ಸಿಧು ಮೂಸೆವಾಲ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್ ಗ್ಯಾಂಗ್‌ಸ್ಟಾರ್ ಗೋಲ್ಡ್ ಬ್ರಾರ್‌ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿ ಆಗಿದೆ.
ನವದೆಹಲಿ: ಸಿಧು ಮೂಸೆವಾಲ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್ ಗ್ಯಾಂಗ್‌ಸ್ಟಾರ್ ಗೋಲ್ಡ್ ಬ್ರಾರ್‌ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿ ಆಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಿರೋಧಿ ಬಣದಿಂದ ಈ ಕೃತ್ಯ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗೋಲ್ಡ್ ಬ್ರಾರ್‌ನ ವಿರೋಧಿ ಬಣವಾ ದಲ್ಲಾ ಲಕ್ಬೀರ್ ಗ್ಯಾಂಗ್‌ನಿಂದ ಈ ಹತ್ಯೆ ನಡೆದಿದೆ ಎಂಬ ಮಾಹಿತಿ ಇದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಗೋಲ್ಡ್ ಬ್ರಾರ್ ಹತ್ಯೆಯಾಗಿದ್ದಾನ ಎಂಬ ಸಂದೇಶಗಳು ವೈರಲ್ ಆಗ್ತಿವೆ. ಆದರೆ ಆತ ಸತ್ತಿದ್ದಾನೋ ಬದುಕಿದ್ದಾನೋ ಎಂಬ ವಿಚಾರ ಸಂಪೂರ್ಣ ಖಚಿತವಾಗಿಲ್ಲ, ಅಮೆರಿಕಾದ ಮಾಧ್ಯಮವೊಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಫೇರ್‌ಮಾಂಟ್ ಮತ್ತು ಹಾಲ್ಟ್ ಅವೆನ್ಯೂ ಮಧ್ಯೆ ಮಂಗಳವಾರ ಸಂಜೆ 5.30ರ ಸುಮಾರಿಗೆ ಹತ್ಯೆಯಾಗಿದ್ದಾನೆ ಎಂದು ವರದಿ ಮಾಡಿದೆ. ತನ್ನ ಸ್ನೇಹಿತನ ಜೊತೆ ಬೀದಿಯೊಂದರಲ್ಲಿ ನಿಂತಿದ್ದಾಗ ಕೆಲವು ಅಪರಿಚಿತರು ಸಮೀಪ ಬಂದು ಗುಂಡು ಹಾರಿಸಿ ಹೊರಟು ಹೋಗಿದ್ದಾರೆ. ಇದರಿಂದ ಗೋಲ್ಡಿ ಬ್ರಾರ್ ಜೊತೆಗಿದ್ದವನು ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಮೆರಿಕಾದ ಮಾಧ್ಯಮವೊಂದು ವರದಿ ಮಾಡಿದೆ. ಈ ಮಧ್ಯೆ ಈ ಸಾವಿನ ಹೊಣೆಯನ್ನು ಗೋಲ್ಡಿ ಬ್ರಾರ್‌ನ ವಿರೋಧಿ ಬಣವಾದ ದಲ್ಲಾ ಲಕ್ಬೀರ್ ಗ್ಯಾಂಗ್ ಹೊತ್ತುಕೊಂಡಿದೆ.
58ನೇ ವರ್ಷದಲ್ಲಿ ಸಿಧು ಮೂಸೆವಾಲಾ ತಾಯಿಗೆ ಐವಿಎಫ್, ಪಂಜಾಬ್ ಸರ್ಕಾರದ ವರದಿ ಕೇಳಿದ ಕೇಂದ್ರ!
2022 ರ ಮೇ 29 ರಂದು, ಪ್ರಸಿದ್ಧ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೊದಲಿಗೆ ಲಾರೆನ್ಸ್ ಗ್ಯಾಂಗ್ ಇದರ ಹೊಣೆ ಹೊತ್ತುಕೊಂಡಿತು ಮತ್ತು ನಂತರ ಗೋಲ್ಡಿ ಬ್ರಾರ್ ಟಿವಿ ಚಾನೆಲ್‌ಗೆ ಸಂದರ್ಶನ ನೀಡಿ ಮೂಸೆವಾಲಾನನ್ನು ನಾವೇ ಕೊಂದಿದ್ದು ಎಂದು ಹೇಳಿಕೊಂಡಿದ್ದ.
58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ!