2024 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಹಬ್ಬದ ತಿಂಗಳುಗಳಲ್ಲಿ ಪ್ರಯಾಣಿಕರ ಸೇವೆಗಳಿಂದ ರೈಲ್ವೇ ₹12,159.35 ಕೋಟಿ ಆದಾಯ ಗಳಿಸಿದೆ. ಸೆಪ್ಟೆಂಬರ್ 1 ರಿಂದ ನವೆಂಬರ್ 10 ರವರೆಗೆ 143 ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸಿದ್ದಾರೆ, ಕೇಂದ್ರ ರೈಲ್ವೆ ವಲಯದಲ್ಲಿ ಗರಿಷ್ಠ ಪ್ರಯಾಣಿಕರನ್ನು ಹೊಂದಿದೆ.
ನವದೆಹಲಿ (ನ.30): 2024 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಹಬ್ಬದ ತಿಂಗಳುಗಳಲ್ಲಿ ಪ್ರಯಾಣಿಕರ ಸೇವೆಗಳಿಂದ ರೈಲ್ವೇ ಆದಾಯವು 12,159.35 ಕೋಟಿ ರೂಪಾಯಿಯಾಗಿದೆ ಎಂದು ಸರ್ಕಾರ ಬುಧವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಅದರೊಂದಿಗೆ ಸೆಪ್ಟೆಂಬರ್ 1 ರಿಂದ ನವೆಂಬರ್ 10ರವರರೆಗಿನ ಹಬ್ಬದ ಸೀಸನ್‌ನ 70 ದಿನಗಳಲ್ಲಿ ಒಟ್ಟು 143 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಕೇಂದ್ರ ರೈಲ್ವೆ ವಲಯದಲ್ಲಿ ಗರಿಷ್ಠ ಪ್ರಯಾಣಕರು ರೈಲು ಸೇವೆಯನ್ನು ಬಳಸಿದ್ದಾರೆ. ಈ ಅವಧಿಯಲ್ಲಿ 31.63 ಕೋಟಿ ಮಂದಿ ಕೇಂದ್ರ ರೈಲ್ವೆಯಲ್ಲಿ ಪ್ರಯಾಣಿಸಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಈ ಪ್ರಯಾಣದಿಂದಾಗಿ ರೈಲ್ವೇಸ್‌ಗೆ 12,159.35 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಾಲಾ ರಾಯ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅಶ್ವಿನಿ ವೈಷ್ಣವ್, ರೈಲ್ವೆ ಇಲಾಖೆ ಹಬ್ಬದ ಸೀಸನ್‌ನಲ್ಲಿ ಒಟ್ಟಾರೆಯಾಗಿ 7983 ವಿಶೇಷ ರೈಲುಗಳನ್ನು ಓಡಿಸಿದೆ. ಹಬ್ಬದ ಸಮಯದಲ್ಲಿ 143.71 ಕೋಟಿ ಮಂದಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರೈಲ್ವೆ ಟಿಕೆಟ್‌ನಿಂದಲೂ ಉತ್ತಮ ಆದಾಯ ಬಂದಿದೆ' ಎಂದು ತಿಳಿಸಿದ್ದಾರೆ.
ಟಿಎಂಸಿ ಸಂಸದೆ ಮಾಲಾ ರಾಯ್ ಅವರು ಹಬ್ಬದ ತಿಂಗಳುಗಳಲ್ಲಿ ಟಿಕೆಟ್ ಮಾರಾಟ ಮತ್ತು ರದ್ದತಿಯ ಮೂಲಕ ರೈಲ್ವೆಯ ಗಳಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31, 2024 ರವರೆಗೆ ಭಾರತೀಯ ರೈಲ್ವೇಯ ಪ್ರಯಾಣಿಕರ ಆದಾಯ 12,159.35 ಕೋಟಿ ರೂಪಾಯಿ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. "ಪ್ರಯಾಣಿಕರು ಟಿಕೆಟ್ ರದ್ದುಪಡಿಸಿದ ಖಾತೆಯಲ್ಲಿ ಜಮೆಯಾದ ಮೊತ್ತವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದಿಲ್ಲ" ಎಂದು ವೈಷ್ಣವ್ ತಿಳಿಸಿದ್ದಾರೆ.
ಸಚಿವರು ಸೆಪ್ಟೆಂಬರ್ 1 ರಿಂದ ನವೆಂಬರ್ 10ರ ಅವಧಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯ ವಲಯವಾರು ಡೇಟಾವನ್ನು ನೀಡಿದರು, ಅದರ ಪ್ರಕಾರ, ಈ ಅವಧಿಯ ನಡುವೆ ಒಟ್ಟು 143.71 ಕೋಟಿ ಜನರು ರೈಲು ಪ್ರಯಾಣ ಮಾಡಿದ್ದಾರೆ. ಕೇಂದ್ರ ರೈಲ್ವೆ ವಲಯದಿಂದ ಗರಿಷ್ಠ ಅಂದರೆ 31.63 ಕೋಟಿ ಜನ ಪ್ರಯಾಣ ಮಾಡಿದ್ದಾರೆ.
90 ದಿನಗಳಲ್ಲೇ ಮಂಗಳ ಗ್ರಹಕ್ಕೆ ಪ್ರಯಾಣ, ಪ್ಲ್ಯಾನ್ ಸಿದ್ದ ಮಾಡ್ತಿದ್ದಾರೆ ಎಲಾನ್ ಮಸ್ಕ್!
"ಇದಲ್ಲದೆ, ಹಬ್ಬದ ಋತುವಿನ ಬೇಡಿಕೆಯನ್ನು ಪೂರೈಸಲು, ಭಾರತೀಯ ರೈಲ್ವೇಯು 01.10.2024 ರಿಂದ 30.11.2024 ರ ಅವಧಿಯಲ್ಲಿ 7,983 ವಿಶೇಷ ರೈಲುಗಳ ಟ್ರಿಪ್‌ಗಳನ್ನು ನಿರ್ವಹಿಸಿದೆ" ಎಂದು ವೈಷ್ಣವ್ ಹೇಳಿದರು.\
EPFO 3.0: ಎಟಿಎಂ ಮೂಲಕವೂ ಪಿಎಫ್ ವಿತ್‌ಡ್ರಾ ಮಾಡೋಕೆ ಸಿಗಲಿದೆ ಅವಕಾಶ!