
ಹರ್ಯಾಣ(ಮೇ.07) ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪಕ್ಷಗಳು,ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಹರ್ಯಾಣದಲ್ಲಿ ಬಿರುಗಾಳಿ ಎದ್ದಿದೆ. ಬಿಜೆಪಿ ನೇತೃತ್ವದ ನಯಬ್ ಸಿಂಗ್ ಸೈನಿ ಸರ್ಕಾರದ ಬುಡ ಅಲುಗಾಡುತ್ತಿದೆ. ಕಾರಣ ಮೂವರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವ ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.
ಪಕ್ಷೇತರ ಶಾಸಕರಾದ ಸೊಂಬೀರ್ ಸಾಂಗ್ವಾನ್, ರಂಧೀರ್ ಗೊಲ್ಲೆನ್ ಹಾಗೂ ಧರ್ಮಪಾಲ್ ಗೊಂಡರ್ ಇದೀಗ ಕಾಂಗ್ರೆಸ್‌ನತ್ತ ವಾಲಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿರುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಹರ್ಯಾಣ ಮಾಡಜಿ ಸಿಂ ಭೂಪೇಂದ್ರ ಪಟೇಲ್ ಹಾಗೂ ಕಾಂಗ್ರೆಸ್ ಇತರ ನಾಯಕರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2024: ಹರ್ಯಾಣದ 118 ವರ್ಷದ ಧರಂವೀರ್ ವಿಶ್ವದ ಅತಿ ಹಿರಿಯ ಮತದಾರ
90 ಶಾಸಕರ ಹರ್ಯಾಣ ವಿಧಾನಸಭದ ಬಲಾಬಲದಲ್ಲಿ ಸದ್ಯ ಬಿಜೆಪಿ ಸರ್ಕಾರದ ಸಂಖ್ಯೆ 40 ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಬೆಂಬಲ ವಾಪಸ್ ಪಡೆಯುವ ಮೊದಲೇ ಜೆಜೆಪಿ ಪಕ್ಷದ ಶಾಸಕರು ಬೆಂಬಲ ವಾಪಸ್ ಪಡೆದುಕೊಂಡಿದ್ದಾರೆ. ಇದೀಗ ಸರ್ಕಾರ ನಡೆಸಲು ನಯಬ್ ಸೈನಿ ಬಳಿ ಸಂಖ್ಯಾಬಲದ ಕೊರತೆ ಕಾಣುತ್ತಿದೆ. ನಯಬ್ ಸೈನಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಎಪ್ರಿಲ್ ತಿಂಗಳಲ್ಲೂ ನಯಬ್ ಸಿಂಗ್ ಸೈನಿ ಸರ್ಕಾರ ಇದೇ ರೀತಿ ಪರಿಸ್ಥಿತಿ ಎದುರಿಸಿತ್ತು. ಈ ವೇಳೆ ಜೆಜೆಪಿ ಪಕ್ಷವನ್ನು ಇಬ್ಬಾಗ ಮಾಡಿದ್ದ ಬಿಜೆಪಿ ಐವರು ಶಾಸಕರ ಬೆಂಬಲ ಪಡೆದು ಸರ್ಕಾರ ಉಳಿಸಿಕೊಂಡಿದ್ದರು. ಹಿಂದಿನ ಸಿಎಂ ಮನೋಹರಲಾಲ್ ಖಟ್ಟರ್ ರಾಜೀನಾಮೆ ನೀಡಿದ ಕಾರಣ ಸೈನಿ ಮುಖ್ಯಮಂತ್ರಿಯಾಗಿ ಪ್ರಮಾಣಚನ ಸ್ವೀಕರಿಸಿದ್ದರು. ಆದರೆಸಂಖ್ಯಾಬಲದ ಸಮಸ್ಯೆ ಕಾರಣದಿಂದ ವಿಶ್ವಾಸಮತ ಕೋರಿದರು. ವಿಶ್ವಾಸಮತ ಯಾಚನೆಯ ವೇಳೆ ಸದನಕ್ಕೆ ಗೈರುಹಾಜರಾಗುವಂತೆ ಅಭಯ್ ಚೌಟಾಲಾ ಅವರ ಜೆಜೆಪಿ ತನ್ನ 10 ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆದಾಗ್ಯೂ, ವಿಶ್ವಾಸ ಮತದ ವಿಷಯ ಕೈಗೆತ್ತಿಕೊಂಡಾಗ, ಅದರ 5 ಶಾಸಕರು ಸದನದಿಂದ ನಿರ್ಗಮಿಸಿದರು. ಬಿಜೆಪಿ ಬೆಂಬಲಿಸುವ 5 ಶಾಸಕರು ಸದನದಲ್ಲೇ ಉಳಿದರು. ಇದು ಜೆಜೆಪಿ ಒಡಕು ಬಯಲು ಮಾಡಿತು.
ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ಒಬಿಸಿ ನಾಯಕ ನಯಬ್ ಸಿಂಗ್ ಸೈನಿ ಪ್ರಮಾಣವಚನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ