Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಇಷ್ಟುದಿನ ಸೈಲೆಂಟ್‌ ಆಗಿದ್ದ ಧ್ರುವಂತ್‌, ಸ್ಪಂದನಾ ಸೋಮಣ್ಣ ಜೊತೆಗೆ ಜಗಳ ಆಡಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇಷ್ಟುದಿನ ಒಳ್ಳೆಯವನು ಎಂದು ನಾಟಕ ಮಾಡ್ತಿದ್ದೆ, ಈಗ ಒಳ್ಳೆಯತನ ಏನು ಎಂದು ತೋರಿಸ್ತೀನಿ ಎಂದಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಇಷ್ಟು ವಾರಗಳಿಂದ ಸೈಲೆಂಟ್‌ ಆಗಿದ್ದು, ನಾಮಿನೇಶನ್‌ ಬರಲೀ, ಏನೇ ಇರಲಿ ಯಾರ ಹೆಸರನ್ನು ತಗೊಂಡರೆ ಬೇಸರ ಆಗುತ್ತದೆಯೋ ಏನೋ ಎಂದುಕೊಳ್ತಿದ್ದ ಧ್ರುವಂತ್‌ ಇಂದು ಮಾತ್ರ ಮೈಮೇಲೆ ದೆವ್ವ ಬಂದಂತೆ ಆಡಿದ್ದಾರೆ. ದೊಡ್ಡ ದೊಡ್ಡ ಕಣ್ಣು ಬಿಟ್ಟುಕೊಂಡು ಕೂಗಾಡಿದ್ದಾರೆ. ಸಣ್ಣ ವಿಷಯಕ್ಕೆ ಅವರು ಸ್ಪಂದನಾ ಸೋಮಣ್ಣ ಜೊತೆ ಜಗಳ ಆಡಿದ್ದಾರೆ. ಬೆಳಗ್ಗೆಯಿಂದ ಕೊಚ್ತೀನಿ, ಮಸಾಲೆ ಅರಿತೀನಿ ಅಂತ ಹೇಳುತ್ತಿದ್ದ ಧ್ರುವಂತ್‌ ಜೋರಾದ ಧ್ವನಿಯಲ್ಲಿ ಕೂಗಾಡಿದ್ದಾರೆ.

ಅಸಲಿಗೆ ಮಾತು ಹೇಗೆ ಶುರುವಾಯ್ತು?

ಗಾರ್ಡನ್‌ ಏರಿಯಾದಲ್ಲಿ ಚಂದ್ರಪ್ರಭ, ಧ್ರುವಂತ್‌, ಕಾಕ್ರೋಚ್‌ ಸುಧಿ, ಸತೀಶ್‌ ಅವರು ಮಾತನಾಡುತ್ತಿದ್ದರು. ಆಗ ಧ್ರುವಂತ್‌ ಅವರು ಸ್ಪಂದನಾ ಸೋಮಣ್ಣ, ಮಾಳು ಫೈನಲಿಸ್ಟ್‌ ಆಗಿರೋದು ಅನ್‌ಫೇರ್‌ ಎಂದಿದ್ದಾರೆ. ಆಗ ಕಾಕ್ರೋಚ್‌, “ಹೋಗಲಿಬಿಡು, ನಮ್ಮವರೇ” ಎಂದಿದ್ದಾರೆ.

ಧ್ರುವಂತ್‌ ಅವರು, “ಗೇಮ್‌ ಚೇಂಜ್‌ ಮಾಡ್ತೀನಿ. ಬೆಳಗ್ಗೆ ಎದ್ದು ಪಾಪ ಪುಣ್ಯ ನೋಡಿ, ಗುಡ್‌ ಮಾರ್ನಿಂಗ್‌ ಕೂಡ ಹೇಳೋದಿಲ್ಲ. ಒಬ್ಬೊಬ್ಬರದ್ದು ಇಳಸ್ತೀನಿ. ಯಾರನ್ನು ಫಿಟ್‌ ಮಾಡಬೇಕು ಫಿಟ್‌ ಮಾಡ್ತೀನಿ, ಸ್ವಯಂ ಘೋಷಿತ ಹಕ್ಕ ಬುಕ್ಕಗಳು ಅಲ್ವಾ? ಇನ್ನು ಕೊಚ್ಚುವೆ” ಎಂದು ಹೇಳಿದ್ದಾರೆ.

“ನಿಮ್ಮ ಆಟವನ್ನು ನೀವು ಆಡಿ, ಬೇರೆಯವರ ಬಗ್ಗೆ ಯೋಚನೆ ಮಾಡಬೇಡಿ” ಎಂದು ಸತೀಶ್‌ ಅವರು ಸಲಹೆ ಕೂಡ ನೀಡಿದ್ದರು. ಅದನ್ನು ಧ್ರುವಂತ್‌ ಸ್ವೀಕರಿಸಲೇ ಇಲ್ಲ.

ಆಮೇಲೆ ಕಿಚನ್‌ ಬಳಿ ಧ್ರುವಂತ್‌, ಕಾಕ್ರೋಚ್‌ ಅಕ್ಕ ಪಕ್ಕ ಕೂತಿದ್ದರು. ಉಳಿದವರು ಅಡುಗೆ ಮಾಡುತ್ತಿದ್ದರು, ಆಗ ಧ್ರುವಂತ್‌ ಒಂದಿಷ್ಟು ಮಾತನಾಡಿದ್ದಾರೆ. “ಅಶ್ವಿನಿ ಗೌಡ ಅವರು ಅಲ್ಲಿ ಕೂತ್ಕೊಂಡು, ಧ್ರುವ ಅವರು ಇದು ಮಾಡ್ತಿಲ್ಲ, ಅದು ಮಾಡ್ತಿಲ್ಲ ಅಂತ ಹೇಳ್ತಾರೆ. ಬೆಳಗ್ಗೆ ಗುಡ್‌ ಮಾರ್ನಿಂಗ್‌ ಹೇಳೋ ಕೃತಜ್ಞತೆ ಅಲ್ಲ, ಗ್ಯಾರಂಟಿ ವಾರ್ನಿಂಗ್‌ ಕೊಡ್ತೀನಿ. ಅಶ್ವಿನಿ ಗೌಡ ಬ್ಯಾಚ್‌ ಕೆಳಗಡೆ ಇಟ್ಟ ತಕ್ಷಣ ಮುಹೂರ್ತಕ್ಕೆ ನಾನು ಮಸಾಲೆ ಅರಿಯುತ್ತೇನೆ” ಎಂದು ಸಿಟ್ಟಿನಿಂದ ಹೇಳಿದ್ದಾರೆ. ಇದೇ ಸಮಯಕ್ಕೆ ಮಾಳು, ಸ್ಪಂದನಾ ಎಂಟ್ರಿ ಆಗುವುದು.

ಧ್ರುವಂತ್: ಮಾಳು, ಚೇರ್‌ ಅಲ್ಲಿದೆ, ಅಲ್ಲಿಗೆ ಹೋಗಬೇಕು, ಡೈನಿಂಗ್‌ ಟೇಬಲ್‌ ಕ್ಲೀನ್‌ ಆಗಬೇಕು.

ಸ್ಪಂದನಾ ಸೋಮಣ್ಣ: ಯಾಕೆ ಯಾವ ಚೇರ್?‌

ಧ್ರುವಂತ್:‌ ಅವರಿಗೆ ಹೇಳಿದ್ನಲ್ವಾ?

ಸ್ಪಂದನಾ: ನನಗೆ ಗೊತ್ತಾಗಿಲ್ಲ. ಎರಡನೇ ಸಲ ಕೇಳಿದ್ರೆ ಹೇಳಬಹುದು ಅಲ್ವಾ?

ಧ್ರುವಂತ್:‌ ನನಗೆ ಇಬ್ರೂ ಒಂದೇ ( ಸಿಕ್ಕಾಪಟ್ಟೆ ಸಲ ಈ ಪದವನ್ನು ಹೇಳಿ ಕಿರುಚಿದ್ದಾರೆ ) ಮಾಳು ಕರಕೊಂಡು ಹೋಗಿ

ಸ್ಪಂದನಾ: ಕಿರುಚಬೇಡಿ.

ಧ್ರುವಂತ್:‌ ನಿಮಗೆ ಸಿಕ್ಕಿರೋದು ಸಿಂಪಥಿ. ಅದನ್ನು ಉಳಿಸಿಕೊಳ್ಳಿ. ಇಷ್ಟುದಿನ ಮೇಕಪ್‌ ಮಾಡಿಕೊಂಡು ಓಡಾಡಿದ್ದೀರಾ. ಈ ಮನೆಗೆ ಎಂಟ್ರಿ ಆದಾಗಿನಿಂದ ರಕ್ಷಿತಾಗೆ ಯೋಗ್ಯತೆ ಇತ್ತು, ನಿನಗೆ ಇಲ್ಲ.

ಸ್ಪಂದನಾ: ನೀವು ನನಗೆ ಕೊಟ್ಟಿಲ್ಲ

ಧ್ರುವಂತ್:‌ ಹೋಗಮ್ಮ, ಮಾಡ್ತೀಯಾ ಅಲ್ವಾ?

ಸ್ಪಂದನಾ: ಹೋಗಮ್ಮ ಅಂತ ಮಾತಾಡಬೇಡಿ.

ಧ್ರುವಂತ್:‌ ನಾನು ಹಾಗೆ ಮಾತಾಡೋದು. ಇಷ್ಟುದಿನ ಒಳ್ಳೆಯವನ ಥರ ನಾಟಕ ಆಡ್ತಿದ್ದೆ, ಈಗ ಒಳ್ಳೆಯದು ಏನು ಅಂತ ತೋರಸ್ತೀನಿ.

ಸ್ಪಂದನಾ: ನನ್ನಿಂದ ಮಾಳು ಅಣ್ಣ, ಮಾಳು ಅಣ್ಣನಿಂದ ನಾನಿದೀನಿ ಎನ್ನೋದು ನಮ್ಮಿಬ್ಬರಿಗೆ ಗೊತ್ತು

ಮಾಳು: ಕಿಚ್ಚ ಸುದೀಪ್‌ ಸರ್‌ ಬಾಯಿಂದ ಫೈನಲಿಸ್ಟ್‌ ಅಂತ ಬಂದಿದೆ. ಇವರು ಸಿಂಪಥಿ ಪದ ಬಳಸೋ ಮುನ್ನ ಯೋಚಿಸಬೇಕು

ಸ್ಪಂದನಾ ಸೋಮಣ್ಣ: ನಾವು ಕ್ಯಾಮರಾ ಮುಂದೆ ಹೋಗಿ ಫೈನಲಿಸ್ಟ್‌ ಮಾಡಿ ಅಂತ ಹೇಳಿದ್ವಾ?

ಆ ಬಳಿಕ ಇವರ ಜಗಳ ಅಲ್ಲಿಗೆ ತಣ್ಣಗಾಗಿದೆ.

ಅಂದಹಾಗೆ ಮೂರನೇ ವಾರ ಮೊದಲ ಫಿನಾಲೆ ನಡೆಯಲಿದೆ. ಮಾಸ್‌ ಎಲಿಮಿನೇಶನ್‌ ಕೂಡ ನಡೆಯಲಿದೆ. ನಾಲ್ಕು ಫೈನಲಿಸ್ಟ್‌ಗಳನ್ನು ಹೊರತುಪಡಿಸಿ, ಉಳಿದವರೆಲ್ಲರೂ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದಾರೆ. ಯಾವಾಗ ಬೇಕಿದ್ರೂ ಎಲಿಮಿನೇಟ್‌ ಆಗಬಹುದು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ.