ನವದೆಹಲಿ(ಸೆ.12): ಒಂದೆಡೆ, ಅನ್‌ಲಾಕ್‌ನಿಂದ ದೇಶದಲ್ಲಿ ಬಹುತೇಕ ಚಟುವಟಿಕೆ ಚುರುಕಾಗುತ್ತಿದ್ದರೆ, ಮತ್ತೊಂದೆಡೆ, ಕೊರೋನಾ ಸೋಂಕು ತೀವ್ರ ಹೆಚ್ಚುತ್ತಿದೆ. ಜನರ ಅಜಾಗರೂಕತೆ ಇದಕ್ಕೆ ಪ್ರಮುಖ ಕಾರಣ. ಇಂತಹ ಸ್ಥಿತಿ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಇದೆ. ಅಲ್ಲೆಲ್ಲ ಲಾಕ್‌ಡೌನ್ ಸೇರಿ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದು ನಮ್ಮಲ್ಲೂ ಆಗುವ ಅಪಾಯವಿದೆ. ನಮ್ಮಲ್ಲೂ ಹಾಗಾಗದಂತೆ ಜನರೇ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ವಿದೇಶಗಳ ಸ್ಥಿತಿಗತಿ ಇಂತಿದೆ.

1 ಇಸ್ರೇಲ್ ಲಾಕ್‌ಡೌನ್: ಇಸ್ರೇಲ್‌ನಲ್ಲಿ ಲಾಕ್ ಡೌನ್. ರಾತ್ರಿ ಕರ್ಫ್ಯೂ, ಶಾಲಾ-ಕಾಲೇಜು ಬಂದ್. 2ನೇ ಲಾಕ್ಡೌನ್ ಮಾಡಿದ ಮೊದಲ ದೇಶ 

2 ಜಕಾರ್ತಾದಲ್ಲಿ ಲಾಕ್‌ಡೌನ್: ಸೋಂಕಿತರು ಹೆಚ್ಚಾಗಿ ವೈದ್ಯಕೀಯ ವ್ಯವಸ್ಥೆ ಕುಸಿವ ಭೀತಿ. ಇಂಡೋನೇಷ್ಯಾ ರಾಜಧಾನಿ ಸೆ.14ರಿಂದ ಲಾಕ್ 

3 ಬ್ರಿಟನ್ನ ಲ್ಲಿ ನಿರ್ಬಂಧ: ಬ್ರಿಟನ್‌ನಲ್ಲಿ ಸಾಮಾಜಿಕ ಅಂತರ ಬಿಗಿ. 30ರ ಬದಲು 6 ಜನ ಸೇರಲು ಅವಕಾಶ. ಪಬ್, ರೆಸ್ಟೋರೆಂಟ್ ರಾ.10ಕ್ಕೆ ಬಂದ್ 

4 ಆಸೀಸ್ ಭಾಗಶಃ ಲಾಕ್: ಸೋಂಕು ಹೆಚ್ಚಿರುವ ಕಡೆ ಲಾಕ್‌ಡೌನ್. 2ನೇ ಅತಿದೊಡ್ಡ ರಾಜ್ಯವಾದ ವಿಕ್ಟೋರಿಯಾದಲ್ಲಿ ಸೆ.28ರವರೆಗೆ ಲಾಕ್‌ಡೌನ್ 

5 ಐರ್ಲೆಂಡಲ್ಲಿ ನಿರ್ಬಂಧ: ಸೋಂಕು ಮತ್ತೆ ಹೆಚ್ಚಿರುವ ಕಾರಣ ಹಲವು ರೀತಿಯ ನಿರ್ಬಂಧ ಗಳನ್ನು ಹೇರಲು ಅಲ್ಲಿನ ಸರ್ಕಾರದಿಂದ ಸಿದ್ಧತೆ

6 ಫಿಲಿಪ್ಪಿನ್ಸ್‌, ಟರ್ಕಿ: ಈ ದೇಶಗಳಲ್ಲಿ ಮಾಸ್‌ಕ್ ಮತ್ತೆ ಕಡ್ಡಾಯ. ಬೆಲ್ಜಿಯಂ ನಿಂದ ಬರುವ ನೌಕರರಿಗೆ ಐರೋಪ್ಯ ಸಂಸತ್ತು ಕ್ವಾರಂಟೈನ್ ಘೋಷಿಸಿದೆ 

7 ಫ್ರಾನ್ಸಲ್ಲಿ ನಿರ್ಬಂಧ: ಸೋಂಕು ಮರುಕಳಿಸಿದೆಡೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ. ಬಾರಲ್ಲಿ ಸೀಮಿತ ಅವಕಾಶ. ಬಹಿರಂಗ ಧೂಮಪಾನ ಬಂದ್ 

8 ಸ್ಪೇನ್ ಲಾಕ್ಡೌನ್: ಗಾಲ್ಸಿಯಾ ಪ್ರಾಂತ್ಯದಲ್ಲಿ ಜುಲೈ ಅಂತ್ಯದಲ್ಲೇ 2ನೇ ಹಂತದ ಲಾಕ್ಡೌನ್ ಜಾರಿ. ಜನರಿಗೆ ಮನೆವಾಸ ಕಡ್ಡಾಯ. ಸಿಬ್ಬಂದಿ ಮಾತ್ರ ಕಚೇರಿಗೆ ಪ್ರವೇಶ ನಿಯಮ