ಬೆಂಗಳೂರು: ಹೈಕಮಾಂಡ್‌ನವರು ಡಿಕೆ ಶಿವಕುಮಾರ್ ಮತ್ತು ನನಗೂ ಕಾಲ್ ಮಾಡಿದ್ದರು. ನೀವಿಬ್ಬರು ಭೇಟಿ ಮಾಡಿ ಅಂತಾ ಹೇಳಿದ್ದಾರೆ. ಅದಕ್ಕೆ ನಾನು ಅವನಿಗೆ ಬ್ರೇಕ್ ಫಾಸ್ಟ್ ಗೆ ಕರೆದಿದ್ದೇನೆ. ಅಲ್ಲಿಗೆ ಬಂದಾಗ ಇಬ್ಬರು ಚರ್ಚೆ ಮಾಡುತ್ತೇವೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ನವರು ಹೇಳಿದಂತೆ ನಾನು ಕೇಳ್ತೇನೆ ಎಂದಿದ್ದೇನೆ. ಇವಾಗ್ಲೂ ಅದೇ ಹೇಳ್ತೇನೆ, ನಾಳೆಗೂ ಅದೇ ಹೇಳ್ತೇನೆ. ಅವರು ಕೂಡ ಅನೇಕ ಬಾರಿ ಹೇಳಿದ್ದಾರೆ. ಒಂದು ವೇಳೆ ದೆಹಲಿಗೆ ಕರೆದರೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಶಾಸಕ ಬೇಲೂರು ಸುರೇಶ್ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

11:34 PM (IST) Nov 29
ಸರ್ಕಾರಿ ಉದ್ಯೋಗ, ವಯೋಮಿತಿ ಸಡಿಲಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳು ಆಯೋಜಿಸಿದ್ದ 'ಧಾರವಾಡ ಚಲೋ' ಬೃಹತ್ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಪ್ರತಿಭಟನೆಯ ರೂಪುರೇಷೆಗಳಲ್ಲಿನ ಅಸ್ಪಷ್ಟತೆ ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
11:12 PM (IST) Nov 29
10:29 PM (IST) Nov 29
ಮುಸ್ಲಿಂ ಮುಖಂಡ ಸಾದಿಕ್, ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಸಮುದಾಯ ಡಿಕೆಶಿ ಮುಖ ನೋಡಿ ಮತ ಹಾಕಿದ್ದು, ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
10:01 PM (IST) Nov 29
ಬೆಂಗಳೂರು ಮೂಲದ ರಾಕೇಶ್ ಎಂಬುವವರು ತಮ್ಮ ಕಾರ್ಪೋರೇಟ್ ಕೆಲಸವನ್ನು ತೊರೆದು ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಜೀವನದಲ್ಲಿ ಹತಾಶರಾಗಿ ಮತ್ತೆ ಹೊಸದಾಗಿ ಪ್ರಾರಂಭಿಸಿದ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
10:01 PM (IST) Nov 29
ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಭೋಪಾಲ್‌ನಲ್ಲಿ 'ದಬ್ಬಾಳಿಕೆ ನಡೆದಾಗಲೆಲ್ಲಾ ಜಿಹಾದ್ ಇರುತ್ತದೆ' ಎಂದು ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಇದನ್ನು 'ವೈಟ್-ಕಾಲರ್ ಭಯೋತ್ಪಾದನೆ' ಎಂದ ಬಿಜೆಪಿ
09:35 PM (IST) Nov 29
09:06 PM (IST) Nov 29
ಭಾರತವು ತನ್ನ ಭೂಕಂಪ ವಲಯ ನಕ್ಷೆಯನ್ನು ನವೀಕರಿಸಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಹಿಮಾಲಯವನ್ನು ಹೊಸದಾಗಿ ರಚಿಸಲಾದ ಅತಿ ಅಪಾಯಕಾರಿ 'ಆರನೇ ವಲಯ'ಕ್ಕೆ ಸೇರಿಸಿದೆ. ಈ ಹೊಸ ನಕ್ಷೆಯ ಪ್ರಕಾರ, ದೇಶದ 61% ಭೌಗೋಳಿಕ ಪ್ರದೇಶವು ಮಧ್ಯಮದಿಂದ ಹೆಚ್ಚಿನ ಭೂಕಂಪದ ಅಪಾಯದಲ್ಲಿದೆ.
08:54 PM (IST) Nov 29
Russian tanker attack Black Sea: ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್'ಗೆ ಸೇರಿದ 'ಕೈರೋಸ್' ಮತ್ತು 'ವಿರಾಟ್' ತೈಲ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಹೊಣೆ ಉಕ್ರೇನ್ ಹೊತ್ತುಕೊಂಡಿದ್ದು, ಇದು ರಷ್ಯಾದ ತೈಲ ರಫ್ತಿಗೆ ಗಮನಾರ್ಹ ಅಡ್ಡಿಯುಂಟುಮಾಡಿದೆ.
08:37 PM (IST) Nov 29
ಹರ್ಯಾಣದ ವಿಶ್ವವಿದ್ಯಾಲಯವೊಂದರಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಿನ ರಜೆ ನೀಡಲು ಸಾಕ್ಷಿ ಕೇಳಿದ ಪ್ರಕರಣಕ್ಕೆ ಸುಪ್ರೀಂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳೆಯರ ಘನತೆ, ಆರೋಗ್ಯ, ಗೌಪ್ಯತೆ ರಕ್ಷಿಸಲು ದೇಶಾದ್ಯಂತ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ನಿರ್ಧರಿಸಿದೆ.
08:22 PM (IST) Nov 29
08:05 PM (IST) Nov 29
07:46 PM (IST) Nov 29
ದಾವಣಗೆರೆಯ ಕೆಟಿಜೆ ನಗರದಲ್ಲಿ, ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ ನಿವೃತ್ತರಾಗಿದ್ದ ಅವರ ಈ ದುರಂತ ಅಂತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
06:02 PM (IST) Nov 29
05:54 PM (IST) Nov 29
05:17 PM (IST) Nov 29
04:55 PM (IST) Nov 29
ಕಳೆದ 45 ತಿಂಗಳಲ್ಲಿ ಬೆಂಗಳೂರಿನಲ್ಲಿ 53,252 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ವಂಚಕರು 4,341 ಕೋಟಿ ರೂ. ಲಪಟಾಯಿಸಿದ್ದಾರೆ. ಉದ್ಯಮಿಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ.
04:55 PM (IST) Nov 29
ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಲಾಯಿತು.
04:34 PM (IST) Nov 29
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಅವರ ಆಗಮನಕ್ಕೂ ಮುನ್ನ ದೇಗುಲದ ಆವರಣದಲ್ಲಿ ಹೆಜ್ಜೇನು ದಾಳಿಯಿಂದಾಗಿ ಕೆಲಕಾಲ ಆತಂಕದ ವಾತಾವರಣ
04:07 PM (IST) Nov 29
03:35 PM (IST) Nov 29
ಬಂಡಾಯ ಸಾಹಿತಿ ಹಾಗೂ ಕಾಂಗ್ರೆಸ್ ಮುಖಂಡೆ ಬಿ.ಟಿ. ಲಲಿತಾ ನಾಯಕ್ ಅವರ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರ ಸಂಕಿರಣವೊಂದರಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
02:39 PM (IST) Nov 29
ಕೆಪಿಟಿಸಿಎಲ್ ಕೈಗೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ನವೆಂಬರ್ 30ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟಿನಮ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
01:00 PM (IST) Nov 29
01:00 PM (IST) Nov 29
BBK 12 Episode Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ಕಿಚ್ಚ ಸುದೀಪ್ ಅವರು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಇದೆ. ಅತಿಥಿಗಳು ಬಂದಿದ್ದು, ಅವರ ವರ್ತನೆ ಅತಿರೇಕ ಆಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
12:59 PM (IST) Nov 29
ಬಾಲಕೃಷ್ಣ ಅವರು ತಮ್ಮ ಪತ್ನಿಯ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಪತ್ನಿ ಹೇಳಿದ ಮಾತನ್ನು ಬಹಿರಂಗಪಡಿಸಿದ್ದಾರೆ. ತಾನು ಆಕೆಗೆ ಮಾತ್ರವೇ ನಿಷ್ಠನಾಗಿರುವುದಕ್ಕೆ ಆಕೆ ಖುಷಿಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
12:28 PM (IST) Nov 29
Mahanati Gagana on Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಎಂದರೆ ಗಿಲ್ಲಿ ನಟ ಎನ್ನುವ ಮಟ್ಟಕ್ಕೆ ಗಿಲ್ಲಿ ನಟ ಅವರು ಆಟ ಆಡುತ್ತಿದ್ದಾರೆ. ಪ್ರತಿ ದಿನವೂ 50% ಅವರ ಫುಟೇಜ್ ಪ್ರಸಾರ ಆಗುವುದು. ಪಕ್ಕಾ ಮನರಂಜನೆ ಕೊಡುವ ಸ್ಪರ್ಧಿ ಬಗ್ಗೆ ಗಗನಾ ಮಾತನಾಡಿಲ್ಲ.
12:27 PM (IST) Nov 29
ಗೋವಾದಲ್ಲಿ ಶುಕ್ರವಾರ ನಡೆದ 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದರು. ಆ ಬಳಿಕ ಅವರು ಏನು ಮಾತನಾಡಿದರು ಎಂಬುದನ್ನು ನೋಡೋಣ.
11:30 AM (IST) Nov 29
10:59 AM (IST) Nov 29
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಬ್ರೇಕ್‌ಫಾಸ್ಟ್ ಸಭೆ ಮುಕ್ತಾಯಗೊಂಡಿದೆ. ಹೈಕಮಾಂಡ್ ಸೂಚನೆಯಂತೆ ಮುಂದುವರಿಯಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
10:52 AM (IST) Nov 29
10:51 AM (IST) Nov 29
10:36 AM (IST) Nov 29
09:54 AM (IST) Nov 29
ತಾಲೂಕಿನ ಅಭಿವೃದ್ಧಿ ಗುದ್ದಲಿ ಹಿಡಿದು ತಿರುಗಿ ಬಡಾಯಿ ಕೊಚ್ಚಿಕೊಂಡರೆ ಆಗುವುದಿಲ್ಲ. ನಿಮಗೆ ತಾಲೂಕಿನ ಅಭಿವೃದ್ಧಿ ಬಗ್ಗೆ ನಿಜವಾಗಿ ಚಿಂತೆ ಇದ್ದರೆ ಮೊದಲು ಬಿಕ್ಕೋಡು ರಸ್ತೆ ದುರಸ್ತಿ ಮಾಡಿಸಿ ಎಂದು ಮಾಜಿ ಸಚಿವ ಬಿ.ಶಿವರಾಂ ಗುಟುರು ಹಾಕಿದರು.
09:36 AM (IST) Nov 29
07:05 AM (IST) Nov 29
ರಾಜ್ಯದ ಅಧಿಕಾರ ಹಂಚಿಕೆ ತಿಕ್ಕಾಟ ಪರಿಹಾರಕ್ಕೆ ಕಾಂಗ್ರೆಸ್ ವರಿಷ್ಠರ ಸಭೆ ಭಾನುವಾರ ದೆಹಲಿಯಲ್ಲಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಬ್ರೇಕ್ ಫಾಸ್ಟ್ ಮೀಟಿಂಗ್ ಫಲಿತಾಂಶವನ್ನು ಆಧರಿಸಿದೆ.