ಮುಂದಿನ ಪ್ರಧಾನಿ ಯಾರಾಗಬೇಕು ಸಮೀಕ್ಷೆ, ಭಾರತಕ್ಕೆ ಟಿ20 ವಿಶ್ವಕಪ್ ಪರೀಕ್ಷೆ; ಆ.17ರ ಟಾಪ್ 10 ಸುದ್ದಿ!

By Suvarna NewsFirst Published Aug 17, 2021, 5:12 PM IST
Highlights

ಮುಂದಿನ ಪ್ರಧಾನಿ ಯಾರಾಗಬೇಕು ಅನ್ನೋ ಸಮೀಕ್ಷೆ ವರದಿ ಹೊರಬಿದ್ದಿದೆ. ಇದರ ಪ್ರಕಾರ ಮೋದಿಯೇ ನಂಬರ್ 1 ಆಯ್ಕೆಯಾಗಿದೆ. ಇತ್ತ ಮೋದಿ ಒಲಿಂಪಿಕ್ಸ್ ಪ್ರತಿನಿಧಿಸಲಿರುವ ಪ್ಯಾರಾ ಅಥ್ಲೀಟ್‌ಗಳನ್ನು ಹುರಿದುಂಬಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉದ್ಯೋಗಿಗಳ ಭಾರತ ತಲುಪಿದ್ದಾರೆ. ಪಿಂಕ್ ಬಿಕಿನಿಯಲ್ಲಿ KGF ಚೆಲುವೆ, ಅಮೆರಿಕನ್ ನಟಿಯ ಕೈಯಲ್ಲಿ ಸೀತಾಮಾತೆಯ ಟ್ಯಾಟೂ ಸೇರಿದಂತೆ ಆಗಸ್ಟ್ 17ರ ಟಾಪ್ 10 ಸುದ್ದಿ ವಿವರ.
 

 ನೀವೆಲ್ಲರೂ ರೋಲ್ ಮಾಡೆಲ್ಸ್‌: ಪ್ಯಾರಾಥ್ಲೀಟ್‌ಗಳನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

ಮುಂಬರುವ ಆಗಸ್ಟ್ 24ರಿಂದ ಆರಂಭವಾಗಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಭಾರತ ಸಜ್ಜಾಗಿದೆ. ಭಾರತದ 10 ಪ್ಯಾರಾಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಇಂದು(ಆ.17) ವರ್ಚುವಲ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿ ನೀವೆಲ್ಲರೂ ಇಡೀ ದೇಶಕ್ಕೆ ರೋಲ್‌ ಮಾಡೆಲ್‌ಗಳು ಎಂದು ಮುಂಬರುವ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ.

ಕಾಬೂಲ್‌ನಿಂದ ಜಾಮ್‌ನಗರ ತಲುಪಿದ IAF ವಿಮಾನ: ಭಾರತ ಮಾತೆಗೆ ಜಯಕಾರ!

ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉದ್ಯೋಗಿಗಳನ್ನು ಹೊತ್ತ ಕಾಬೂಲ್‌ನಿಂದ ಹೊರಟ ಭಾರತೀಯ ವಾಯುಪಡೆಯ ಸಿ -17 ವಿಮಾನ ಗುಜರಾತ್‌ನ ಜಾಮ್ ನಗರವನ್ನು ತಲುಪಿದೆ. 

ಮುಂದಿನ ಪ್ರಧಾನಿ ಯಾರಾಗಬೇಕು? ಮೋದಿಯೇ ನಂಬರ್‌ 1 ಆಯ್ಕೆ!

ಲೋಕಸಭಾ ಚುನಾವಣೆಗೆ ಇನ್ನೂ 3 ವರ್ಷ ಬಾಕಿ ಇರುವಾಗಲೇ ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ‘ಮೂಡ್ ಆಫ್ ದ ನೇಷನ್’ ಹೆಸರಲ್ಲಿ ದೇಶವ್ಯಾಪಿ ಸಮೀಕ್ಷೆ ನಡೆಸಿದೆ

3.5 ಲಕ್ಷ ಸೈನಿಕರ ಆಫ್ಘನ್‌ ಪಡೆ 75,000 ಉಗ್ರರಿಗೆ ಸೋತಿದ್ದೇಕೆ?

ಅಫ್ಘಾನಿಸ್ತಾನದ ಸೈನಿಕ ಬಲ 2.5 ಲಕ್ಷದಷ್ಟಿದೆ. ಪೊಲೀಸರನ್ನೂ ಸೇರಿಸಿದರೆ ಅದರ ಸಂಖ್ಯೆ 3.5 ಲಕ್ಷ ಮೀರುತ್ತದೆ. ಆದರೂ 60 ಸಾವಿರದಿಂದ 75 ಸಾವಿದಷ್ಟಿರುವ ತಾಲಿಬಾನಿಗಳಿಗೆ ಸೇನೆ ಶರಣಾಗಿದೆ.

ಐಸಿಸಿ ಕ್ರಿಕೆಟ್ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ..!

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಸರಿಯಾಗಿ 2 ತಿಂಗಳು ಮುಂಚಿತವಾಗಿ ಮಂಗಳವಾರ(ಆ.17) ಪ್ರಕಟಿಸಲಾಗಿದ್ದು, ನವೆಂಬರ್ 17ರಿಂದ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಪಿಂಕ್ ಬಿಕಿನಿಯಲ್ಲಿ KGF ಚೆಲುವೆ: ವೈರಲ್ ಪೋಸ್ಟ್ ತಕ್ಷಣ ಡಿಲೀಟ್

ಬಾಲಿವುಡ್ ನಟಿ ಮೌನಿ ರಾಯ್ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಹಳಷ್ಟು ಸಲ ಮಾಲ್ಡೀವ್ಸ್‌ಗೆ ಭೇಟಿ ಕೊಡೋ ನಟಿ ಈಗ ಮತ್ತೆ ತಮ್ಮ ವೆಕೇಷನ್‌ಗೆ ದ್ವೀಪರಾಷ್ಟ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ

ಪ್ರಿನ್ಸಿಪಾಲ್, ಉಪ ನಿರ್ದೇಶಕ ಹಾಗೂ ಸಹಾಯಕ ಸೇರಿದಂತೆ ಒಟ್ಟು 155  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಸೆಪ್ಟೆಂಬರ್ 02, 2021ರೊಳಗೆ ಅರ್ಜಿ ಸಲ್ಲಿಸಬಹುದು.

ಅಮೆರಿಕನ್ ನಟಿಯ ಕೈಯಲ್ಲಿ ಸೀತಾಮಾತೆಯ ಟ್ಯಾಟೂ

ವಿದೇಶಿಯರಿಗೆ ಹಿಂದುತ್ವ, ದೇಶಿಯ ಸಂಸ್ಕೃತಿ, ಧರ್ಮ, ಗ್ರಂಥಗಳ ಕುರಿತು ವಿಶೇಷ ಆಕರ್ಷಣೆ. ಆಕರ್ಷಣೆಯಷ್ಟೇ ಅಲ್ಲ ರಾಮಾಯಣ, ಮಹಾಭಾರತದವನ್ನು ನಮ್ಮವರಿಗಿಂತ ಹೆಚ್ಚು ವಿದೇಶಿಗರೇ ಓದಿ ಅಳವಡಿಸಿಕೊಳ್ಳುತ್ತಾರೆ. ಬಹಳಷ್ಟು ಜನ ಇಲ್ಲಿ ಬಂದು ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ವಿದೇಶಿ ಸೆಲೆಬ್ರಿಟಿಗಳಿಗೂ ಈ ಕುರಿತು ವಿಶೇಷ ಆಕರ್ಷಣೆ. ವಿದೇಶಿ ನಟಿಯೊಬ್ಬರು ಈಗ ಸೀತಾಮಾತೆಯ ಟ್ಯಾಟೂವನ್ನು ತಮ್ಮ ಕೈಯಲ್ಲಿ ಹಾಕಿಕೊಂಡಿದ್ದಾರೆ.

ಮೋದಿ ಇಲ್ಲಾಂದ್ರೆ ಓಡುತ್ತಿರೋ ಅಫ್ಘಾನಿಗಳ ಸ್ಥಾನದಲ್ಲಿ ನಾವೂ ಇರಬಹುದು: ಕಂಗನಾ

ಅಫ್ಘಾನ್ ತಾಲಿಬಾನಿಗಳ ವಶಕ್ಕೆ ಬಂದ ನಂತರ ಅಲ್ಲಿನ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಾಲಿಬಾನಿಗಳ ಕ್ರೂರತೆ, ನಾಗರಿಕ ಕಷ್ಟದ ವಿಡಿಯೋಗಳು ಮನ ಕಲಕುವಂತಿದೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.

click me!