Asianet Suvarna News Asianet Suvarna News

ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ: ಭುಗಿಲೆದ್ದ ಆಕ್ರೋಶ!

* ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ, 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ

* ಅತ್ಯಾಚಾರಗೈದು ಕೊಲೆ ಮಾಡಿದ ಕಾಮುಕರು

* ಟ್ವಿಟರ್‌ನಲ್ಲಿ ಸೌಂಡ್‌ ಮಾಡ್ತಿದೆ #JusticeForDelhiCanttGirl 

9 year old raped killed forcibly cremated netizens demand JusticeForDelhiCanttGirl pod
Author
Bangalore, First Published Aug 3, 2021, 3:26 PM IST
  • Facebook
  • Twitter
  • Whatsapp

ನವದೆಹಲಿ(ಆ.03): ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ, 9 ವರ್ಷದ ದಲಿತ ಬಾಲಕಿಯ ಅತ್ಯಾಚಾರಗೈದು ಬಳಿಕ ಬಲವಂತವಾಗಿ ಸುಟ್ಟುಹಾಕಿ ಕೊಲೆ ಮಾಡಿದ ಪ್ರಕರಣ ಭಾರೀ ಕಾವು ಪಡೆದುಕೊಳ್ಳುತ್ತಿದೆ. #JusticeForDelhiCanttGirl ಹ್ಯಾಷ್‌ ಟ್ಯಾಗ್‌ನಡಿ ಟ್ವಿಟರ್‌ನಲ್ಲಿ ಅಭಿಯಾನ ಆರಂಭವಾಗಿದೆ. ನೈರುತ್ಯ ದೆಹಲಿಯ ಡಿಸಿಪಿ, ಪಿಂಡಿತ್ ಪ್ರತಾಪ್ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ಮಾಹಿತಿ ಸಿಕ್ಕಿದಾಗ ಹಳೆ ನಂಗಲ್ ಗ್ರಾಮದ ಸುಮಾರು 200 ಜನರು ಶ್ಮಶಾನದಲ್ಲಿ ಜಮಾಯಿಸಿದ್ದರು. ತದ ನಂತರ ಪ್ರಕರಣದ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.

ಏನಿದು ಪ್ರಕರಣ?

ಈ ಪ್ರಕರಣ ಸಂಬಂಧ ಪೊಲೀಸರು ಪೂಜಾರಿ ರಾಧೇಶ್ಯಾಮ್, ಸಲೀಂ, ಲಕ್ಷ್ಮೀನಾರಾಯಣ, ಕುಲದೀಪ್ ಹೀಗೆ ನಾಲ್ವರು ಆರೋಪಿಗಳನ್ನು ಐಪಿಸಿ 304, 342, 201 ಮತ್ತು ಎಸ್ಸಿ / ಎಸ್ಟಿ ಕಾಯ್ದೆಯಡಿ ಬಂಧಿಸಿದ್ದಾರೆ. ವಾಟರ್ ಕೂಲರ್ ನಿಂದ ವಿದ್ಯುತ್ ಸ್ಪರ್ಶವಾಗಿದೆ ಎಂದು ಬಾಲಕಿಯ ತಾಯಿಯನ್ನು ಶ್ಮಶಾನಕ್ಕೆ ಕರೆಸಲಾಗಿದೆ. ಅಲ್ಲದೇ ಪೋಲಿಸರಿಗೆ ಕರೆ ಮಾಡಿದರೆ ಮರಣೋತ್ತರ ಪರೀಕ್ಷೆಯಲ್ಲಿಮಗುವಿನ ಅಂಗಾಂಗಗಳನ್ನು ಹೊರತೆಗೆಯಲಾಗುತ್ತದೆ ಎಂದು ಮಾತನಾಡಿಕೊಂಡಿದ್ದಾರೆ. ಹೀಗಾಗಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ, ಅಂತಿಮ ಸಂಸ್ಕಾರ ನಡೆಸಲಾಗಿಗಿದೆ. ಆದರೆ, ಬಾಲಕಿಯ ತಂದೆ ಚಿರಾಡಿದ್ದರಿಂದ ಈ ವಿಷಯ ಪೊಲೀಸರಿಗೆ ತಲುಪಿದೆ.

ಬಾಲಕಿ  #Valmikicaste ಜಾತಿಯವಳು, ಸಿಎಂ ಕೇಜ್ರೀವಾಲ್ ಸೈಲೆಂಟ್

ಈ ಪ್ರಕರಣ ಸಂಬಂಧ ದೆಹಲಿ ಸರ್ಕಾರಕ್ಕೂ ಬಿಸಿ ಮುಟ್ಟಿಸಲಾಗುತ್ತಿದೆ. ಹೆಣ್ಣು ಮಗುವಿಗೆ ನ್ಯಾಯ ದೊರಕಿಸಿಕೊಡಲು ಟ್ವಿಟರ್‌ನಲ್ಲಿ ಅಭಿಯಾನ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಒಬ್ಬ ಬಳಕೆದಾರ ಈ ಬಗ್ಗೆ ಬರೆಯುತ್ತಾ - ಅರವಿಂದ ಕೇಜ್ರಿವಾಲ್, ಈ ಸಮಸ್ಯೆಯನ್ನು ಪ್ರಸ್ತಾಪಿಸಲು ಮತ್ತು #JusticeForDelhiCanttGirl ಅನ್ನು ಖಚಿತಪಡಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕರಣವನ್ನು #LucknowGirl ಜೊತೆ ಲಿಂಕ್ ಮಾಡಿಯೂ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರನೊಬ್ಬ ಹುಡುಗಿ ತಪ್ಪು ಮಾಡಿದರೆ ಅವಳು ತಪ್ಪಿತಸ್ಥಳು, ಆಕೆಗೆ ಶಿಕ್ಷೆಯಾಗಬೇಕು. ಅದೇ ರೀತಿ, ಹುಡುಗಿಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆದರೆ, ತಪ್ಪು ಮಾಡಿದವರಿಗೂ ಕಠಿಣ ಶಿಕ್ಷೆಯಾಗಬೇಕು. ಆ 9 ವರ್ಷದ ಹುಡುಗಿಯ ಪರ ಕೈಮುಗಿದು ಆರೋಪಿಗಳನ್ನು ತಕ್ಷಣ ಬಂಧಿಸಿ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಬಹುಜನ ಸಮಾಜದ ಹೆಣ್ಮಕ್ಕಳು ತಮ್ಮ ಗೌರವವನ್ನು ಉಳಿಸಿಕೊಳ್ಳಲು, ಫೂಲನ್ ದೇವಿಯಾಗಬೇಕು ಎಂದೂ ಹಲವರು ಬರೆದಿದ್ದಾರೆ.

Follow Us:
Download App:
  • android
  • ios