ಮಂಜ್ರೇಕರ್‌ಗೆ ಕೈತಪ್ಪಿದ IPL ಕಾಮೆಂಟ್ರಿ, ರಾಗಿಣಿಗೆ ಕೇಸ್‌ಗೆ ED ಎಂಟ್ರಿ; ಸೆ.6ರ ಟಾಪ್ 10 ಸುದ್ದಿ!

By Suvarna NewsFirst Published Sep 6, 2020, 4:59 PM IST
Highlights

ಡ್ರಗ್ಸ್ ವ್ಯವಾಹರದಲ್ಲಿ ಸಿಲುಕಿ ಸಿಸಿಬಿ ಪೊಲೀಸರ ತನಿಖೆ ಎದುರಿಸುತ್ತಿರುವ ನಟಿ ರಾಗಿಣಿ ಇದೀಗ ಅಕ್ರಮ ಹಣ ವರ್ಗಾಣೆ ಆರೋಪದಡಿ ಇಡಿ ಅಧಿಕಾರಿಗಳು ತನಿಖೆಗೆ ಎದುರಿಸಬೇಕಿದೆ. ದೌರ್ಜನ್ಯ ಪ್ರಕರಣದಲ್ಲಿ ಬಿಗ್‌ ಬಾಸ್ ಸ್ಪರ್ಧಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಬೃಹತ್‌ ಕೊರೋನಾ ಆರೈಕೆ ಕೇಂದ್ರ ಬಂದ್‌ ಮಾಡಲು ಬಿಬಿಎಂಪಿ ಸೂಚನೆ ನೀಡಿದೆ. ಐಪಿಎಲ್‌ನಿಂದ ಸಂಜಯ್ ಮಂಜ್ರೇಕರ್‌ ಔಟ್,  ಸುಶಾಂತ್ ಸಿಂಗ್ ಸಾವಿನಲ್ಲಿ ಬೆಂಗಳೂರು ನಂಟು ಸೇರಿದಂತೆ ಸೆಪ್ಬೆಂಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಮ ಮಂದಿರ ನಕ್ಷೆಗೆ ಗ್ರೀನ್ ಸಿಗ್ನಲ್, ಭೂಮಿ ಅಗೆಯಲು ಅಯೋಧ್ಯೆಗೆ ಯಂತ್ರಗಳ ಎಂಟ್ರಿ!...

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಭವ್ಯ ರಾಮ ಮಂದಿರದ ನಕ್ಷೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಶ್ರೀರಾಮನ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ. ಎಲ್ಲಕ್ಕಿಂತ ಮೊದಲು ಮಂದಿರ ನಿರ್ಮಿಸಲು ಅಡಿಪಾಯ ಹಾಕಲು ಭೂಮಿ ಅಗೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಮನೂರಿಗೆ ದೊಡ್ಡ ದೊಡ್ಡ ಯಂತ್ರಗಳು ಎಂಟ್ರಿ ಕೊಟ್ಟಿವೆ.


ಡ್ರಗ್ಸ್‌ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ: ನಟಿ ರಾಗಿಣಿಗೆ ಇ.ಡಿ. ಉರು​ಳು?...

ಮಾದಕ ವಸ್ತು ಜಾಲದ ಸುಳಿಗೆ ಸಿಲುಕಿರುವ ನಟಿ ರಾಗಿಣಿ ದ್ವಿವೇದಿಗೆ ಈಗ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಸಂಕಷ್ಟ ಎದುರಾಗುವ ಸಾಧ್ಯತಗಳಿವೆ ಎನ್ನಲಾಗಿದೆ.

ದೌರ್ಜನ್ಯ ಕೇಸ್ : ಬಿಗ್‌ ಬಾಸ್ ಸ್ಪರ್ಧಿ ಅರೆಸ್ಟ್...

ಬಿಗ್‌ ಬಾಸ್ ಸ್ಪರ್ಧಿಯೋರ್ವರು ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಉಡುಪಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.


ಬೆಂಗಳೂರಿನ ಬೃಹತ್‌ ಕೊರೋನಾ ಆರೈಕೆ ಕೇಂದ್ರ ಬಂದ್‌: ಕಾರಣ..?...


ತುಮಕೂರು ರಸ್ತೆಯ ಮಾದಾವರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೋವಿಡ್‌ ರೋಗಿಗಳ ಆರೈಕೆಗೆ ನಿರ್ಮಿಸಲಾಗಿದ್ದ 6000 ಹಾಸಿಗೆಗಳ ಕೋವಿಡ್‌ ನಿಗಾ ಕೇಂದ್ರವನ್ನು ಮುಚ್ಚಲು ಬಿಬಿಎಂಪಿ ಶನಿವಾರ ಆದೇಶ ಹೊರಡಿಸಿದೆ.

ಐಪಿ​ಎಲ್‌ ಕಾಮೆಂಟ್ರಿಗೆ ಇಲ್ಲ ಮಾಂಜ್ರೇ​ಕರ್‌!...

13ನೇ ಆವೃತ್ತಿಯ ಐಪಿ​ಎಲ್‌ಗೆ ವೀಕ್ಷಕ ವಿವ​ರಣೆಗಾರರ ಪಟ್ಟಿ​ಯನ್ನು ಬಿಸಿ​ಸಿಐ ಸಿದ್ಧಪ​ಡಿ​ಸಿದ್ದು, ವಿವಾ​ದಾ​ತ್ಮಕ ಕಾಮೆಂಟೇ​ಟರ್‌ ಸಂಜ​ಯ್‌ ಮಾಂಜ್ರೇ​ಕರ್‌ರನ್ನು ಕೈಬಿ​ಡ​ಲಾ​ಗಿದೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ.

ರಾಗಿಣಿ ಮತ್ತು ಇತರ ಅಮಲಿನ ಕತೆಗಳು!ಮದ್ಯ ಹಳೇದು, ಮದ್ದು ಹೊಸದು...

ಪೇಜ್‌ ಥ್ರೀ ಪಾರ್ಟಿ ನಟಿಯರೆಂದೇ ಹೆಸರಾದ ಕೆಲವರು ಸಿನಿಮಾ ಪಾರ್ಟಿಗಳಿಂದಾಚೆಗೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಕಾರ್ಪೊರೆಟ್‌, ಪೊಲಿಟಿಕಲ್‌, ಬಿಸಿನೆಸ್‌ ಮತ್ತು ತಮಗೆ ಸಂಬಂಧವಿಲ್ಲದ ಬರ್ತ‚ಡೇ ಪಾರ್ಟಿಗಳಲ್ಲೂ ಅವರು ಮಿಂಚತೊಡಗಿದರು.

ಆಹಾ ಚಿನ್ನ....! ಸೆ. 6ರ ಬಂಗಾರ ಬೆಲೆ ನೋಡಮ್ಮಾ...!...

ಕಳೆದೆರಡು ದಿನಗಳಿಂದ ಕೊಂಚ ಕೊಂಚವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ತಜ್ಞರ ಮಾತು ನಿಜವಾಗಿದೆ. ಕೊರೋನಾತಂಕ ನಡುವೆ ಚಿನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ ದರ ಮಾತ್ರ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. 

ಭಾರತದಲ್ಲಿ ಚೇತರಿಸಿಕೊಂಡ ಆಟೋ ಸೇಲ್ಸ್, ಮಾರುತಿಗೆ ಮೊದಲ ಸ್ಥಾನ!

ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ದೇಶದ ವಾಹನ ಮಾರಾಟ ಸಂಪೂರ್ಣ ಕುಸಿತ ಕಂಡಿತ್ತು. ಆದರೆ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ನಿಧಾನವಾಗಿ ಚೇತರಿಕೆ ಕಾಣಲು ಆರಂಭಿಸಿದೆ. ಆಗಸ್ಟ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ. ವಿಶೇಷ ಅಂದರೆ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 

ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು...

ಕೊರೋನಾದಿಂದ ಸ್ಥಗಿತಗೊಂಡಿದ್ದ 1,40,640 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಶರುವಾಗಿದೆ. ಇದರಿಂದ ಅರ್ಜಿ ಹಾಕಿದ್ದ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

ಸುಶಾಂತ್ ಸಿಂಗ್‌ ಸಾವಿಗೂ ಬೆಂಗ್ಳೂರಿಗೂ ನಂಟು; ಬಿಬಿಎಂಪಿ ಕಾರ್ಪೋರೇಟರ್‌ ಮಗನಿಗೆ NCB ನೊಟೀಸ್.!...

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕೇಸ್‌ಗೂ ಕರ್ನಾಟಕಕ್ಕೂ ಲಿಂಕ್ ಆಗುವ ಸಾಧ್ಯತೆ ಇದೆ. ಸುಶಾಂತ್ ಸಿಂಗ್ ಸೂಸೈಡ್‌ ಕೇಸ್‌ನಲ್ಲಿ ಮುಂಬೈನಲ್ಲಿ ಅರೆಸ್ಟ್ ಆಗಿರುವ ಮಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿರುವ ಮಹಾಲಕ್ಷ್ಮೀ ಲೇಔಟ್ ಕಾರ್ಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್‌ಗೆ NCB ನೊಟೀಸ್ ನೀಡಿದೆ.

click me!