ಉತ್ತರಕನ್ನಡ ಕ್ಷೇತ್ರ ಕಳೆದ ಮೂವತ್ತು ವರ್ಷಗಳ ಕಾಲ ವನವಾಸ ಅನುಭವಿಸಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಕ್ಷೇತ್ರ ವನವಾಸದಿಂದ ಮುಕ್ತ ಮಾಡ್ಕೊಳ್ಳಿ. ಮೂವತ್ತು ವರ್ಷ ನಿಮ್ಮ ಮತ ವೇಸ್ಟ್ ಆಗಿದೆ. ಈ ಬಾರಿ ಕಾಂಗ್ರೆಸ್ ಗೆ ಮತ ಕೊಟ್ಟು ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ಕೊಡಿ ಎಂದ ಅಂಜಲಿ ನಿಂಬಾಳ್ಕರ್
ಕಾರವಾರ(ಮೇ.01): ಕೊರೋನಾ ಸಂದರ್ಭದಲ್ಲಿ ಜನ ಸಾಯುತ್ತಿದ್ರೆ ಪ್ರಧಾನಿ ಮೋದಿ ಚಪ್ಪಾಳೆ ಹೊಡೆಯಲು ಹೇಳಿದ್ರು. ಅಂದು ಮನೆ ಮನೆಗೆ ದೀಪ ಹಚ್ಚಲು ಹೇಳಿದ್ರು. ದೀಪ ಆಯ್ತು, ಚಪ್ಪಾಳೆ ಆಯ್ತು ಈಗ ನಮಸ್ಕಾರ ಆರಂಭ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಇಂದು(ಬುಧವಾರ) ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಂಜಲಿ ನಿಂಬಾಳ್ಕರ್ ಅವರು, ಮೊನ್ನೆ ಜಿಲ್ಲೆಗೆ ಬಂದಿದ್ದ ಪ್ರಧಾನಿ ತಮ್ಮ ಕೆಲಸದ ಬಗ್ಗೆ ಹೇಳಬೇಕಿತ್ತು. ಆದ್ರೆ, ಕ್ಷೇತ್ರದ ಜನರಿಗೆ ನನ್ನ ನಮಸ್ಕಾರ ಹೇಳಿ ಅಂತಾ ಹೇಳಿದ್ದಾರೆ. ನಮಸ್ಕಾರ ಮಾಡಿದ್ರೆ ಎಲ್ಲವೂ ಆಗಿ ಬಿಡುತ್ತಾ... ಮೋದಿ ನಮಸ್ಕಾರ ಮನೆ ಮನೆಗೆ ತಲುಪಿಸಿದ್ರೆ ಜೀವನ ನಡೆಯುತ್ತಾ..? ಎಂದು ಪ್ರಶ್ನಿಸಿದ್ದಾರೆ.
ರಾಮಲಲ್ಲಾನಿಗೆ ಅಪಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ: ನರೇಂದ್ರ ಮೋದಿ ವಿಶ್ವಾಸ
ತಾಯಂದಿರು ಸೌದೆ ಬಳಸಿ ಅಡುಗೆ ಮಾಡಿದ್ರೆ ಆರೋಗ್ಯ ಹಾಳಾಗುತ್ತೆ ಅಂತ ಉಜ್ವಲ ಯೋಜನೆ ತಂದ್ರು. ಕೇವಲ ಮೂರ್ನಾಲ್ಕು ತಿಂಗಳು ಉಚಿತ ಗ್ಯಾಸ್ ವಿತರಣೆ ಮಾಡಿದ್ರು. ಈಗ ಬಿಜೆಪಿ- ಜೆಡಿಎಸ್ ಸೇರಿ ಪ್ರಜ್ವಲ ಎಂಬ ಹೊಸ ಯೋಜನೆ ತಂದಿದ್ದಾರೆ. ಅಂದು ಮಹಿಳೆಯ ಆರೋಗ್ಯಕ್ಕಾಗಿ ಉಜ್ವಲ ತಂದಿದ್ರು. ಇಂದು ಅವರೇ ನಮ್ಮ ರಾಜ್ಯದಲ್ಲಿ ಪ್ರಜ್ವಲ ಯೋಜನೆ ಜಾರಿಗೆ ತಂದಿದ್ದಾರೆ. ಮಹಿಳೆಯರ ಅಪಮಾನ ಮಾಡಿದ ಬಿಜೆಪಿಗೆ ಬುದ್ಧಿ ಕಲಿಸುವ ಅವಕಾಶ ನಿಮಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಉತ್ತರಕನ್ನಡ ಕ್ಷೇತ್ರ ಕಳೆದ ಮೂವತ್ತು ವರ್ಷಗಳ ಕಾಲ ವನವಾಸ ಅನುಭವಿಸಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಕ್ಷೇತ್ರ ವನವಾಸದಿಂದ ಮುಕ್ತ ಮಾಡ್ಕೊಳ್ಳಿ. ಮೂವತ್ತು ವರ್ಷ ನಿಮ್ಮ ಮತ ವೇಸ್ಟ್ ಆಗಿದೆ. ಈ ಬಾರಿ ಕಾಂಗ್ರೆಸ್ ಗೆ ಮತ ಕೊಟ್ಟು ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ಕೊಡಿ ಎಂದು ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.