ದೇಶದಲ್ಲಿ ಹಾರಾಡಿತು ಪಾಕಿಸ್ತಾನ ಬಾವುಟ, ಆರೋಪಿ ಅರೆಸ್ಟ್!
ಮನೆ ಮೇಲೆ ಪಾಕ್ ಬಾವುಟ ಹಾರಿಸಿದ್ರು| ವೈರಲ್ ವಿಡಿಯೋ ನೋಡಿ ತನಿಖೆಗಿಳಿದ ಪೊಲೀಸ್| ಆರೋಪಿ ಅರೆಸ್ಟ್, ಕೊಟ್ಟ ಕಾರಣವೂ ಅಷ್ಟೇ ಬಾಲಿಶ
ಇಂದೋರ್(ಆ.31): ಸೋಶಿಯಲ್ ಮೀಡಿಯಾದಲ್ಲಿ ಕಟ್ಟಡವೊಂದರ ವಿಡಿಯೋ ಭಾರೀ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಈ ಕಟ್ಟಡದ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿರುವ ದೃಶ್ಯವಿದೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಈ ಕಟ್ಟಡ ಇಂದೋರ್ ಹಾಗೂ ದೇವಾಸ್‌ನ ನಡುವೆ ಶಿಪ್ರಾ ಇಲಾಖೆಯಲ್ಲಿ ಇದೆ ಎಂದು ತಿಳಿದು ಬಂದಿದೆ. ಇದಾಧ ಬಳಿಕ ದೂರು ದಾಖಲಿಸಿದ ಪೊಲೀಸರು ಕಟ್ಟಡ ಮಾಲೀಕನನ್ನು ಬಂಧಿಸಿದ್ದಾರೆ. ಜೊತೆಗೆ ಪಾಖಿಸ್ತಾನ ಧ್ವಜವನ್ನೂ ವಶಪಡಿಸಿಕೊಂಡಿದ್ದಾರೆ.
ಚೀನಾ ಪಾಲ್ಗೊಳ್ಳುವ ರಷ್ಯಾದ ಸಮರಾಭ್ಯಾಸಕ್ಕೆ ಭಾರತ ಗೈರು!
ಲಭ್ಯವಾದ ಮಾಹಿತಿ ಅನ್ವಯ ಶಿಪ್ರಾ ಬಳಿಯ ಫಾರೂಕ್ ಎಂಬವರ ಮನೆಯಲ್ಲಿ ಈ ಧ್ವಜ ಹಾರುತ್ತಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಭಾರೀ ಸಂಚಲನ ಮೂಡಿಸಿದೆ. ಕೂಡಲೇ ರಾಯಭಾರಿ ಅಧಿಕಾರಿಗಳು ಸಿಬ್ಬಂದಿ ಜೊತೆ ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು ಇವರ ವಿರುದ್ಧ 153ಎ ಸೆಕ್ಷನ್ ಅಡಿ ದೂರು ದಾಖಲಿಸಿದ್ದಾರೆ. ಬಂಧಿತ ಆರೋಪಿ ಫಾರೂಖ್ ಖಾನ್‌ನನ್ನು ನ್ಯಾಯಾಲಯದೆದುರು ಹಾಜರುಪಡಿಸಿದ ಬಳಿಕ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿ ಲಖನ್ ಸಿಂಗ್ 'ಫಾರೂಕ್ ಎಂಬಾತನ ಮನೆ ಛಾವಣಿ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿತ್ತು. ಈ ಕುರಿತು ಆತನನ್ನು ಪ್ರಶ್ನಿಸಿದಾಗ ಈ ಬಾವುಟವನ್ನು 12 ವರ್ಷದ ಬಾಲಕ ತಿಳಿಯದೆ ಹಾರಿಸಿದ್ದಾನೆ ಎಂದಿದ್ದಾನೆ. ಆದರೆ 12 ವರ್ಷದ ಬಾಲಕ ಛಾವಣಿ ಮೇಲೆ ಅಷ್ಟು ಎತ್ತರಕ್ಕೆ ಬಾವುಟ ಹಾರಿಸಲು ಹೇಗೆ ಸಾಧ್ಯ? ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ' ಎಂದು ತಿಳಿಸಿದ್ದಾರೆ.