- Home
- Entertainment
- TV Talk
- Bigg Boss Kannada 12 ಒಂಟಿ-ಜಂಟಿಗಳ ಆಟಕ್ಕೆ ಮುಕ್ತಿ; ಸ್ವತಂತ್ರ ಕೊಡೋದಕ್ಕೂ ಮುನ್ನ ಬೆಂಕಿ ಹಚ್ಚಿದ್ಯಾಕೆ?
Bigg Boss Kannada 12 ಒಂಟಿ-ಜಂಟಿಗಳ ಆಟಕ್ಕೆ ಮುಕ್ತಿ; ಸ್ವತಂತ್ರ ಕೊಡೋದಕ್ಕೂ ಮುನ್ನ ಬೆಂಕಿ ಹಚ್ಚಿದ್ಯಾಕೆ?
ಬಿಗ್ ಬಾಸ್ ಮನೆಯಲ್ಲಿ ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಜಂಟಿ ಬಂಧದಿಂದ ಮುಕ್ತಿ ಪಡೆಯಲು ಸ್ಪರ್ಧಿಗಳು ಪರಸ್ಪರ ಆರೋಪಗಳನ್ನು ಮಾಡಿದ್ದಾರೆ. ಜಂಟಿಗಳಿಗೆ ಸ್ವತಂತ್ರ ಕೊಡುವ ಮುನ್ನ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.

ಹಗ್ಗ ಕತ್ತರಿಸಿ ಸ್ವತಂತ್ರಗೊಳಿಸಿದ ಬಿಗ್ ಬಾಸ್
ಜಂಟಿಗಳ ಮಧ್ಯ ಇರುವ ಈ ಬಂಧವನ್ನು ಮುರಿದು ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡುವ ಸಮಯವಾಗಿದೆ ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಾರೆ. ಇದಾದ ಬಳಿಕ ಜಂಟಿಗಳ ಕೈಗೆ ಕಟ್ಟಲಾಗಿದ್ದ ಹಗ್ಗವನ್ನು ಒಬ್ಬರು ಅನಾಮಿಕರು ಕತ್ತರಿಯಿಂದ ಹಗ್ಗ ಕತ್ತರಿಸಿ ಹಗ್ಗ ಕತ್ತರಿಸಿ ಸ್ವತಂತ್ರಗೊಳಿಸುತ್ತಾರೆ. ಇನ್ನು ಜಂಟಿಗಳು ತಾವು ಸ್ವತಂತ್ರ ಆಗುವುದಕ್ಕೂ ಮುನ್ನ ಸಹ ಸ್ಪರ್ಧಿಗಳ ನಡುವೆ ಬೆಂಕಿ ಹಚ್ಚಿದ್ದಾರೆ.
ಇವರೊಂದಿಗೆ ಇರುವುದೇ ಅದೃಷ್ಟವೆಂದವರು ಫುಲ್ ಚೇಂಜ್
ಎಲ್ಲ ಜೋಡಿಗಳೂ ಕೂಡ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಇವರೊಂದಿಗೆ ಜಂಟಿಯಾಗಿ ಇರುವುದೇ ನಮ್ಮ ಅದೃಷ್ಟವೆಂದು ಹೇಳಿಕೊಂಡಿದ್ದ ಎಲ್ಲ ಸ್ಪರ್ಧಿಗಳು ಕೂಡ ತಮ್ಮೊಂದಿಗೆ ಇರುವ ಜಂಟಿಗಳ ವಿರುದ್ಧ ಒಂದೊಂದೇ ಆರೋಪವನ್ನು ಮಾಡಿ ಜಂಟಿಯಿಂದ ಮುಕ್ತಿ ಪಡೆದು ಒಂಟಿಯಾಗಿ ಆಟವನ್ನು ಆರಂಭಿಸಲು ಮುಂದಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಜಂಟಿಗಳು
ಬಿಗ್ ಬಾಸ್ ಮನೆಯಲ್ಲಿದ್ದ ಜಂಟಿಗಳು
- ಅಭಿಷೇಕ್ - ಅಶ್ವಿನಿ ಎಸ್.ಎನ್
- ಕಾವ್ಯ ಶೈವ - ಗಿಲ್ಲಿ ನಟ
- ಸ್ಪಂದನಾ - ಮಾಳು ನಿಪನಾಳ
- ರಾಶಿಕಾ - ಮಂಜು ಭಾಷಿಣಿ
- ಚಂದ್ರಪ್ರಭ - ಡಾಗ್ ಸತೀಶ್
- ಕರಿಬಸಪ್ಪ - ಆರ್.ಜೆ. ಅಮಿತ್ (ಮೊದಲ ವಾರದಲ್ಲಿಯೇ ಎಲಿನಿನೇಟ್ ಆಗಿ ಹೊರ ಹೋಗಿದ್ದಾರೆ.)
ಗಿಲ್ಲಿ ನಟನಿಂದ ದೂರವಾಗಿ ವೈಯಕ್ತಿಕ ಆಟಕ್ಕೆ ಕಾವ್ಯ ಆಸಕ್ತಿ
ಕಾವ್ಯ ಶೈವ ಅವರು ನಾನು ಗಿಲ್ಲಿ ನಟನ ಜೊತೆಗೆ ಇಲ್ಲವೆಂದರೆ ನನ್ನ ವೈಯಕ್ತಿಕ ಆಟವೂ ಕೂಡ ಕಾಣಿಸುತ್ತದೆ. ಹೀಗಾಗಿ, ನಾನು ಆಟವಾಡುವುದಕ್ಕೆ ಒಂಟಿಯಾಗಿ ಸ್ವತಂತ್ರವಾಗಿರಬೇಕು ಎಂದು ಹೇಳುತ್ತಾರೆ.
ಬೇರೆಯಾಗಲು ಡ್ರಾಮಾ
ಡಾಗ್ ಸತೀಶ್ ಅವರು ಕಾರಣ ಕೊಡುತ್ತಾ, ನಾವು ಹಿಂದಿನ ರಾತ್ರಿ ಜಂಟಿಯಿಂದ ಮುಕ್ತಿ ಪಡೆಯುವುದಕ್ಕೆ ಏನಾದರೂ ನ್ಯೂಸೆನ್ಸ್ ಕ್ರಿಯೇಟ್ ಮಾಡೋಣ ಎಂದು ಮಾತನಾಡಿದ್ದೆವು. ಅದಕ್ಕೋಸ್ಕರ ಮನೆಯವರ ಮುದೆ ದೊಡ್ಡದಾಗಿ ಜಗಳ ಕೂಡ ಮಾಡಿದ್ದೆವು.
ನಾವು ಬೇರೆ ಬೇರೆಯಾಗಿ ಇರಬೇಕು ಎಂದೇ ಡ್ರಾಮಾ ಮಾಡಿದ್ದೆವು. ಇದಕ್ಕೆ ಚಂದ್ರಪ್ರಭ ಅವರು ನಾವು ಪ್ಲ್ಯಾನ್ ಮಾಡಿಕೊಂಡು ಮಾಡಿದ್ದೀವಿ ಎಂದು ಹೇಳಬೇಡಿ. ನಾನು ನಿಮ್ಮ ಜೊತೆಗೆ ಇರುವಷ್ಟು ದಿನ ನೀವು ಕೊಟ್ಟಿರುವ ಕಾಟಕ್ಕೆ ನಾನು ಕಣ್ಣೀರು ಹಾಕಿದ್ದೇನೆ.
ನಿಮ್ಮ ಜೊತೆಗೆ ಮಾತನಾಡಿದರೆ ಹುಚ್ಚು ಬರ್ತದೆ
ಇದಕ್ಕೆ ತಿರುಗೇಟು ಕೊಟ್ಟ ಸತೀಶ್ ನೀವು ಒಳ್ಳೆಯವರಾಗಲು ನನ್ನನ್ನು ಕೆಟ್ಟವರನ್ನಾಗಿ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಚಂದ್ರಪ್ರಭ ನೀವೇ ನನ್ನನ್ನು ಕೆಟ್ಟವರನ್ನಾಗಿ ಮಾಡುತ್ತಿದ್ದೀರಿ. ನಿಮ್ಮ ಜೊತೆಗೆ ಮಾತನಾಡಿದರೆ ಹುಚ್ಚು ಬರ್ತದೆ ಎಂದು ಕೈಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸುವ ಮುನ್ನವೇ ಹಗ್ಗ ಕಳಚಿಕೊಂಡು ಹೋಗಿದ್ದಾರೆ.