ನವ​ದೆ​ಹ​ಲಿ(ಸೆ.06): 13ನೇ ಆವೃತ್ತಿಯ ಐಪಿ​ಎಲ್‌ಗೆ ವೀಕ್ಷಕ ವಿವ​ರಣೆಗಾರರ ಪಟ್ಟಿ​ಯನ್ನು ಬಿಸಿ​ಸಿಐ ಸಿದ್ಧಪ​ಡಿ​ಸಿದ್ದು, ವಿವಾ​ದಾ​ತ್ಮಕ ಕಾಮೆಂಟೇ​ಟರ್‌ ಸಂಜ​ಯ್‌ ಮಾಂಜ್ರೇ​ಕರ್‌ರನ್ನು ಕೈಬಿ​ಡ​ಲಾ​ಗಿದೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ.

ಬಿಸಿ​ಸಿಐನ ಪಟ್ಟಿ​ಯನ್ನು ಸುನಿಲ್‌ ಗವಾ​ಸ್ಕರ್‌, ಅಂಜುಮ್‌ ಚೋಪ್ರಾ, ಹರ್ಷಾ ಬೋಗ್ಲೆ, ದೀಪ್‌ದಾಸ್‌ ಗುಪ್ತಾ, ರೋಹನ್‌ ಗವಾ​ಸ್ಕರ್‌, ಮುರಳಿ ಕಾರ್ತಿಕ್‌ ಹಾಗೂ ಲಕ್ಷ್ಮಣ್‌ ಶಿವ​ರಾ​ಮ​ಕೃ​ಷ್ಣನ್‌ ಹೆಸ​ರಿದೆ ಎಂದು ವರ​ದಿ​ಯಲ್ಲಿ ತಿಳಿ​ಸಲಾ​ಗಿದೆ. 71 ವರ್ಷ ವಯ​ಸ್ಸಿನ ಗವಾ​ಸ್ಕರ್‌ ಸೇರಿ ಎಲ್ಲರೂ ಯುಎ​ಇಗೆ ಪ್ರಯಾ​ಣಿ​ಸ​ಲಿ​ದ್ದಾರೆ.

ಇದೇ ವರ್ಷ ಮಾಚ್‌ರ್‍ನಲ್ಲಿ ದ.ಆ​ಫ್ರಿಕಾ ಸರಣಿ ವೇಳೆ ಮಾಂಜ್ರೇಕರ್‌ರನ್ನು ಬಿಸಿ​ಸಿಐ ತನ್ನ ವೀಕ್ಷಕ ವಿವ​ರಣೆಗಾರರ ತಂಡ​ದಿಂದ ಕೈಬಿ​ಟ್ಟಿತ್ತು. ಮಾಂಜ್ರೇ​ಕರ್‌ 2 ಬಾರಿ ಕ್ಷಮೆ ಕೋರಿ ಬಿಸಿ​ಸಿಐಗೆ ಪತ್ರ ಬರೆ​ದಿ​ದ್ದರು. ಆದರೂ ಅವ​ರನ್ನು ಐಪಿ​ಎಲ್‌ಗೆ ಆಯ್ಕೆ ಮಾಡ​ದಿ​ರು​ವುದು ಅಚ್ಚರಿ ಮೂಡಿಸಿದೆ.