ರಾಜ್ಯದ ಹೊಸ ಮುಖ್ಯಮಂತ್ರಿ ಯಾರು?ಬಂಧನ ಭೀತಿಯಿಂದ ಟ್ವಿಟರ್ MD ಪಾರು; ಜು.23ರ ಟಾಪ್ 10 ಸುದ್ದಿ!

By Suvarna NewsFirst Published Jul 23, 2021, 5:19 PM IST
Highlights

ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ? ರಾಜ್ಯದಲ್ಲಿ ಈ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ಹಲವು ಹೆಸರು ಕೇಳಿಬಂದಿದೆ. ಇತ್ತ ಕರ್ನಾಟಕ ಹೈಕೋರ್ಟ್ ಟ್ವಿಟರ್ ಎಂಡಿಗೆ ರಿಲೀಫ್ ನೀಡಿದೆ. ಒಲಿಂಪಿಕ್ಸ್ ಮೊದಲ ದಿನ ಭಾರತದ ಆರ್ಚರಿ ಪಟುಗಳು ಉತ್ತಮ ಹೋರಾಟ ನೀಡಿದ್ದಾರೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವೆ ಮನಸ್ತಾಪ, ಆಗಸ್ಟ್ 1 ರಿಂದ RBI ಹೊಸ ನೀತಿ ಸೇರಿದಂತೆ ಜುಲೈ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ
 

ಟ್ವಿಟರ್ ಇಂಡಿಯಾ MDಗೆ ಕರ್ನಾಟಕ ಹೈಕೋರ್ಟ್ ರಿಲೀಫ್; ಬಂಧನ ಭೀತಿಯಿಂದ ಪಾರು!

ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ವಿಚಾರಣೆಗೆ ಖುದ್ದು ಹಾಜರಾಗುವಂತೆ ಯುಪಿ ಪೊಲೀಸರು ನೀಡಿದ್ದ ನೊಟೀಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಮನೀಶ್‌ ಇದೀಗ ನಿರಾಳರಾಗಿದ್ದಾರೆ.

ಬೆಳೆ ನಾಶ ಮಾಡೋ ಕಾಡುಹಂದಿ ಬೇಟೆಗೆ ಹೈಕೋರ್ಟ್ ಅನುಮತಿ

ಕೇರಳದಲ್ಲಿ ಆನೆಗಳ ಹಬ್ಬ ನಡೆಯುತ್ತಿರುವ ಮಧ್ಯೆಯೇ ಇದೀಗ ವನ್ಯ ಜೀವಿಗಳಿಗೆ ಸಂಬಂಧಿಸಿ ಮಹತ್ವದ ಆದೇಶ ಹೊರಬಿದ್ದಿದೆ. ಕೆಲವೇ ದಿನಗಳ ಹಿಂದೆ ಕೇರಳದ ವಡಕ್ಕುನಾಥ ದೇವಸ್ಥಾನದಲ್ಲಿ ಆನೆಗಳ ಆರೋಗ್ಯ ವೃದ್ಧಿಗಾಗಿ ಆನಯೂಟ್ಟ್(ಆನೆಗೆ ತಿನ್ನಿಸುವುದು) ಕಾರ್ಯಕ್ರಮ ಆರಂಭವಾಗಿತ್ತು. ಒಂದೆಡೆ ಆನೆಗಳ ರಕ್ಷಣೆಯ ಕೆಲಸವಾಗುತ್ತಿದ್ದರೆ ಇನ್ನೊಂದೆಡೆ ಹಂದಿಗಳಿಗೆ ಕಂಟಕವಾಗುವ ಆದೇಶವನ್ನು ಕೋರ್ಟ್ ನೀಡಿದೆ.

ಟೋಕಿಯೋ 2020: ಮೊದಲ ದಿನವೇ ಭಾರತ ಆರ್ಚರಿ ಪಟುಗಳಿಂದ ಉತ್ತಮ ಪ್ರದರ್ಶನ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡುವುದಕ್ಕಿಂತ ಮೊದಲೇ ನಡೆದ ವೈಯುಕ್ತಿಕ ರ‍್ಯಾಂಕಿಂಗ್‌ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಆರ್ಚರ್‌ಗಳು ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ?: ರಾಜ್ಯಕ್ಕೆ ಬರ್ತಾರಾ ಮೇಡ್‌ ಇನ್‌ ಡೆಲ್ಲಿ ಸಿಎಂ?

ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ?, ಯಡಿಯೂರಪ್ಪ ಉತ್ತರಾಧಿಕಾರಿ ಪಟ್ಟ ಯಾರಿಗೆ ಸಿಗಲಿದೆ?, ಸಿಎಂ ಕುರ್ಚಿ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಹೈಕಮಾಂಡ್‌ ನಡೆಯೂ ಕೂಡ ಅಷ್ಟೇ ನಿಗೂಢವಾಗಿಯೇ ಇದೆ. ರಾಜ್ಯಕ್ಕೆ ಬರ್ತಾರಾ ಮೇಡ್‌ ಇನ್‌ ಡೆಲ್ಲಿ ಸಿಎಂ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

BBK8: ದಿವ್ಯಾ ಉರುಡುಗ ಹಾಗೂ ಅರವಿಂದ್ ಮನಸ್ತಾಪಕ್ಕೇನು ಕಾರಣ?

ಈ ವಾರ ಮನೆಯ ಕ್ಯಾಪ್ಟನ್ ಆಗುವುದಕ್ಕೆ ಬಿಗ್ ಬಾಸ್ ನೀಡಿದ ಟಾಸ್ಕ್‌ನಿಂದ ಅರವಿಂದ್ ಹಾಗೂ ದಿವ್ಯಾ ನಡುವೆ ಮನಸ್ತಾಪವಾಗಿದೆ. ಸದಾ ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಿದ್ದರು, ಆದರೆ ಇದೇ ಮೊದಲ ಸಲ ಸಣ್ಣ ವಿಚಾರವೊಂದಕ್ಕೆ ಇವರಿಬ್ಬರು ಮುನಿಸಿಕೊಂಡಿದ್ದಾರೆ. ದಿವ್ಯಾ ಮಾತನಾಡಿಸಿದರೂ, ಅರವಿಂದ್ ಮಾತನಾಡುವುದಿಲ್ಲ.

ರಾಜ್‌ ಕುಂದ್ರಾ ಬಗ್ಗೆ ಅಘಾತಕಾರಿ ವಿಷಯ ಬಹಿರಂಗ!

ಅಶ್ಲೀಲ ಚಿತ್ರಗಳನ್ನು ಚಿತ್ರೀಕರಣಿಸಿ ಆ್ಯಪ್‌ಗಳಿಗೆ ಅಪ್ಲೋಡ್ ಮಾಡುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನ ಪೊಲೀಸರು ಬಂಧಿಸಿದ್ದಾರೆ. 18 ತಿಂಗಳ ಹಿಂದೆಯಷ್ಟೇ ವ್ಯವಹಾರ ಆರಂಭಿಸಿದ ರಾಜ್ ಕುಂದ್ರಾ ನೀಡಿರುವ ಶಾಕಿಂಗ್ ವಿಚಾರಗಳನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ರಾಜ್ ಬಳಸುತ್ತಿದ್ದ ಆ್ಯಪ್ ಯಾವುದು? ಯಾಕೆ ಈ ಮಾರ್ಗ ಆಯ್ಕೆ ಮಾಡಿಕೊಂಡರು ಎಂದು ಈ ವಿಡಿಯೋದಲ್ಲಿದೆ

ಸ್ಯಾಲರಿ, EMI ಪಾವತಿ, ಪೆನ್ಶನ್ ಪಡೆಯಲು ಆಗಸ್ಟ್ 1 ರಿಂದ RBI ಹೊಸ ನೀತಿ!

ವೇತನ ಪಡೆಯಲು, ಪಿಂಚಣಿ ಖಾತೆಗೆ ಜಮೆ ಆಗಲು, ಸಾಲದದ ಕಂತು ಪಾವತಿಸಲು ಇದ್ದ ಹಳೇ ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್(RBI)ಬದಲಿಸಿದೆ. ಆಗಸ್ಟ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದೆ. ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ನೀತಿಯಲ್ಲಿ RBI ಬದಲಾವಣೆ ತಂದಿದೆ. ಪರಿಣಾಮ ಈ ಹಿಂದಿದ್ದ ತೊಡಕುಗಳು ನಿವಾರಣೆಯಾಗಿದೆ.

250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್!

ಭಾರತದಲ್ಲೀಗ ಎಲೆಕ್ಟ್ರಿಕ್ ಕಾರ್ಗೋ ದ್ವಿಚಕ್ರವಾಹನಗಳಿಗೂ ಬೇಡಿಕೆ ಸೃಷ್ಟಿಯಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಜಿಪ್ ಎಲೆಕ್ಟ್ರಿಕ್, ಬಿ2ಬಿ ಉದ್ದೇಶಕ್ಕಾಗಿ ನಿರ್ಮಾಣವಾಗಿರುವ ಜಿಪ್ ಕಾರ್ಗೋ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಪರಿಚಯಿಸುತ್ತಿದೆ. ಎರಡು ವೆರಿಯೆಂಟ್‌ಗಳಲ್ಲಿ ಈ ಸ್ಕೂಟರ್ ಮಾರಾಟಕ್ಕೆ ಸಿಗಲಿದೆ. ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಈ ಸ್ಕೂಟರ್‌ಗಳು ಹೊಂದಿವೆ.

ದೆಹಲಿ ಭೇಟಿ ಯಶಸ್ವಿಯಾಗಿದೆ.. ಬೆಂಗ್ಳೂರಿಗೆ ಹೊರಟ ರೇಣುಕಾಚಾರ್ಯ ಸಂದೇಶ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದರೆ ಅತ್ತ ನವದೆಹಲಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.

click me!