- Home
- Entertainment
- TV Talk
- BBK 12: ಮುಂದಿನ ವಾರ ನಡೆಯಲಿರೋ ಫಿನಾಲೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಸಿಗೋ ಬಹುಮಾನ ಎಷ್ಟು?
BBK 12: ಮುಂದಿನ ವಾರ ನಡೆಯಲಿರೋ ಫಿನಾಲೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಸಿಗೋ ಬಹುಮಾನ ಎಷ್ಟು?
Bigg Boss Kannada Season 12 Mid week Finale: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಮಿಡ್ ಎಲಿಮಿನೇಶನ್ ನಡೆಯಲಿದೆ. ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಲಿದೆ. ಅಂದಹಾಗೆ ಈಗ ವಿನ್ನರ್ ಆಗುವವರಿಗೆ ಸಿಗೋ ಬಹುಮಾನ ಏನು?

Expect The Unexpected
ಎಂಬ ಥೀಮ್ ಇಟ್ಟುಕೊಂಡು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಅತ್ಯಂತ ರೋಚಕವಾಗಿ ಪ್ರಸಾರವಾಗುತ್ತಿದೆ. ಈಗ ಬಿಗ್ ಬಾಸ್ ಶೋ ಇನ್ನೊಂದು ಅನಿರೀಕ್ಷಿತವನ್ನು ಕೊಡಲಿದೆ. ಅದುವೇ ಮಿಡ್ ಸೀಸನ್ ಫಿನಾಲೆ. ಹೌದು, ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.
ಮಾಸ್ ಎಲಿಮಿನೇಷನ್
ಈ ಫಿನಾಲೆಯಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾಹಿತಿ ನೀಡಿದ್ದರು. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ, ಟ್ವಿಸ್ಟ್ ಸಿಗಲಿದೆ.
ಮಿಡ್ ಸೀಸನ್ ವಿನ್ನರ್ ಯಾರು?
ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು, ಅವರಿಗೆ ಬಹುಮಾನ ಕೂಡ ನೀಡಲಾಗುತ್ತದೆ.
ಈ ವಾರಾಂತ್ಯ ಪ್ರೇಕ್ಷಕರಿಗೆ ಡ್ಯಾನ್ಸ್ ಪರ್ಫಾಮೆನ್ಸ್, ಕಾಮಿಡಿ ಸ್ಕಿಟ್ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ
ಆಟಗಳನ್ನು ಆಡುವುದಲ್ಲದೆ , ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆಯನ್ನು ನೀಡಲಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಮೊದಲ ಫಿನಾಲೆ
ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿರಲಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ಮೊದಲ ಫಿನಾಲೆ ನಡೆಯಲಿದೆ.
ಅಪೂರ್ವ ಅಪರೂಪದ ಆಕರ್ಷಕ ಕಾರ್ಯಕ್ರಮ
ಅಕ್ಟೋಬರ್ 18 ಮತ್ತು 19 ರಂದು ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಅತ್ಯಂತ ಅಪೂರ್ವ ಅಪರೂಪದ ಆಕರ್ಷಕ ಕಾರ್ಯಕ್ರಮವಾಗಿರಲಿದೆ.