- Home
- Entertainment
- Sandalwood
- Kantara Chapter 1 ಸಕ್ಸಸ್ ಬೆನ್ನಲ್ಲೇ ಸೌಂಡ್ ಮಾಡ್ತಿದೆ ರಿಷಬ್ ಶೆಟ್ಟಿ ಮದ್ವೆ ವಿಡಿಯೋ: ರಕ್ಷಿತ್- ರಶ್ಮಿಕಾ ಫುಲ್ ಮಿಂಚಿಂಗ್
Kantara Chapter 1 ಸಕ್ಸಸ್ ಬೆನ್ನಲ್ಲೇ ಸೌಂಡ್ ಮಾಡ್ತಿದೆ ರಿಷಬ್ ಶೆಟ್ಟಿ ಮದ್ವೆ ವಿಡಿಯೋ: ರಕ್ಷಿತ್- ರಶ್ಮಿಕಾ ಫುಲ್ ಮಿಂಚಿಂಗ್
'ಕಾಂತಾರ' ಚಿತ್ರದ ಯಶಸ್ಸಿನ ನಡುವೆ, ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರ 2017ರ ಮದುವೆ ವಿಡಿಯೋ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಶುರುವಾದ ಇವರ ಪ್ರೇಮಕಥೆ, ಮದುವೆ ಹಾಗೂ 'ಕಾಂತಾರ' ಚಿತ್ರದ ಯಶಸ್ಸಿನಲ್ಲಿ ಪ್ರಗತಿಯವರ ಪಾತ್ರದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

ಕಾಂತಾರ ಹವಾ
ಈಗ ಎಲ್ಲೆಲ್ಲೂ ಕಾಂತಾರ-1 (Kantara-1) ಹವಾ. ಕೆಲವರು ಯಾವ್ಯಾವುದೋ ಕಾರಣಕ್ಕೆ ಈ ಚಿತ್ರವನ್ನು ಟೀಕಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದರೂ, ಬೇರೆ ಬೇರೆ ಭಾಷೆಗಳ ಖ್ಯಾತನಾಮರಿಂದ ಈ ಚಿತ್ರಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಘಟಾನುಘಟಿ ಸ್ಟಾರ್ಗಳು ರಿಷಬ್ ಶೆಟ್ಟಿ (Rishab Shetty) ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನ್ಯಾಷನಲ್ ಮೀಡಿಯಾಗಳಲ್ಲಿ ಅವರ ಮತ್ತು ಇದೇ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿರುವ ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಚರ್ಚೆಯಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಮದ್ವೆ ವಿಡಿಯೋ
ಇದರ ನಡುವೆಯೇ 2017ರಲ್ಲಿ ರಿಷಬ್ ಮತ್ತು ಪ್ರಗತಿ ಅವರ ಮದುವೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಅದರಲ್ಲಿ ಹೈಲೈಟ್ ಆಗಿರುವುದು ರಿಷಬ್ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna). ಜೊತೆಗೆ ತಾರೆಯರಾದ ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಸೇರಿದಂತೆ ಆಗ ತಾನೇ ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ತಂಡ ಮದುವೆಯಲ್ಲಿ ಹಾಜರಿತ್ತು.
ಇಂಟರೆಸ್ಟಿಂಗ್ ಲವ್ ಸ್ಟೋರಿ
ಅಷ್ಟಕ್ಕೂ ರಿಷಬ್ ಮತ್ತು ಪ್ರಗತಿ ಅವರ ಲವ್ಸ್ಟೋರಿಯೂ ಚೆನ್ನಾಗಿದೆ. ಆಗ ಪ್ರಗತಿ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ರಕ್ಷಿತ್ ಶೆಟ್ಟಿ ಅಭಿಮಾನಿ ಆಗಿದ್ದರು. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್ ಜೊತೆ ಹೋದಾಗ, ಚಿತ್ರತಂಡ ಕೂಡ ಅಲ್ಲಿತ್ತು. ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ ಫೋಟೋ ಹೊಡೆಸಿಕೊಂಡು ಬಂದಿದ್ದರು.
ಕರಾವಳಿ ಮೂಲ- ಶುರುವಾಯ್ತು ಲವ್
ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ. ಇದೀಗ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. ಪತ್ನಿಯ ಸಹಕಾರವನ್ನು ರಿಷಬ್ ಸದಾ ಬಣ್ಣಿಸುತ್ತಲೇ ಇರುತ್ತಾರೆ.
ಸಂಪೂರ್ಣ ಯಶಸ್ಸು ಪತ್ನಿಗೆ
ಇನ್ನು ಕಾಂತಾರಾ-1ರ ಸಂಪೂರ್ಣ ಯಶಸ್ಸನ್ನು ರಿಷಬ್ ಶೆಟ್ಟಿ ಪತ್ನಿಗೆ ಸಲ್ಲಿಸುತ್ತಾರೆ. ನಾಲ್ಕೈದು ವರ್ಷಗಳಿಂದ ಈ ಚಿತ್ರಕ್ಕಾಗಿ ಅವರು ತ್ಯಾಗ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ರಿಷಬ್. ಹೇಗೆ ಮಕ್ಕಳು, ಮನೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಂಡು, ಜೊತೆಗೆ ಚಿತ್ರಕ್ಕಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಟ್ಟರು ಎನ್ನುವುದನ್ನೂ ಹೇಳುತ್ತಾರೆ.
ಪ್ಯಾನ್ ಇಂಡಿಯಾ ಸ್ಟಾರ್
ಇನ್ನು ರಿಷಬ್ ಅವರ ಬಗ್ಗೆ ಹೇಳುವಂತೆಯೇ ಇಲ್ಲ. ರಿಕ್ಕಿ, ಕಿರಿಕ್ ಪಾರ್ಟಿ, ಸೇರಿದಂತೆ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದ ನಾಯಕ ನಟನಾಗಿ ನಟಿಸಿದ್ದಾರೆ. ಇವೆಲ್ಲಾ ಸಾಕಷ್ಟು ಹೆಸರು ತಂದುಕೊಟ್ಟರೂ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇವರು ಸ್ಟಾರ್ ಆಗಿ ಗುರುತಿಸಿದ್ದು ಕಾಂತಾರಾ.
ಕಡಿಮೆ ಬಜೆಟ್ ಚಿತ್ರ
ನೂರಾರು ಕೋಟಿ ರೂಪಾಯಿಗಳ ಬಿಗ್ ಬಜೆಟ್ ಚಿತ್ರ ನಿರ್ಮಿಸಿ, ವಾಸ್ತವಕ್ಕೆ ದೂರವಾಗಿರುವ ಅಂಶಗಳನ್ನು, ಕಲ್ಪನೆಗಳ ಪಾತ್ರಗಳನ್ನು ಸೃಷ್ಟಿಸಿ ಬಾಲಿವುಡ್ ಸಿನಿಮಾಗಳು ವಿಜೃಂಭಿಸುತ್ತಿರುವ ನಡುವೆಯೇ, ಅತ್ಯಂತ ಕಡಿಮೆ ಬಜೆಟ್ನಲ್ಲಿ ಒಂದು ಚಿತ್ರ ಹೇಗೆ ಸಪ್ತದಾಗರದಾಚೆಯೂ ಸದ್ದು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ರಿಷಬ್ ಶೆಟ್ಟಿ.