ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯವೂ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ನಿರ್ದೇಶನದ ಬೆನ್ನಲ್ಲೇ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸುವ ಕುರಿತು ಇಂದು (ಜು.31) ಮಹತ್ವದ ಸಭೆ ನಡೆಯಲಿದೆ.
ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳ ಮುಖಂಡರು ಚರ್ಚೆ ನಡೆಸಲಿದ್ದಾರೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ, ಪ್ರವೀಣ್ ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಮಂಜುನಾಥ್ ದೇವ್, ಸಿ.ಕೆ.ರಾಮೇಗೌಡ, ಪಾಲನೇತ್ರ, ವ.ಚ.ಚನ್ನೇಗೌಡ ಸೇರಿ 35ರಿಂದ 50 ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂಬ ಒತ್ತಾಯದೊಂದಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ ರಾಜ್ಯವ್ಯಾಪಿ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
10:51 PM (IST) Jul 31
ವಿಜಯಪುರದ ಕೊಳೆಗೇರಿಯ ಗುಡಿಸಲಿನಲ್ಲಿ ವಾಸಿಸುವ, ಚಿಂದಿ ಆಯುವ ದಂಪತಿಯ ಮಗನಾದ ವಿಕಲಚೇತನ ಕ್ರಿಕೆಟಿಗ ರಾಜೇಶ್ ಕಣ್ಣೂರ್, ಬಡತನದ ನಡುವೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
10:28 PM (IST) Jul 31
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಟೋಲ್ ಸಂಗ್ರಹಣೆ ಶೇ.100ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, 46 ರಿಂದ 68ಕ್ಕೆ ಏರಿದ ಟೋಲ್ ಪ್ಲಾಜಾಗಳ ಸಂಖ್ಯೆ ಮತ್ತು ನಿಯತಕಾಲಿಕ ದರ ಏರಿಕೆಯು ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.
10:09 PM (IST) Jul 31
10:03 PM (IST) Jul 31
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಯುಪಿಐ ಪಾವತಿ ವಿಫಲವಾದ ಕಾರಣ, ಕಂಡಕ್ಟರ್ ಪ್ರಯಾಣಿಕರೊಬ್ಬರನ್ನು ನಡುರಸ್ತೆಯಲ್ಲಿ ಇಳಿಸಿದ್ದಾರೆ. ಚಿಲ್ಲರೆ ಹಣ ಇಲ್ಲದಿರುವುದು ಮತ್ತು ಯಂತ್ರದ ದೋಷದಿಂದ ಉಂಟಾದ ಈ ಘಟನೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಬಿಎಂಟಿಸಿ ಸಿಬ್ಬಂದಿಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
09:53 PM (IST) Jul 31
ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸುತ್ತಿರುವ ಪರೀಕ್ಷಿತ್ ಅವರ ಅಭಿನಯ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಇದೀಗ ಆ ಮೆಚ್ಚುಗೆಗೆ ಜೀವಂತ ಸಾಕ್ಷಿಯಾಗುವಂತಹ ಒಂದು ವಿಶೇಷ ಘಟನೆ ನಡೆದಿದೆ.
09:04 PM (IST) Jul 31
ದೇಹದ ಚಯಾಪಚಯ ಕ್ರಿಯೆ, ಶಕ್ತಿ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕಾರ್ಯದಲ್ಲಿನ ವ್ಯತ್ಯಾಸವು ಅನಿರೀಕ್ಷಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
08:39 PM (IST) Jul 31
ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..
08:21 PM (IST) Jul 31
08:12 PM (IST) Jul 31
ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ಡಾರ್ಕ್ ಚಾಕೊಲೇಟ್ ಅನ್ನು ಸವಿಯುವ ಅಭ್ಯಾಸ ಮಾಡಿಕೊಳ್ಳಿ. ನೆನಪಿಡಿ, ‘ಕಹಿ’ಯಾದ ಕೋಕೋ ಹೆಚ್ಚಿದ್ದಷ್ಟೂ ನಿಮ್ಮ ಆರೋಗ್ಯಕ್ಕೆ ‘ಸಿಹಿ’ ಹೆಚ್ಚು!.. ಚಾಕೊಲೇಟ್ ಸೀಕ್ರೆಟ್ ತಿಳಿಯಲು ಈ ಸ್ಟೋರಿ ನೋಡಿ..
08:00 PM (IST) Jul 31
ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ತಿರುವಣ್ಣಾಮಲೈನ 'ಮೋಕ್ಷ ಮಾರ್ಗಂ' ಎಂಬ ಕಿರಿದಾದ ಗುಹೆಯಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
07:48 PM (IST) Jul 31
Jolly Kannada Movie: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು.
07:16 PM (IST) Jul 31
Yash On Horror Movies: ಹಾರರ್ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಯಶ್, "ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಹಾರರ್ ಸಿನಿಮಾಗಳನ್ನು ಮಾತ್ರ ಹೆಚ್ಚಾಗಿ ನೋಡುವುದಿಲ್ಲ.
06:56 PM (IST) Jul 31
ಕಾಯ್ತಾ ಕಾಯ್ತಾ ಕಣ್ಣು ದಣಿದು ಹೋಗಿದ್ದ ಯಶ್ಅಭಿಮಾನಿಗಳಿಗೆ, ಇಡೀ ಇಂಡಿಯನ್ ಸಿನಿಪ್ರೇಮಿಗಳಿಗೆ ಅಸಲಿ ಹಬ್ಬ ಆಗಿದ್ದು, ಟಾಕ್ಸಿಕ್ ಸಿನಿಮಾದ ರೊಮ್ಯಾಂಟಿಕ್ ಹಾಡು. ‘ತಬಾಹಿ’ಯಲ್ಲಿ ಕಿಯಾರಾನಾ ತಬ್ಬಿ ಮುದ್ದಾಡಿದ್ರು ಯಶ್.. ಆದ್ರೆ , ಸಿನಿಮಾದಲ್ಲಿ ಇನ್ನೂ ಏನೋ ಇದೆ ಅಂತ ಹೇಳಿದ್ದಾರೆ ಯಶ್!
06:10 PM (IST) Jul 31
06:07 PM (IST) Jul 31
Radhika Pandit Viral Photo: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಚಾರ ಸಖತ್ ಚರ್ಚೆಗೆ ಗ್ರಾಸವಾಗಿದೆ.
05:29 PM (IST) Jul 31
Vijayanagar 11A Canal: ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು.
05:20 PM (IST) Jul 31
05:03 PM (IST) Jul 31
04:41 PM (IST) Jul 31
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಗೃಹ ಯೋಜನೆಗಾಗಿ ಉದ್ದೇಶಿಸಿದ್ದ 164 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಹಿಂಪಡೆದಿದೆ.
04:20 PM (IST) Jul 31
04:19 PM (IST) Jul 31
ಭುವನ್ ಪೊನ್ನಣ್ಣ ಮೂರು ವರ್ಷಗಳ ಬ್ರೇಕ್ ಬಳಿಕ ‘ಬುಲ್ಲಿ’ ಸಿನಿಮಾ ಮಾಡುತ್ತಿದ್ದಾರೆ. ಸಮೃದ್ಧ್ ಸ್ಟುಡಿಯೋಸ್ ಮತ್ತು ಭುವನಂ ಎಂಟರ್‌ಟೇನ್‌ಮೆಂಟ್ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಅನೂಪ್ ಆ್ಯಂಟನಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಭುವನ್ ಮಾತು.
04:12 PM (IST) Jul 31
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಹಾನೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ, ಟೀಂ ಇಂಡಿಯಾ ಮಾಜಿ ನಾಯಕ ಅವರು ರಹಾನೆಗೆ ಅನ್ಯಾಯ ಮಾಡಿದ್ದಾರೆ ಮತ್ತು ಅವರನ್ನು ಉತ್ತಮವಾಗಿ ನಡೆಸಿಕೊಳ್ಳಬೇಕಿತ್ತು ಎಂದು ಆರೋಪಿಸಿದ್ದಾರೆ.
03:36 PM (IST) Jul 31
03:21 PM (IST) Jul 31
ಕೊತ್ತಲವಾಡಿ ಸಿನಿಮಾ ಮೂಲಕ ಕನ್ನಡಿಗರ ಮನೆಮನಕ್ಕೆ ಬಲಗಾಲಿಟ್ಟು ಬಂದಿದ್ದ ನಟಿ ಕಾವ್ಯಾ ಶೈವ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಹೃದಯದಲ್ಲಿ ಹರಿದಾಡುತ್ತಿದ್ದರು. ಆದ್ರೆ ಈಗ ಕಾವ್ಯಾ ಶೈವರ ಸಿನಿಮಾ ಇಲ್ಲ, ಕಿರುತೆರೆಯಲ್ಲಿಯೂ 'ದರ್ಶನ' ಇಲ್ಲ ಏಕೆ? ಈ ಸ್ಟೋರಿ ನೋಡಿ..
03:06 PM (IST) Jul 31
02:47 PM (IST) Jul 31
02:33 PM (IST) Jul 31
01:54 PM (IST) Jul 31
01:40 PM (IST) Jul 31
'ಕರಾವಳಿ' ಕೇವಲ ಸಿನಿಮಾ ಆಗಿ ಉಳಿಯದೆ ಒಂದು ಸಂಭ್ರಮವಾಗಿ ಮಾರ್ಪಟ್ಟಿದೆ. ಕಂಬಳದ ಕೋಣಗಳ ಓಟದಂತೆ ಬಾಕ್ಸ್ ಆಫೀಸ್‌ನಲ್ಲೂ ಊಹೆ ಮಾಡಿದ್ದಕ್ಕಿಂತ ಹೆಚ್ಚು ಗಳಿಕೆ ಮಾಡುತ್ತ ಮುನ್ನುಗ್ಗುತ್ತಿದೆ. 6 ದಿನಗಳಲ್ಲಿ ಈ ಸಿನಿಮಾ ಗಳಿಕೆ ಎಷ್ಟು? ಇಲ್ಲಿ ನೋಡಿ..
01:23 PM (IST) Jul 31
ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಹೋರಾಟ ತೀವ್ರಗೊಂಡಿದೆ. ಪ್ರತಿಭಟನೆ ತೀವ್ರಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 13ಕ್ಕೆ ಕರ್ನಾಟಕ ಬಂದ್ ಘೋಷಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
01:12 PM (IST) Jul 31
01:12 PM (IST) Jul 31
ನೀವು ಟೀ ಬಿಡಲು ನಿರ್ಧರಿಸಿದರೆ, ಒಮ್ಮೆಲೇ ನಿಲ್ಲಿಸುವ ಬದಲು ಹಂತ ಹಂತವಾಗಿ ಪ್ರಮಾಣ ಕಡಿಮೆ ಮಾಡಿ. ಟೀ ಬದಲಿಗೆ ಲಿಂಬೆ ಹಣ್ಣಿನ ನೀರು, ಎಳನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ಟ್ರೈ ಮಾಡಿ. ಈ ಪುಟ್ಟ ಬದಲಾವಣೆ ತಂದು ನೋಡಿ, ಫಲಿತಾಂಶ ಕಂಡು ನೀವೇ ಅಚ್ಚರಿ ಪಡುತ್ತೀರಿ!
12:43 PM (IST) Jul 31
12:42 PM (IST) Jul 31
ಆರೋಗ್ಯಕರ ಸಂಬಂಧ ಎಂದರೆ ಕನ್ನಡಿಯಂತೆ ಎಲ್ಲವನ್ನೂ ತೋರಿಸುವುದಲ್ಲ, ಬದಲಾಗಿ ಸಂಗಾತಿಯ ಗೌರವ ಮತ್ತು ನೆಮ್ಮದಿಗೆ ಧಕ್ಕೆ ಬಾರದಂತೆ ಬದುಕುವುದು. ಕೆಲವು ವಿಷಯಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳುವುದು ಸ್ವಾರ್ಥವಲ್ಲ, ಅದು ನಿಮ್ಮ ಲೈಫ್ & ಲವ್ ಸೀಕ್ರೆಟ್! ಅದು ಹೇಗೆ? ಈ ಸ್ಟೋರಿ ನೋಡಿ..
12:18 PM (IST) Jul 31
12:05 PM (IST) Jul 31
ಹೃದಯದ ಆರೋಗ್ಯವೇ ನಿಮ್ಮ ಬದುಕಿನ ಶಕ್ತಿ. ಎದೆಯಲ್ಲಿ ಸಣ್ಣ ಅಸಹಜತೆ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಮತ್ತು ಆಧುನಿಕ ಚಿಕಿತ್ಸೆ ಪಡೆಯುವುದು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನೆನಪಿಡಿ, ಹೃದಯದ ಬಗ್ಗೆ ಇರಲಿ ಎಚ್ಚರ!
11:55 AM (IST) Jul 31
10:54 AM (IST) Jul 31
10:53 AM (IST) Jul 31
ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿಗೆ ಬಿಗ್ ರಿಲಫ್ ಸಿಕ್ಕಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕನಿಗೆ ಸೆಷನ್ ಕೋರ್ಟ್ ಜಾಮೀನು ನೀರಾಕರಿಸಿತ್ತು. ಇದೀಗ ಹೈಕೋರ್ಟ್ ಜಾಮೀನು ನೀಡಿದೆ.
10:26 AM (IST) Jul 31