ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ 1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವ ಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನಾ ನೀಡಲಾಗಿದೆ.

ಚಿಕ್ಕಬಳ್ಳಾಪುರ (ಡಿ.10): ಮಾನವ ಹಕ್ಕುಗಳ ದಿನಾಚರಣೆ ಮತ್ತು ಶ್ರೀ ದ್ವಾರಕನಾಥ್‌ರೆಡ್ಡಿರವರ ಆದರ್ಶಗಳನ್ನು ಆಚರಿಸುವ ಸಲುವಾಗಿ ಡಿಸೆಂಬರ್ 09ರಂದು ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ 1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನಾ ನೀಡಲಾಗಿದೆ.

ಪ್ರಪಂಚಾದ್ಯಂತ ಅಂತರಾಷ್ಟ್ರೀಯ ಮಾನವಹಕ್ಕುಗಳ ದಿನವನ್ನು ಆಚರಿಸಲು ಸಜ್ಜಾಗುತ್ತಿರುವ ಈ ಸಂಧರ್ಭದಲ್ಲಿ, ಸಮಾಜ ಸೇವಕರು ಮತ್ತು ನ್ಯೂಟ್ರೀನ್ ಗ್ರೂಪ್ ಆಫ್ ಕಾನ್‌ಫೆಕ್ಷನರೀಸ್ (ಚಿತ್ತೂರು) ಸಹ ಸಂಸ್ಥಾಪಕರಾದ ಶ್ರೀ ವಿ. ದ್ವಾರಕನಾಥ್‌ರೆಡ್ಡಿರವರಿಂದ ಪ್ರತಿಬಿಂಬಗೊಂಡ ಸಮಾನತೆ, ಗೌರವ, ಮತ್ತು ನ್ಯಾಯದ ಮೌಲ್ಯಗಳನ್ನು ಆಚರಿಸುವ ಸಲುವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ವಿವಿಧ ಸಮುದಾಯಗಳಿಂದ 1000ಕ್ಕೂ ಹೆಚ್ಚು ಜನರು ಈ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು. ಈ ಕಾರ್ಯಕ್ರಮದಲ್ಲಿ ದ್ವಾರಕನಾಥ್‌ರೆಡ್ಡಿ ರಮಣಾರ್ಪಣಂ ಸಂಸ್ಥೆಯ(ಡಿಆರ್‌ಆರ್‌ಟಿ) ಮೂಲಕ ವಿವಿಧ ಸಮುದಾಯದ ಬಡವರ ಜೀವನೋಪಾಯ, ಶಿಕ್ಷಣ, ಸಾಂಸೃತಿಕ ರಕ್ಷಣೆ, ಯುವ ನಾಯಕತ್ವ, ಮಹಿಳಾ ಸಬಲಿಕರಣದಲ್ಲಿ ಶ್ರೀ ರೆಡ್ಡಿರವರ ಪ್ರಾಮಾಣಿಕ ಪ್ರಯತ್ನಗಳು ಮತ್ತು ಪರಿಶ್ರಮದ ಹೆಜ್ಜೆಗಳು ಮಾನವಹಕ್ಕುಗಳ ಅಡಿಪಾಯವನ್ನು ಬಲಪಡಿಸಿದವು.

ದ್ವಾರಕನಾಥ್‌ರೆಡ್ಡಿರವರ 101ನೇ ವರ್ಷದ ಜನ್ಮವಾರ್ಷಿಕೋತ್ಸವವನ್ನು ಇದೇ ದಿನ ಆಚರಿಸಿದ್ದೂ ಈ ವರ್ಷದ ವಿಶೇಷವಾಗಿತ್ತು. 1996ರಲ್ಲಿ ಸ್ಥಾಪಿತವಾದ ಡಿಆರ್‌ಆರ್‌ಟಿ ಸಂಸ್ಥೆಯು ತನ್ನ ಮೂಲ ದ್ಯೇಯವಾಗಿರುವ ಬಡತನ ನಿರ್ಮೂಲನೆ ಮತ್ತು ಹಿಂದುಳಿದಿರುವ ಸಮುದಾಯಗಳ ಅಭಿವೃದ್ದಿಯನ್ನು ಮಾಡುತ್ತಾ ಬಂದಿದೆ. ಅದರಂತೆ ಶ್ರೀ ದ್ವಾರಕನಾಥ್‌ರೆಡ್ಡಿರವರ ಕನಸುಗಳನ್ನು ನನಗಾಸಲು ಅವರ ಪುತ್ರಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಯಾದ ಪದ್ಮಶ್ರೀ ಪುರಸ್ಕೃತ ಶ್ರೀಮತಿ ಅನಿತರೆಡ್ಡಿರವರು ಅವಿರಹಿತವಾಗಿ ಶ್ರಮಿಸುತ್ತಿದ್ದಾರೆ.

ಡಿಆರ್‌ಆರ್‌ಟಿ ಮತ್ತು ಆವಾಸ್‌ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಅನಿತರೆಡ್ಡಿರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಹೋರಾಟದಿಂದ ಬದುಕು ಕಟ್ಟಿಕೊಂಡ ಸಮುದಾಯಗಳ ಸಾಧನೆಯನ್ನು ಮತ್ತು ಬಡಮಕ್ಕಳ, ಯುವಕರು ಹಾಗೂ ಮಕ್ಕಳ ಪ್ರಗತಿಯನ್ನು ಸ್ಮರಿಸಿದರು. ಸದುದ್ದೇಶಕ್ಕಾಗಿ ಆಚರಿಸಿದ ಕಾರ್ಯಕ್ರಮಕ್ಕೆ ನಗರದ 20 ಕೊಳಗೇರಿ ಮತ್ತು30 ಗ್ರಾಮೀಣ ಸಮುದಾಯಗಳ 1000ಕ್ಕೂ ಹೆಚ್ಚು ಜನರು ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸ್ವಶಕ್ತಿ ಮತ್ತು ಏಕತೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಸಮುದಾಯದ ನಾಯಕರು, ವಿಧ್ಯಾರ್ಥಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

ಕನ್ನಡ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ್ ಡಿಆರ್‌ಆರ್‌ಟಿ – ಆವಾಸ್- ಜೀವನೋತ್ಸವ ಮಕ್ಕಳೊಂದಿಗೆ ಆಚರಿಸಿದ ಸಂಸ್ಥಾಪಕರ ದಿನಾಚರಣೆ ಮತ್ತು ಮಾನವಹಕ್ಕುಗಳ ದಿನಾಚರಣೆಯನ್ನು ಪ್ರಶಂಸಿಸಿದರು. ಅವರು 15 ವರ್ಷಗಳ ಹಿಂದೆಯೆ ಸಂಸ್ಥೆಯ ಕುರಿತು ಬರೆದ ಹಾಡನ್ನು ಹಾಡಿ ಪ್ರೇಕ್ಷಕರನ್ನು ಮೆರಗುಗೊಳಿಸಿದರು. ಶ್ರೀ ಎನ್ ಆರ್ ಚಂದ್ರಶೇಖರ್‌ರವರು ‘ನಾನು ಮತ್ತೆ ಮಗುವಾಗಬೇಕೆಂದಿದೆ- ಇಲ್ಲಿ ಕಂಡಿರುವ ಕಲಿಕೆಯ ವಾತವಾರಣ ಅದ್ಬುತ’ ಎಂದೂ ಹೇಳಿದರು. ಶ್ರೀ ಎನ್.ಪಿ. ಸಾಮಿ ಅವರು ಅವಾಸ್ ಮತ್ತು ಡಿಆರ್‌ಆರ್‌ಟಿ ಸಂಸ್ಥೆಯ ಜೊತೆ ನಡೆಸಿದ ಮನೆಯ ಹಕ್ಕು, ಭೂಮಿಯ ಹಕ್ಕು, ಮೂಲಸೌಕರ್ಯ ಮತ್ತು ಶಿಕ್ಷಣದ ಹೋರಾಟಗಳನ್ನು ನೆನೆದರು.

ವಿಜ್ಞಾನಿ ಡಾ. ವಿಜಯಚಂದ್ರರವರು ಚಿಕ್ಕಬಳ್ಳಾಪುರ ಗ್ರಾಮೀಣ ಭಾಗದ ಜನರಿಗೆ ಹೊಸ ಆರೋಗ್ಯದ ಕಾರ್ಯಕ್ರಮಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದರು. ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಪುತ್ರರಾದ ಶ್ರೀ ಪ್ರತಾಪ್‌ರೆಡ್ಡಿರವರು ವಿಧುರಾಶ್ವಥ ಹೋರಾಟದ ಇತಿಹಾಸವನ್ನು ನೆನಪಿಸಿ ಪ್ರೇಕ್ಷಕರಿಗೆ ಪ್ರೇರಣೆಯನ್ನು ನೀಡಿದರು. ಆರ್‌ಆರ್‌ಕೆ ಸಂಸ್ಥೆಯ ಮೂಲಕ ಕಳೆದ ಹಲವು ವರ್ಷಗಳಿಂದ ಡಿಆರ್‌ಆರ್‌ಟಿ ಸಂಸ್ಥೆಗೆ ಬೆಂಬಲ ನೀಡುತ್ತಾ ಬಂದಿರುವ ಶ್ರೀ ರಾಮಕೃಷ್ಣನ್‌ರವರು ಕೂಡ ಉಪಸ್ಥಿತರಿದ್ದರು.

ದೀಪ ಬೆಳಗಿಸುವುದು, ಅತಿಥಿ ಗೌರವ ಹಾಗೂ ಚೆಕ್‌ಗಳ ವಿತರಣೆ ಮೂಲಕ ಡಿಆರ್‌ಆರ್‌ಟಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಕಾರ್ಯಕ್ರಮದ ಉದ್ದಕ್ಕೂ ಸಮುದಾಯದ ಯುವನಾಯಕರ ನಾಯಕತ್ವ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ಮಕ್ಕಳ ನಿಧಿ (ಸಿಇಎಫ್) ಮತ್ತು ಅರ್ನ್ ಅಂಡ್ ಲರ್ನ್ ಬಗ್ಗೆ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು. ಸುವರ್ಣರವರು ಕಾರ್ಯಕ್ರಮದಲ್ಲಿ ನಿರೂಪಣೆಯ ಜವಬ್ದಾರಿಯನ್ನು ತೆಗೆದುಕೊಂಡಿದ್ದರು. ರಾಗಿಣಿರವರು ಹದಿ ಹರಿಯದ ಹೆಣ್ಣುಮಕ್ಕಳ ತಂಡವನ್ನು ಮುನ್ನೆಡೆಸಿದರು. ಮಂಜಪ್ಪ-ವೆಂಕಟೇಶ್-ಅರ್ಜುನ್ ಮತ್ತು ಏಳುಮಲೈರವರು 1000 ಜನರನ್ನು ಸಂಘಟಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಿದರು.

ಚಿತ್ತೂರಿನ ಇಮ್ರಾನ್ ನೇತೃತ್ವದ ಯುವತಂಡವು ಸ್ವಯಂಸೇವಕರಾಗಿ ಉತ್ತಮ ರೀತಿಯ ಜವಬ್ದಾರಿಯನ್ನು ತೆಗೆದುಕೊಂಡಿದ್ದರು. ನವಶಕ್ತಿ ನಾಟಕವು ಈ ಕಾರ್ಯಕ್ರಮದ ಹೃದಯವಾಗಿತ್ತು. ಗಂಗರಾಜ್ ರಚನೆಯ ಈ ನಾಟಕವನ್ನು ದೇವರಾಜ ನರ‍್ದೇಶನದಲ್ಲಿ ಮತ್ತು ನಾಗೇಶ್‌ರವರ ಸಂಗದತ ಸಂಯದಜನೆಯಲ್ಲ್ಲಿ ದ್ರಿಕ್ ಜೀವನೋತ್ಸವ ಮಕ್ಕಳು, ಅರಣ್ಯಚುಕ್ಕಿ ಶಾಲೆಯ ಮಕ್ಕಳು ಮತ್ತು ಅರಣ್ಯಚುಕ್ಕಿ ಶಾಲೆಯ ಶಿಕ್ಷಕ ವರ್ಗದವರು ಅಭಿನಯಿಸಿದ ನವಶಕ್ತಿ ನಾಟಕವು ನಮ್ಮ ಸಮುದಾಯ ಮತ್ತು ಸಮಾಜದಲ್ಲಿನ ನ್ಯೂನ್ಯತೆಗಳಾದ ಭ್ರಷ್ಟಾಚಾರ, ಲಿಂಗ ಅಸಮಾನತೆ, ಮತ್ತು ದುರಾಸೆಯನ್ನು ಹೋಗಲಾಡಿಸುವ ಸಂದೇಶದ ಜೊತೆಗೆ ಗಾಂಧೀಜಿಯ ಆದರ್ಶಗಳ ಮುಖೇನಾ ಮಹಿಳಾ ಶಕ್ತಿಯನ್ನು ಉತ್ತಮವಾದ ರೀತಿಯಲ್ಲಿ ಪ್ರಸ್ತುತ ಪಡಿಸಿದರು. ಜೊತೆಗೆ ಬೆಂಗಳೂರಿನ ಎಂ ಆರ್ ಎಸ್ ಪಾಳ್ಯ ಸಮುದಾಯದ ಜೀವನೋತ್ಸವ ಮಕ್ಕಳಿಂದ ಭರತನಾಟ್ಯ ಮತ್ತು ಗಾಯನಗಳು ಸಂಜೆಯ ಕಾರ್ಯಕ್ರಮವನ್ನು ಮೆರಗುಗೊಳಿಸಿತು.

ಹಾಗೂ ಉತ್ಸಾಹಭರಿತ ಡೊಳ್ಳುಕುಣಿತ, ಪಟ್ಟಕುಣಿತ ಮತ್ತು ಜಂಬೆ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಚೈತನ್ಯವನ್ನು ನೀಡಿತು. ಅನಿತರೆಡ್ಡಿರವರಿಗೆ ಈ ಕಾರ್ಯಕ್ರಮವು ತುಂಬ ಹೃದಯಪೂರ್ವಕವಾಗಿ ಅರ್ಥಪೂರ್ಣ ಕ್ಷಣವಾಗಿ ನಿಂತಿತು. ಈ ಕಾರ್ಯಕ್ರಮವು ಹಕ್ಕುಗಳನ್ನು ಕಳೆದುಕೊಂಡಿದ್ದ ಸಮುದಾಯಗಳಿಲ್ಲಿ ನಾಯಕತ್ವ, ಮೌಲ್ಯಗಳು ಮತ್ತು ಸಬಲಿಕರನ್ನಾಗಿ ಮಾಡುವಲ್ಲಿ ಅವರ ಜೀವಿತಾವಧಿಯ ಸೇವೆಯನ್ನು ಪ್ರತಿಬಿಂಬಿಸಿತು. ಒಟ್ಟಾರೆ ಮಾನವಹಕ್ಕುಗಳ ದಿನಾಚರಣೆಯಲ್ಲಿ ಉತ್ತಮ ಸಮಾಜಕ್ಕಾಗಿ ನಾಯಕತ್ವವು ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು ಎಂಬ ಸಂದೇಶದ ಜೊತೆಗೆ ದ್ವಾರಕನಾಥ್‌ರೆಡ್ಡಿರವರ ಆದರ್ಶ ಮತ್ತು ಪರಂಪರೆಯನ್ನು ಸ್ಮರಿಸಿ ಸಂಭ್ರಮಿಸಲಾಯಿತು. ಕೊನೆಗೆ ರಾಷ್ಟ್ರಗೀತೆಯ ಮುಖೇನಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗಿದ್ದೂ, ಮಾನವಹಕ್ಕುಗಳು ದೈನಂದಿನ ಕೆಲಸಗಳಿಂದ ಪ್ರಾರಂಭವಾಗುತ್ತವೆ. ಎಲ್ಲರಿಗೂ ಧಯೆ, ಒಗ್ಗೂಡುವಿಕೆ ಮತ್ತು ಘನತೆಯ ಬದುಕನ್ನು ನೀಡಬೇಕು. ಅದು ಶ್ರೀ ವಿ. ದ್ವಾರಕನಾಥ್‌ರೆಡ್ಡಿರವರ ಆದರ್ಶ ಮತ್ತು ಡಿಆರ್‌ಆರ್‌ಟಿ ಸಂಸ್ಥೆಯ ಮೂಲಕ ನಂಬಿಕೆ ಮತ್ತು ಭರವಸೆಯೊಂದಿಗೆ ಹೊಳೆಯುತ್ತಲೆ ಇದೆ.

ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭವಾದ ಸಂಸ್ಥೆ

ಡಿಆರ್‌ಆರ್‌ಟಿ ಸಂಸ್ಥೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿ, ಯುವಸಬಲಿಕರಣ, ಮಹಿಳಾ ಸಬಲಿಕರಣ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಘನತೆ, ಶಿಕ್ಷಣ, ಜೀವನೋಪಾಯ ಮತ್ತು ಮಾನವೀಯ ಹಕ್ಕುಗಳನ್ನು ರಕ್ಷಿಸಲು ಮತ್ತು ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭವಾದ ಸಂಸ್ಥೆಯಾಗಿದೆ. ಅಲ್ಲದೆ ಹಕ್ಕುಗಳ ಆಧಾರಿತ ಶಿಕ್ಷಣ, ಸಮುಧಾಯ ಅಭಿವೃದ್ಧಿ, ಮಹಿಳೆಯರ ಜೀವನೋಪಾಯ, ಸಾಂಸ್ಕೃತಿಕ ಅವಕಾಶಗಳು ಮತ್ತು ಸ್ವಾವಲಂಬಿ ಸಮುಧಾಯಗಳನ್ನು ನಿರ್ಮಿಸಲು ಕೆಲಸವನ್ನು ಮಾಡುತ್ತಾ ಬಂದಿದೆ. ಸಹಾನುಭೂತಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟ ನಮ್ಮ ಸಂಸ್ಥೆ ಜನರ ಭಾಗವಹಿಸುವಿಕೆಯೊಂದಿಗೆ ತಳಮಟ್ಟದಲ್ಲಿ ಬಲವಾಗಿ ನಾಯಕತ್ವವನ್ನು ಬೆಳೆಸುತ್ತಾ ಬಂದಿದೆ.