ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ಆರಂಭದಲ್ಲಿ ಸೈಲೆಂಟ್ ಆಗಿದ್ದು ಬಳಿಕ ಅಬ್ಬರಿಸಿದೆ. ಈ ಮೂಲಕ 169 ರನ್ ಸಿಡಿಸಿದೆ. ಇದೀಗ ಈ ಅಲ್ಪ ಟಾರ್ಗೆಟನ್ನು ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ?
ಬೆಂಗಳೂರು(ಏ.02) ಆರ್‌ಸಿಬಿ ಫಾರ್ಮ್, ಕಳೆದೆರಡು ಪಂದ್ಯದಲ್ಲಿ ಗೆಲುವು ಮಾತ್ರವಲ್ಲ, ನೀಡಿದ ಪ್ರದರ್ಶನ, ಇದೀಗ ತವರಿನ ಮೈದಾನ, ಅಭಿಮಾನಿಗಳ ಬೆಂಬಲ. ಹೀಗೆ ಎಲ್ಲಾ ಲೆಕ್ಕಾಚಾರ ಮಾಡಿ ಹ್ಯಾಟ್ರಿಕ್ ಗೆಲುವಿನ ಅಲೆಯಲ್ಲಿದ್ದ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರ ಇರಲಿಲ್ಲ. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಪರದಾಡಬೇಕಾಯಿತು. ಆದರೆ ಅಂತಿಮ ಹಂತದ ಹೋರಾಟ ಆರ್‌ಸಿಬಿ ಕೈಹಿಡಿಯಿತು ಇದರ ಪರಿಣಾಮ ಆರ್‌ಸಿಬಿ 8 ವಿಕೆಟ್ ಕಳೆದುಕೊಂಡು 169 ರನ್ ಸಿಡಿಸಿದೆ.
ಗುಜರಾತ್ ಟೈಟಾನ್ಸ್‌ಗೆ ಆರ್‌ಸಿಬಿ 170 ರನ್ ಟಾರ್ಗೆಟ್ ನೀಡಿದೆ. ಈ ಟಾರ್ಗೆಟ್ ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುತ್ತಾ? ಚಿನ್ನಸ್ವಾಮಿ ಮೈದಾನದಲ್ಲಿ ಡಿಫೆಂಡ್ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಆರ್‌ಸಿಬಿ ಅತ್ಯಲ್ಪ ಮೊತ್ತವನ್ನು ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಡಿಫೆಂಡ್ ಮಾಡಿಕೊಂಡಿದೆ. ಆದರೆ ಈ ಬಾರಿ ಇದು ಸಾಧ್ಯವಾಗುತ್ತಾ ಅನ್ನೋದು ಯಕ್ಷ ಪ್ರಶ್ನೆ.
ಆರ್‌ಸಿಬಿ ಬ್ಯಾಟಿಂಗ್
ಕಳೆದೆರಡು ಪಂದ್ಯ ನೋಡಿ, 3ನೇ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ನೋಡಿದರೆ ನಿರಾಸೆಯಾಗುವುದು ಖಚಿತ. ಕಾರಣ ಇಂದು ಆರ್‌ಸಿಬಿ ಅಬ್ಬರಿಸುವ ಮೊದಲೇ ವಿಕೆಟ್ ಕೈಚೆಲ್ಲಿತು. ವಿರಾಟ್ ಕೊಹ್ಲಿ ಕೇವಲ 7 ರನ್ ಸಿಡಿಸಿ ಔಟಾಗಿದ್ದರು. ಪಿಲಿಫ್ ಸಾಲ್ಟ್ 14 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಕೇವಲ 4 ರನ್ ಸಿಡಿಸಿದರು. ನಾಯಕ ರಜತ್ ಪಾಟೀದಾರ್ 12 ರನ್ ಸಿಡಿಸಿ ಔಟಾದರು. 42 ರನ್‌ಗೆ ಆರ್‌ಸಿಬಿ 4 ವಿಕೆಟ್ ಕಳೆದುಕೊಂಡಿತ್ತು.
ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟದಿಂದ ಆರ್‌ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಹೊರಬಂದಿತು. ಜಿತೇಶ್ ಶರ್ಮಾ 33 ರನ್ ಸಿಡಿಸಿದರು. ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ಮುಂದುವರಿಸಿದರೆ, ಕ್ರುನಾಲ್ ಪಾಂಡ್ಯ ಅಬ್ಬರಸಿಲಿಲ್ಲ. 5 ರನ್ ಸಿಡಿಸಿ ನಿರ್ಗಮಿಸಿದರು.
ಲಿಯಾಮ್ ಲಿವಿಂಗ್ ಸ್ಟೋನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೆರವಾಯಿತು. ಅಂತಿಮ ಹಂತದಲ್ಲಿ ಆರ್‌ಸಿಬಿ ಅಬ್ಬರಿಸಿತು. ಲಿವಿಂಗ್‌ಸ್ಟೋನ್ 54 ರನ್ ಸಿಡಿಸಿದರು. ಇತ್ತ ಡೇವಿಡ್ 32 ರನ್ ಸಿಡಿಸಿದರು. ಈ ಮೂಲಕ 169 ರನ್ ಸಿಡಿಸಿತು.