ಇವಿಎಂ ವಿರುದ್ಧ ಭಾರತ್‌ ಜೋಡೋ ರೀತಿ ರ್‍ಯಾಲಿ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Nov 27, 2024, 4:58 AM IST

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ತಿರುಚಿದ ಕುರಿತು ಮಹಾ ಅಘಾಡಿ ಒಕ್ಕೂಟದ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಮಾದರಿ ಅಭಿಯಾನ ನಡೆಸಬೇಕೆಂದು ಸಲಹೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 
 


ನವದೆಹಲಿ(ನ.27):  ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ವಿಪಕ್ಷಗಳ ಗಂಭೀರ ಆರೋಪದ ನಡುವೆಯೇ, ಇವಿಎಂ ಸಾಕು, ಹಿಂದಿನಂತೆ ಮತಪತ್ರ ಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ತಿರುಚಿದ ಕುರಿತು ಮಹಾ ಅಘಾಡಿ ಒಕ್ಕೂಟದ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಮಾದರಿ ಅಭಿಯಾನ ನಡೆಸಬೇಕೆಂದು ಸಲಹೆ ನೀಡಿದ್ದಾರೆ. 

Latest Videos

undefined

ಬಿಜೆಪಿ ಆರೆಸ್ಸೆಸ್ ವಿಷಕಾರಿ ಹಾವು ಇದ್ದಂತೆ, ದೇಶಕ್ಕೆ ಅತ್ಯಂತ ಅಪಾಯಕಾರಿ: ಖರ್ಗೆ ವಾಗ್ದಾಳಿ

ಸಂವಿಧಾನ ರಕ್ಷಣಾ ಅಭಿಯಾನದ ಭಾಗ ವಾಗಿ ಮಂಗಳವಾರ ಇಲ್ಲಿ ಆಯೋಜಿತ ಕಾಠ್ಯಕ್ರಮದಲ್ಲಿ ಮಹಾರಾಷ್ಟ್ರ ಚುನಾ ವಣೆಯ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಖರ್ಗೆ, 'ಬಿಲಿಯನೇರ್‌ ಉದ್ಯಮಿ ಗೌತಮ್ ಅದಾನಿಗೆ ಈ ಚುನಾವಣೆ ಸಾಕಷ್ಟು ಮಹತ್ವದ್ದಾಗಿತ್ತು, ಏಕೆಂದರೆ ಅವರ ಭಾರೀ ಸಂಪತ್ತು ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಹೀಗಾಗಿ ಇಂಥ ವರನ್ನು ದೂರ ಸರಿಸಲು ನಾವೆಲ್ಲಾ ಒಂದಾಗ ಬೇಕಾದ ಅವಶ್ಯಕತೆ ಇದೆ' ಎಂದು ಹೇಳಿದರು. 

ಇದೇ ವೇಳೆ, 'ನಾನು ಚುನಾವಣೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.ಆದರೆ ಬಡವರು ಹಾಗೂ ದಮನಿತರ ಮತಗಳು ವ್ಯರ್ಥವಾಗಿ ಹೋಗುತ್ತಿವೆ ಎಂಬುದನ್ನು ಖಚಿತವಾಗಿ ಹೇಳ ಬಲ್ಲೆ. ಹೀಗಾಗಿ ಅವರೆಲ್ಲಾ ಇವಿಎಂ ಬೇಡ, ಮತಯಂತ್ರ ಬೇಕು ಎಂಬ ಆಗ್ರಹ ಮಾಡಬೇಕು, ಇವಿಎಂಗಳನ್ನು ಅವರೇ (ಬಿಜೆಪಿ)ಇಟ್ಟುಕೊಳ್ಳಲಿ, ನಮಗೆ ಇವಿಎಂ ಬೇಕಾಗಿಲ್ಲ, ನಾವು ಮತಪತ್ರ ಗಳನ್ನು ಬಯ ಸುತ್ತೇವೆ. ಆಗ ಬಿಜೆಪಿ ಯಾವ ಸ್ಥಾನದಲ್ಲಿದೆ ಎಂಬುದು ತಿಳಿಯುತ್ತದೆ' ಎಂದು ಹೇಳಿದರು.

ಜೊತೆಗೆ, ನಮ್ಮ ಪಕ್ಷದಿಂದ ನಾವು ಇವಿಎಂ ಬದಲು ಮತಪತ್ರ ಬೇಕು ಎಂದು ಜನರಲ್ಲಿ ಅರಿವು ಮೂಡಿಸುವ ಅಭಿಯಾನ ಆರಂಭಿಸಬೇಕು. ಈ ಬಗ್ಗೆ ನಾನು ಇತರೆ ಪಕ್ಷಗಳೊಂದಿಗೂ ಮಾತುಕತೆ ನಡೆಸುತ್ತೇನೆ. ಈ ಹಿಂದೆ ಭಾರತ್ ಜೋಡೋ ಅಭಿಯಾನ ನಡೆಸಿದಂತೆ ಈ ವಿಷಯದಲ್ಲೂ ಅಭಿಯಾನ ಆರಂಭಿಸಬೇಕು ಎಂದು ನಾನು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುತ್ತೇನೆ' ಎಂದು ಖರ್ಗೆ ಹೇಳಿದರು.

ಇವಿಎಂ ಸಾಕು, ಮತಪತ್ರ ಬೇಕು ಬಡವರು ಹಾಗೂ ದಮನಿತರ ಮತಗಳು ವ್ಯರ್ಥವಾಗಿ ಹೋಗುತ್ತಿವೆ. ಹೀಗಾಗಿ ಅವರೆಲ್ಲಾ ಇವಿಎಂ ಬೇಡ, ಮತಯಂತ್ರ ಬೇಕು ಎಂಬ ಆಗ್ರಹ ಮಾಡಬೇಕು, ಇವಿಎಂಗಳನ್ನು ಅವರೇ (ಬಿಜೆಪಿ) ಇಟ್ಟುಕೊಳ್ಳಲಿ, ನಾವು ಮತಪತ್ರಗಳನ್ನು ಬಯಸುತ್ತೇವೆ. ಆಗ ಬಿಜೆಪಿ ಯಾವ ಸ್ಥಾನದಲ್ಲಿದೆ ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ಇವಿಎಂ ರದ್ದತಿ ಕೋರಿದ ಅರ್ಜಿ ಸುಪ್ರೀಂನಲ್ಲಿ ವಜಾ

ನವದೆಹಲಿ: ದೇಶದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಬಳಕೆ ನಿಲ್ಲಿಸಬೇಕು ಮತ್ತು ಪುರಾತನ ಪೇಪರ್‌ ಬ್ಯಾಲೆಟ್ ಮತದಾನ ಪದ್ದತಿಗೆ ಮರಳಲು ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಮನ ವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಹಾಗೂ 'ಚುನಾವಣೆಯಲ್ಲಿ ಸೋತಾಗ ಮಾತ್ರ ರಾಜಕಾರಣಿಗಳು ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಾರೆ' ಎಂದು ಕಿಡಿಕಾರಿದೆ. 

ಅನಾಥರು ಹಾಗೂ ವಿಧವೆಯರ ರಕ್ಷಣೆಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ ವಿ.ಕೆ. ಪೌಲ್ ಎಂಬುವರು 2 ವಿಷಯಗಳ ಬಗ್ಗೆ ಅರ್ಜಿ ಸಲ್ಲಿಸಿ, 'ಇವಿಎಂ ಬಳಕೆ ನಿರ್ಬಂಧಿಸ ಬೇಕು ಹಾಗೂ ಚುನಾವಣೆ ವೇಳೆ ಹಣ, ಮ ದ್ಯ ಹಂಚುವ ಅಭ್ಯರ್ಥಿಯನ್ನು ಸ್ಪರ್ಧೆಯಿಂದ 5 ವರ್ಷ ನಿಷೇಧಿಸಬೇಕು' ಕೋರಿದ್ದರು. 

ಈ ಅರ್ಜಿಯ ವಾದದ ವೇಳೆ ಪೌಲ್ ಅವರು, 'ಇವಿಎಂ ಸರಿಯಿಲ್ಲ. ಅವನ್ನು ತಿರುಚಬಹುದು ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಮಾಜಿ ಸಿಎಂ ಜಗನ್ನೋಹನ ರೆಡ್ಡಿ ಹೇಳಿದ್ದರು' ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಈ ಹಿಂದೆ ನಾಯ್ಡು ಸೋತಾಗ ಇವಿಎಂ ಸರಿಯಿಲ್ಲ ಎಂದಿದ್ದರು. ಆದರೆ ಇಂದು ನಾಯ್ಡು ಗೆದ್ದಿದ್ದಾರೆ ಹಾಗೂ ಜಗನ್ ಸೋತಿದ್ದಾರೆ. ಇಂದು ಜಗನ್ ರೆಡ್ಡಿ ಹೇಳಿದ್ದರು' ಎಂದು ವಾದಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಈ ಹಿಂದೆ ನಾಯ್ಡು ಸೋತಾಗ ಇವಿಎಂ ಸರಿಯಿಲ್ಲ ಎಂದಿದ್ದರು. ಆದರೆ ಇಂದು ನಾಯ್ಡು ಗೆದ್ದಿದ್ದಾರೆ ಹಾಗೂ ಜಗನ್ ಸೋತಿದ್ದಾರೆ. ಇಂದು ಜಗನ್ ಈ ಆರೋಪ ಮಾಡುತ್ತಿದ್ದಾರೆ. ಏನಾಗುತ್ತಿದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂ ಟ್ಯಾಂಪರಿಂಗ್‌ ಆಗಿರುವುದಿಲ್ಲ.ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಟ್ಯಾಂಪ ರಿಂಗ್ ಆಗಿರುತ್ತವೆ. ಸೋತಾಗ ಮಾತ್ರ ಇವಿಎಂಗಳವಿರುದ್ಧ ಆರೋಪಕೇಳಿಬರುತ್ತವೆ' ಎಂದು ನ್ಯಾ| ವಿಕ್ರಮ್ ನಾಥ್ ಮತ್ತು ನ್ಯಾ| ಪಿ.ಬಿ. ವರಾಳೆ ಅವರ ಪೀಠವು ಟೀಕಿಸಿತು.

ಮಹತ್ವದ ಬೆಳವಣಿಗೆ, ಎಲ್ಲಾ ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದೆಹಲಿಗೆ ಮರಳಿದ ಅಮಿತ್ ಶಾ!

ಇದೇ ವೇಳೆ ಅರ್ಜಿದಾರರಿಗೆ ಚಾಟಿ ಬೀಸಿದ ಪೀಠ, 'ನಿಮ್ಮ ಬಳಿ ಆಸಕ್ತಿದಾಯಕ ಪಿಐಎಲ್‌ಗಳಿವೆ. ಈ ಅದ್ಭುತ ವಿಚಾರಗಳನ್ನು ನೀವು ಹೇಗೆ ಪಡೆಯುತ್ತೀರಿ?' ಎಂದೂ ಕಿಚಾಯಿಸಿತು. 'ನೀವು (ಅರ್ಜಿದಾರರು) 3 ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಸ್ಥೆಯ ಅಧ್ಯಕ್ಷರು ಎಂದು ಹೇಳಿಕೊಳ್ಳುತ್ತೀರಿ. ಆದರೆ ಈ ರಾಜಕೀಯ ಕ್ಷೇತ್ರಕ್ಕೆ ಏಕೆ ಬರುತ್ತಿದ್ದೀರಿ? ನಿಮ್ಮ ಕೆಲಸದ ಕ್ಷೇತ್ರವೇ ಬೇರೆ' ಎಂದು ಮರುಪ್ರಶ್ನೆ ಹಾಕಿತು. ಇದೇ ವೇಳೆ ಪೌಲ್, ತಾವು 150 ದೇಶ ಸುತ್ತಿದ್ದಾಗಿ ಹೇಳಿ, ಅಲ್ಲಿ ಇವಿಎಂ ಇಲ್ಲ. ಬ್ಯಾ ಲೆಟ್ ಪೇಪರ್‌ಇದೆ ಎಂದು ವಾದಿಸಿದರು. 

ಇದಕ್ಕೆ ತಿರುಗೇಟು ನೀಡಿದ ಪೀಠ, 'ಎಲ್ಲ ದೇಶಗಳಲ್ಲಿ ಇದ್ದಿದ್ದೇ ಇಲ್ಲೂ ಇರಬೇಕು ಎಂದು ಏಕೆ ಬಯಸುತ್ತೀರಿ? ನೀವು ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿರಲು ಏಕೆ ಬಯಸು ವುದಿಲ್ಲ?' ಎಂದು ಕೇಳಿತು. ಇನ್ನು, 'ಚುನಾವಣೆ ವೇಳೆ ಭ್ರಷ್ಟಾಚಾರ ನಡೆದಿದೆ. 9000 ಕೋಟಿ ರು.ಗಳನ್ನು 2024ರ ಚುನಾವಣೆ ವಶಪಡಿಸಿಕೊಂಡಿದಾಗಿ ವೇಳೆ ಆಯೋಗವೇ ಹೇಳಿದೆ' ಎಂದು ಪೌಲ್ ಹೇಳಿ ದರು. ಆಗ ಪೀಠವು, 'ಇವಿಎಂ ನಿರ್ಬಂಧಿಸಿ ಬ್ಯಾಲೆಟ್ ಪೇಪ‌ರ್ ಮರುಜಾರಿ ಮಾಡಿದರೆ ಭ್ರಷ್ಟಾಚಾರ ನಿಲ್ಲುತ್ತದೆಯೇ?' ಎಂದು ಪೀಠ ಪ್ರಶ್ನಿಸಿತು. 

click me!