- Home
- Entertainment
- TV Talk
- ಅವ್ರ ಹತ್ರ ಇದ್ದಿದ್ದು ಇವ್ರ ಹತ್ರ ಇಲ್ಲ, ಸ್ವಲ್ಪ ಮೋಷನ್ ಉಂಟು: ಇವ್ಳು Bigg Boss ರಕ್ಷಿತಾ ಶೆಟ್ಟಿ ಅಲ್ಲ ಮಾರಾಯ್ರೆ- ವಿಡಿಯೋ ನೋಡಿ
ಅವ್ರ ಹತ್ರ ಇದ್ದಿದ್ದು ಇವ್ರ ಹತ್ರ ಇಲ್ಲ, ಸ್ವಲ್ಪ ಮೋಷನ್ ಉಂಟು: ಇವ್ಳು Bigg Boss ರಕ್ಷಿತಾ ಶೆಟ್ಟಿ ಅಲ್ಲ ಮಾರಾಯ್ರೆ- ವಿಡಿಯೋ ನೋಡಿ
ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಅರ್ಧಂಬರ್ಧ ಕನ್ನಡದಿಂದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರೊಂದಿಗೆ 'ಮೋಷನ್-ಇಮೋಷನ್' ಬಗ್ಗೆ ಮಾತನಾಡಿ ನಗೆಗಡಲಲ್ಲಿ ತೇಲಿಸಿದ್ದು, ಇದೇ ಸಂಭಾಷಣೆಯನ್ನು ಬಳಸಿ ಮುದ್ದಾದ ಎಐ ವಿಡಿಯೋವನ್ನು ರಚಿಸಲಾಗಿದೆ.

ರಕ್ಷಿತಾ ಶೆಟ್ಟಿ ಫನ್
ಸದ್ಯ ಬಿಗ್ಬಾಸ್ನಲ್ಲಿ ಅರ್ಧಂಬರ್ಧ ಕನ್ನಡದ ಮೂಲಕವೇ ಎಲ್ಲರನ್ನೂ ರಂಜಿಸ್ತಿರೋ ರಕ್ಷಿತಾ ಶೆಟ್ಟಿ (Rakshita Shetty) BiggBoss ಕೇಂದ್ರ ಬಿಂದು ಆಗಿದ್ದಾರೆ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರೋ ರಕ್ಷಿತಾ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಿಕ್ಸ್ ಮಾಡಿ ಎರಡನ್ನೂ ಅರ್ಧಂಬರ್ಧ ಮಾತನಾಡುವುದನ್ನು ನೋಡುವುದಕ್ಕಾಗಿಯೇ ಹಲವಾರು ಮಂದಿ ಕಾಯುವುದು ಉಂಟು.
ಎಲ್ಲಾ ಭಾಷೆ ಮಿಕ್ಸ್ ಮಾತು
ಕಳೆದ ವಾರ, ಈಕೆ, ಕನ್ನಡ, ಇಂಗ್ಲಿಷ್, ತುಳು ಮತ್ತು ಹಿಂದಿ ಎಲ್ಲವನ್ನೂ ಸೇರಿಸಿ ಕನ್ಫ್ಯೂಸ್ ಮಾಡಿ ಸುದೀಪ್ ಅವರನ್ನೂ ಕನ್ಫ್ಯೂಸ್ ಮಾಡಿ ಎಲ್ಲರೂ ಬಿದ್ದು ಬಿದ್ದು ನಗುವಂತೆ ಮಾಡಿದ್ದರು. ಈಕೆ ಮಾತಿಗೆ ಸುದೀಪ್ ಕಕ್ಕಾಬಿಕ್ಕಿಯಾಗಿ ನಕ್ಕೂ ನಕ್ಕೂ ಸುಸ್ತಾದರು.
ಮೋಷನ್, ಇಮೋಷನ್
ಇದರಲ್ಲಿ ಸುದೀಪ್ (Kichcha Sudeep) ಬಿಗ್‌ಬಾಸ್ ಅಂದ್ರೆ ಏನು? ಎಂದು ರಕ್ಷಿತಾ ಶೆಟ್ಟಿ ಅವರನ್ನು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ "ಇದು ಲೈಫಿದ ಚಾಲೆಂಜ್" ಎಂದು ತಮ್ಮದೇ ಸ್ಟೈಲ್ನಲ್ಲಿ ಹೇಳಿದ್ದಾರೆ. ಬಳಿಕ ಬಿಗ್‌ಬಾಸ್‌ನ ಪ್ರಮೋಟ್ ಮಾಡಿ ಅಂದ್ರೆ ಹೇಗೆ ಮಾಡ್ತೀರಾ ಎಂದಾಗ ರಕ್ಷಿತಾ (Bigg Boss Rakshita Shetty) "ಒಂದು ಕಂಟೆಸ್ಟೆಂಟ್‌ನಲ್ಲಿ ಎಂಥ ಉಂಟು ಸೆಕೆಂಡ್ ಕಂಟೆಸ್ಟೆಂಟ್‌ನಲ್ಲಿ ಇರಲ್ಲ. ಅವ್ರ ಹತ್ರ ಇದ್ದಿದ್ದು ಇವ್ರ ಹತ್ರ ಇಲ್ಲ... ಇವ್ರ ಹತ್ತಿರ ಮೋಷನ್ಸ್ ಉಂಟು ಎಂದಿದ್ದಾರೆ. ಕೊನೆಗೆ ಅದು ಎಮೋಷನ್ ಎಂದಾಗ ಅದೇ ಎಂದಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಎಲ್ಲರೂ ನಗೆಗಡಲಿನಲ್ಲಿ ತೇಲಾಡಿದ್ದಾರೆ.
ಎಐ ವಿಡಿಯೋ
ಇದನ್ನೇ ಈಗ ಎಐ ಮೂಲಕ ಮಾಡಲಾಗಿದೆ. ಇಲ್ಲಿ ಇಬ್ಬರು ಪುಟಾಣಿಗಳನ್ನು ಸೃಷ್ಟಿಮಾಡಲಾಗಿದೆ. ರಕ್ಷಿತಾ ಶೆಟ್ಟಿಯ ಕ್ಯಾರೆಕ್ಟರ್ ಆಕೆಯ ರೀತಿಯಲ್ಲಿಯೇ ಇದ್ದರೆ, ಸುದೀಪ್ ಅವರನ್ನು ಬಾಲಕ ಮಾಡಲಾಗಿದೆ. ಸೇಮ್ ಅದೇ ಡೈಲಾಗ್ ಅನ್ನು ಹೇಳಿಸಲಾಗಿದೆ. ಅದು ಯಾವ ರೀತಿ ಇದೆ ಎಂದು ಈ ಕೆಳಗೆ ತಿಳಿಸಿರುವ ಲಿಂಕ್ನಲ್ಲಿ ನೋಡಬಹುದು.
ಮುದ್ದು ಮುದ್ದು ಮುಖ
ಆರ್ಜೆಎಡಿಟ್ಶುಭ್ ಎನ್ನುವವರು ಈ ವಿಡಿಯೋ ಅನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ, ಮುದ್ದು ಮುದ್ದು ಮೊಗದ ಮಕ್ಕಳನ್ನು ನೋಡುವುದು ಒಂದೆಡೆ ಖುಷಿಯಾದರೆ, ಇನ್ನು ರಕ್ಷಿತಾ ಮಾತನ್ನು ಕೇಳಿದರೆ ಮತ್ತಷ್ಟು ನಗು ಬರುವುದು ಉಂಟು.
ಕೇಕ್ ಕತ್ತರಿಸಿ ಸಂಭ್ರಮ
ಸೆಪ್ಟೆಂಬರ್ 28ರಂದು ಪ್ರಸಾರವಾಗಿದ್ದ ಬಿಗ್‌ಬಾಸ್ 12 ಗ್ರ್ಯಾಂಗ್ ಪ್ರೀಮಿಯರ್ ಎಪಿಸೋಡ್ ಭರ್ಜರಿ ಟಿಆರ್‌ಪಿ ಪಡೆದಿದೆ. ಇದೇ ಖುಷಿಯಲ್ಲಿ ಶನಿವಾರದ ಶೂಟಿಂಗ್ ಬಳಿಕ ನಟ ಸುದೀಪ್ ಅವರು, ತಮ್ಮ ಬಿಗ್‌ಬಾಸ್ ತಂಡದ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಾರ ಮನೆಯಿಂದ ಹೊರಬರಲು ಧನು, ಅಶ್ವಿನಿ ಗೌಡ, ಜಾನ್ವಿ, ರಕ್ಷಿತಾ ಶೆಟ್ಟಿ ಒಂಟಿಗಳಲ್ಲಿ ನಾಮಿನೇಟ್ ಆಗಿದ್ದರು. ಮಾಳು-ಸ್ಪಂದನಾ ಸೋಮಣ್ಣ, ಅಭಿ-ಅಶ್ವಿನಿ, ಮಂಜು ಭಾಷಿಣಿ-ರಿಷಿಕಾ ಜಂಟಿಗಳಲ್ಲಿ ನಾಮಿನೇಟ್ ಆಗಿದ್ದರು. ಆದರೆ ಯಾರೂ ಕೂಡ ಎಲಿಮಿನೇಟ್ ಆಗಲ್ಲ ಎನ್ನಲಾಗ್ತಿದೆ.