ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ 1.25 ಲಕ್ಷ ಕೋಟಿ ಸಿರಿವಂತನ ಪುತ್ರಿ!

By Santosh NaikFirst Published May 7, 2024, 9:16 PM IST
Highlights

ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದರೂ ತನ್ನ ಅತ್ಯಂತ ಕಠಿಣ ನಿರ್ಧಾರದಲ್ಲಿ 29 ವರ್ಷದ ಯುವ ಗಾಯಕಿ, ಸಂಗೀತ ಲೋಕಕ್ಕೆ ವಿದಾಯ ಹೇಳಿದ್ದಾರೆ. ಈ ಕುರಿತಾದ ನಿರ್ಧಾರವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.

ಬೆಂಗಳೂರು (ಮೇ.7):  ಆಕೆ ಅಂತಿಂಥ ಹೆಣ್ಣುಮಗಳಲ್ಲ. ದೇಶದ ಪ್ರತಿಷ್ಠಿತ ಫ್ಯಾಶನ್‌ ನೆಟ್‌ವರ್ಕ್‌ ಸಂಸ್ಥೆಯ ಮಾಲೀಕನ ಮಗಳು. ಸಿಮೆಂಟ್‌, ಕೆಮಿಕಲ್‌, ರಿಟೇಲ್‌, ಫೈನಾನ್ಶಿಯಲ್‌ ಸರ್ವೀಸ್‌ ಸೇರಿದಂತೆ ದೇಶದ ಸಕಲ ಕ್ಷೇತ್ರಗಳಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ, 2023ರಲ್ಲಿ ದೇಶದ 9ನೇ ಅತ್ಯಂತ ಶ್ರೀಮಂತ ಕುಮಾರ ಮಂಗಲಂ ಬಿರ್ಲಾ ಅವರ ಹಿರಿಯ ಪುತ್ರಿ ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ತಂದೆಯ ವಾಣಿಜ್ಯ ಉದ್ಯಮಗಳನ್ನು ನೋಡಿಕೊಳ್ಳುವ ಹಾಗೂ ಅದರ ಬಗ್ಗೆ ಗಮನ ನೀಡುವ ಸಲುವಾಗಿ ತನ್ನ ಇಷ್ಟದ ಸಂಗೀತ ಕ್ಷೇತ್ರವನ್ನು ಬಿಡುತ್ತಿರುವುದಾಗಿ ಅನನ್ಯಾ ಬಿರ್ಲಾ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇವರ ನಿರ್ಧಾರವನ್ನು ಕೇಳಿ ಸೆಲ್ರಬಿಟಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಆಕೆಯ ಭವಿಷ್ಯದ ದಿನಗಳು ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.

ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಅವರು ಬರೆದುಕೊಂಡಿದ್ದು, 'ಇದು ನನ್ನ ಅತ್ಯಂತ ಕಠಿಣ ನಿರ್ಧಾರ. ನಾನು ನಡೆಸುವ ಮತ್ತು ನಿರ್ಮಿಸುತ್ತಿರುವ ಎರಡೂ ವ್ಯವಹಾರಗಳನ್ನು ಸಮತೋಲನಗೊಳಿಸುವ ಹಂತವನ್ನು ನಾನು ತಲುಪಿದ್ದೇನೆ. ಆದರೆ, ಇನ್ನು ಮುಂದೆ ಸಂಗೀತವು ನನಗೆ ಅಸಾಧ್ಯವಾಗುತ್ತಿದೆ ಮತ್ತು ನಾನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನನ್ನ ಮೇಲೆ ಟೋಲ್ ತೆಗೆದುಕೊಳ್ಳುತ್ತಿದೆ. ಇಷ್ಟು ವರ್ಷಗಳಿಂದ ನಾನು ಬಿಡುಗಡೆ ಮಾಡಿದ ಸಂಗೀತ ಆಲ್ಬಂಗೆ ನೀವು ತೋರಿಸಿದ ಎಲ್ಲಾ ಪ್ರೀತಿಗೆ ಥ್ಯಾಂಕ್‌ ಯು ಎಂದಷ್ಟೇ ಹೇಳಲು ಸಾಧ್ಯ. ನಮ್ಮದೇ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿರುವುದರಿಂದ ನಮ್ಮದೇ ಜನರು ಮಾಡಿದ ಇಂಗ್ಲಿಷ್ ಸಂಗೀತವನ್ನು ನಾವು ಒಂದು ದಿನ ಮೆಚ್ಚಬಹುದು ಎಂದು ನಾನು ಭಾವಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್‌ ಯು. ಈಗ ನನ್ನೆಲ್ಲಾ ಶಕ್ತಿಯನ್ನು ಬ್ಯುಸಿನೆಸ್‌ ವರ್ಲ್ಡ್‌ನಲ್ಲಿ ಹೂಡುವ ಸಮಯ' ಎಂದು 1.25 ಲಕ್ಷ ಕೋಟಿ ಶ್ರೀಮಂತಿಕೆಯ ಕುಮಾರ ಮಂಗಲಂ ಬಿರ್ಲಾನ ಪುತ್ರಿ ಬರೆದುಕೊಂಡಿದ್ದಾರೆ.



ಅವರು ಪೋಸ್ಟ್‌ಗೆ  "ಮರೆಯಲಾಗದ ನೆನಪುಗಳು, ಎಲ್ಲಾ ಪ್ರೀತಿಗೆ ಧನ್ಯವಾದಗಳು' ಎನ್ನುವ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ. ಗಾಯಕ ಅರ್ಮಾನ್ ಮಲಿಕ್, ಸಾನಿಯಾ ಮಿರ್ಜಾ, ಬಾಬಿ ಡಿಯೋಲ್ ಮತ್ತು ಇತರರು ಅನನ್ಯಾ ಬಿರ್ಲಾ ಅವರ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ. "ಅನನ್ಯ ಇದನ್ನು ಓದಲು ತುಂಬಾ ದುಃಖವಾಗಿದೆ, ಆದರೆ ನೀವು ಮಾಡುತ್ತಲೇ ಇದ್ದೀರಿ! ನಿಮ್ಮ ಎಲ್ಲಾ ಕನಸುಗಳು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಹೆಚ್ಚಿನ ಶಕ್ತಿ ಸಿಗಲಿ' ಎಂದು ಅರ್ಮಾನ್‌ ಮಲೀಕ್‌ ಬರೆದಿದ್ದಾರೆ.

ಅನನ್ಯಾ ಬಿರ್ಲಾ ಅವರು 'ಲಿವಿನ್ ದಿ ಲೈಫ್ ಇನ್ 2016' ಎಂಬ ಸಿಂಗಲ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇದು ಅವರ ಅಂತರರಾಷ್ಟ್ರೀಯ ಮನ್ನಣೆಯನ್ನು ನೀಡಿತು. ತನ್ನ ಸಿಂಗಲ್‌ಗಾಗಿ ಪ್ಲಾಟಿನಂ ಸ್ಥಾನಮಾನವನ್ನು ಪಡೆದ ಮೊದಲ ಭಾರತೀಯ ಕಲಾವಿದೆ ಇವರಾಗಿದ್ದಾರೆ.

ಪ್ರತಿಷ್ಠಿತ ಉದ್ಯಮಿಯ ಮಗಳು ಈ ಪ್ರಸಿದ್ಧ ಗಾಯಕಿ, 17ರ ವಯಸ್ಸಿಗೆ ತನ್ನದೇ ಕಂಪನಿ ಆರಂಭಿಸಿದ್ದಳು!

ಇದಲ್ಲದೆ, ಅವರು ಅಮೇರಿಕನ್ ರಾಷ್ಟ್ರೀಯ ಟಾಪ್ 40 ಪಾಪ್ ರೇಡಿಯೋ ಶೋ, ಸಿರಿಯಸ್ XM ಹಿಟ್ಸ್‌ನಲ್ಲಿ ಕಾಣಿಸಿಕೊಂಡರು. ಅನನ್ಯಾ ಬಿರ್ಲಾ ಅವರು 2022 ರಲ್ಲಿ ಅಜಯ್ ದೇವಗನ್ ಅನ್ನು ನಾಯಕರಾಗಿದ್ದ  'ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್' ವೆಬ್ ಸರಣಿಯಲ್ಲಿ ನಟಿಸಿದ್ದರು.  ಇನಾಮ್‌ ಮೂಲಕ ವೆಬ್‌ಸಿರೀಸ್‌ಗೆ ಹಾಡು ಹಾಡಿದ್ದರು.

ಸಕತ್ ಹಾಟ್‌ ಆಗಿರೋ ಈ ಗಾಯಕಿ ಯಾರ ಮಗಳು ಗೊತ್ತಾ?

 

 
 
 
 
 
 
 
 
 
 
 
 
 
 
 

A post shared by Ananya Birla (@ananyabirla)

 

click me!