ಡಿಸೈನರ್ ಮನಿಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಉದ್ಯಮಿ ನೀತಾ ಅಂಬಾನಿ ತಮ್ಮ 15 ಕೋಟಿ ರೂಪಾಯಿ ಮೌಲ್ಯದ ಹರ್ಮಿಸ್ ಬಿರ್ಕಿನ್‌ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಬ್ಯಾಗ್‌ನ ವಿಶೇಷತೆ ಏನು ಇಲ್ಲಿದೆ ಮಾಹಿತಿ.

15 ಕೋಟಿ ಮೌಲ್ಯದ ಬ್ಯಾಗ್ ಜೊತೆ ಓಡಾಡಿದ ನೀತಾ ಅಂಬಾನಿ

ಅಂಬಾನಿ ಪತ್ನಿ ಅಂದ್ರೆ ಶೋಕಿಗೇನು ಕಡಿಮೆ ಹೇಳಿ. ಕೇಳಿದ್ದು ಕಂಡಿದ್ದೆಲ್ಲವೂ ಕ್ಷಣದಲ್ಲಿ ಕೊಳ್ಳುವ ತಾಕತ್ತು ಇರುವ ಮುಕೇಶ್ ಅಂಬಾನಿ ಅವರು ತಮ್ಮ 15 ಕೋಟಿ ಮೊತ್ತದ ಬ್ಯಾಗ್ ಹಾಕಿಕೊಂಡು ಸುತ್ತಾಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿವೆ. ಹೀಗಿರುವಾಗ ಪ್ರತಿವರ್ಷದಂತೆ ಈ ವರ್ಷವೂ ಬಾಲಿವುಡ್‌ನ ಡಿಸೈನರ್ ಮನಿಷ್ ಮಲ್ಹೋತ್ರಾ ಅವರು ಸಿನಿಮಾ ತಾರೆಯರು ಉದ್ಯಮಿಗಳು ಸ್ನೇಹಿತರಿಗಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಮನೆಯಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಮಹಿಳಾ ಉದ್ಯಮಿ ನೀತಾ ಅಂಬಾನಿ ಕೂಡ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಅಲ್ಲಿ ಎಲ್ಲರ ಗಮನ ಸೆಳೆದಿದ್ದು, ನೀತಾ ಅಂಬಾನಿ ಅವರ ಬಿರ್ಕಿನ್ ಬ್ಯಾಗ್. ಹೌದು ನೀತಾ ತೋಳಲ್ಲಿ ತೂಗಾಡುತ್ತಿದ್ದ ಆ ಬ್ಯಾಗ್ ಜಗತ್ತಿನ ಅತೀ ದುಬಾರಿ ಬ್ಯಾಗ್ ಎನಿಸಿದೆ.

ಇದು ಪ್ರಪಂಚದ ಅತೀ ದುಬಾರಿ ಬ್ಯಾಗ್:

ಕೆಲವು ವರದಿಗಳ ಪ್ರಕಾರ ಇದರ ಮೌಲ್ಯ 15 ಕೋಟಿಯಾಗಿದ್ದರೆ, ಮತ್ತೆ ಕೆಲ ವರದಿಗಳ ಪ್ರಕಾರ 17 ಕೋಟಿ. ಈ ಕಾರ್ಯಕ್ರಮಕ್ಕೆ ನೀತಾ ಹರ್ಮಿಸ್ ಬಿರ್ಕಿನ್‌ ಸ್ಪೆಷಲ್ ಎಡಿಷನ್ ಮಿನಿಯೇಚರ್ ಬ್ಯಾಗ್‌ ಹಿಡಿದು ಬಂದಿದ್ದರು. ನೀತಾ ಅಂಬಾನಿಯ ಈ ಬ್ಯಾಗ್ ಹರ್ಮಿಸ್ ಕೆಲ್ಲಮೊರ್ಫೋಸ್‌ ಬ್ಯಾಗ್ ಹಲವು ಆಭರಣಗಳಿಂದ ನಿರ್ಮಿತವಾಗಿರುವ ಬ್ಯಾಗ್ ಆಗಿದ್ದು, ಈ ಬ್ಯಾಗ್ ಐತಿಹಾಸಿಕ ಕೆಲ್ಲಿ ಬ್ಯಾಗ್‌ನಿಂದ ಪ್ರೇರಣೆ ಪಡೆದು ನಿರ್ಮಿತವಾಗಿದೆ. ಪ್ರಪಂಚದ ಅತೀ ದುಬಾರಿ ಬ್ಯಾಗ್ ಎನಿಸಿದೆ. ಹಾಗೆಯೇ ಯತಿಹಾಸಿಕ ಹೆರ್ಮಿಸ್ ಸಾಕ್ ಬಿಜೋಸ್ ಬಿರ್ಕಿನ್ ಬ್ಯಾಗ್ ನ್ನು 18 ಕ್ಯಾರೇಟ್ ಚಿನ್ನದಿಂದ ನಿರ್ಮಿಸಲಾಗಿದ್ದು, ಇದರಲ್ಲಿ 3,035 ವಜ್ರಗಳಿವೆ.

ಈ ಬ್ಯಾಗ್‌ನ ಮೇಲ್ಭಾಗದ ಫ್ಲಾಪ್ ಮೊಸಳೆಯ ಚರ್ಮದಂತೆ ವಿನ್ಯಾಸಗೊಂಡಿದೆ. ಆದರೆ ವಜ್ರಗಳು ಚೀಲದ ಇಡೀ ಬ್ಯಾಗನ್ನು ಅಲಂಕರಿಸಿದ್ದು ಈ ಬ್ಯಾಗ್‌ನ ಮೇಲಿನ ಹಿಡಿಕೆಗಳು, ಟೂರೆಟ್, ಕ್ಯಾಡೆನಾ ಲಾಕ್ ಮತ್ತು ಕ್ಲೋಚೆಟ್ ಅನ್ನು ಹೊಂದಿವೆ. ಈ ಚೀಲವನ್ನು ವಿಶ್ವದ ಅತ್ಯಂತ ದುಬಾರಿ ಆರ್ಮ್ ಕ್ಯಾಂಡಿ ಎಂದು ಹೇಳಲಾಗುತ್ತದೆ. ನೀತಾ ಅಂಬಾನಿಯವರ ಬಿರ್ಕಿನ್ ಚೀಲದ ಬೆಲೆ 1,770,300 ಯುಎಸ್ ಡಾಲರ್ ಆಗಿದ್ದು, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 15 ಕೋಟಿ ರೂ. ಆಗಿದೆ.

ಮನೀಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಗೆ ಬೆಳ್ಳಿ ಬಣ್ಣದ ಸಿಕ್ವಿನ್ ಸೀರೆ ಧರಿಸಿದ್ದರು. ಈ ಸೀರೆಯನ್ನು ಚೆವ್ರಾನ್ ಡಿಸೈನ್ ಮತ್ತು ಸಂಕೀರ್ಣವಾದ ರಚನಾತ್ಮಕ ದಾರದಿಂದ ರಚಿಸಲಾಗಿದೆ. ಈ ಸೀರೆಗೆ ಅವರು ಯು ನೆಕ್‌ಲೈನ್ ಮತ್ತು ತೋಳಿಲ್ಲದ ಸ್ಲೀವ್‌ಲೆಸ್ ಮ್ಯಾಚಿಂಗ್ ಸೀಕ್ವಿನ್ ಬ್ಲೌಸ್‌ ಧರಿಸಿದ್ದರು. ಇದಕ್ಕೆ ಹಾರ್ಟ್‌ಶೇಪ್‌ನ ಕೊಲಂಬಿಯಾದ ಪಚ್ಚೆ ಕಿವಿಯೋಲೆಗಳು ಹಾಗೂ ಪಚ್ಚೆ ಮತ್ತು ವಜ್ರದ ಬಳೆ ಧರಿಸಿದ್ದರು.

ಕೆಲ ದಿನಗಳ ಹಿಂದೆ ಎನ್‌ಎಂಎಸಿಸಿಯಲ್ಲಿ ನಡೆದ ಫ್ಯಾಷನ್‌ ಮೇಳಕ್ಕೆ ನೀತಾ 3.2 ಕೋಟಿ ಮೌಲ್ಯದ ಬರ್ಕಿನ್ ಬ್ಯಾಗ್ ಜೊತೆ ಬಂದಿದ್ದರು.

ಇದನ್ನೂ ಓದಿ: ಗಾಜಾದಲ್ಲಿ ಯುದ್ಧ ನಿಂತ ಮೇಲೆ ಪಾಕಿಸ್ತಾನದಲ್ಲಿ ಪ್ಯಾಲೇಸ್ತೀನ್‌ಗಾಗಿ ಪ್ರತಿಭಟನೆ: ಹಲವರು ಬಲಿ

ಇದನ್ನೂ ಓದಿ: ಡಿಸ್ನಿಲ್ಯಾಂಡ್‌ಲ್ಲೂ ವರ್ಣ ತಾರತಮ್ಯ: ಬಿಳಿ ಮಕ್ಕಳ ಮಾತ್ರ ತಬ್ಬಿಕೊಂಡು ಕಪ್ಪು ಕಂದನ ನಿರ್ಲಕ್ಷಿಸಿದ ಕಾರ್ಟೂನ್ ಪಾತ್ರಧಾರಿ

View post on Instagram