ನೀವು ತುಂಬಾ ಫೇಮಸ್,ಜೈಶಂಕರ್‌ಗೆ ಬಗ್ಗೆಇಂಡೋನೇಷ್ಯಾ ಅಧ್ಯಕ್ಷರ ಮೆಚ್ಚುಗೆ ಮಾತು ವೈರಲ್!

By Chethan Kumar  |  First Published Nov 20, 2024, 4:58 PM IST

ಬ್ರಿಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿನ ದ್ವಿಪಕ್ಷೀಯ ಮಾತುಕತೆ ವೇಳೆ ನಡೆದ ಘಟನೆ ಇದು. ಜೈಶಂಕರ್ ನೋಡುತ್ತಿದ್ದಂತೆ ಇಂಡೋನೇಷ್ಯಾ ಅಧ್ಯಕ್ಷರು ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್ ಎಂದಿದ್ದಾರೆ. ಈ ವೇಳೆ ಮೋದಿ ಸೇರಿದಂತೆ ಇಡೀ ಅಧಿಕಾರಿಗಳ ತಂಡ ನಗೆಗಡಲಲ್ಲಿ ತೇಲಾಡಿದೆ.


ಬ್ರೆಜಿಲ್(ನ.20) ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ ಭಾರತದ ಅಧಿಕಾರಿಗಳ ತಂಡ ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದೆ. ಬ್ರಿಟನ್ ಸೇರಿದಂತೆ ಹಲವು ದೇಶಗಳ ಜೊತೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ಈ ಪೈಕಿ ಇಂಡೋನೇಷಿಯಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ನೇತೃತ್ವದ ತಂಡವನ್ನು ಇಂಡೋನೇಷಿಯಾ ಅಧ್ಯಕರು ಕೈಕುಲುಕಿ ಸ್ವಾಗತಿಸಿದ್ದರು. ಈ ವೇಳೆ ಸಚಿವ ಎಸ್ ಜೈಶಂಕರ್ ನೋಡುತ್ತಿದ್ದಂತೆ ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್ ಎಂದಿದ್ದಾರೆ. ಈ ಮಾತಿನ ಬೆನ್ನಲ್ಲೇ ಪ್ರಧಾನಿ ಮೋದಿ ಹೆಮ್ಮೆಯಿಂದ ನಕ್ಕಿದರೆ, ಇನ್ನುಳಿದವರು ನಗೆಗಡಲಲ್ಲಿ ತೇಲಾಡಿದ ಘಟನೆ ನಡೆದಿದೆ.

ಬ್ರಿಜಿಲ್ ಜಿ20 ಶೃಂಗಸಭೆಯಲ್ಲಿ ಭಾರತ ಫಲಪ್ರದ ಮಾತುಕತೆ ನಡೆಸುತ್ತಿದೆ. ಈ ಪೈಕಿ ಇಂಡೋನೇಷಿಯಾ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ಮಾತುಕತೆಗೂ ಮುನ್ನ ಪ್ರಧಾನಿ ಮೋದಿ, ಜೈಶಂಕರ್ ಸೇರಿದಂತೆ ಅಧಿಕಾರಿಗಳ ತಂಡ, ಇಂಡೋನೇಷಿಯಾ ಅಧ್ಯಕ್ಷ ಪ್ರಭೋವ್ ಸುಬಿಯಾಂಟೋ ಅವರಿಗೆ ಹಸ್ತಲಾಘವ ಮಾಡಿದೆ. ಮೋದಿ ಹಸ್ತಲಾಘವ ಮಾಡಿದ ಬಳಿಕ ಜೈಶಂಕರ್ ಬಳಿ ಬಂದ ಸುಬಿಯಾಂಟೋ ಕೈಕುಲುಕಿದ್ದಾರೆ. ಈ ವೇಳೆ ಜೈಶಂಕರ್ ತಮ್ಮ ಪರಿಚಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಾನು ಜೈಂಶಕರ್, ವಿದೇಶಾಂಗ ಸಚಿವ ಎಂದು ಹೇಳುತ್ತಿದ್ದಂತೆ, ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್ ಎಂದು ಸುಬಿಯಾಂಟೋ ಹೇಳಿದ್ದಾರೆ.

Tap to resize

Latest Videos

undefined

ವಿಜಯ್ ಮಲ್ಯ, ನೀರವ್ ಮೋದಿ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ? ಯುಕೆ ಪ್ರಧಾನಿ ಜೊತೆ ಮೋದಿ ಚರ್ಚೆ!

ಸುಬಿಯಾಂಟೋ ಮಾತಿಗೆ ಮೋದಿ ನಕ್ಕಿದ್ದಾರೆ. ಇತ್ತ ಭಾರತೀಯ ಅಧಿಕಾರಿಗಳ ತಂಡ ಹಾಗೂ ಇಂಡೋನೇಷಿಯಾ ಅಧಿಕಾರಿಗಳ ತಂಡ ನಕ್ಕಿದೆ. ಈ ಘಟನೆ ಬಳಿಕ ಭಾರತ ಹಾಗೂ ಇಂಡೋನೇಷ್ಯಾ ದ್ವಿಪೀಕ್ಷಿಯ ಮಾತುಕತೆ ನಡೆಸಿದೆ. ಇದು ಮೋದಿ ಹಾಗೂ ಇತ್ತೀಚೆಗಷ್ಟೇ ಇಂಡೋನೇಷಾಯ ಅಧ್ಯಕ್ಷರಾಗಿ ಆಯ್ಕೆಯಾದ ಸುಬಿಯಾಂಟೋ ನಡೆಸಿದ ಮೊದಲ ದ್ವಿಪಕ್ಷೀಯ ಮಾತುಕತೆಯಾಗಿದೆ.

 

Indonesia President Prabowo praises EAM S Jaishankar during G20 Summit in front of PM Modi.

Prabowo to S Jaishankar: "I know you, you are very famous"

Here's a brief introduction of Indonesian Prez Probowo Subianto: https://t.co/Qd1aMrOJxA
(Ignore the production quality)… https://t.co/8wDw6W0ZSc pic.twitter.com/Dzg4d1pP6N

— India Strikes YT 🇮🇳 (@IndiaStrikes_)

 

ಇಂಡೋನೇಷಿಯಾ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಮೋದಿ, ಭಾರತ ಹಾಗೂ ಇಂಡೋನೇಷಿಯಾ ಪಾಲುದಾರಿಕೆ ಹಾಗೂ ಒಪ್ಪಂದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ವ್ಯಾಪಾರ ವಹಿವಾಟು, ಹೂಡಿಕೆ, ರಕ್ಷಣಾ ವ್ಯವಸ್ಥೆ, ಭದ್ರತೆ, ಪ್ರವಾಸೋದ್ಯಮ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಹಾಗೂ ಇಂಡೋನೇಷಿಯಾದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಉಭಯ ನಾಯಕರು ಚರ್ಚಿಸಿದ್ದಾರೆ. ವಿಶೇಷ ಅಂದರೆ ಭಾರತ ಹಾಗೂ ಇಂಡೋನೇಷಿಯಾ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷಗಳ ಪೂರ್ಣಗೊಂಡಿದೆ. ಇದೇ ವೇಳೆ ಈ ಶುಭ ಘಳಿಗೆಯನ್ನು ಉಭಯ ದೇಶಗಳು ಸಂಭ್ರಮಿಸುತ್ತದೆ ಎಂದರು.
 

click me!