ರಷ್ಯಾ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು ಉಕ್ರೇನ್ ಸರ್ಕಾರವು ತೆರಿಗೆಗಳನ್ನು ಹೆಚ್ಚಿಸುತ್ತಿದೆ. ವೈಯಕ್ತಿಕ ಮತ್ತು ವ್ಯಾಪಾರ ತೆರಿಗೆಗಳು ಹೆಚ್ಚಾಗಲಿದ್ದು, ಬ್ಯಾಂಕುಗಳ ಲಾಭದ ಮೇಲೂ ಹೆಚ್ಚಿನ ತೆರಿಗೆ ವಿಧಿಸಲಾಗುವುದು.
ಕೀವ್ (ನ.30): ಕಳೆದ ಮೂರು ವರ್ಷದಿಂದ ಸತತವಾಗಿ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಉಕ್ರೇನ್ ಸರ್ಕಾರ, ಇದೀಗ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸಲುವಾಗಿ ಜನರ ಮೇಲೆ ಯುದ್ಧ ತೆರಿಗೆ ಹೇರಲು ನಿರ್ಧರಿಸಿದೆ. ಅದರನ್ವಯ ವೈಯಕ್ತಿಕ ತೆರಿಗೆ ಪ್ರಮಾಣವನ್ನು ಶೇ1.5ರಿಂದ ಶೇ.5ಕ್ಕೆ ಹೆಚ್ಚಿಸಿದೆ. ಜೊತೆಗೆ ಲಕ್ಷಾಂತರ ಉದ್ಯಮಿಗಳಿಗೂ ಹೊಸದಾಗಿ ತೆರಿಗೆ ಹಾಕಿದೆ.
ಡಿ.1ರಿಂದ ಹೊಸ ನಿಯಮ ಜಾರಿಯಾಗಲಿದೆ. ಇದರ ಜೊತೆಗೆ ವಾಣಿಜ್ಯ ಬ್ಯಾಂಕುಗಳ ಲಾಭಗಳ ಮೇಲೆ ಶೇ.50ರಷ್ಟು ತೆರಿಗೆ, ಇತರ ಹಣಕಾಸು ಸಂಸ್ಥೆಗಳ ಲಾಭದ ಮೇಲಿನ ತೆರಿಗೆಯನ್ನು ಶೇ.25ಕ್ಕೇರಿಸಲಾಗಿದೆ. ಈ ಹೆಚ್ಚಳದಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 28000 ಕೋಟಿ ರು. ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. ಉಕ್ರೇನ್‌ನ ರಕ್ಷಣಾ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲವನ್ನು ಭದ್ರ ಪಡಿಸಿಕೊಳ್ಳಲು ಈ ಕಾನೂನು ಮುಖ್ಯ ಎಂದು ಸರ್ಕಾರ ಹೇಳಿದೆ.
ಆಂತರಿಕ ಕಚ್ಚಾಟದಿಂದಾಗಿ ಹರ್ಯಾಣ, ಮಹಾರಾಷ್ಟ್ರದಲ್ಲಿ ಸೋತೆವು: ಮಲ್ಲಿಕಾರ್ಜುನ ಖರ್ಗೆ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 29ನೇ ತಿಂಗಳಿಗೆ ತಲುಪಿದೆ. ಈಗಾಗಲೇ ಮಿಲಿಟರಿ ಶಸ್ತಾಸ್ತ್ರಗಳು ಹಾಗೂ ಮದ್ದುಗುಂಡುಗಳಿಗಾಗಿ ಉಕ್ರೇನ್ ಅಪಾರ ಪ್ರಮಾಣದ ವೆಚ್ಚಗಳನ್ನು ಮಾಡಿದೆ. ಇಲ್ಲಿಯವರೆಗೆ, ಉಕ್ರೇನ್ 2024 ಕ್ಕೆ ಸುಮಾರು 1.7 ಟ್ರಿಲಿಯನ್ ಹ್ರಿವ್ನಿಯಾಗಳ ರಕ್ಷಣಾ ವೆಚ್ಚವನ್ನು ಗುರಿಯಾಗಿಸಿಕೊಂಡಿದೆ. ಬದಲಾವಣೆಗಳು ಇನ್ನೂ ಸಂಸತ್ತಿನ ಬೆಂಬಲವನ್ನು ಪಡೆಯಬೇಕು ಮತ್ತು ಅವು ಜಾರಿಗೆ ಬರುವ ಮೊದಲು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಹಿ ಹಾಕಬೇಕಿದೆ.
ಅದಾನಿ ಸರ್ಕಾರದ ಆಸ್ತಿ ಪಡೆದು, ಅವುಗಳನ್ನೇ ಅಡವಿಟ್ಟು ಬ್ಯಾಂಕ್ ಸಾಲ ಪಡೆಯುತ್ತಾರೆ; ಮಲ್ಲಿಕಾರ್ಜುನ ಖರ್ಗೆ