ರೈನಾ ಕಹಾನಿಗೆ ಹೊಸ ಟ್ವಿಸ್ಟ್, ರಮ್ಯಾಗೆ ಸಾಕಾಯ್ತಾ ಪಾಲಿಟಿಕ್ಸ್?ಆ.31ರ ಟಾಪ್ 10 ಸುದ್ದಿ!

By Suvarna NewsFirst Published Aug 31, 2020, 4:44 PM IST
Highlights

ಐಪಿಎಲ್ ಟೂರ್ನಿಗಾಗಿ ದುಬೈ ತೆರಳಿದ್ದ ಸುರೇಶ್ ಕಾರಣ ದಿಢೀರ್ ತವರಿಗೆ ವಾಪಸ್ ಆಗಿದ್ದರು. ಇದೀಗ ಈ ಕಹಾನಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಚೀನಾ ಅಪ್ರಚೋದಿತ ದಾಳಿಯನ್ನು ಭಾರತೀಯ ಸೇನೆ ತಡೆದಿದೆ. ಭ್ರಷ್ಟ ಹಾಗೂ ಅದಕ್ಷ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಕೇಂದ್ರ ಮುಂದಾಗಿದೆ. ಅವಕಾಶಕ್ಕಾಗಿ ರೇವ್ ಪಾರ್ಟಿ, ಡ್ರಗ್ಸ್ ಸ್ಯಾಂಡಲ್‌ವುಡ್‌ನಲ್ಲಿ ಅನಿವಾರ್ಯವಾಗಿದೆ ಎಂದ ನಟಿ. ಸಿನಿಮಾದತ್ತ ನಟಿ ರಮ್ಯಾ, ಚಿನ್ನದ ದರ ಇಳಿಕೆ ಸೇರಿದಂತೆ ಆಗಸ್ಟ್ 31ರ ಟಾಪ್ 10 ಸುದ್ದಿ ಇಲ್ಲಿವೆ.
 

ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!...

ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯುವ ಸಾಧ್ಯತೆಗಳು ಕ್ಷೀಣಿಸಿವೆ. ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದ ಭಾರತೀಯ ಸೇನೆ ಪ್ರಯತ್ನಿಸುತ್ತಿದೆ. ಆದರೆ ಇದೀಗ ಚೀನಾ ಸೇನೆ ಮತ್ತೆ ಪ್ಯಾಂಗಾಂಗ್ ಸರೋವರದ ಬಳಿ ಮತ್ತೆ ಕಿರಿಕ್ ಮಾಡಿ ಯಥಾ ಸ್ಥಿತಿ ನಿಮಯ ಉಲ್ಲಂಘಿಸಿದೆ. ಆದರೆ ಭಾರತೀಯ ಸೇನೆ ಚೀನಾ ಯತ್ನವನ್ನು ವಿಪಳಗೊಳಿಸಿದೆ.

ದೇಶದಲ್ಲಿ ಹಾರಾಡಿತು ಪಾಕಿಸ್ತಾನ ಬಾವುಟ, ಆರೋಪಿ ಅರೆಸ್ಟ್!...

ಸೋಶಿಯಲ್ ಮೀಡಿಯಾದಲ್ಲಿ ಕಟ್ಟಡವೊಂದರ ವಿಡಿಯೋ ಭಾರೀ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಈ ಕಟ್ಟಡದ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿರುವ ದೃಶ್ಯವಿದೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಈ ಕಟ್ಟಡ ಇಂದೋರ್ ಹಾಗೂ ದೇವಾಸ್‌ನ ನಡುವೆ ಶಿಪ್ರಾ ಇಲಾಖೆಯಲ್ಲಿ ಇದೆ ಎಂದು ತಿಳಿದು ಬಂದಿದೆ. ಇದಾಧ ಬಳಿಕ ದೂರು ದಾಖಲಿಸಿದ ಪೊಲೀಸರು ಕಟ್ಟಡ ಮಾಲೀಕನನ್ನು ಬಂಧಿಸಿದ್ದಾರೆ. ಜೊತೆಗೆ ಪಾಖಿಸ್ತಾನ ಧ್ವಜವನ್ನೂ ವಶಪಡಿಸಿಕೊಂಡಿದ್ದಾರೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್‌ಗೆ ಒಂದು ರುಪಾಯಿ ದಂಡ!...

ಸುಪ್ರೀಂಕೋರ್ಟ್‌ ಹಾಗೂ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಆಕ್ಷೇಪಾರ್ಹ ಟ್ವೀಟ್‌ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ವಕೀಲ ಮತ್ತು ಹೋರಾಟಗಾರ ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂ ಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದೆ. 

ಭ್ರಷ್ಟ, ಅದಕ್ಷ ಸರ್ಕಾರಿ ನೌಕರರಿಗೆ ಮೋದಿ ಶಾಕ್: ಕೇಂದ್ರದ ಆದೇಶಕ್ಕೆ ಸಿಬ್ಬಂದಿ ತತ್ತರ!...

ಭ್ರಷ್ಟ ಹಾಗೂ ಅದಕ್ಷ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಂತಹ ನೌಕರರ ಪಟ್ಟಿತಯಾರಿಸುವಂತೆ ಎಲ್ಲಾ ಇಲಾಖೆಗಳಿಗೆ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಸುರೇಶ್ ರೈನಾ ಕಹಾನಿಗೆ ಮತ್ತೊಂದು ಟ್ವಿಸ್ಟ್; ಜಗಳ ಮಾಡಿಕೊಂಡು ಹೊರ ಬಂದ್ರಾ ಸಿಎಸ್‌ಕೆ ಬ್ಯಾಟ್ಸ್‌ಮನ್.!...

ಸುರೇಶ್ ರೈನಾ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ತವರಿಗೆ ತವರಿಗೆ ವಾಪಾಸಾಗಿರುವ ಕುರಿತಂತೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಡ್ರಗ್ಸ್, ರೇವು ಪಾರ್ಟಿ, ಆಡಿಶನ್ ಚಾನ್ಸ್, ಕಾಂಪ್ರಮೈಸ್ ಬಗ್ಗೆ ಕರಾಳ ಮುಖ ಬಿಚ್ಚಿಟ್ಟ ನಟಿ!...

'ನಟಿಯರಿಗೆ ಚಾನ್ಸ್ ಸಿಗಬೇಕೆಂದರೆ ರೇವು ಪಾರ್ಟಿ, ಪಬ್‌ಗಳಲ್ಲಿ ಕಾಣಿಸಿಕೊಳ್ಳಬೇಕು. ಇಲ್ಲದಿದ್ದರೆ ಚಾನ್ಸ್ ಸಿಗಲ್ಲ. ಇದು ನನ್ನ ಅನುಭವಕ್ಕೂ ಬಂದಿದೆ. ನಾವು ಚೆನ್ನಾಗಿ ಆಡಿಶನ್ ಕೊಟ್ಟರೂ ಸಹ ನಮಗೆ ಅವಕಾಶವೇ ಸಿಗುವುದಿಲ್ಲ. ದೊಡ್ಡ ದೊಡ್ಡ ಬ್ಯಾನರ್‌ಗಳಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಮಧ್ಯವರ್ತಿಗಳೇ ಹೆಚ್ಚಾಗಿರುತ್ತಾರೆ. ಇದನ್ನೆಲ್ಲಾ ದಾಟಿ, ಪಾರ್ಟಿಗಳನ್ನು, ಪಬ್‌ಗಳನ್ನು ಅಟೆಂಡ್ ಮಾಡಿದರೆ ಮಾತ್ರ ಅವಕಾಶ ಸಿಗುತ್ತದೆ. ಕೋ ಆರ್ಡಿನೇಟರ್‌ಗಳನ್ನು ಚೆನ್ನಾಗಿಟ್ಟುಕೊಂಡರೆ ಮಾತ್ರ ಬೇಗ ರೀಚ್ ಆಗಬಹುದು' ಎಂದು ಚಿತ್ರಲ್ ಹೇಳಿದ್ದಾರೆ. 

ಮರಳುತ್ತಿರುವ ರಮ್ಯಾ; ನೋ ಪಾಲಿಟಿಕ್ಸ್‌, ಕೊಂಚ ಅಧ್ಯಾತ್ಮ, ಬಹುಶಃ ಸಿನಿಮಾ!...

ನಟನೆಯಿಂದ ರಾಜಕಾರಣಕ್ಕೆ ಹೋಗಿ ಈಗ ಅಲ್ಲೂ ಕೂಡ ಸಕ್ರಿಯವಾಗಿಲ್ಲದ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆಯೇ? ಹೀಗೊಂದು ಪ್ರಶ್ನೆ ಎದ್ದಿದೆ. ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲೂ ಚರ್ಚೆ ಆಗುತ್ತಿದೆ. ಕಾಂಗ್ರೆಸ್‌ನ ಐಟಿ ಸೆಲ್‌ ಜವಾಬ್ದಾರಿಯಿಂದ ದೂರವಾದ ಬಳಿಕ ರಮ್ಯಾ ಕೆಲ ಕಾಲ ಎಲ್ಲಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆದರೆ, ಈಗ ಬಂದಿರುವ ಮಾಹಿತಿಯಂತೆ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ

ಪೇಟಿಎಂ ಮಾಲ್‌ ಡೇಟಾ ಹ್ಯಾಕ್!...

ಭಾರತದ ಪ್ರಮುಖ ಇ-ಕಾಮರ್ಸ್‌ ಪಾವತಿ ವ್ಯವಸ್ಥೆ ಹಾಗೂ ಹಣಕಾಸು ಸಂಸ್ಥೆಯಾದ ಪೇಟಿಎಂ ಮಾಲಿಕತ್ವದ ಪೇಟಿಎಂ ಮಾಲ್‌ನ ದತ್ತಾಂಶಕ್ಕೆ ಸೈಬರ್‌ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ. ಮಾಹಿತಿಯನ್ನು ಮರಳಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೊರೋನಾತಂಕ ನಡುವೆ ಹೀಗಿದೆ ಚಿನ್ನದ ದರ, ಈಗ ಖರೀದಿಸಿದ್ರೆ ಲಾಭ!...

ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ನಲುಗಿಸಿದೆ. ಜನ ಸಾಮಾನ್ಯರ ಬದುಕನ್ನೇ ಬದಲಾಯಿಸಿರುವ ಈ ವೈರಸ್ ಆರ್ಥಿಕ ಪರರಿಸ್ಥಿತಿಯನ್ನೂ ಹದಗೆಡಿಸಿದೆ. ಉದ್ಯಮಗಳು ನೆಲ ಕಚ್ಚಿವೆ.  ಕೊರೋನಾ ಮಹಾಮಾರಿ ಆತಂಕ ಹುಟ್ಟಿಸಿದ್ದರೂ ಚಿನ್ನ, ಬೆಳ್ಳಿ ದರ ಮಾತ್ರ ಯಾವುದೇ ಅಡೆ ತಡೆ ಇಲ್ಲದೇ ಏರುತ್ತಾ ಸಾಗಿತ್ತು. ಆದರೀಗ 55 ಸಾವಿರ ಗಡಿ ದಾಟಿದ್ದ ಚಿನ್ನದ ದರ ಇಳಿಯಲಾರಂಭಿಸಿದ್ದು, 50 ಸಾವಿರಕ್ಕಿಂತ ಕಡಿಮೆಯಾಗಿದೆ. 

ಸುದೀರ್ಘ ವರ್ಷ ಭಾರತೀಯರ ಪ್ರೀತಿಗೆ ಪಾತ್ರವಾದ ಕಾರುಗಳ ಲಿಸ್ಟ್!

ಸದ್ಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕಾರಗಳು ಗರಿಷ್ಠ 6 ರಿಂದ 8 ವರ್ಷ ಚಾಲ್ತಿಯಲ್ಲಿರುತ್ತದೆ. 100 ತಿಂಗಳ ಬಳಿಕ ಹೊಸ ಮಾಡೆಲ್ ಕಾರು ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಭಾರತದ ಕಾರು ಮಾರುಕಟ್ಟೆಯಲ್ಲಿ ಸುದೀರ್ಘ ವರ್ಷಗಳ ಕಾಲ ಅಗ್ರಜನಾಗಿ ಮೆರೆದು ಅದೇ ಬೇಡಿಕೆಯ್ನು ಉಳಿಸಿಕೊಂಡ ಕೆಲ ಕಾರುಗಳಿವೆ. ಈ ಕಾರುಗಳು ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಬರೆದಿದೆ. 

click me!