ಚಾಮರಾಜನಗರ ಪೊಲೀಸರ ನಿದ್ದೆಗೆಡಿಸಿದ್ದ ಕಳ್ಳರ ಗ್ಯಾಂಗ್ ಅಂಧರ್: ನಾಲ್ವರು ಖತರ್ನಾಕ್‌ ಖದೀಮರು ಅರೆಸ್ಟ್‌

By Girish Goudar  |  First Published Nov 20, 2024, 5:28 PM IST

ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧಿಸುವ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದಿದ್ದ 18 ಕಳ್ಳತನ ಪ್ರಕರಣಗಳ ಪೈಕಿ 13 ಪ್ರಕರಣಗಳನ್ನು ಪೊಲೀಸರು ಭೇದಿಸಿದಂತಾಗಿದೆ. 


ವರದಿ- ಪುಟ್ಟರಾಜು. ಆರ್. ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.20):  ಅದು ಪಕ್ಕಾ ಪ್ಲಾನ್ ಮಾಡಿಕೊಂಡು ಫೀಲ್ಡಿಗಿಳಿಯುತ್ತಿದ್ದ ಅಂತಾರಾಜ್ಯ ಚೋರ್ ಗ್ಯಾಂಗ್. ಅದರಲ್ಲೂ ಚಾಮರಾಜನಗರ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳರ ಬ್ಯಾಚ್. ಬರೋಬ್ಬರಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಚಾಮರಾಜನಗರ ಪೊಲೀಸರು ಕೊನೆಗೂ ಕುಖ್ಯಾತ ಮನೆಗಳ್ಳರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

undefined

ಪದೇ ಪದೇ ಮನೆಗಳಿಗೆ ಕನ್ನಾ ಹಾಕುತ್ತಾ, ಯಾವುದೇ ಸುಳಿವು ಬಿಟ್ಟು ಕೊಡದೆ ಪೊಲೀಸರಿಗೆ ತಲೆಚಿಟ್ಟು ಹಿಡಿಸಿದ್ದ ಖತರ್ನಾಕ್ ಗ್ಯಾಂಗ್. ಕರ್ನಾಟಕ, ಕೇರಳ, ತಮಿಳುನಾಡು ಮೂಲದ ನಾಲ್ವರು ಖದೀಮರು ಒಂದೂಗೂಡಿ ಮೂರೂ ರಾಜ್ಯಗಳಲ್ಲಿ ಹತ್ತಾರು ಮನೆಗಳನ್ನು ದೋಚಿದ್ದಾರೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ನಿರಂತರವಾಗಿ ಮನೆಗಳಿಗೆ ಕನ್ನಾ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿ ಯಾವುದೇ ಸುಳಿವು ಬಿಟ್ಟು ಕೊಡದೆ ಪರಾರಿಯಾಗಿತ್ತಿತ್ತು ಈ ಗ್ಯಾಂಗ್. 

ಧಾರವಾಡ: ಕಿಡ್ನ್ಯಾಪ್‌ ಕೇಸ್‌ನಲ್ಲಿ ನಾಲ್ವರ ಬಂಧನ, ಮಕ್ಕಳ ಅಪಹರಣದಲ್ಲಿ ತಾಯಂದಿರೇ ಶಾಮೀಲು!

ಪದೇ ಪದೇ ನಡೆಯುತ್ತಿದ್ದ ಮನೆಗಳ್ಳತನದಿಂದ ಸಾರ್ವಜನಿರಕಲ್ಲಿ ಭಯದ ವಾತಾರವಣ ಸೃಷ್ಟಿಯಾಗಿತ್ತು. ಇದು ಪೊಲೀಸರ ವೈಫಲ್ಯ ಎಂಬ ಆರೋಪವೂ ಇತ್ತು. ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡು ಮಾಡಿದ್ದ  ಮನೆಗಳ್ಳತನ ಪ್ರಕರಣಗಳನ್ನು ಭೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ನಾಲ್ಕು ವಿಶೇಷ ತಂಡಗಳನ್ಮು ರಚಿಸಿದ್ದರು. 

ಬರೋಬ್ಬರಿ ಒಂದು ತಿಂಗಳ ಕಾಲ ನಿದ್ದೆಗೆಟ್ಟು ಕಾರ್ಯಾಚರಣೆ ನಡೆಸಿದ ವಿಶೇಷ ತಂಡಗಳು ಕೊನೆಗೂ ಖತರ್ನಾಕ್  ನಾಲ್ವರು ಕಳ್ಳರ ಗ್ಯಾಂಗ್‌ಅನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಕೊಡಂಗುಸ್ವಾಮಿ, ಇಂದಿರಾರಾಜ್, ಕೇರಳ ಮೂಲದ ಜೇಸುದಾಸ್, ಹಾಸನ ಜಿಲ್ಲೆ ಅಜಿತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಇವರಿಂದ 41 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 3 ಕೆಜಿ ಬೆಳ್ಳಿ ಆಭರಣ, ಒಂದು ಮಹಿಂದ್ರಾ ಕಾರು, ಒಂದು ಮೊಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. 

ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ನಷ್ಟ; ಖಾಸಗಿ ಆಸ್ಪತ್ರೆ ಸಿಬ್ಬಂದಿ ಬಂಧನ

ಇನ್ನು ಈ ಚೋರಿ ಗ್ಯಾಂಗ್ ಪಕ್ಕಾ ಪ್ಲಾನ್ನೊಂದಿಗೆ ಮನೆಗಳಿಗೆ ಕನ್ನಾ ಹಾಕುತ್ತಿತ್ತು.  ವಿಐಪಿ ಬಂದೋಬಸ್ತ್, ಕಾನೂನು ಸುವ್ಯವಸ್ಥೆ,  ಹಬ್ಬ ಜಾತ್ರೆಗಳು ನಡೆಯುವ ಕಡೆ ಪೊಲೀಸರ ಗಮನ ಇರುವಾಗ ಅಥವಾ ಪೊಲೀಸರು ಬಿಜಿ ಇರೋ ಟೈಂ ನೋಡಿಕೊಂಡು ಈ ಕಳ್ಳರ ಗ್ಯಾಂಗ್ ಕಾರ್ಯಾಚರಣೆಗೆ ಇಳಿಯುತ್ತಿತ್ತು. ಹಗಲಿನ ವೇಳೆ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ಅಂತಹ ಮನೆಗಳಿಗೆ ರಾತ್ರಿ ವೇಳೆ ಕನ್ನಾ ಹಾಕುತ್ತಿತ್ತು. ಕದ್ದ ಮಾಲು  ಮಾರಾಟ ಮಾಡಲು ಹಾಗೂ ಮತ್ತೆ ಕಳ್ಳತನ ಮಾಡಲು ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲಕ್ಕೆ ಬಂದಿದ್ದಾಗ ಈ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಈ ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧಿಸುವ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದಿದ್ದ 18 ಕಳ್ಳತನ ಪ್ರಕರಣಗಳ ಪೈಕಿ 13 ಪ್ರಕರಣಗಳನ್ನು ಪೊಲೀಸರು ಭೇದಿಸಿದಂತಾಗಿದೆ. ಉಳಿದ 5 ಪ್ರಕರಣಗಳನ್ನು ಅತಿ ಶೀಘ್ರದದಲ್ಲೇ ಪತ್ತೆ ಹಚ್ಚಿ ಮನೆಗಳ್ಳರನ್ನು ಹೆಡೆಮುರಿ ಕಟ್ಟುವ ವಿಶ್ವಾದಲ್ಲಿದೆ ಖಾಕಿ ಪಡೆ. 

click me!