ದರ್ಶನ್ ತಮ್ಮ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ, ಹೈಕೋರ್ಟ್‌ಗೆ ನೀಡಿದ ಹೇಳಿಕೆಗೆ ವಿರುದ್ಧವಾಗಿದೆ. ಜಾಮೀನು ಪಡೆಯಲು ಆರೋಗ್ಯ ಸಮಸ್ಯೆಯ ನೆಪ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಫಿಸಿಯೋಥೆರಪಿ ಮುಂದುವರಿಸಲು ಅವರು ಕೋರಿದ್ದಾರೆ.
ಬೆಂಗಳೂರು (ನ.30): ಹೈಕೋರ್ಟ್‌ನಿಂದ ಯಾವ ಕಾರಣಕ್ಕಾಗಿ ದರ್ಶನ್ ತೂಗುದೀಪ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರೂ ಆ ಉದ್ದೇಶ ಈವರೆಗೂ ಈಡೇರಿಕೆಯಾಗಿಲ್ಲ. ಬೆನ್ನುನೋವಿನ ಸಮಸ್ಯೆಯಿಂದ ನರಳುತ್ತಿದ್ದು, ತಕ್ಷಣವೇ ಸರ್ಜರಿಗೆ ಒಳಗಾಗಬೇಕಿದೆ ಎಂದು ಕೋರ್ಟ್‌ಗೆ ತಿಳಿಸಿದ್ದರು.ಸರ್ಜರಿ ಆಗದೇ ಇದ್ದಲ್ಲಿ ಲಕ್ವ ಹೊಡೆಯುವ ಸಾಧ್ಯತೆ ಇದೆ ಎಂದೂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಮಧ್ಯಂತರ ಜಾಮೀನ ಸಿಕ್ಕಿ ಒಂದು ತಿಂಗಳಾದರೂ ದರ್ಶನ್ ಸರ್ಜರಿಗೆ ಒಳಗಾಗಿಲ್ಲ. ಈ ನಡುವೆ ದರ್ಶನ್ ಪರ ವಕೀಲರು, ನಟನ ದಹದ ರಕ್ತದೊತ್ತಡ ಸಮಸ್ಯೆಯಿಂದಾಗಿ ಸರ್ಜರಿ ಈವರೆಗೂ ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಈ ಕುರಿತಾಗಿ ದರ್ಶನ್ ಅವರ ವೈದ್ಯಕೀಯ ದಾಖಲೆಗಳನ್ನು ನೋಡಿದ ಕೋರ್ಟ್, ಸರ್ಜರಿಗೆ ಯಾವುದೇ ಸಮಸ್ಯೆ ಆಗುವ ಆರೋಗ್ಯ ಸಮಸ್ಯೆ ಇದ್ದಂತೆ ಕಾಣುತ್ತಿಲ್ಲ ಎಂದು ಮೌಖಿಕವಾಗಿ ಹೇಳಿದೆ.
ಈ ನಡುವೆ ದರ್ಶನ್ ತಮಗೆ ಬೆನ್ನು ನೋವಿನ ಸರ್ಜರಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅದರೊಂದಿಗೆ ಅವರು ಹೈಕೋರ್ಟ್‌ಗೆ ಯಾಮಾರಿಸಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ ಎನ್ನುವುದು ಸತ್ಯವಾದಂತಾಗಿದೆ. ಸರ್ಜರಿಗೆ ಒಪ್ಪಿಗೆ ಸೂಚಿಸದ ದರ್ಶನ್, ತಮಗೆ ಫಿಸಿಯೋಥೆರಪಿಯನ್ನೇ ಮುಂದುವರಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಪಿ ಏರಿಳಿತದಿಂದ ಸರ್ಜರಿ ಆಗಿಲ್ಲ ಎಂದು ಅವರ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆಯ ವೇಳೆ ತಿಳಿಸಿದ್ದರು. ದರ್ಶನ್ ಪರ ವಕೀಲರಿಂದ ಕೋರ್ಟ್‌ಗೆ ವರದಿ ಸಲ್ಲಿಕೆಯಾಗಿತ್ತು. ಕಳೆದ 30 ದಿನಗಳಿಂದ BGSನಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದರ್ಶನ್ ಮಧ್ಯಂತರ ಜಾಮೀನು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಬಿಪಿ ನೆಪ ಹೇಳಿ ಸರ್ಜರಿ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಕೊಂಡಿರಲಿಲ್ಲ. ಈಗ ತಮಗೆ ಸರ್ಜರಿಯೇ ಅಗತ್ಯವಿಲ್ಲ ಎಂದು ದರ್ಶನ್ ಹೇಳುತ್ತಿದ್ದಾರೆ.
ಹಾಗೇನಾದರೂ ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗದೇ ಇದ್ದರೆ, ಮಧ್ಯಂತರ ಜಾಮೀನು ಮುಂದುವರೆಸಲು ಮನವಿಗೆ ಪ್ಲಾನ್ ಮಾಡಿದ್ದಾರೆ. ಬೇಲ್ ಸಿಕ್ಕರೆ ತನಗೆ ಬೇಕಾದ ಆಸ್ಪತ್ರೆಗೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ನಟ ಪ್ರಥಮ್ ಮೇಲೆ ಹಲ್ಲೆ? 50 ಜನರ ಮೇಲೆ ಎಫ್‌ಐಆರ್!
ಬೆನ್ನು ನೋವಿನ ಕಾರಣಕ್ಕೆ ನ. 1 ರಂದು ಬಿಜಿಎಸ್ ಆಸ್ಪತ್ರೆಗೆ ದರ್ಶನ್ ದಾಖಲಾಗಿದ್ದರು. ಬೆನ್ನು ,ಕಾಲು ನೋವಿನಿಂದ ದರ್ಶನ್ ನರಳಾಡುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಬಿಜಿಎಸ್ ವೈದ್ಯರಿಂದ ದರ್ಶನ್‌ಗೆ ನಿರಂತರ ಫಿಸಿಯೋಥೆರಪಿ ಮಾಡಲಾಗುತ್ತಿದೆ. ನಿತ್ಯ 90 ನಿಮಿಷಗಳ ಕಾಲ ದರ್ಶನ್‌ಗೆ ಫಿಸಿಯೋಥೆರಪಿ ನಡೆಯುತ್ತಿದೆ. ಹಾಗೇನಾದರೂ ಜಾಮೀನು ಸಿಗದೇ ಇದ್ದಲ್ಲಿ, ಸರ್ಜರಿ ಬಗ್ಗೆ ಯೋಚನೆ ಮಾಡುವ ನಿರ್ಧಾರ ಮಾಡುತ್ತಿದ್ದಾರೆ. ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.
ನವಗ್ರಹ ರೀ-ರಿಲೀಸ್: ರಕ್ತ ಸಂಬಂಧವೇ ಗೆದ್ದಿತು... ದರ್ಶನ್-ದಿನಕರ್ ಮುನಿಸು... 4 ವರ್ಷ ಮಾತಿಲ್ಲ!