ಗುಜರಾತ್ ಟೈಟಾನ್ಸ್ ವಿರುದ್ದ ವಿರಾಟ್ ಕೊಹ್ಲಿ ವಿಕೆಟ್ ಪತನ ಇದೀಗ ಹಲವು ರೋಚಕ ತಿರುವು ಪಡೆದುಕೊಂಡಿದೆ. ಕೆಲ ಅಭಿಮಾನಿಗಳು ಕೊಹ್ಲಿ ಔಟ್ ಮಾಡಿದ ವೇಗಿ ಅರ್ಶದ್ ಖಾನ್ ಬದಲು, ಬಾಲಿವುಡ್ ನಟ, ಅರ್ಶದ್ ವಾರ್ಸಿ ಟಾರ್ಗೆಟ್ ಮಾಡಿದ್ದಾರೆ. ಇದು ಗೊಂದಲದಿಂದ ಆಗಿದೆಯೋ, ಉದ್ದೇಶಪೂರ್ವಕ ಟಾರ್ಗೆಟ್?
ಬೆಂಗಳೂರು(ಏ.03) ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೋಲು ಕಂಡಿದೆ. ಅದು ಕೂಡ ತವರಿನಲ್ಲಿ ಅನ್ನೋದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ದ ಆರ್‌ಸಿಬಿ ನಿರೀಕ್ಷಿತ ಬ್ಯಾಟಿಂಗ್ ಮಾಡಲು ವಿಫಲಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 7 ರನ್ ಸಿಡಿಸಿ ವೇಗಿ ಅರ್ಶದ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿದ್ದರು. ಈ ಪಂದ್ಯದ ಸೋಲಿನ ಬಳಿಕ ಕೆಲವರು ವೇಗಿ ಅರ್ಶದ್ ಖಾನ್ ಬದಲು ಬಾಲಿವುಡ್ ನಟ ಅರ್ಶದ್ ವಾರ್ಸಿ ಟಾರ್ಗೆಟ್ ಮಾಡಿದ್ದಾರೆ. ಕೊಹ್ಲಿ ಔಟ್ ಮಾಡಿದ್ದೇಕೆ ಎಂದು ಪ್ರಶ್ನಸಿದ್ದಾರೆ. ಸೋಶಿಯಲ್ ಮೀಡಿಯಾದ ಈ ವಾದ ವಿವಾದ ಇದೀಗ ಮೀಮ್ಸ್ ಆಗಿ ಬದಲಾಗಿದೆ. ಇಷ್ಟೇ ಅಲ್ಲ ಹಲವು ಜೋಕ್ ಹರಿದಾಡುತ್ತಿದೆ.
ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಹಲವರು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟ ಅರ್ಶದ್ ವಾರ್ಸಿಯನ್ನು ಪ್ರಶ್ನಿಸಿದ್ದಾರೆ. ಕೊಹ್ಲಿಯನ್ನು ಔಟ್ ಮಾಡಿದ್ದೇಕೆ? ನಟ ಅರ್ಶದ್ ವಾರ್ಸಿಯ ಇತ್ತೀಚೆಗಿನ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೆಲವರು ಕಮೆಂಟ್ ಮಾಡಿದ್ದಾರೆ. ಅಜಯ್ ದೇವಗನ್ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಅರ್ಶದ್ ವಾರ್ಸಿ, ಶೂಟಿಂಗ್ ಕುರಿತು ಹೇಳಿಕೊಂಡಿದ್ದಾರೆ. ಅತ್ಯಂತ ಅಪಾಯಕಾರಿ ಸ್ಟಂಟ್ ಸೀನ್ ಅಜಯ್ ದೇವಗನ್ ಮಾಡಿದ್ದಾರೆ. 15 ದಿನದ ಶೂಟಿಂಗ್ ಯಾವುದೇ ಅಡ್ಡಿ ಆತಂಕವಿಲ್ಲದೆ ಮುಗಿದಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ವಿರಾಟ್ ಕೊಹ್ಲಿ ಔಟ್ ಮಾಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ನನ್ನ ಕೋಣೆಯಲ್ಲಿರುವ ಸುಂದರ ಯುವತಿ ನನ್ನ ಗರ್ಲ್‌ಫ್ರೆಂಡ್, ರಿಲೇಶನ್‌ಶಿಪ್ ಖಚಿತಪಡಿಸಿದ ಶಿಖರ್ ಧವನ್
ಈ ಕಮೆಂಟ್ ವ್ಯಕ್ತವಾಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಮುನ್ನಾ ಭಾಯಿಗೆ ಹೇಳುತ್ತೇನೆ, ಕೊಹ್ಲಿ ಔಟ್ ಮಾಡಿದ್ದೇಕೆ ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಶಿಕ್ಷಣ ಅತೀ ಅಗತ್ಯ ಯಾಕೆ ಅನ್ನೋದು ಇದಕ್ಕೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಆದರೆ ಇದೇ ವೇಳೆ ಮತ್ತೊಂದು ವಾದವೂ ಮುನ್ನಲೆಗೆ ಬಂದಿದೆ. ಆರ್‌ಸಿಬಿ ಅಭಿಮಾನಿಗಳು ಈ ರೀತಿ ಕಮಂಟ್ ಮಾಡಲು ಸಾಧ್ಯವಿಲ್ಲ ಅನ್ನೋ ವಾದವೂ ಹುಟ್ಟಿಕೊಂಡಿದೆ. ಅರ್ಶದ್ ವಾರ್ಸಿಯನ್ನು ಟ್ಯಾಗ್ ಮಾಡಿ ಕಮೆಂಟ್ ಮಾಡಿದ್ದೂ ನಂಬಬಹುದು. ಆದರೆ ಇಲ್ಲಿ ಅರ್ಶದ್ ವಾರ್ಸಿ ಪೋಸ್ಟ್‌ಗೆ ಕಮೆಂಟ್ ಮಾಡಲಾಗಿದೆ. ಇದು ಆರ್‌ಸಿಬಿ ಸೋಲು ಸಂಭ್ರಮಿಸುವ ಹಾಗೂ ಅಭಿಮಾನಿಗಳಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಗೆ ಭಾರತದಲ್ಲಿ ಎಷ್ಟು ಭಾಷೆಗಳಿವೆ, ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ, ಯಾರು ನಟರು, ಯಾರು ಕ್ರಿಕೆಟಿಗರು ಅನ್ನೋ ಅರಿವಿದೆ. ಒಂದೇ ಭಾಷೆ ಹಿಡಿದು ಭಾವಿಯೊಳಗಿನ ಕೂಪ ಮಂಡೂಕವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಉದ್ದೇಶಪೂರ್ವಕವಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಕೆಟ್ಟ ಹೆಸರು ತರಲು ಮಾಡಿದ ಪ್ರಯತ್ನ. ಆರ್‌ಸಿಬಿ ಕಳೆದ 17 ಆವೃತ್ತಿಗಳಲ್ಲಿ ಸೋಲಿನ ಪರಾಕಾಷ್ಠೆ ನೋಡಿದೆ. ಪ್ರಶಸ್ತಿ ಗೆದ್ದಿಲ್ಲ. ಆದರೆ ಆರ್‌ಸಿಬಿ ಅಭಿಮಾನಿಗಳು ಹದ್ದು ಮೀರಿಲ್ಲ. ಅನಕ್ಷರಸ್ತರು ಅಲ್ಲ. ಹೀಗಾಗಿ ಇಂತ ಪ್ರಯತ್ನಗಳ ಮೂಲಕ ಅಭಿಮಾನಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಆರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಸೂಚನೆ ನೀಡಿದೆ. ಆರಂಭಿಕ 2 ಪಂದ್ಯ ಗೆದ್ದು 3ನೇ ಪಂದ್ಯ ಸೋತಿದೆ. ಒಂದು ಪಂದ್ಯದ ಸೋಲು ಆರ್‌ಸಿಬಿ ಅಭಿಮಾನಿಗಳನ್ನುಯಾವತ್ತೂ ದೃತಿಗೆಡಿಸಲ್ಲ ಅನ್ನೋದು ನಿಜ. ಈ ಬಾರಿ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 59 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಪಂದ್ಯದಲ್ಲಿ ಕೊಹ್ಲಿ 31 ರನ್ ಸಿಡಿಸಿದ್ದರು. ಆದರೆ ಗುಜರಾತ್ ಟೈಟಾನ್ಸ್ ವಿರುದ್ದ ಕೇವಲ 7 ರನ್ ಸಿಡಿಸಿದ್ದರು.
ಬೆಂಗಳೂರು: RCB ಅಭಿಮಾನಿಗಳ 7 ಮೊಬೈಲ್ ಕದ್ದ ಇಬ್ಬರು ಕಳ್ಳರನ್ನು ಹಿಡಿದ ಭದ್ರತಾ ಸಿಬ್ಬಂದಿ!