ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆಯ ಸಹೋದರಿನಿಗೆ ಗನ್‌ಮ್ಯಾನ್ ರಕ್ಷಣೆ ನೀಡಲಾಗಿದೆ. ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ಯುರೋಪ್‌ನಲ್ಲಿ ಭಾರತೀಯ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಸಾಲ ಮುಂದೂಡಿಕೆ ಮೇಲಿನ ಚಕ್ರಬಡ್ಡಿ ಮಾತ್ರ ಮನ್ನ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಸುಪ್ರೀಂ ನಿರಾಕರಿಸಿದೆ. ಸಿಎಸ್‌ಕೆ ಮೊದಲೇ ತಿಳಿಯುತ್ತಾ ಸೋಲು ಗೆಲುವು?, ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್ ಸೇರಿದಂತೆ ಅಕ್ಟೋಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಹತ್ರಾಸ್ ಸಂತ್ರಸ್ತೆಯ ಸೋದರಗೆ ಗನ್‌ಮ್ಯಾನ್!...
undefined
ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆಯ ಕುಟುಂಬಕ್ಕೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ. ಸಂತ್ರಸ್ತೆ ಸೋದರನಿಗೆ ಇಬ್ಬರು ಗನ್ ಮ್ಯಾನ್‌ಗಳನ್ನು ನೀಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ 24 ಗಂಟೆಯೂ 12-15 ಸಿಬ್ಬಂದಿಗಳು ಭದ್ರತೆ ನೀಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಡಿಕೆಶಿ ವಿರುದ್ಧ ಎಫ್ಐಆರ್‌ನಲ್ಲೇನಿದೆ?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ನಡೆಸಿದ್ದು ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದೆ. ಈ ವೇಳೆ ದಾಖಲಾದ ಎಫ್ಐಆರ್‌ನಲ್ಲೇನಿದೆ ಮಾಹಿತಿ
ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ತೀವ್ರ ವಿರೋಧ, ಪಟ್ಟಿಯಿಂದ ಕೈಬಿಡಲು ಆಗ್ರಹ!...
ಇಲ್ಲಿನ ಭಾರತೀಯ ದೂತಾವಾಸ ಹಮ್ಮಿಕೊಂಡಿರುವ ಸ್ಟಾರ್ಟಪ್ ಸಮ್ಮೇಳನಕ್ಕೆ ಬೆಂಗಳೂರು ದಕ್ಷಿಣದ ಸಂಸದರೂ ಆಗಿರುವ ಯುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೀಡಾಗಿದೆ. ಸೂರ್ಯ ಅವರನ್ನು ಭಾಷಣಕಾರರ ಪಟ್ಟಿಯಿಂದ ಕೈಬಿಡಬೇಕು ಎಂದು ಯುರೋಪ್ನ ಕೆಲವು ಭಾರತೀಯ ಸಂಘಟನೆಗಳು ಒತ್ತಾಯಿಸಿವೆ.
CSK ತಂಡಕ್ಕೆ ಮ್ಯಾಚ್ ಹಿಂದಿನ ದಿನವೇ ಸೋಲು-ಗೆಲುವು ಗೊತ್ತಾಗುತ್ತೆ..!...
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಲೋಕದ ಅತೀಂದ್ರಿಯ ಶಕ್ತಿಯುಳ್ಳ ಟೀಂ. ಈ ತಂಡಕ್ಕೆ ಪಂದ್ಯದ ಹಿಂದಿನ ದಿನವೇ ಸೋಲು-ಗೆಲುವಿನ ಬಗ್ಗೆ ಗೊತ್ತಾಗುತ್ತೆ ಅಂದ್ರೆ ನೀವು ನಂಬ್ತೀರಾ..?
ರಚಿತಾ ರಾಮ್ ಈಗ ಡಜನ್‌ಸ್ಟಾರ್; ಕೈಯಲ್ಲಿದೆ 12 ಚಿತ್ರಗಳು!...
ನಟಿ ರಚಿತಾ ರಾಮ್ ಕೈಯಲ್ಲಿ ಬರೋಬ್ಬರಿ 12 ಚಿತ್ರಗಳಿವೆ. ತಮ್ಮ ಹುಟ್ಟುಹಬ್ಬದ ದಿನ ಕೆಲ ಸಿನಿಮಾಗಳ ಹೆಸರು ರಿವೀಲ್ ಮಾಡಿದ್ದಾರೆ.
ಹಾಟ್ 10 ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದ ಇನ್ಫಿನಿಕ್ಸ್...
ಹೆಸರಾಂತ ಇನ್ಫಿನಿಕ್ಸ್ ಸಂಸ್ಥೆಯು ಹಾಟ್ 10 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ ರೂ 9,999. ಈ ಹೊಸ ಸ್ಮಾರ್ಟ್‌ಫೋನ್ 6 GB DDR 4 RAM ಮತ್ತು 128 GB ಇಂಟರ್ನಲ್ ಮೆಮೋರಿ ಹೊಂದಿದ್ದು ಪವರ್‌ಫುಲ್ ಹೆಲಿಯೊ G70 ಒಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ.
ಸಾಲದ ಇಎಂಐ ಚಕ್ರಬಡ್ಡಿ ಮಾತ್ರ ಮನ್ನಾ ಪ್ರಸ್ತಾವ ಒಪ್ಪದ ಸುಪ್ರೀಂ ಕೋರ್ಟ್!...
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯಿಂದ ಆರು ತಿಂಗಳು ‘ವಿನಾಯಿತಿ’ ಪಡೆದಿದ್ದ ವೈಯಕ್ತಿಕ ಸಾಲಗಾರರು ಹಾಗೂ ಸಣ್ಣ ಉದ್ದಿಮೆಗಳ ಸಾಲದ ಮೇಲಿನ ಚಕ್ರಬಡ್ಡಿಯನ್ನು (ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅಟಲ್ ಸುರಂಗ: ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ಅಪಘಾತ...
ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಟಲ್ ಸುರಂಗ ಮಾರ್ಗವನ್ನು ಇತ್ತೀಚೆಗೆ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದರು. ಮನಾಲಿ ಹಾಗೂ ಲೇಹ್ ನಡುವಿನ ಈ ಸುರಂಗದಿಂದ 46 ಕಿ.ಮೀ ಪ್ರಯಾಣ ಅಂತರ ಇಳಿಕೆಯಾಗಿದೆ. ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ರಸ್ತೆ ಅಪಘಾತಗಳು ಈ ಸುರಂಗ ಮಾರ್ಗದಲ್ಲಿ ಸಂಭವಿಸಿದೆ.
ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್!...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಕೇಂದ್ರ ಸರ್ಕಾರದ ವಿರುದ್ಧ , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಳಿ ಮಾಡಿದ್ದಾರೆ . ಪ್ರಧಾನಿ ಮೋದಿ ದೇಶ ಕಳೆದುಕೊಂಡ ಭೂಪ್ರದೇಶವನ್ನು ವಾಪಸ್ ಪಡೆದುಕೊಳ್ಳಲು ಯತ್ನ ಮಾಡುವುದಿಲ್ಲ ಎಂಬುದನ್ನು ಅರಿತುಕೊಂಡೆ ಚೀನಾ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಿರಾ ಬೈ ಎಲೆಕ್ಷನ್‌ಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ: ರಂಗೇರಿದ ಉಪಚುನಾವಣೆ..!...
ತೀವ್ರ ಕುತೂಹಲ ಮೂಡಿಸಿರುವ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದೆ.