ಮಯಾಂಕ್ ಅವಮಾನಿಸಿದ ಕಮಂಟೇಟರ್‌ಗೆ ಟ್ವಿಟರಿಗರ ಮಂಗಳಾರತಿ!

Published : Dec 26, 2018, 06:08 PM IST
ಮಯಾಂಕ್ ಅವಮಾನಿಸಿದ ಕಮಂಟೇಟರ್‌ಗೆ ಟ್ವಿಟರಿಗರ ಮಂಗಳಾರತಿ!

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಭಾರತದ  ರಣಜಿ ಕ್ರಿಕೆಟ್ ಕುರಿತು ಅವಮಾನ ಮಾಡಿದ್ದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರನಿಗೆ ಟ್ವಿಟರಿಗರು ತಿರುಗೇಟು ನೀಡಿದ್ದಾರೆ.   

ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಮಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಅವಮಾನ ಮಾಡಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಮಯಾಂಕ್ ತ್ರಿಶತಕ ಸಿಡಿಸಿರೋದು ಯಾವುದೋ ಕ್ಯಾಂಟೀನ್ ಸಿಬ್ಬಂಧಿ ಅಥವಾ ಹೊಟೆಲ್ ವೈಟರ್ ವಿರುದ್ಧ ಎಂದು ಅವಮಾನ ಮಾಡಿದ್ದರು.

ಇದನ್ನೂ ಓದಿ: ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!

ಮಯಾಂಕ್ ಹಾಗೂ ಭಾರತ ರಣಜಿ ಟೂರ್ನಿಯನ್ನ ಅವಮಾನಿಸಿದ ಆಸಿಸ್ ವೀಕ್ಷಕ ವಿವರಣೆಗಾರನಿಗೆ ಮಯಾಂಕ್ 76 ರನ್ ಸಿಡಿಸಿ ಬ್ಯಾಟ್ ಮೂಲಕ ಉತ್ತರ ನೀಡಿದ್ದರು. ಇದೀಗ ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ. 

ಇದನ್ನೂ ಓದಿ: ಮಯಾಂಕ್ ಅಗರ್'ವಾಲ್ ಬ್ಯಾಟಿಂಗ್’ಗೆ ಮನಸೋತ ಟ್ವಿಟರಿಗರು

 

 

 

 

 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ