ವಿಜಯಪುರ: ಮಾಟಗಾತಿಯ ಮಾತು ನಂಬಿ, ಗಂಡು ಮಗುವಿಗಾಗಿ ತನ್ನ ಪತ್ನಿಯ ತಲೆ ಕೂದಲನ್ನೇ ಪತಿ ಕತ್ತರಿಸಿದ ಅಮಾನವೀಯ ಘಟನೆ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿನ.25ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 8 ವರ್ಷ ಹಿಂದೆ ಮದುವೆಯಾದ ಹೊನ್ನುಟಗಿ ಗ್ರಾಮದ ದುಂಡೇಶ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಹಾಗೂ ಕುಟುಂಬಸ್ಥರು, ಕೊಲ್ದಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿ ಬಳಿ ಹೋಗಿ ಸಲಹೆ ಕೇಳಿದ್ದರು. ನಿನ್ನ ಪತ್ನಿಗೆ ಗಾಳಿಯಾಗಿದೆ (ಭೂತ ಮೆಟ್ಟಿಕೊಂಡಿದೆ). ಅದಕ್ಕಾಗಿ ಆಕೆಯ ತಲೆಯಲ್ಲಿ ರಕ್ತ ಬರುವಂತೆ ತಲೆಯ ಕೂದಲನ್ನು ಕತ್ತರಿಸಿಕೊಂಡು ಬಂದು ಅದನ್ನು ಸ್ಮಶಾನದಲ್ಲಿ ಸುಡಬೇಕು ಎಂದು ಮಾಟಗಾತಿ ಸೂಚಿಸಿದ್ದಳು ಎನ್ನಲಾಗಿದೆ.

09:11 AM (IST) Dec 10
The Devil Movie: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಸದ್ಯ ನಟ ದರ್ಶನ್ ತೂಗುದೀಪ ಜೈಲಿನಲ್ಲಿದ್ದಾರೆ. ಹೀಗಿರುವಾಗ ಇವರ ‘ದಿ ಡೆವಿಲ್ʼ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಡಿಸೆಂಬರ್ 11ರಂದು ಈ ಚಿತ್ರ ರಿಲೀಸ್ ಆಗುತ್ತಿದ್ದು, ಜೈಲಿನಿಂದಲೇ ದರ್ಶನ್ ಫ್ಯಾನ್ಸ್‌ಗೆ ಸಂದೇಶ ಕಳಿಸಿದ್ದಾರೆ.
09:09 AM (IST) Dec 10
ಪರಿಷತ್ತಿನಲ್ಲಿ ಅಕ್ಕಿ ಅಕ್ರಮ ವಿಚಾರ ಕಾವೇರುತ್ತಿದ್ದಂತೆಯೇ, ಸಿ. ಟಿ.ರವಿಯವರಿಗೆ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ಯಾದಗಿರಿ ಪ್ರಕರಣ ಸಿಐಡಿ ತನಿಖೆಗೆ ವಹಿಸಿದೆ. ಅದರಲ್ಲಿ ಎ-1, ಎ-2, ಎ-3 ಯಾರಿದ್ದಾರೆ ಅಂತ ನೋಡಿ.
08:54 AM (IST) Dec 10
Bigg Boss Kannada Season 12: ಶಶಿ ಎಂಬುವವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿದ್ದು, ಮಹಿಳಾ ಆಯೋಗದ ಮೂಲಕ ಶೋ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಘಟನೆ ಸೀಕ್ರೆಟ್ ಟಾಸ್ಕ್‌ನ ಭಾಗವಾಗಿ ನಡೆದಿದೆ.
08:47 AM (IST) Dec 10
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಮಿನೇಶನ್ ಟಾಸ್ಕ್ ನಡೆದಿದೆ. ಆ ವೇಳೆ ಗಿಲ್ಲಿ ನಟ ಅವರನ್ನು ಕಾವ್ಯ ಶೈವ ನಾಮಿನೇಟ್ ಮಾಡಿದ್ದರು. ಅದಾದ ಬಳಿಕ ಗಿಲ್ಲಿ ಅವರಿಗೆ ಸೀಕ್ರೇಟ್ ಟಾಸ್ಕ್ ಕೊಟ್ಟಿದ್ದು, ಕಾವ್ಯ ಈಗ ಅಳುವಂತಾಗಿದೆ.
08:17 AM (IST) Dec 10
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಮಿನೇಶನ್ ವೇಳೆ ರಜತ್ ಆಡಿದ ಒಂದು ಮಾತು ದೊಡ್ಡ ಸಂಚಲನ ಮೂಡಿಸಿದೆ. ರಾಶಿಕಾ ಶೆಟ್ಟಿ, ಸೂರಜ್ ಬಗ್ಗೆ ರಜತ್ ಮಾತನಾಡಿದ್ದು, ದೊಡ್ಡ ಮಟ್ಟದಲ್ಲಿ ಚರ್ಚೆ ಮೂಡಿಸಿದೆ.
08:05 AM (IST) Dec 10
ಭಾರತೀಯ ನಾಗರಿಕತ್ವ ಪಡೆಯುವ ಮೊದಲೇ 1980ರಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
08:05 AM (IST) Dec 10
ರಾಷ್ಟ್ರಪ್ರಶಸ್ತಿ ಬಳಿಕ ತಿಥಿ ಸಿನಿಮಾದ ಕಲಾವಿದರು ಮುನ್ನಲೆಗೆ ಬಂದಿದ್ದರು. ಇಂದಿಗೂ ಚಿತ್ರದ ಕೆಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚಿತ್ರದ ನಾಯಕ ನಟ ಅಭಿಷೇಕ್ ಅವಕಾಶಗಳು ಸಿಗದ ಹಿನ್ನೆಲೆ ಕೂಲಿ ಕೆಲಸ ಮಾಡುತ್ತಿದ್ದಾರೆ.