ಮಕ್ಕಳನ್ನು ಪಾಸ್ ಮಾಡಿ ಎಂದ ಸಿದ್ದು, ಟೀಕಾಕಾರರಿಗೆ ಗೌಡರ ಗುದ್ದು: ಅ.9ರ ಟಾಪ್ 10 ಸುದ್ದಿ!

By Suvarna News  |  First Published Oct 9, 2020, 5:10 PM IST

ವಿಕಿರಣ ವಿರೋಧಿ ಕ್ಷಿಪಣಿ ರುದ್ರಂ-1 ಪರೀಕ್ಷೆ ಯಶಸ್ವಿಯಾಗಿದ್ದು, ಇದೀಗ ವಿರೋಧಿಗಳಿಗೆ ನಡುಕು ಶುರುವಾಗಿದೆ. ಈ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಯನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ವೆರ್ನಾನ್ ಫಿಲಾಂಡರ್ ಅವರ ಸೋದರರನ್ನು ಹತ್ಯೆ ಮಾಡಲಾಗಿದೆ. ತಪ್ಪು ಹುಡುಕೋದೇ ನನ್ನ ಕೆಲಸವಲ್ಲ ಎಂದು ಟೀಕಾಕಾರಿಗೆ ದೇವೇಗೌಡ ತಿರುಗೇಟು, ಕಿಚ್ಚ ಸುದೀಪ್ ಹೊಸ ಲುಕ್ ಸೇರಿದಂತೆ ಅಕ್ಟೋಬರ್ 9ರ ಟಾಪ್ 10 ಸುದ್ದಿ ಇಲ್ಲಿವೆ.


ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!...

Latest Videos

undefined

ಭಾರತದ ಗಡಿಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದಂತೆ ಇತ್ತ ಸೇನೆಯ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರಮುಖವಾಗಿ ವಾಯುಸೇನೆಗೆ ಅತ್ಯಾಧುನಿಕ ಫೈಟರ್ ಜೆಟ್, ಮಿಸೈಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ. ಇದೀಗ ವಾಯುಸೇನೆಗೆ ಮತ್ತೊಂದು ಶಸ್ತಾಸ್ತ್ರ ಸೇರಿಕೊಳ್ಳುತ್ತಿದೆ.  ರುದ್ರಂ ವಿಕಿರಣ ವಿರೋಧಿ ಕ್ಷಿಪಣಿ ಯಶಸ್ವಿ ಪ್ರಯೋಗ ನಡೆಸಲಾಗಿದೆ

ರಾತ್ರೋ ರಾತ್ರಿ ವೈರಲ್ ಆದ ಬಾಬಾ ಕಾ ಧಾಬಾ ಈಗ ಝೊಮ್ಯಾಟೋದಲ್ಲೂ ಲಭ್ಯ...

ದೆಹಲಿಯ ಬಾಬಾ ಕಾ ಧಾಬಾ ವಿಡಿಯೋ ವೈರಲ್ ಆಗಿದ್ದೇ ತಡ ಅವರಿಗೆ ನೆರವಿನ ಮಹಾಪೂರ ಸಿಕ್ಕಿದೆ. ಬಹಳಷ್ಟು ಜನ ಗ್ರಾಹಕರು ಸಿಕ್ಕಿದ್ದಾರೆ. ಇತ್ತೀಚಿನ ಬೆಳವಣಿಗೆಯಂತೆ ಈ ಡಾಬಾ ಝೊಮೆಟೋದಲ್ಲಿಯೂ ಲಭ್ಯವಾಗಿದೆ.

ಅಣ್ಣಾಮಲೈ ಬಿಜೆಪಿ ಪ್ರವೇಶಿಸಿದ್ದೇಕೆ? ಗುಟ್ಟು ಬಿಚ್ಚಿಟ್ಟ ಸಿಟಿ ರವಿ...

ದಶಕಗಳ ಕಾಲದಿಂದ ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತದಲ್ಲಿ ಕಮಲ ಅರಳಿಸಲು  ನಿರಂತರ ಯತ್ನ ಮಾಡಿಕೊಂಡೆ ಬಂದಿದೆ. ಕರ್ನಾಟಕದಲ್ಲಿ ಯಶಸ್ಸು ಸಾಧಿಸಿ ಸರ್ಕಾರ ರಚನೆ ಮಾಡಿದೆ. ಆದರೆ ಉಳಿದ ರಾಜ್ಯಗಳಲ್ಲಿ ಅಧಿಕಾರದ ಸಮೀಪಕ್ಕೆ ಹೋಗಲು ಸಾಧ್ಯವಾಗಿಲ್ಲ.

ಶಾಲೆ ಆರಂಭ ಬೇಡ, ಎಲ್ಲರನ್ನು ಪಾಸ್ ಮಾಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ...

ಕೊರೋನಾ ಭೀತಿಯ ನಡುವೆಯೇ ಶಾಲಾ ಆರಂಭಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಈ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. 

ಬಲಿಷ್ಠ ಡೆಲ್ಲಿಗಿಂದು ರಾಜಸ್ಥಾನ ಸವಾಲು; 4ನೇ ಸೋಲಿನ ಭೀತಿಯಲ್ಲಿ ಸ್ಮಿತ್ ಪಡೆ...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 23ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಕಾದಾಡಲಿದೆ. 

ವೆರ್ನಾನ್ ಫಿಲಾಂಡರ್ ಸೋದರನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು..!...

ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ವೆರ್ನಾನ್ ಫಿಲಾಂಡರ್ ಅವರ ಕಿರಿಯ ಸಹೋದರನನ್ನು ಅಪರಿಚಿತರು ಹತ್ಯೆ ಮಾಡಿದ ಘಟನೆ ನಡೆದಿದೆ.

ವಯಸ್ಸಾದ ಲುಕ್ಕಲ್ಲಿ ಕಿಚ್ಚ ಸುದೀಪ್; ಜಾಹಿರಾತಿನಲ್ಲೂ ಫುಲ್ ಡಿಫರೆಂಟ್...

ಬ್ಯಾಕ್‌ ಟು ಬ್ಯಾಕ್ ಶೂಟಿಂಗ್‌ ಎಂದು ಕಿಚ್ಚನ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ವಯಸ್ಸಾದ ಲುಕ್‌ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಮೋದಿ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ: ದೇವೇಗೌಡ...

ಜೆಡಿಎಸ್‌ ಬಗ್ಗೆ, ತಮ್ಮ ಹಾಗೂ ತಮ್ಮ ಕುಟುಂಬದವರ ಬಗ್ಗೆ ರಾಜಕೀಯವಾಗಿ ಯಾರೇ ಲಘುವಾಗಿ ಮಾತನಾಡಿದರೂ ಸಹ ಅದನ್ನೆಲ್ಲ ವಿಶ್ಲೇಷಣೆ ಮಾಡುತ್ತ ಕೂರೋದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮುಕೇಶ್‌ ಅಂಬಾನಿ ಆಸ್ತಿ ಒಂದೇ ವರ್ಷದಲ್ಲಿ 73% ವೃದ್ಧಿ...

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಸತತ 13ನೇ ವರ್ಷವೂ ದೇಶದ ನಂ.1 ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ 2020ನೇ ಸಾಲಿನ ದೇಶದ 100 ಕುಬೇರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಕೇಶ್‌ ಅಂಬಾನಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!...

ಯುವಜನತೆಗೆ ಆಕರ್ಷಕ ಉತ್ಪನ್ನಗಳನ್ನು ತರುವ ಮತ್ತು ಮುಂಬರುವ ಹಬ್ಬದ ಸಮಯದಲ್ಲಿ ರೋಮಾಂಚನವನ್ನು ಸೃಷ್ಟಿಸುವ ಉದ್ದೇಶದಿಂದ, ವಿಶ್ವದ ಅತಿದೊಡ್ಡ ಸ್ಕೂಟರ್ ಮತ್ತು ಮೋಟಾರ್ ಸೈಕಲ್‍ಗಳ ಉತ್ಪಾದಕರಾದ ಹೀರೊ ಮೋಟೊಕಾರ್ಪ್, ಇಂದು ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ಅನ್ನು ಪರಿಚಯಿಸುತ್ತಿದೆ.

click me!