ಉಡುಪಿ (ಸೆ.06) : ಆಂಧ್ರದಲ್ಲಿ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರ ನಿರ್ಮಾಪಕರೋರ್ವರನ್ನು ಬಂಧಿಸಲಾಗಿದೆ. 

ಉಡುಪಿಯ ರೈಲ್ವೇ ನಿಲ್ದಾಣದಲ್ಲಿ ಚಿತ್ರ ನಿರ್ಮಾಪಕ ನೂತನ್ ನಾಯ್ಡು ಬಂಧಿಸಲಾಗಿದೆ. ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸಲಾಗಿದೆ. 

ವಿಶಾಖ ಪಟ್ಟಣ ಪೊಲೀಸರು ಉಡುಪಿ ಪೊಲೀಸರ ನೆರವಿನೊಂದಿಗೆ ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡು ಬಂಧಿಸಿದ್ದಾರೆ.

ಶುರುವಾಯ್ತು ಬಿಗ್ ಬಾಸ್‌ ಸೀಸನ್‌-8; ಮೊದಲ ಸ್ಪರ್ಧಿ ಇವರೇ ನೋಡಿ! ...
 
 ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು. ವಿಚಾರಣೆ ನಡೆಸಲಾಗುತ್ತಿದೆ. 

ನೂತನ್ ನಾಯ್ಡು ತೆಲುಗು ಬಿಗ್ಬಾಸ್ ಮೊದಲ ಆವೃತ್ತಿಯ ಸ್ಪರ್ಧಿಯೂ ಆಗಿದ್ದರು.