ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ: ತಮ್ಮನ್ನು ಕೈಬಿಟ್ಟಿದ್ದಕ್ಕೆ ಖರ್ಗೆ ಫಸ್ಟ್ ರಿಯಾಕ್ಷನ್
ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಪ್ರಮುಖ ಹುದ್ದೆಯಿಂದ ಮಲ್ಲಿಕಾರ್ಜನ ಖರ್ಗೆ ಅವರನ್ನ ತೆಗೆದು ಹಾಕಲಾಗಿದೆ. ಇನ್ನು ಈ ಬಗ್ಗೆ ಅವರ ಫಸ್ಟ್ ರಿಯಾಕ್ಷನ್ ಈ ಕೆಳಗಿನಂತಿದೆ.
ಬೆಂಗಳೂರು, ಸೆ.12): ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲವೂ ನನಗೆ ಸಿಗಬೇಕೆಂಬ ಆಸೆಯೂ ನನಗಿಲ್ಲ. ನಾನು ಒಂದು ತತ್ವದಾರ್ಶ ಹೊಂದಿದವನು ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶುಕ್ರವಾರ ಇಡೀ ಎಐಸಿಸಿ ಪುನರ್ ರಚನೆ ಮಾಡಿ ಹೊಸ ಪದಾಧಿಕಾರಿಗಳನ್ನು ನೇಮಿಸಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನ ಬದಲಾವಣೆ ಮಾಡಲಾಗಿದೆ.
AICCಗೆ ಮೇಜರ್ ಸರ್ಜರಿ: ಕರ್ನಾಟಕದ ನಾಯಕರಿಗೆ ಭರ್ಜರಿ..!
"
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ನಾನು ನೆಹರು, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು. 'ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಇರಲಿ. ಅದಕ್ಕೆ ನನ್ನ ಒಪ್ಪಿಗೆ ಇದೆ. ನನಗೆ ಹುದ್ದೆ ಸಿಗಲಿಲ್ಲ ಎಂದು ವ್ಯಥೆ ಪಟ್ಟವನೂ ಅಲ್ಲ ಎಂದರು.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ಆ ಸ್ಥಾನದಲ್ಲಿ ಈಗ ಗುಲಾಂ ನಬಿ ಇದ್ದಾರೆ. ಅದರ ಬಗ್ಗೆ ಹೈಕಮಾಂಡ್ ನಿಲುವು ತೆಗೆದುಕೊಳ್ಳಲಿದೆ. ಹೈಕಮಾಂಡ್ ನಿಲುವಿಗೆ ನಾನು ತಲೆ ಬಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಹೆಗಲಿಗೆ
2018ರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಇವರ ಸ್ಥಾನಕ್ಕೆ ಕರ್ನಾಟಕದ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರನ್ನ ನೇಮಿಸಿ ಹೈಕಮಾಂಡ್ ಶುಕ್ರವಾರ ಆದೇಶ ಹೊರಡಿಸಿದೆ.