* ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ* ಅಕ್ಟೋಬರ್ 17ರಿಂದ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮ ಆರಂಭ* ಭಾರತಕ್ಕೆ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸವಾಲು

ದುಬೈ(ಆ.17): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಸರಿಯಾಗಿ 2 ತಿಂಗಳು ಮುಂಚಿತವಾಗಿ ಮಂಗಳವಾರ(ಆ.17) ಪ್ರಕಟಿಸಲಾಗಿದ್ದು, ನವೆಂಬರ್ 17ರಿಂದ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಟಿ20 ವಿಶ್ವಕಪ್ ಟೂರ್ನಿಯು ಒಟ್ಟು ಎರಡು ಸುತ್ತುಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆದರೆ, ಎರಡನೇ ಹಂತರದಲ್ಲಿ ಸೂಪರ್ 12 ಪಂದ್ಯಗಳು ನಡೆಯಲಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಗ್ರೂಪ್‌ 'ಬಿ'ನಲ್ಲಿ ಸ್ಥಾನ ಪಡೆದಿರುವ ಆತಿಥೇಯ ಓಮನ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಅಕ್ಟೋಬರ್ 17ರಂದು ಮೊದಲ ಪಂದ್ಯವನ್ನು ಆಡಲಿವೆ. ಇನ್ನು ಅದೇ ದಿನ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳು ಗೆಲುವಿಗಾಗಿ ಕಾದಾಟ ನಡೆಸಲಿವೆ. ಇನ್ನು ಅರ್ಹತಾ ಸುತ್ತಿನ 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಶ್ರೀಲಂಕಾ, ಐರ್ಲೆಂಡ್‌, ನೆದರ್ಲ್ಯಾಂಡ್‌ ಹಾಗೂ ನಮೀಬಿಯಾ ತಂಡಗಳು ಮರುದಿನ ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ 17ರಿಂದ ಅಕ್ಟೋಬರ್ 22ರವರೆಗೆ ನಡೆಯಲಿವೆ.

Scroll to load tweet…

ಇನ್ನು ಪ್ರಧಾನ ಸುತ್ತಿನ ಪಂದ್ಯಗಳು ಅಂದರೆ ಸೂಪರ್ 12 ಪಂದ್ಯಗಳು ಅಬುದಾಬಿಯಲ್ಲಿ ಅಕ್ಟೋಬರ್ 23ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಅದೇ ದಿನ ದುಬೈನಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಬಲಿಷ್ಠ ಇಂಗ್ಲೆಂಡ್ ತಂಡಗಳು ತಮ್ಮ ಅಭಿಯಾನ ಆರಂಭಿಸಲಿವೆ.

ಭಾರತಕ್ಕೆ ಮೊದಲ ಪಂದ್ಯದಲ್ಲೇ ಪಾಕ್ ಎದುರಾಳಿ: ಅಕ್ಟೋಬರ್ 24ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈ ಆತಿಥ್ಯವನ್ನು ವಹಿಸಲಿದೆ. 

Scroll to load tweet…

ಮೊದಲ ಸೆಮಿಫೈನಲ್ ಪಂದ್ಯವು ಅಬುಧಾಬಿಯಲ್ಲಿ ನವೆಂಬರ್ 10ರಂದು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭವಾದರೆ, ಎರಡನೇ ಸೆಮಿಫೈನಲ್ ಪಂದ್ಯವು ದುಬೈನಲ್ಲಿ ನಡೆಯಲಿದೆ. ಸೆಮಿಪೈನಲ್‌ಗೆ ಒಂದು ದಿನವನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ. ಇನ್ನು ನವೆಂಬರ್ 14ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.