ಒಲಿಂಪಿಕ್ಸ್ ಅಥ್ಲೀಟ್ಸ್‌ಗೆ ಮೋದಿ ಆಹ್ವಾನ, ಇಂದು ಸಚಿವ ಸಂಪುಟ ಅಂತಿಮ ತೀರ್ಮಾನ; ಆ.3ರ ಟಾಪ್ 10 ಸುದ್ದಿ!

By Suvarna NewsFirst Published Aug 3, 2021, 4:38 PM IST
Highlights

ಕರ್ನಾಟಕ ಸಚಿವ ಸಂಪುಟ ರಚನೆಗೆ ಪಟ್ಟಿ ಇಂದು ಸಂಜೆ ಹೊರಬೀಳಲಿದೆ. ಹೈಕಮಾಂಡ್ ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದೆ. ಕೇಂದ್ರದಲ್ಲಿ ಅಮಿತ್ ಶಾ ಭೇಟಿಯಾಗಲು ಶರದ್ ಪವಾರ್ ಸಜ್ಜಾಗಿದ್ದಾರೆ. ಇತ್ತ ಪ್ರಧಾನಿ ಮೋದಿ ಹಾಕಿ ತಂಡವನ್ನು ಹುರಿದುಂಬಿಸಿದ್ದಾರೆ. 3-5 ವರ್ಷದಲ್ಲಿ ದುಪ್ಪಟ್ಟಾಗಲಿದೆ ಚಿನ್ನದ ದರ, ಬಿಗ್ ಬಾಸ್ ದವ್ಯಾ ಉರುಡುಗ ಪರ ನಿಂತ ಚಿನ್ನು ಸೇರಿದಂತೆ ಆಗಸ್ಟ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

PM Garib Kalyan Anna Yojana: ಅದೆಷ್ಟೇ ಅಗ್ನಿ ಪರೀಕ್ಷೆ ಎದುರಾದರೂ ಬಡವರೊಂದಿಗೆ ದೇಶವಿದೆ!

 ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಗರಿಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ಸಂವಾದ ನಡೆಸಿದ್ದಾರೆ. 

ಪುತ್ರಿ ರಾಹುಲ್ ಸಭೆಯಲ್ಲಿ ಭಾಗಿಯಾದ ಬೆನ್ನಲ್ಲೇ ಅಮಿತ್ ಶಾಗೆ ಭೇಟಿಗೆ ಸಜ್ಜಾದ ಶರದ್ ಪವಾರ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಪಕ್ಷ ನಾಯಕರ ಜೊತೆ ಉಪಹಾರ ಕೂಟ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಪಾಲ್ಗೊಂಡಿದ್ದರು. ಇದೀಗ ಶರದ್ ಪವಾರ್, ಗೃಹ ಸಚಿವ ಅಮಿತ್ ಶಾ ಭೇಟಿಗೆ ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ರಾಜಕೀಯ ರಣತಂತ್ರ ಸದ್ದಿಲ್ಲದೆ ಜೋರಾಗುತ್ತಿದೆ.

ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ: ಭುಗಿಲೆದ್ದ ಆಕ್ರೋಶ!

ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ, 9 ವರ್ಷದ ದಲಿತ ಬಾಲಕಿಯ ಅತ್ಯಾಚಾರಗೈದು ಬಳಿಕ ಬಲವಂತವಾಗಿ ಸುಟ್ಟುಹಾಕಿ ಕೊಲೆ ಮಾಡಿದ ಪ್ರಕರಣ ಭಾರೀ ಕಾವು ಪಡೆದುಕೊಳ್ಳುತ್ತಿದೆ.

ಹೈಕಮಾಂಡ್‌ನಿಂದಲೇ ಇಂದು ರಾತ್ರಿ ಸಂಪುಟ ಪಟ್ಟಿ ಬಿಡುಗಡೆ : ಯಾರಿಗೆ ಚಾನ್ಸ್..?

ನೂತನ ಸರ್ಕಾರದ ಸಚಿವ ಸಂಪುಟ ರಚನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಕ್ಷದ ಹೈಕಮಾಂಡ್‌  ಇಂದು ರಾತ್ರಿ ವೇಳೆಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಲು-ಗೆಲುವು ಜೀವನದ ಎರಡು ಭಾಗಗಳು: ಹಾಕಿ ತಂಡವನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವು 5-2 ಗೋಲುಗಳ ಅಂತರದಲ್ಲಿ ಸೋಲನ್ನನುಭವಿಸಿದೆ. ಇದರೊಂದಿಗೆ 41 ವರ್ಷಗಳ ಬಳಿಕ ಫೈನಲ್‌ಗೇರುವ ಅವಕಾಶದಿಂದ ವಂಚಿತವಾಗಿದೆ.

ಬಿಗ್ ಬಾಸ್ ದವ್ಯಾ ಉರುಡುಗ ಪರ ನಿಂತ 'ಲಕ್ಷ್ಮಿ ಬಾರಮ್ಮ' ಚಿನ್ನು ಕವಿತಾ ಗೌಡ!

ಬಿಗ್ ಬಾಸ್‌ ಸೀಸನ್‌ 8 ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಯಾರು ಅತಿ ಹೆಚ್ಚು ವೋಟ್ ಪಡೆಯುತ್ತಾರೋ, ಅವರು ಫಿನಾಲೆ ಹಂತ ತಲುಪುತ್ತಾರೆ. ಇಲ್ಲವಾದರೆ ಮಿಡ್‌ ವೀಕ್ ಎಲಿಮಿನೇಷನ್‌ನಿಂದ ಹೊರ ಬರುತ್ತಾರೆ. ಫಿನಾಲೆ ವೀಕ್ ಖುಷಿ ಹಾಗೂ ಮೆನಯಿಂದ ಹೊರ ಹೋಗುವ ಭಯ ಎರಡೂ ಸಮನಾಗಿ ಎಂಜಾಯ್ ಮಾಡುತ್ತಿರುವ ಸ್ಪರ್ಧಿಗಳ ಪರ ಹೊರಗಿರುವ ಸಿನಿ ಸ್ನೇಹಿತರು ವೋಟ್‌ಗಾಗಿ ಅಪೀಲ್ ಮಾಡುತ್ತಿದ್ದಾರೆ. 

3-5 ವರ್ಷದಲ್ಲಿ ದುಪ್ಪಟ್ಟಾಗಲಿದೆ ಚಿನ್ನದ ದರ..!

ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮುಂದಿನ 3-5 ವರ್ಷದಲ್ಲಿ ಚಿನ್ನದ ಬೆಲೆ ಎರಡು ಪಟ್ಟು ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಿಂದಿನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚೇ ಇದೆ.

ಕರ್ನಾಟದಲ್ಲಿವೆ ದೇಶದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳು!

ಇತ್ತೀಚೆಗೆ ಸಂಸತ್ತಿಗೆ ತಿಳಿಸಲಾದ ಮಾಹಿತಿಯಲ್ಲಿ ಕರ್ನಾಟಕ ಮತ್ತು ದಿಲ್ಲಿಯಲ್ಲಿ 20 ವರ್ಷ ಮೀರಿದ ವಾಹನಗಳು ಅತಿಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದು ಗೊತ್ತಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳಿವೆ. ದೇಶದಲ್ಲಿ ಅಂದಾಜು 2.15 ಕೋಟಿ ಹಳೆಯ ವಾಹನಗಳಿವೆ.

ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅತಿಥಿಗಳಾಗಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಆಹ್ವಾನ

ಜಾಗತಿಕ ಕ್ರೀಡಾಜಾತ್ರೆ ಎನಿಸಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಆಗಸ್ಟ್‌ 15ರಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣವಾಗುವ ಸಂದರ್ಭದಲ್ಲಿ ಅತಿಥಿಗಳಾಗಿ ಹಾಜರಿರುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
 

click me!