Published : Aug 13, 2026, 06:31 AM ISTUpdated : Aug 13, 2026, 11:10 PM IST

Karnataka News Live: ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ

ಸಾರಾಂಶ

ಬೆಂಗಳೂರು: ಕರ್ನಾಟಕ ಬಂದ್‌ಗೆ ನಾನು ಬದ್ಧವಾಗಿದ್ದೇನೆ, ಭದ್ರವಾಗಿದ್ದೇನೆ. ಇವತ್ತು ಬಂದ್ ಬೇಡ ಎನ್ನುವವರು ಅವತ್ತೇಕೆ ಒಪ್ಪಿಕೊಂಡರು. ಬಂದ್‌ಗೆ ಬೆಂಬಲವಿಲ್ಲ ಎನ್ನುವವರು ನನಗೆ ಕೈಕೊಟ್ಟಿದ್ದಾರೆಂದು ಹೇಳುವುದಿಲ್ಲ. ಅವರಿಗವರೇ ಕೈಕೊಟ್ಟಿದ್ದಾರೆ ಎಂದು ಎಂದು ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಹೇಳಿಕೆಗೆ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಕರ್ನಾಟಕ ಬಂದ್‌ಗೆ ವಿದ್ಯಾರ್ಥಿಗಳು, ಯುವಕರೇ ಶಕ್ತಿ. ಅವರೆಲ್ಲರೂ ಒಗ್ಗಟ್ಟಿನಿಂದ ಬಂದ್‌ಗೆ ಬೆಂಬಲ ಕೊಡಬೇಕು. ವಿದ್ಯಾರ್ಥಿಗಳು ಬಂದ್‌ನಲ್ಲಿ ಭಾಗವಹಿಸಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಜೆ ಕೊಡಬೇಕು. ಈ ಬಂದ್ ಕೇವಲ ಕಾವೇರಿ ನೀರನ್ನು ಮಾತ್ರ ಒಳಗೊಂಡಿಲ್ಲ. ಮಹದಾಯಿ, ಕಾವೇರಿ, ಕಳಸಾ- ಬಂಡೂರಿ, ಮೇಕೆದಾಟು ಅಣೆಕಟ್ಟು ಸೇರಿದಂತೆ ನಾಡಿನ ನೆಲ- ಜಲ, ಭಾಷೆ- ಗಡಿ ಸೇರಿದಂತೆ ಎಲ್ಲಾ ವಿಷಯಗಳೆಲ್ಲವನ್ನೂ ಒಳಗೊಂಡು ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಮಗ್ರ ಕರ್ನಾಟಕದ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ. ಇದನ್ನು ಕಂಡೂ ಬೆಂಬಲ ಕೊಡುವುದಿಲ್ಲ ಎಂದರೆ ಬೇಡ ಬಿಡಿ. ಈ ರಾಜ್ಯ ಏನು ಅವರ ಕೈಯ್ಯಲ್ಲಿದೆಯೇ. ಜನರು ಅವರು ಹೇಳಿದಂತೆ ಕೇಳುವರೇ. ಜನರು ನಮ್ಮ ಜೊತೆಗಿದ್ದರೆ ಅಷ್ಟೇ ಸಾಕು ಎಂದರು. ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಸೌಭಾಗ್ಯ ಇತರರು ಭಾಗವಹಿಸಿದ್ದರು.

11:10 PM (IST) Aug 13

ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ

ಯಶ್ ಅಭಿನಯದ ‘ಟಾಕ್ಸಿಕ್’ ಟ್ರೇಲರ್ ಬಳಿಕ ಹೊಸ ಥಿಯರಿಗಳು ಹರಿದಾಡುತ್ತಿವೆ. ರಾಯ, ನಾದಿಯಾ ಮತ್ತು ಟಿಕೆಟ್ ಪಾತ್ರಗಳ ನಡುವೆ ಏನು ಸಂಬಂಧ? ‘ವಿಜಯ ವಿಕ್ರಮ’ ಹಾಗೂ ‘ಬಭ್ರುವಾಹನ’ ಜೊತೆ ಹೋಲಿಕೆ ಯಾಕೆ?

Read Full Story

10:52 PM (IST) Aug 13

ಸಿನಿಮಾಗೆ 50 ಕೋಟಿ ಬೇಕು ಅಂತಾ ಕೇಳಿದ್ರಂತೆ. 'ಇಲ್ಲ ಸರ್‌ ಅದಕ್ಕಿಂತ ಹೆಚ್ಚು' ಯಶ್‌ ಖಡಕ್‌ ಉತ್ತರ ಕೇಳಿ ಬಾಲಿವುಡ್‌ ಶಾಕ್‌!

'ಟಾಕ್ಸಿಕ್‌' ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಟ ಯಶ್, ಇದೀಗ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ. ಶೋನಲ್ಲಿ ಪತ್ರಕರ್ತ ರಜತ್ ಶರ್ಮಾ ಅವರ ಸವಾಲಿನ ಪ್ರಶ್ನೆಗಳಿಗೆ ಯಶ್ ತಮ್ಮದೇ ಖದರ್‌ನಲ್ಲಿ ಉತ್ತರಿಸಿದ್ದಾರೆ.

Read Full Story

10:50 PM (IST) Aug 13

Zameer Ahmed - ಖಾತೆ ಹಂಚಿಕೆ ಬೆನ್ನಲ್ಲೇ ಬಿಗ್ ಟ್ವಿಸ್ಟ್! ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೂ ಹೋಗಲ್ಲ ಎಂದ ಜಮೀರ್; ಕೊಟ್ಟ ಕಾರಣವೇನು?

ಸಚಿವ ಜಮೀರ್ ಅಹಮದ್ ಖಾನ್ ಅವರು ತಮಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡದಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಆಗಸ್ಟ್ 15ರ ಧ್ವಜಾರೋಹಣ ಕಾರ್ಯಕ್ರಮದಿಂದಲೂ ವಿನಾಯಿತಿ ಕೋರಿದ್ದಾರೆ. ಕಾರಣವೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story

10:31 PM (IST) Aug 13

ಅಮೆರಿಕಾ ಅಮೆರಿಕಾ 2 ಸ್ತ್ರೀಕೇಂದ್ರಿತ ಸಿನಿಮಾ - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದ್ದೇನು?

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ. ಸ್ತ್ರೀಕೇಂದ್ರಿತ ಕಥೆ ಮತ್ತು ಸಿನಿಮಾದ ಗಂಭೀರ ವಿಚಾರದ ಬಗ್ಗೆ ನಿರ್ದೇಶಕರು ಹೇಳಿದ್ದೇನು?

Read Full Story

10:12 PM (IST) Aug 13

ಅಫ್ಘಾನಿಸ್ತಾನ-ಭಾರತ ಟೆಸ್ಟ್‌ ಸರಣಿಗೆ ಗಣೇಶ ಚತುರ್ಥಿ ಟ್ವಿಸ್ಟ್; ಬಿಸಿಸಿಐಗೆ ದಿನಾಂಕ ಬದಲಿಸುವಂತೆ ಅಫ್ಘಾನ್ ಪಟ್ಟು!

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಟಿ20 ಸರಣಿಯು ದೆಹಲಿಯಲ್ಲಿ ನಡೆಯಲಿದೆ. ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಬಳಸಿಕೊಂಡು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಂದ್ಯದ ದಿನಾಂಕವನ್ನು ಬದಲಿಸುವಂತೆ ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದೆ.
Read Full Story

09:56 PM (IST) Aug 13

‘ಶಾಂತಿ ಕ್ರಾಂತಿ’ ರೀ-ರಿಲೀಸ್ ಯಾವಾಗ? ರವಿಚಂದ್ರನ್ ಸಹೋದರ ಬಾಲಾಜಿ ಕೊಟ್ಟ ಸ್ಪಷ್ಟನೆಯೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ.

Read Full Story

09:18 PM (IST) Aug 13

ಈ ಸಿನಿಮಾಗಳನ್ನು ನೋಡಿದ್ರೆ ದೇಶಭಕ್ತಿ ರಕ್ತದಲ್ಲಿ ಕುದಿಯುತ್ತೆ - ಕನ್ನಡದ ಎವರ್‌ಗ್ರೀನ್ ಚಿತ್ರಗಳಿವು

ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಮತ್ತು ಸೈನಿಕರ ತ್ಯಾಗವನ್ನು ಕಟ್ಟಿಕೊಟ್ಟ ‘ಕಿತ್ತೂರು ಚೆನ್ನಮ್ಮ’, ‘ಮುತ್ತಿನ ಹಾರ’, ‘ವೀರಪ್ಪ ನಾಯ್ಕ’, ‘ಸಂಗೊಳ್ಳಿ ರಾಯಣ್ಣ’ ಸೇರಿದಂತೆ ಪ್ರಮುಖ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.

Read Full Story

09:03 PM (IST) Aug 13

KSP - ಮರು ಪರೀಕ್ಷೆಯೋ? ಕಾಯಂ ನಿರ್ಧಾರವೋ? ಪೊಲೀಸ್‌ ಅಭ್ಯರ್ಥಿಗಳಿಗೆ ಬಿಗ್‌ ಟ್ವಿಸ್ಟ್! ಖಾಕಿ ಕನಸಿನ ಹಾದಿಯಲ್ಲಿ ಕಣ್ಣೀರು!

ಆಗಸ್ಟ್ 2ರಂದು ನಡೆದ ಪೊಲೀಸ್ ಸಿವಿಲ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬ ಮತ್ತು ಸೀರಿಯಲ್ ನಂಬರ್ ಗೊಂದಲದಂತಹ ಭಾರಿ ಲೋಪಗಳು ಉಂಟಾಗಿದ್ದವು. ಇಲಾಖೆ ನೀಡಿರುವ ಈ ಟ್ವಿಸ್ಟ್‌ಗೆ ಸರ್ಕಾರ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

08:58 PM (IST) Aug 13

ಅಕ್ಟೋಬರ್‌ನಿಂದ ಬೆಂಗಳೂರಿನ ಔಟರ್‌ ರಿಂಗ್‌ ರೋಡ್‌ ವೈಟ್‌ ಟ್ಯಾಪಿಂಗ್‌, ಟೆಕ್ಕಿಗಳಿಗೆ WFH ನೀಡುವಂತೆ ಸರ್ಕಾರ ಸಲಹೆ

ಬೆಂಗಳೂರಿನ ಹೊರವರ್ತುಲ ರಸ್ತೆಯ (ORR) ವೈಟ್‌ಟಾಪಿಂಗ್ ಕಾಮಗಾರಿಯನ್ನು ಶೀಘ್ರಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಕಾಮಗಾರಿ ವೇಳೆ ಟ್ರಾಫಿಕ್ ದಟ್ಟಣೆ ತಡೆಯಲು, ಐಟಿ-ಬಿಟಿ ಕಂಪನಿಗಳಿಗೆ 50% ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' ನೀಡಲು ಮಾತುಕತೆ ನಡೆಸಲು ಆದೇಶಿಸಲಾಗಿದೆ.

Read Full Story

08:41 PM (IST) Aug 13

Goosebumps - ಥಟ್ಟಂತ ಮೈ ಜುಮ್ ಅನ್ನುತ್ತಾ? ಆ ಕ್ಷಣ ನಿಮ್ಮ ದೇಹದೊಳಗೆ ಏನಾಗುತ್ತೆ ಗೊತ್ತಾ?

ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್‌ನಲ್ಲಿ "Goosebumps" ಅಂತ ಕರೆಯುತ್ತಾರೆ.

Read Full Story

08:22 PM (IST) Aug 13

Police - ಲಂಚದ ಹಣ ಕೈಸೇರುತ್ತಿದ್ದಂತೆ ರೇಡ್; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮಂಜುನಾಥ್!

ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರ ದೂರಿನ ಮೇರೆಗೆ ಪಕ್ಕಾ ಪ್ಲಾನ್ ಮಾಡಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದ ಸಮೇತ ಅಧಿಕಾರಿಯನ್ನು ರೆಡ್-ಹ್ಯಾಂಡಾಗಿ ಬಂಧಿಸಿದ್ದಾರೆ.

Read Full Story

08:19 PM (IST) Aug 13

ವಿಮಾನದ ಕಿಟಕಿಗಳು ದುಂಡಾಗಿರುವುದೇಕೆ? ಇದರ ಹಿಂದಿದೆ ದೊಡ್ಡ ಸುರಕ್ಷತಾ ರಹಸ್ಯ!

ವಿಮಾನದಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡಲು ಕಿಟಕಿಯತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಆದರೆ ವಿಮಾನದ ಕಿಟಕಿಗಳು ಚೌಕಾಕಾರದಲ್ಲಿರದೆ ದುಂಡಾದ ಅಂಚುಗಳನ್ನು ಹೊಂದಿರುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ?

Read Full Story

08:10 PM (IST) Aug 13

ಹದಗೆಟ್ಟ ರಸ್ತೆಗೆ ಬಲಿಯಾಯ್ತು ಮಹಿಳೆಯ ಪ್ರಾಣ, ಒಂದು ವಾರದಲ್ಲಿ 'ದುರಂತನಗರ' ರೋಡ್‌ ಸರಿಪಡಿಸುವ ಭರವಸೆ ಕೊಟ್ಟ ಅಧಿಕಾರಿಗಳು!

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಯುವತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

Read Full Story

07:57 PM (IST) Aug 13

Yash - ಇನ್ನೂ ಸಿನಿಮಾ ತೆರೆಕಂಡಿಲ್ಲ, ಆಗಲೇ ‘ಟಾಕ್ಸಿಕ್’ಗೆ ಭರ್ಜರಿ ಡಿಮ್ಯಾಂಡ್! ಎಲ್ಲೆಲ್ಲೂ ಕನ್ನಡಿಗನದ್ದೇ ಹವಾ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ, ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಬುಕಿಂಗ್ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Read Full Story

07:23 PM (IST) Aug 13

Actor - ಸ್ಯಾಂಡಲ್​​ವುಡ್ ನಟಿ ತಂಗಿ ವಿರುದ್ಧ 'ಲವ್, ಸೆ*, ಧೋಖಾ' ಆರೋಪ! 15 ಲಕ್ಷ ಕಳೆದುಕೊಂಡು ಜೈಲು ಪಾಲಾದ ಪ್ರಿಯಕರ!

ಸ್ಯಾಂಡಲ್​​ವುಡ್ ನಟಿಯೊಬ್ಬರ ತಂಗಿ ಮತ್ತು ಆಕೆಯ ಪ್ರಿಯಕರನ ನಡುವಿನ ನಾಲ್ಕು ವರ್ಷಗಳ ಲಿವಿಂಗ್ ರಿಲೇಷನ್‌ಶಿಪ್, 15 ಲಕ್ಷ ರೂಪಾಯಿ ವಂಚನೆ ಆರೋಪದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವಕ ವಂಚನೆ ದೂರು ನೀಡಿದರೆ, ಯುವತಿ ಲೈಂಗಿಕ ದುರ್ಬಳಕೆ ಆರೋಪದ ಮೇಲೆ ಕೌಂಟರ್ ದೂರು ದಾಖಲಿಸಿದ್ದು, ಇದೀಗ ಪ್ರಿಯಕರ ನ್ಯಾಯಾಂಗ ಬಂಧನದಲ್ಲಿದ್ದಾನೆ.
Read Full Story

06:29 PM (IST) Aug 13

‘ಟಾಕ್ಸಿಕ್’ ನಟಿಯರ ನಡುವೆ ಕೋಲ್ಡ್‌ವಾರ್? ಸಿದ್ಧಾರ್ಥ್ ಹಳೆ ಲವ್‌ಸ್ಟೋರಿಯಿಂದ ಶುರುವಾಯ್ತಾ ಮುನಿಸು?

ಸಿದ್ದಾರ್ಥ್ ಮಲ್ಹೋತ್ರಾ ಜೊತೆಗಿನ ಹಳೆ ಸಂಬಂಧದ ಕಾರಣಕ್ಕೆ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನಡುವೆ ಎಲ್ಲವೂ ಸರಿ ಇಲ್ಲ ಅಂತೊಂದು ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ನಡುವೆ ಮುನಿಸು ಇದ್ಯಾ? ಇಂಟರ್‌ನೆಟ್‌ನಲ್ಲಿ ಏನಿದು ಚರ್ಚೆ? ತಿಳಿಯಲು ಮುಂದೆ ಓದಿ.

Read Full Story

06:04 PM (IST) Aug 13

ಕನ್ನಡದ ‘777 ಚಾರ್ಲಿ’ ನಿರ್ದೇಶಕರಿಗೆ ಬಾಲಿವುಡ್‌ ಬಾಗಿಲು ಓಪನ್‌ - ದೊಡ್ಡ ನಟರ ಜೊತೆ ಚರ್ಚೆ

ಕನ್ನಡದ ಹಿಟ್‌ ಸಿನಿಮಾ ‘777 ಚಾರ್ಲಿ’ ಮೂಲಕ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ಕಿರಣ್‌ ರಾಜ್‌ ಇದೀಗ ಬಾಲಿವುಡ್‌ನತ್ತ ಹೆಜ್ಜೆ ಇಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 2022ರಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಬಳಿಕ..

Read Full Story

06:04 PM (IST) Aug 13

Bengaluru - ಮನೆ ತಲುಪಲು ಜಸ್ಟ್ 3KM ಬಾಕಿ, ಹದಗೆಟ್ಟ ರಸ್ತೆಗೆ ಬಲಿಯಾದ ಮಹಿಳೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

ಕೇರಳ ಮೇಧಾ ಆಕರ್ಷ್ ಅವರು ಇಪಿಎಫ್ಒದಲ್ಲಿ ಉದ್ಯೋಗಿಯಾಗಿದ್ದು, ಅವರಿಗೆ ಮೂರು ವರ್ಷದ ಮಗು ಕೂಡ ಇತ್ತು. ಕಳಪೆ ರಸ್ತೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅವರ ನ್ಯಾಯಬೇಕು ಎಂದು ಸ್ಥಳೀಯರು ಪ್ರತಿಘಟನೆ ನಡೆಸಿದ್ದಾರೆ.

Read Full Story

05:40 PM (IST) Aug 13

ಮನುಷ್ಯರನ್ನು ಕಂಡಾಕ್ಷಣ ಬಾಣ ಹೂಡುವುದೇಕೆ? ಈ ದ್ವೀಪದೊಳಗೆ ಅಡಗಿದೆ ಅಪಾಯಕಾರಿ ರಹಸ್ಯ!

Sentinelese Tribe: ಆಧುನಿಕ ನಾಗರಿಕತೆಯ ಸಂಪರ್ಕವನ್ನೇ ಹೊಂದದೆ, ಹೊರ ಜಗತ್ತಿನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬದುಕುತ್ತಿರುವ ಕೆಲವು ಬುಡಕಟ್ಟು ಸಮುದಾಯಗಳು ಇಂದಿಗೂ ವಿಶ್ವದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ.

Read Full Story

05:28 PM (IST) Aug 13

GBA - ಮೂರು ವರ್ಷಗಳ ಬಳಿಕ ಮತ್ತೆ ಆ ಯೋಜನೆ ಜಾರಿ? GBAಯಿಂದ ಬಂತು ಬಿಗ್‌ ಅಪ್ಡೇಟ್‌; ಗೌರಿ ಗಣೇಶ ಹಬ್ಬಕ್ಕೆ ಬರಲಿದೆ ಬಂಪರ್‌ ಗಿಪ್ಟ್‌?

ಮೂರು ವರ್ಷಗಳ ದೀರ್ಘ ವಿರಾಮದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಕಲ್ಯಾಣ ಯೋಜನೆಯನ್ನು ಪುನರಾರಂಭಿಸಿದೆ. ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆ ಯೋಜನೆ ಯಾವುದು ಗೊತ್ತಾ?

Read Full Story

05:09 PM (IST) Aug 13

ಹಾವು ಕನ್ನಡಿ ನೋಡಿದಾಗ ದಾಳಿ ಮಾಡುವುದು ಯಾಕೆ? ನಾಲಿಗೆ ಚಾಚುವುದರ ಹಿಂದಿನ ರಹಸ್ಯವೂ ಇದೇ!

Snake Psychology: ಹಾವಿನ ಮುಂದೆ ಕನ್ನಡಿಯನ್ನು ಇಟ್ಟರೆ, ಅದರಲ್ಲಿ ಕಾಣಿಸುವ ಪ್ರತಿಬಿಂಬವನ್ನು ಮತ್ತೊಂದು ಹಾವೆಂದು ಭಾವಿಸಿ ಅದು ವಿಚಿತ್ರವಾಗಿ ವರ್ತಿಸುವುದನ್ನು ಕೆಲವೊಮ್ಮೆ ಕಾಣಬಹುದು. ಕೆಲವೊಮ್ಮೆ ಹೆಡೆ ಎತ್ತುವುದು.

Read Full Story

04:55 PM (IST) Aug 13

Bengaluru New parking policy - ವಾಹನ ಸವಾರರಿಗೆ ಬಿಗ್‌ಶಾಕ್; ಇನ್ಮೇಲೆ ರಸ್ತೆ ಪಕ್ಕ ವೆಹಿಕಲ್ ಪಾರ್ಕ್ ಮಾಡಿದರೆ ಕಟ್ಟಬೇಕು ಹಣ, ಇಲ್ಲಿದೆ ಶುಲ್ಕ ಪಟ್ಟಿ!

ಬೆಂಗಳೂರಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕೆಲವೆಡೆ ಉಚಿತ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಬೈಸಿಕಲ್‌ ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಿಲ್ಲ.

Read Full Story

04:55 PM (IST) Aug 13

'ಮದುವೆಯಾಗಿದ್ದರೆ ಖಂಡಿತ ವಿಚ್ಛೇದನ ಪಡೆಯುತ್ತಿದ್ದೆ' - ನಟಿ ಅನುಪಮಾ ಲವ್‌ ಲೈಫ್‌ನಲ್ಲಿ ಏನಾಗಿತ್ತು?

Anupama Parameswaran: ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

04:52 PM (IST) Aug 13

ರೇಣುಕಾಸ್ವಾಮಿ ಕೇಸ್ - ಜೈಲಲ್ಲಿ ಹೆಡ್‌ಫೋನ್ ಬಳಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ, ನ್ಯಾಯಾಧೀಶರು ಪವಿತ್ರಾ ಗೌಡರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದರ್ಶನ್ ಖುದ್ದು ಹಾಜರಾತಿ ಕುರಿತ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದ್ದು, ಮಾಫಿ ಸಾಕ್ಷಿ ವಿಚಾರವಾಗಿ ದರ್ಶನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Read Full Story

04:41 PM (IST) Aug 13

ವಿಜಯಪುರದ ದೇವರಹಿಪ್ಪರಗಿಯಲ್ಲಿ ₹453 ಕೋಟಿಯ ಎಥನಾಲ್ ಪ್ಲ್ಯಾಂಟ್‌ ನಿರ್ಮಾಣ ಯೋಜನೆಗೆ ಸರ್ಕಾರ ಒಪ್ಪಿಗೆ!

ಕರ್ನಾಟಕ ಸರ್ಕಾರವು ₹6,253 ಕೋಟಿ ಮೌಲ್ಯದ 83 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಿದೆ.

Read Full Story

04:38 PM (IST) Aug 13

ವಿಜಯಲಕ್ಷ್ಮಿ ದರ್ಶನ್‌ ಹೊಸ ಪೋಸ್ಟ್‌ - 'ದೇವರಿಗೆ ಗೊತ್ತು' ಕ್ಯಾಪ್ಷನ್‌, ಹುಟ್ಟಿಕೊಂಡಿವೆ ಹಲವು ಪ್ರಶ್ನೆಗಳು!

Vijayalakshmi Darshan Instagram Post: ನಟ ದರ್ಶನ್‌ ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ.

Read Full Story

04:18 PM (IST) Aug 13

Viral - ಬೆಂಕಿಯಿಲ್ಲದೆ ಮಾಡಿ ಚಿಕನ್ ಫ್ರೈ! ಇನ್ಮುಂದೆ ಚಿಕನ್ ಬೇಯಿಸಲು ಗ್ಯಾಸ್ ಬೇಕಿಲ್ಲ; ವೈರಲ್ ಆಯ್ತು ಈ ವಿಚಿತ್ರ ಸತ್ಯ!

ಗ್ಯಾಸ್ ಅಥವಾ ಬೆಂಕಿಯಿಲ್ಲದೆ ಕೋಳಿಯನ್ನು ಬೇಯಿಸಬಹುದು ಎಂಬ ವೈರಲ್ ಸುದ್ದಿಯೊಂದು ಹರಿದಾಡುತ್ತಿದೆ. ಇದು ಸೈದ್ಧಾಂತಿಕವಾಗಿ ಸಾಧ್ಯವಾದರೂ, ಹೇಗೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

Read Full Story

03:20 PM (IST) Aug 13

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರರಣಕ್ಕೆ ಟ್ವಿಸ್ಟ್, ನನಗೆ ಭಾರತದ ಕಾನೂನು ಅನ್ವಯವಾಗಲ್ಲ ಆಪ್ತ ಗೆಳೆಯನ ವಾದ!

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರಿಗೆ ಆಪ್ತ ಗೆಳೆಯನೇ ಸಂಕಷ್ಟ ತಂದೊಡ್ಡಿದ್ದಾನೆ. ತಾನೇ ಚಿನ್ನ ನೀಡಿದ್ದಾಗಿ ಒಪ್ಪಿಕೊಂಡಿರುವ ಆತ, ಅದನ್ನು ದುಬೈನಲ್ಲಿ ನೀಡಿರುವುದರಿಂದ ಭಾರತದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂದು ವಾದಿಸಿ, ಪ್ರಕರಣದ ಸಂಪೂರ್ಣ ಹೊಣೆಯನ್ನು ನಟಿಯ ಮೇಲೆ ಹಾಕಲು ಯತ್ನಿಸಿದ್ದಾನೆ.

Read Full Story

02:12 PM (IST) Aug 13

ಸೈಕಲ್‌ನಿಂದ ಶುರುವಾದ ಪಯಣ, ಈಗ ಸ್ವಂತ ಮನೆಯತ್ತ - ಕಠಿಣ ಪರಿಶ್ರಮದಿಂದಲೇ ಗೆದ್ದ ಬೆಂಗಳೂರಿನ ಡೆಲಿವರಿ ಪಾರ್ಟ್‌ನರ್‌ ಯಶೋಗಾಥೆ

ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದ ಸಂಜಯ್ ಮಂಡಲ್, ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಆಗಿ ಕಠಿಣ ಪರಿಶ್ರಮದಿಂದ ಯಶಸ್ಸು ಕಂಡಿದ್ದಾರೆ. ಸೈಕಲ್‌ನಲ್ಲಿಯೇ ಕೆಲಸ ಆರಂಭಿಸಿ, ಬೈಕ್ ಖರೀದಿಸಿ, ಇದೀಗ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾ ಸ್ವಂತ ಮನೆಯ ಕನಸು ಕಾಣುತ್ತಿದ್ದಾರೆ. ಅವರ ಈ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.
Read Full Story

01:56 PM (IST) Aug 13

ತಮಿಳುನಾಡಿಗೆ ನಮ್ಮ ಮೆಟ್ರೋ ವಿಸ್ತರಣೆ ಇಲ್ಲ, ಹೊಸ 9 ನಿಲ್ದಾಣದೊಂದಿದೆ ಹಳದಿ ಮಾರ್ಗ ಅತ್ತಿಬೆಲೆವರೆಗೆ ವಿಸ್ತರಣೆ

ಕರ್ನಾಟಕ ಸರ್ಕಾರವು ಹೊಸೂರಿಗೆ ಅಂತರರಾಜ್ಯ ಮೆಟ್ರೋ ನಿರ್ಮಾಣಕ್ಕೆ ಸದ್ಯಕ್ಕೆ ಮುಂದಾಗದೆ, ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ರಾಜ್ಯದ ಗಡಿಭಾಗವಾದ ಅತ್ತಿಬೆಲೆವರೆಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಈ 10.5 ಕಿ.ಮೀ. ಉದ್ದದ ಮಾರ್ಗದಲ್ಲಿ 9 ಹೊಸ ನಿಲ್ದಾಣಗಳು ಬರಲಿದ್ದು, ಇದು ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.
Read Full Story

01:45 PM (IST) Aug 13

ಕೋಲಾರ - ಪಕ್ಕದ ಸೀಟಲ್ಲಿ ಕುಳಿತ ಮಹಿಳೆಯ ಮೈಕೈ ಮುಟ್ಟಿ ಅಸಭ್ಯ ವರ್ತನೆ - ಕಾಮುಕ ಅಂಕಲ್‌ಗೆ ಹಿಗ್ಗಾಮುಗ್ಗಾ ಗೂಸಾ! ವಿಡಿಯೋ ವೈರಲ್

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ, ಪಕ್ಕದ ಸೀಟಿನಲ್ಲಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಆತನಿಗೆ ಬಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯು ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಪರಾರಿಯಾಗಿದ್ದಾನೆ.
Read Full Story

01:09 PM (IST) Aug 13

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ದಿ.ಚೆನ್ನಮ್ಮ ಹೆಸರಿಡುವಂತೆ ಜೆಡಿಎಸ್ ಶಾಸಕ ಶರವಣ ಮನವಿ

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕೆಂದು ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್‌ನಲ್ಲಿ ಮನವಿ ಮಾಡಿದ್ದಾರೆ. ಸಂತಾಪ ಸೂಚನೆ ವೇಳೆ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

Read Full Story

12:37 PM (IST) Aug 13

ಮಂಗಳೂರು - ಮಧ್ಯರಾತ್ರಿ ಕಾರಲ್ಲಿ ಅಪ್ರಾಪ್ತಳನ್ನ ಕರೆದೊಯ್ದವನಿಗೆ ಕಾರು ಅಡ್ಡಗಟ್ಟಿ ಗುಂಪು ಹಲ್ಲೆ; ಎರಡು ಕಡೆಯವರು ಎಫ್‌ಐರ್!

ಪುತ್ತೂರಿನ ಕೊಕ್ಕಡದಲ್ಲಿ, ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಶೇಕ್ ಮುಖ್ತಾರ್ ಎಂಬಾತನಿಗೆ ಸ್ಥಳೀಯ ಯುವಕರ ಗುಂಪು ಹಲ್ಲೆ ನಡೆಸಿದೆ. ಬಾಲಕಿಯ ತಾಯಿ ಅಪಹರಣದ ದೂರು ನೀಡಿದ್ದು, ಹಲ್ಲೆಗೊಳಗಾದ ವ್ಯಕ್ತಿ ಕೂಡ ಪ್ರತಿ ದೂರು ದಾಖಲಿಸಿದ್ದು, ಪೊಲೀಸರಿಂದ ಮುಂದುವರಿದ ತನಿಖೆ.

Read Full Story

12:30 PM (IST) Aug 13

ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿದ ಬಿಜೆಪಿ; ದಲಿತರಿಗಾದ ಅವಮಾನ ಎಂದ ಖರ್ಗೆ!

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಘಟನೆ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಖರ್ಗೆಯವರು ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತನಿಖೆಯ ಭರವಸೆ ನೀಡಿದ್ದಾರೆ.
Read Full Story

12:15 PM (IST) Aug 13

Vijayanagara - ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಲಾಕಪ್‌ ಡೆತ್ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸಿಐಡಿ ವಶಕ್ಕೆ

ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.

Read Full Story

11:38 AM (IST) Aug 13

ಕನ್ಯಾಕುಮಾರಿ ಟು ಕಾಶ್ಮೀರ - ರಾಹುಲ್ ಗಾಂಧಿ ಪ್ರಧಾನಿ ಆಗಲೆಂದು ಆಂಧ್ರದ ವಕೀಲರ ಪಾದಯಾತ್ರೆ, ಕೂಡ್ಲಿಗಿಯಲ್ಲಿ ಶಾಸಕ ಶ್ರೀನಿವಾಸ ಸಾಥ್

ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.

Read Full Story

10:31 AM (IST) Aug 13

ಆಗಸ್ಟ್ 15, 2026 - ಇದು ಭಾರತದ 79ನೇಯೋ ಅಥವಾ 80ನೇ ಸ್ವಾತಂತ್ರ್ಯ ದಿನಾಚರಣೆಯೋ? ಗೊಂದಲಕ್ಕೆ ಇಲ್ಲಿದೆ ಉತ್ತರ!

2026ರ ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. 1947ರ ಮೊದಲ ಆಚರಣೆಯಿಂದ ಲೆಕ್ಕ ಹಾಕಿದರೆ ಇದು 80ನೇ ಆಚರಣೆಯಾಗುತ್ತದೆ. ಆದರೆ, 1947ರಿಂದ 2026ರ ನಡುವೆ 79 ವರ್ಷಗಳು ಕಳೆದಿರುವುದರಿಂದ ದೇಶವು ಸ್ವತಂತ್ರವಾಗಿ 79 ವರ್ಷಗಳನ್ನು ಪೂರೈಸಿದಂತಾಗುತ್ತದೆ. ಹೀಗಾಗಿ 2026ರ ಆಗಸ್ಟ್ 15 ಭಾರತದ 80ನೇ ಸ್ವಾತಂತ್ರ್ಯ ದಿನೋತ್ಸವ ಹಾಗೂ 79 ವರ್ಷಗಳ ಸ್ವಾತಂತ್ರ್ಯದ ಸಂಕೇತವಾಗಿದೆ.

Read Full Story

09:49 AM (IST) Aug 13

ಹುಬ್ಬಳ್ಳಿ-ವಾರಣಾಸಿ ರೈಲು ಸೇವೆ ವಾರಕ್ಕೆ 3 ದಿನ ವಿಸ್ತರಣೆ, ಯಾರಿಗೆಲ್ಲ ಅನುಕೂಲ? ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿ, ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸಲು ಮತ್ತು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಹೊಂದಿರುವ ಹುಬ್ಬಳ್ಳಿ ನಿಲ್ದಾಣವನ್ನು 'ಹೈಟೆಕ್' ಸೌಲಭ್ಯಗಳೊಂದಿಗೆ ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ಉತ್ತರ ಕರ್ನಾಟಕದ ಯಾತ್ರಿಕರು ಮತ್ತು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
Read Full Story

09:27 AM (IST) Aug 13

ಜಾಮರ್ ಅಳವಡಿಸಿದ್ರು ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಹೇಗೆ? ಏರ್‌ಟೆಲ್ ವಿರುದ್ಧ ಎಫ್‌ಐಆರ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿದ್ದು, ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲಿನಲ್ಲಿ ಸಿಗ್ನಲ್ ನೀಡುತ್ತಿದ್ದ ಏರ್‌ಟೆಲ್‌ ಕಂಪನಿ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.
Read Full Story

08:25 AM (IST) Aug 13

ಬೆಂಗಳೂರು - ಭೀಕರ ಬೆಂಕಿ ಅವಘಡಕ್ಕೆ ಪಾರ್ಕಿಂಗ್‌ ನಲ್ಲಿದ್ದ 400 ಇವಿ ಬೈಕ್‌ ಗಳು ಸುಟ್ಟು ಬೂದಿ!

ಬೆಂಗಳೂರಿನ ಕೆ.ಆರ್. ಪುರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ, ಡೆಲಿವರಿ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಈ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಶಂಕಿಸಲಾಗಿದ್ದರೂ, ಕಿಡಿಗೇಡಿಗಳ ಕೃತ್ಯದ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
Read Full Story

More Trending News