ್ತಿರುವುದೇಕೆ?

Read Full Story

05:27 PM (IST) Oct 13

15 ಕೋಟಿಯ ಬ್ಯಾಗ್ ಹಿಡ್ಕೊಂಡು ಓಡಾಡಿದ ನೀತಾ ಅಂಬಾನಿ - ಅಂಥಾ ವಿಶೇಷತೆ ಏನಿದೆ ಈ ಬ್ಯಾಗಲ್ಲಿ

ಡಿಸೈನರ್ ಮನಿಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಉದ್ಯಮಿ ನೀತಾ ಅಂಬಾನಿ ತಮ್ಮ 15 ಕೋಟಿ ರೂಪಾಯಿ ಮೌಲ್ಯದ ಹರ್ಮಿಸ್ ಬಿರ್ಕಿನ್‌ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಬ್ಯಾಗ್‌ನ ವಿಶೇಷತೆ ಏನು ಇಲ್ಲಿದೆ ಮಾಹಿತಿ.

Read Full Story

05:04 PM (IST) Oct 13

ಗ್ಯಾರಂಟಿ ಬಗ್ಗೆ ದೇಶಪಾಂಡೆ ಸತ್ಯ ಹೇಳಿದ್ದಾರೆ, ಹೆಚ್‌ಡಿಕೆ ಮೇಲೆ ಮಾಟ ಮಾಡಿರೋ ಹೇಳಿಕೆ, ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ

ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರ ಗ್ಯಾರಂಟಿ ಸರ್ಕಾರದ ಅಸಮಾಧಾನವನ್ನು ನಿಖಿಲ್ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ ಎಂದಿರುವ ಅವರು, ತಂದೆಯ ಮೇಲಿನ ಮಾಟದ ಆರೋಪವನ್ನು ತಳ್ಳಿಹಾಕಿ, 'ಕಾಯಕವೇ ಕೈಲಾಸ' ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
Read Full Story

04:36 PM (IST) Oct 13

ದೀಪಾವಳಿಗೆ ಊರಿಗೆ ಹೋಗಿಬರಲು 2,500 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ KSRTC; ಇಲ್ಲಿದೆ ಡಿಸ್ಕೌಂಟ್ ಬುಕಿಂಗ್!

ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ಕರಾರಸಾ ನಿಗಮವು ಅಕ್ಟೋಬರ್ 17 ರಿಂದ 20, 2025 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ 2,500 ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಈ ವಿಶೇಷ ಸಾರಿಗೆಗಳಿಗೆ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ.

Read Full Story

04:14 PM (IST) Oct 13

ಗಾಜಾದಲ್ಲಿ ಯುದ್ಧ ನಿಂತ ಮೇಲೆ ಪಾಕಿಸ್ತಾನದಲ್ಲಿ ಪ್ಯಾಲೇಸ್ತೀನ್‌ಗಾಗಿ ಪ್ರತಿಭಟನೆ - ಹಲವರು ಬಲಿ

protest in Pakistan: ಪಾಕಿಸ್ತಾನದ ಲಾಹೋರ್‌ನಲ್ಲಿ ಪ್ಯಾಲೇಸ್ತೀನ್ ಬೆಂಬಲಿಸಿ ನಡೆದ ಇಸ್ರೇಲ್ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಟಿಎಲ್‌ಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.

Read Full Story

04:08 PM (IST) Oct 13

ಯೂಟ್ಯೂಬರ್ ಮುಕುಳೆಪ್ಪ-ಗಾಯತ್ರಿ ರಿಜಿಸ್ಟರ್ ಮ್ಯಾರೇಜ್ ರದ್ದತಿಗೆ ಶ್ರೀರಾಮ ಸೇನೆ ಆಗ್ರಹ!

ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ, ಹಿಂದೂ ಯುವತಿ ಗಾಯತ್ರಿಯವರನ್ನು ನಕಲಿ ದಾಖಲೆಗಳನ್ನು ಬಳಸಿ ಮದುವೆಯಾಗಿದ್ದಾನೆ. ಈ ರಿಜಿಸ್ಟರ್ ಮದುವೆಯನ್ನು ರದ್ದುಗೊಳಿಸುವಂತೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದು, ಅಧಿಕಾರಿಗಳ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.

Read Full Story

03:30 PM (IST) Oct 13

ಎತ್ತಿನಗಾಡಿಯಲ್ಲಿ ಬಂದು 1.3 ಕೋಟಿ ರೂ ವೆಲ್‌ಫೈರ್ ಕಾರು ಖರೀದಿಸಿದ ಬೆಂಗಳೂರು ರೈತ, ವಿಡಿಯೋ

ಎತ್ತಿನಗಾಡಿಯಲ್ಲಿ ಬಂದು 1.3 ಕೋಟಿ ರೂ ವೆಲ್‌ಫೈರ್ ಕಾರು ಖರೀದಿಸಿದ ಬೆಂಗಳೂರು ರೈತ, ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಖುದ್ದು ವಿಡಿಯೋ ಹರಿಬಿಟ್ಟಿರುವ ಈ ರೈತ, ಇದೀಗ ಬೆಂಗಳೂರಿನಲ್ಲಿ ಭಾರಿ ಸೆನ್ಸೇಶನ್ ಸೃಷ್ಟಿಸಿದ್ದಾನೆ.

Read Full Story

02:51 PM (IST) Oct 13

ಮಾವನ ತಿಥಿ ಮಾಡಲು ಅಳಿಯಗೆ ಕೋರ್ಟ್‌ ಪೆರೋಲ್‌!

ಕೊಲೆ ಪ್ರಕರಣದ ಸಜಾಬಂಧಿಗೆ, ಮಾವನ ಮರಣದ ಅಂತಿಮ ವಿಧಿ-ವಿಧಾನಗಳಲ್ಲಿ ಭಾಗವಹಿಸಲು ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ. ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲದಿದ್ದರೂ, ಅನಾರೋಗ್ಯಪೀಡಿತ ಪತ್ನಿಗೆ ಆಸರೆಯಾಗಲು ಮತ್ತು ಮಾನವೀಯ ನೆಲೆಯಲ್ಲಿ ನ್ಯಾಯಾಲಯ ಈ ವಿಶೇಷ ಆದೇಶವನ್ನು ನೀಡಿದೆ.
Read Full Story

02:51 PM (IST) Oct 13

ಬಿಗ್ ಬಾಸ್ ಮನೆಯಲ್ಲಿ ಒಂಟಿ-ಜಂಟಿಗಳ ಆಟಕ್ಕೆ ಮುಕ್ತಿ; ಸ್ವತಂತ್ರ ಕೊಡೋದಕ್ಕೂ ಮುನ್ನ ಬೆಂಕಿ ಹಚ್ಚಿದ್ಯಾಕೆ?

ಬಿಗ್ ಬಾಸ್ ಮನೆಯಲ್ಲಿ ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಜಂಟಿ ಬಂಧದಿಂದ ಮುಕ್ತಿ ಪಡೆಯಲು ಸ್ಪರ್ಧಿಗಳು ಪರಸ್ಪರ ಆರೋಪಗಳನ್ನು ಮಾಡಿದ್ದಾರೆ. ಜಂಟಿಗಳಿಗೆ ಸ್ವತಂತ್ರ ಕೊಡುವ ಮುನ್ನ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.

Read Full Story

02:33 PM (IST) Oct 13

RSS ಬಗ್ಗೆ ಮಾತಾಡಿ ಅಲ್ಲ, ಕ್ಷೇತ್ರದಲ್ಲಿ ಕೆಲಸ ಮಾಡಿ ಹೀರೋ ಆಗಿ - ಖರ್ಗೆ ವಿರುದ್ಧ ರಾಜೂ ಗೌಡ ಕಿಡಿ

ಆರೆಸ್ಸೆಸ್ ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ವಾಗ್ದಾಳಿ. ಇದು ಜನಪ್ರಿಯತೆ ಗಳಿಸುವ ತಂತ್ರ., ಆರೆಸ್ಸೆಸ್ ಬ್ಯಾನ್ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ ನೆರೆ ಹಾನಿ ವಿಷಯವನ್ನು ಮರೆಮಾಚುವ ಬದಲು, ಕೆಲಸ ಮಾಡಿ ಹೀರೋ ಆಗಿ ಎಂದು ಖರ್ಗೆಗೆ ತರಾಟೆ.

Read Full Story

02:30 PM (IST) Oct 13

ಸಿಎಂ ರಹಸ್ಯ ಡಿನ್ನರ್ ಸಭೆ, ಕೇವಲ ಸಚಿವರಿಗೆ ಮಾತ್ರ ಒಳ ಎಂಟ್ರಿ! ಶಾಸಕರು ಲೆಕ್ಕಕ್ಕಿಲ್ವಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವರ ವಿಶೇಷ ಡಿನ್ನರ್ ಸಭೆ ನಡೆಯಲಿದೆ. ಬಿಹಾರ ಚುನಾವಣಾ ತಂತ್ರಗಾರಿಕೆ ಮತ್ತು ಸಂಪುಟ ಪುನರ್‌ರಚನೆ ಕುರಿತು ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದ್ದು, ಸಚಿವರ ಆಪ್ತ ಸಿಬ್ಬಂದಿಗೂ ಪ್ರವೇಶ ನಿರಾಕರಿಸಿರುವುದು ಕುತೂಹಲ ಹೆಚ್ಚಿಸಿದೆ.
Read Full Story

01:58 PM (IST) Oct 13

ಬಯಲು ಸೀಮೆಯಲ್ಲಿ ಡ್ರ್ಯಾಗನ್ ಬೆಳೆದು ಯಶಸ್ವಿಯಾದ ಯುವ ರೈತ!

ಮೊಳಕಾಲ್ಮೂರು ತಾಲೂಕಿನ ಓದ್ನೋಬಯ್ಯನಹಟ್ಟಿಯ ಯುವ ರೈತರೊಬ್ಬರು ಕಡಿಮೆ ನೀರಿನಲ್ಲಿ ಡ್ರ್ಯಾಗನ್ ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಬಳಸಿ ಬೆಳೆದ ಈ ಬೆಳೆಯಿಂದ ವಾರ್ಷಿಕ 5 ಲಕ್ಷ ರೂ. ಲಾಭ ಗಳಿಸುತ್ತಿದ್ದು, ಬಯಲು ಸೀಮೆಯಲ್ಲಿ ಈ ಕೃಷಿ ವಿಸ್ತರಣೆಯಾಗುತ್ತಿದೆ.
Read Full Story

01:46 PM (IST) Oct 13

ಕೊನೆಗೂ 'KGF-3' ಬಗ್ಗೆ ಸತ್ಯ ಬಾಯ್ಬಿಟ್ಟ ಯಶ್; ಫ್ಯಾನ್ಸ್‌ಗೆ ಪ್ರಾಮಾಣಿಕ ಉತ್ತರ ಕೊಟ್ಟು ರಾಕಿಂಗ್ ಸ್ಟಾರ್!

ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್‌ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ 'ಕೆಜಿಎಫ್ 3' ಯಾವಾಗ ಬರುತ್ತೆ ಅನ್ನೋ ಪ್ರಶ್ನೆ. ಈ ಮೊದಲೆಲ್ಲಾ ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನ್ನಾಡುತ್ತಿದ್ದ ನಟ ಯಶ್ ಅವರಿ ಇದೀಗ ಕ್ಲಿಯರ್ ಪಿಕ್ಚರ್ ಕೊಟ್ಟಿದ್ದಾರೆ..

Read Full Story

01:44 PM (IST) Oct 13

ಬೆಂಗಳೂರು - ಚಾರ್ಜಿಂಗ್ ಹಾಕಿದ್ದ ಇವಿ ಬೈಕ್ ಏಕಾಏಕಿ ಸ್ಫೋಟ, ತಪ್ಪಿದ ಭಾರೀ ಅನಾಹುತ!

EV bike explosion in Bengaluru : ಬೆಂಗಳೂರಿನ ಬಸವೇಶ್ವರನಗರದಲ್ಲಿ ಚಾರ್ಜಿಂಗ್‌ಗೆ ಇಟ್ಟಿದ್ದ ಇವಿ ಬೈಕ್ ಮಧ್ಯರಾತ್ರಿ ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ.

Read Full Story

01:25 PM (IST) Oct 13

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್; ಸೋಂಕಿನ ಬಗ್ಗೆ ವೈದ್ಯರು ಹೇಳಿದ್ದೇನು?

ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

Read Full Story

01:16 PM (IST) Oct 13

'ನಿಮಗೆ ಧಂ ಇದ್ರೆ ಜಮೀರ್‌ಗೆ ಬಿಳಿ ಟೋಪಿ ಸಾಬಣ್ಣ ಅನ್ನಿ' ಡಿಕೆಶಿಗೆ ಪ್ರತಾಪ್ ಸಿಂಹ ಸವಾಲು!

ಬಿಜೆಪಿ ಶಾಸಕ ಮುನಿರತ್ನಗೆ 'ಏಯ್ ಕರಿ ಟೋಪಿ ಎಂಎಲ್ಲೆ' ಎಂದ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ. ಡಿಕೆಶಿಯವರ ಮಾತುಗಳು ರೌಡಿಗಳಂತಿವೆ, ಈ ವರ್ತನೆ ಅವರ ಸಿಎಂ ಆಗುವ ಕನಸಿಗೆ ಅಡ್ಡಿಯಾಗಬಹುದು ಇದೇ ರೀತಿ ಮುಂದುವರೆದರೆ 2028ಕ್ಕೆ ಅವರೂ 'ಜಾಬ್‌ಲೆಸ್' ಆಗುತ್ತಾರೆ 

Read Full Story

01:11 PM (IST) Oct 13

ಸ್ವಪಕ್ಷದ ಗ್ಯಾರಂಟಿ ಯೋಜನೆ ಬಗ್ಗೆ ಹಿರಿಯ ಕೈ ನಾಯಕ ದೇಶಪಾಂಡೆ ಅಸಮಾಧಾನ! ಗೃಹ ಸಚಿವ ಕೆಂಡಾಮಂಡಲ

ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರು, ತಾನು ಸಿಎಂ ಆಗಿದ್ದರೆ ಗ್ಯಾರಂಟಿ ಜಾರಿ ಮಾಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದಿದ್ದು ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ತಿರುಗೇಟು .

Read Full Story

More Trending News