Ind Vs Aus

(Search results - 745)

Ravichandran Ashwin

CricketFeb 15, 2021, 1:57 PM IST

ಚೆನ್ನೈ ಟೆಸ್ಟ್: 5 ವಿಕೆಟ್‌, 50+ ರನ್‌; ಮತ್ತೊಂದು ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ರವಿಚಂದ್ರನ್‌ ಅಶ್ವಿನ್‌ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ 23.5 ಓವರ್‌ ಬೌಲಿಂಗ್‌ ಮಾಡಿ 4 ಮೇಡನ್ ಸಹಿತ ಕೇವಲ 43 ರನ್‌ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದರು.

Nirmala Sitharaman

CricketFeb 2, 2021, 9:11 AM IST

ಬಜೆಟ್‌ ವೇಳೆ ಟೀಂ ಇಂಡಿಯಾ ಸಾಧನೆ ನೆನಪಿಸಿಕೊಂಡ ವಿತ್ತ ಸಚಿವೆ

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಅದಾದ ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದ್ದರು.

Team India PM Modi

CricketJan 31, 2021, 5:08 PM IST

ಮನ್‌ ಕೀ ಬಾತ್‌ನಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಕಠಿಣ ಪರಿಶ್ರಮ ಹಾಗೂ ಅದ್ಭುತ ಟೀಂ ವರ್ಕ್‌ ಮೂಲಕ ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿ ಗೆಲುವನ್ನು ದಾಖಲಿಸಿದ ಅಜಿಂಕ್ಯ ರಹಾನೆ ನೇತೃದ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.

Bruce Oxenford

CricketJan 28, 2021, 5:22 PM IST

ಅಂತಾರಾಷ್ಟ್ರೀಯ ಅಂಪೈರಿಂಗ್‌ಗೆ ವಿದಾಯ ಘೋಷಿಸಿದ ಬ್ರೂಸ್‌ ಆಕ್ಸೆನ್‌ಫರ್ಡ್‌‌..!

60 ವರ್ಷದ ಬ್ರೂಸ್‌ ಆಕ್ಸೆನ್‌ಫರ್ಡ್‌ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಅಂಪೈರಿಂಗ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದೇ ವೇಳೆ ಆಸ್ಟ್ರೇಲಿಯಾದ ದೇಸಿ ಪಂದ್ಯಗಳಲ್ಲಿ ಅಂಪೈರಿಂಗ್ ಆಗಿ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Mohammed Siraj

CricketJan 28, 2021, 2:13 PM IST

ಜನಾಂಗೀಯ ನಿಂದನೆ ನಡೆದಿದ್ದು ನಿಜ ಆದ್ರೆ ತಪ್ಪಿತಸ್ಥರು ಸಿಕ್ಕಿಲ್ಲ!

ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕೆಲವು ಅಸೀಸ್‌ ಪ್ರೇಕ್ಷಕರು ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಆಧಾರದ ಮೇಲೆ ಕ್ರಿಕೆಟ್‌ ಆಸ್ಟ್ರೇಲಿಯಾವು ನ್ಯೂ ಸೌಥ್‌ ವೇಲ್ಸ್‌ ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿತ್ತು.

Thar SUVs

CricketJan 23, 2021, 5:31 PM IST

ಟೀಂ ಇಂಡಿಯಾದ 6 ಕ್ರಿಕೆಟಿಗರಿಗೆ SUV ಕಾರ್ ಗಿಫ್ಟ್ ಕೊಟ್ಟ ಆನಂದ್‌ ಮಹೀಂದ್ರ..!

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಐವರು ಆಟಗಾರರು ಸೇರಿದಂತೆ ಒಟ್ಟು 6 ಕ್ರಿಕೆಟಿಗರಿಗೆ ಮಹೀಂದ್ರ ಗ್ರೂಪ್‌ ಚೇರ್‌ಮನ್‌ ಆನಂದ್ ಮಹೀಂದ್ರ ಥಾರ್ SUV ಕಾರ್‌ಗಳನ್ನು ಗಿಫ್ಟ್‌ ನೀಡಿದ್ದಾರೆ.

4 ಪಂದ್ಯಗಳ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯನ್ನು ಅಜಿಂಕ್ಯ ರಹಾನೆ ಪಡೆ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟೆಸ್ಟ್‌ ಸರಣಿಯಲ್ಲಿ ಮಿಂಚಿದ ಯುವ ಪ್ರತಿಭಾನ್ವಿತ ಆಟಗಾರರಿಗೆ ಆನಂದ್ ಮಹೀಂದ್ರ ಬಂಪರ್ ಗಿಫ್ಟ್‌ ನೀಡಿದ್ದಾರೆ. ಆನಂದ್ ಮಹೀಂದ್ರ ಸೋಷಿಯಲ್‌ ಮೀಡಿಯಾದ ಮೂಲಕ 6 ಕ್ರಿಕೆಟಿಗರಿಗೆ ಥಾರ್‌ SUVs ನೀಡುವುದಾಗಿ ಘೋಷಿಸಿದ್ದಾರೆ.

Team India Google

CricketJan 23, 2021, 2:47 PM IST

ಗೂಗಲ್‌ನಲ್ಲಿ India National Cricket Team ಸರ್ಚ್‌ ಮಾಡಿ, ನಿಮಗೊಂದು ಸರ್ಪ್ರೈಸ್‌ ಇದೆ..!

ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ ಆ ಬಳಿಕ ರಹಾನೆ ನೇತೃತ್ವದ ಫಿನಿಕ್ಸ್‌ನಂತೆ ಗೆದ್ದು ಬಂದಿತ್ತು.
ಟೀಂ ಇಂಡಿಯಾದ ಈ ಗೆಲುವನ್ನು ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಲ್ಲೂ ಸಂಭ್ರಮಪಟ್ಟಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಟೀಂ ಇಂಡಿಯಾದ ಈ ಸಾಧನೆಗೆ ಜಗತ್ತಿನ ನಾನಾ ಮೂಲೆಗಳಿಂದ ಶಹಬ್ಬಾಸ್‌ಗಿರಿ ವ್ಯಕ್ತವಾಗಿದೆ. ಇದೀಗ ನೀವು ಗೂಗಲ್‌ನಲ್ಲಿ India National Cricket Team ಅಂತ ಸರ್ಚ್‌ ಮಾಡಿದರೆ, ನಿಮಗೂ ಅಚ್ಚರಿ ಕಾದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

pant

CricketJan 22, 2021, 4:38 PM IST

ದಿಗ್ಗಜ ಧೋನಿಗೆ ಹೋಲಿಕೆ ಮಾಡಬೇಡಿ ಎಂದ ರಿಷಭ್‌ ಪಂತ್‌

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 23 ವರ್ಷದ ಪಂತ್ ಆಕರ್ಷಕ 97 ರನ್‌ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಬ್ರಿಸ್ಬೇನ್‌ನಲ್ಲಿ ಪಂತ್ 89 ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಸ್ಮರಣೀಯ ಗೆಲುವನ್ನು ದಕ್ಕಿಸಿಕೊಟ್ಟಿದ್ದರು.

Mohammed Siraj

CricketJan 22, 2021, 8:53 AM IST

ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್‌!

ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್‌, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್‌ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್‌ ಅಂಪೈರ್‌ ಪೌಲ್‌ ರೀಫೆಲ್‌ ಮತ್ತು ಪೌಲ್‌ ವಿಲ್ಸನ್‌ ಅವರಿಗೆ ತಿಳಿಸಿದರು.

Ajinkya Rahane

CricketJan 21, 2021, 7:53 PM IST

ಕಾಂಗರೂ ಬೇಟೆಯಾಡಿದ ರಹಾನೆ ಪಡೆಗೆ ಅದ್ಧೂರಿ ಸ್ವಾಗತ..!

ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಅವರದ್ದೇ ನೆಲದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮಾತ್ರವಲ್ಲದೇ ಕೋಚ್ ರವಿಶಾಸ್ತ್ರಿ, ಶಾರ್ದೂಲ್ ಠಾಕೂರ್ ಹಾಗೂ ಪೃಥ್ವಿ ಶಾ ಕೂಡಾ ಮುಂಬೈಗೆ ಬಂದಿಳಿದಿದ್ದು ಎಲ್ಲರಿಗೂ ಒಂದು ವಾರಗಳ ಕಾಲ ಕ್ವಾರಂಟೈನ್‌ ವಿಧಿಸಲಾಗಿತ್ತು.

Australia

CricketJan 20, 2021, 2:23 PM IST

ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋಲಲಿದೆ; ಟೀಕಾಕಾರರ ಬಾಯಿ ಮುಚ್ಚಿಸಿದ ಯಂಗಿಸ್ತಾನ್‌..!

ಬೆಂಗಳೂರು: ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಕಾಂಗರೂ ನಾಡಿನಲ್ಲಿ ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ಎದುರು ವೈಟ್‌ವಾಷ್‌ ಆಗಲಿದೆ, ಹೀನಾಯ ಸೋಲು ಕಾಣಲಿದೆ ಎಂದೆಲ್ಲಾ ಭವಿಷ್ಯ ನುಡಿದಿದ್ದರು. ಆದರೆ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಬಳಿಕ ಫಿನಿಕ್ಸ್‌ನಂತೆ ಎದ್ದುಬರುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಯಾವೆಲ್ಲಾ ದಿಗ್ಗಜರು ಟೀಂ ಇಂಡಿಯಾ ಬಗ್ಗೆ ಏನೆಲ್ಲಾ ಹೇಳಿದ್ರು ಎನ್ನುವುದರ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ

cheteshwar pujara

CricketJan 20, 2021, 1:30 PM IST

ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ವಿನೂತನ ದಾಖಲೆ!

ನೇಥನ್‌ ಲಯನ್‌ ವಿರುದ್ಧ ಟೆಸ್ಟ್‌ನಲ್ಲಿ 500 ರನ್‌ ಪೂರೈಸಿದ ಪೂಜಾರ, ಕಳೆದ 20 ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಒಬ್ಬ ಬೌಲರ್‌ ವಿರುದ್ಧ 500ಕ್ಕೂ ಹೆಚ್ಚು ರನ್‌ ಬಾರಿಸಿದ ಕೇವಲ 2ನೇ ಬ್ಯಾಟ್ಸ್‌ಮನ್‌ ಎನ್ನುವ ಹಿರಿಮಗೆ ಪಾತ್ರರಾದರು.

Team India

CricketJan 20, 2021, 11:39 AM IST

ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್‌ 5 ರಿಯಲ್‌ ಹೀರೋಗಳಿವರು!

ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಯಂಗಿಸ್ತಾನ್‌ ಇತಿಹಾಸ ನಿರ್ಮಿಸಿದೆ.
ಆಸ್ಪ್ರೇಲಿಯಾದ ಸವಾಲನ್ನು ಮೀರಿ ಐತಿಹಾಸಿಕ ಸರಣಿ ಗೆಲುವಿಗೆ ಶ್ರಮಿಸಿದ ಭಾರತದ ಯುವ ಆಟಗಾರರು ತಮ್ಮ ನಿಜ ಜೀವನದಲ್ಲೂ ಅನೇಕ ಕಷ್ಟಗಳನ್ನು ಮೆಟ್ಟಿನಿಂತಿದ್ದಾರೆ.

Young India

Video Icon

CricketJan 20, 2021, 11:08 AM IST

ಬ್ರಿಸ್ಬೇನ್ ಟೆಸ್ಟ್‌ ಪಂದ್ಯವನ್ನು ಯಂಗ್ ಟೀಂ ಇಂಡಿಯಾ ಗೆದ್ದಿದ್ದು ಹೇಗೆ?

ಬ್ರಿಸ್ಬೇನ್ ಟೆಸ್ಟ್ ಪಂದ್ಯ ಜಯಿಸಲು ಭಾರತಕ್ಕೆ 328 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಶುಭ್‌ಮನ್‌ ಗಿಲ್‌, ಚೇತೇಶ್ವರ್ ಪೂಜಾರ ಹಾಗೂ ಕೊನೆಯಲ್ಲಿ ರಿಷಭ್ ಪಂತ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿತು. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆಲುವಿನ ವಿಶೇಷವೇನು ಎನ್ನುವುದರ ಕಂಪ್ಲೀಟ್ ವಿಶ್ಲೇಷಣೆ ಇಲ್ಲಿದೆ ನೋಡಿ.

Sourav Ganguly Team India

CricketJan 19, 2021, 2:20 PM IST

ಆಸೀಸ್‌ ನಾಡಲ್ಲಿ ಟೆಸ್ಟ್‌ ದಿಗ್ವಿಜಯ; ಟೀಂ ಇಂಡಿಯಾಗೆ ಭರ್ಜರಿ ಬೋನಸ್ ಘೋಷಿಸಿದ ದಾದಾ..!

ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಗೆಲ್ಲಲು 328 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅಲ್ಲದೇ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದಲೂ ಸೋಲಿನ ಕಹಿ ಉಂಡಿರಲಿಲ್ಲ.