ಆರ್ಥಿಕತೆ ಪಾತಾಳಕ್ಕೆ ತಳ್ಳಿದ ಮೋದಿ ಸರ್ಕಾರ ಕೊರೋನಾ ನಿಯಂತ್ರಣವೂ ಮಾಡಲಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಡ್ರಗ್ಸ್ ತನಿಖೆ ಚುರುಕಾಗುತ್ತಿದ್ದಂತೆ ಶಾಸಕ ಜಮೀರ್ ಅಹಮ್ಮದ್ ತಮ್ಮ ಕೊಲೊಂಬೊ ಭೇಟಿ ಒಪ್ಪಿಕೊಂಡಿದ್ದಾರೆ. 2019ರ ಸ್ಟಾರ್ಟಪ್ ರ್ಯಾಂಕಿಂಗ್‌ನಲ್ಲಿ ಕರ್ನಾಟಕ ಮೊದಲ ಸ್ಥಾನ ಅಲಂಕರಿಸಿದೆ. ಕರ್ನಾಟಕದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಸುಳಿದಾಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರದ ಮತ್ತೊಂದು ವಿವಾದ, ವಿರಾಟ್ ಕೊಹ್ಲಿ ತಯಾರಿ ಸೇರಿದಂತೆ ಸೆಪ್ಟೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್‌ಗೆ ಎಚ್ಚರಿಕೆ!...
undefined
ಮಹಾರಾಷ್ಟ್ರದ ಶಿವಸೇನಾ ಸರ್ಕಾರ ಇದೀಗ ತನ್ನ ಅಧಿಕಾರ ಬಳಸಿ ಹಲವರ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಅನ್ನೋ ಆರೋಪ ಬಲವಾಗಿ ಕೇಳಿಬರುತ್ತಿದೆ. ನಟಿ ಕಂಗನಾ ರನೌತ್ ವಿರುದ್ಧ ಸಮರ ಸಾರಿರುವ ಶಿವ ಸೇನಾ ಇದೀಗ ಶಿವ ಸೇನಾ ಸರ್ಕಾರದ ವಿರುದ್ಧ ಸುದ್ಧಿ ಬಿತ್ತಿರಿಸಿದ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್‌ಗಳಿ ತಾಕೀತು ಮಾಡಿದೆ.
ಮೋದಿ ವಿರುದ್ಧ ರಾಹುಲ್ ಕಿಡಿ: 'ಸಬ್ ಚಂಗಾ ಸೀ' ಅಸ್ತ್ರ ಪ್ರಯೋಗಿಸಿದ ಕೈ ನಾಯಕ!...
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೊರೋನಾ ನಿಯಮಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿ ಮೋದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿತ್ಯವೂ ಹೆಚ್ಚುತ್ತಿರುವ ಕೊರೋನಾ ಪ್ರಕರಣ, ಆರ್ಥಿಕ ಸ್ಥಿತಿಯ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಛಾಟಿ ಬೀಸಿದ್ದಾರೆ.
ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್...!...
ಡ್ರಗ್ಸ್ ಮಾಫಿಯಾ ಪ್ರಕರಣ ತನಿಖೆ ಚುರುಕಾಗಿದ್ದೇ ತಡ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ನಟಿ ಸಂಜನಾ ಗಲ್ರಾನಿ ಜತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಎಳೆದುತಂದಿದ್ದಾರೆ.
ಎರಡನೇ ಸುತ್ತಿನ ಲಾಕ್‌ಡೌನ್ ಶುರು, ರಾಜ್ಯದಲ್ಲೂ ಜಾರಿ ಆದೀತು ಎಚ್ಚರ!...
ಒಂದೆಡೆ, ಅನ್‌ಲಾಕ್‌ನಿಂದ ದೇಶದಲ್ಲಿ ಬಹುತೇಕ ಚಟುವಟಿಕೆ ಚುರುಕಾಗುತ್ತಿದ್ದರೆ, ಮತ್ತೊಂದೆಡೆ, ಕೊರೋನಾ ಸೋಂಕು ತೀವ್ರ ಹೆಚ್ಚುತ್ತಿದೆ. ಇಂತಹ ಸ್ಥಿತಿ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಇದೆ. ಅಲ್ಲೆಲ್ಲ ಲಾಕ್‌ಡೌನ್ ಸೇರಿ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದು ನಮ್ಮಲ್ಲೂ ಆಗುವ ಅಪಾಯವಿದೆ.
IPL 2020: ಗರಗಸದಲ್ಲಿ ಬ್ಯಾಟ್ ಹ್ಯಾಂಡಲ್ ಕೊಯ್ದ ವಿರಾಟ್ ಕೊಹ್ಲಿ!...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನು ಸ್ವತಃ ತಾವೇ ರೆಡಿ ಮಾಡಿಕೊಳ್ಳುತ್ತಿದ್ದು, ಈ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹ್ಯಾಪಿ ಬರ್ತ್‌ಡೇ ಪ್ರಿಯಾ ವಾರಿಯರ್: ಕಣ್ಸನ್ನೆ ಹುಡುಗಿಯ ಲೇಟೆಸ್ಟ್ ಫೋಟೋಸ್ ಇಲ್ಲಿವೆ
ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಇಂದು ಬರ್ತ್‌ಡೇ ಸಂಭ್ರಮ. ಇಲ್ಲಿವೆ ಮಾಲಿವುಡ್ ಬೆಡಗಿಯ ಲೇಟೆಸ್ಟ್ ಫೋಟೋಸ್
ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ: ತಮ್ಮನ್ನು ಕೈಬಿಟ್ಟಿದ್ದಕ್ಕೆ ಖರ್ಗೆ ಫಸ್ಟ್ ರಿಯಾಕ್ಷನ್...
ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಪ್ರಮುಖ ಹುದ್ದೆಯಿಂದ ಮಲ್ಲಿಕಾರ್ಜನ ಖರ್ಗೆ ಅವರನ್ನ ತೆಗೆದು ಹಾಕಲಾಗಿದೆ. ಇನ್ನು ಈ ಬಗ್ಗೆ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಕರ್ನಾಟಕ ಸತತ 2ನೇ ಬಾರಿ ನಂ.1 ಸ್ಟಾರ್ಟಪ್ ರಾಜ್ಯ!...
ದೇಶದ ಹಲವು ಖ್ಯಾತನಾಮ ಸ್ಟಾರ್ಟಪ್ ಕಂಪನಿಗಳ ತವರೂರು ಎನಿಸಿಕೊಂಡಿರುವ ಕರ್ನಾಟಕ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2019ನೇ ಸಾಲಿನ ಸ್ಟಾರ್ಟಪ್ ರಾರಯಂಕಿಂಗ್‌ನ ಉನ್ನತ ಶ್ರೇಣಿ ವಿಭಾಗದಲ್ಲಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ, ಅತ್ಯುತ್ತಮ ವಿಭಾಗದಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿ ಮುಂದುವರಿದಿದೆ.
ಸೆ.19ರಂದು ಭಾರತದಲ್ಲಿ BMW R18 ಕ್ರೂಸರ್ ಬೈಕ್ ಬಿಡುಗಡೆ!...
ಕ್ರೂಸರ್ ಬೈಕ್‌ಗಳ ಪೈಕಿ ಅತ್ಯಂತ ಆಕರ್ಷಕ, ಹೆಚ್ಚು ಸ್ಟೈಲೀಶ್ ಜೊತೆಗೆ ಅಪರಿಮಿತ ಫೀಚರ್ಸ್ ಹೊಂದಿರುವ BMW R18 ಕ್ರೂಸರ್ ಭಾರತದಲ್ಲಿ ಇದೇ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗುತ್ತಿದೆ.
ಸಿಎಂ ಬದಲಾವಣೆ ವಿಚಾರ: ಬಿಜೆಪಿ ನಾಯಕರ ಪ್ರತಿಕ್ರಿಯೆ...
ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಆಗೊಮ್ಮೆ ಈಗೊಮ್ಮೆ ಹುಟ್ಟಿಕೊಳ್ಳುತ್ತಿರುವ ಊಹಾಪೋಹಗಳನ್ನು ಖಡಾಖಂಡಿತವಾಗಿ ಅಲ್ಲಗೆಳೆದಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವರಾದ ಸಿ.ಸೋಮಣ್ಣ, ಡಾ.ಕೆ.ಸುಧಾಕರ್ ಮತ್ತು ನಾಗೇಶ್, ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದು, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.