ಸಚಿವ ಸ್ಥಾನಕ್ಕ ಶುರುವಾಯ್ತು ಬೇಡಿಕೆ; ವಿದೇಶದಿಂದ ರಾಹುಲ್ ಎಚ್ಚರಿಕೆ: ಜ.1ರ ಟಾಪ್ 10 ಸುದ್ದಿ!

By Suvarna NewsFirst Published Jan 1, 2021, 5:09 PM IST
Highlights

ಇಟಲಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತ ಪ್ರತಿಭಟನೆ ಕುರಿತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಕಾರಣಕ್ಕೆ ನಾಗರೀಕರೊರ್ವರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ವಿಶ್ವಸಂಸ್ಥೆಗೂ ಇದೀಗ ಮತಾಂತರ ಬಿಸಿ ತಟ್ಟಿದೆ. ಕರ್ನಾಟಕದಲ್ಲಿ ಮತ್ತೆ ಸಂಪುಟ ಸರ್ಕಸ್ ಶುರುವಾಗಿದೆ. ಮತ್ತೆ ಸದ್ದು ಮಾಡಿದ ಕಂಗನಾ ರನಾವತ್, ಜನಪ್ರಿಯತೆಯಲ್ಲಿ ಮೋದಿ ನಂ.1 ಸೇರಿದಂತೆ ಜನವರಿ 1ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ವಿದೇಶದಿಂದಲೇ  ಜನತೆಗೆ ರಾಹುಲ್ ಹೊಸ ವರ್ಷದ ಶುಭಾಶಯ.. ಮತ್ತೊಂದು ಮಾತು ಇದೆ!...

ಇಟಲಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇಲ್ಲಿಯೂ ರೈತರ ಪ್ರತಿಭಟನೆ ವಿಚಾರವನ್ನು ಮಾತನಾಡಿದ್ದಾರೆ.

ಕಾಶ್ಮೀರ ನಿವಾಸಿ ಪ್ರಮಾಣ ಪತ್ರ ಪಡೆದ ಬೆನ್ನಲ್ಲೇ ಪಂಜಾಬಿ ಆಭರಣ ವ್ಯಾಪರಿ ಹತ್ಯೆ!...

ಕೇಂದ್ರ ಸರ್ಕಾರ ಜಮ್ಮ ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶನ್ನಾಗಿ ಘೋಷಿಸಿದೆ. ಪರಿಣಾಮ, ಜಮ್ಮ ಮತ್ತು ಕಾಶ್ಮೀರದ ಹೊರಗಿನವರು ನಿವಾಸಿಗಳಾಗಲು ಅವಕಾಶವಿದೆ. ಆದರೆ ಈ ನೀತಿಯನ್ನು ವಿಪಕ್ಷಗಳು ಹಾಗೂ ಭಯೋತ್ಪಾದಕ ಸಂಘಟನೆಗಳು ಖಂಡಿಸಿದೆ. ಇಷ್ಟೇ ಅಲ್ಲ ಇದೀಗ ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಕಾಶ್ಮೀರ ನಿವಾಸಿ ಪ್ರಮಾಣ ಪತ್ರ ಪಡೆದ ಆಭರಣ ವ್ಯಾಪಾರಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.

ವಿಶ್ವ ಸಂಸ್ಥೆಗೆ ಮತಾಂತರ ಬಿಸಿ; UN ನೌಕರರನ್ನು ಇಸ್ಲಾಂಗೆ ಮತಾಂತರಿಸಿದ ಪಾಕ್ ಸೇನಾಧಿಕಾರಿ!...

ಭಾರತದಲ್ಲಿ ಮಾತ್ರವಲ್ಲ ಇದೀಗ ವಿಶ್ವ ಸಂಸ್ಥೆಗೂ ಮತಾಂತರ ಬಿಸಿ ತಟ್ಟಿದೆ. ಯುನೈಟೆಡ್ ನೇಷನ್ಸ್ ಮಿಶನ್ ನೌಕರರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನಲ್ಲೇ ಪಾಕಿಸ್ತಾನ ಸೇನಾಧಿಕಾರಿ ಮೇಲೆ ತನಿಖೆ ಆರಂಭಗೊಂಡಿದೆ.

SDPI ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ: ಮೂವರ ಬಂಧನ...

ಎಸ್‌ಡಿಪಿಐ ಬೆಂಬಲಿತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಸಾಕಷ್ಟು ವೈರಲ್ ಆದ ಬೆನ್ನಲ್ಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜನಪ್ರಿಯತೆಯಲ್ಲಿ ಮೋದಿಯೇ ನಂಬರ್ 1...

ಕೊರೋನಾ ನಿರ್ವಹಣೆ ವಿಚಾರದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯೇ ನಂ.1 ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. 

ಇದೇನಿದು..? ಚಪ್ಪಲಿ ಧೂಳು ಒರೆಸ್ತಿದ್ದಾರೆ ಬಾಲಿವುಡ್ ಕ್ವೀನ್...

ಏನಾದರೂ ಹೇಳಿಕೆ ಕೊಟ್ಟು ಸುದ್ದಿಯಲ್ಲಿರೋ ಕಂಗನಾ ಈಗೇನ್ಮಾಡಿದ್ದಾರೆ ಗೊತ್ತಾ..? ಚಪ್ಪಲಿಯ ದೂಳು ಒರೆಸ್ತಿದ್ದಾರೆ.

ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್: ಬಿಜೆಪಿಯಲ್ಲಿ ಗರಿಗೆದರಿದ ಸಂಪುಟ ಕಸರತ್ತು..!...

ಬೆಳಗಾವಿ ಕೋರ್‌ ಕಮಿಟಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇದೀಗ ಶಿವಮೊಗ್ಗ ಕೋರ್‌ ಕಮಿಟಿ ಸಭೆ ಭಾರೀ ಕುತೂಹಲ ಮೂಡಿಸಿದೆ.

2021ರಲ್ಲಿ ಎಷ್ಟುರಜೆ ಸಿಗುತ್ತೆ? ಇದನ್ನು ಓಡಿ!...

ಕೊರೋನಾ ಲಾಕ್‌ಡೌನ್‌ ಕಾರಣದಿಂದ 2020ರಲ್ಲಿ ಎಲ್ಲ ಕೆಲಸ ಬಿಟ್ಟು ಬಹುತೇಕ ಮಂದಿ 40 ದಿನ ಮನೆಯಲ್ಲೇ ಉಳಿಯುವಂತಾಗಿತ್ತು. ಇನ್ನೂ ಹಲವರಿಗೆ ಮನೆಯೇ ಆಫೀಸಾಯಿತು. ಈಗ ಕೊರೋನಾ ತಗ್ಗುತ್ತಿದೆ. ವಾಣಿಜ್ಯ ವಹಿವಾಟು ಪುನಾರಂಭವಾಗಿದೆ. ಲಾಕ್‌ಡೌನ್‌ ವೇಳೆ ಸಿಕ್ಕಷ್ಟುರಜೆಗಳು 2021ರಲ್ಲಿ ಇಲ್ಲವಾದರೂ, ಸ್ವಲ್ಪ ಅಡ್ಜಸ್ಟ್‌ ಮಾಡಿಕೊಂಡರೆ ಸಾಲು ಸಾಲು ರಜೆಗಳನ್ನು ಪಡೆಯಬಹುದು.

ಬಹುಬೇಡಿಕೆಯ, ಅಗ್ಗದ ದರದ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!...

ಭಾರರತದ ಅತ್ಯಂತ ಕಡಿಮೆ ಬೆಲೆ ಸಬ್ ಕಾಂಪಾಕ್ಟ್ SUV ಕಾರು ಅನ್ನೋ ಹೆಗ್ಗಳಿಕೆಗೆ  ನಿಸಾನ್ ಮ್ಯಾಗ್ನೈಟ್ ಪಾತ್ರವಾಗಿದೆ. ಇನ್ನು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರುವ ಮ್ಯಾಗ್ನೈಟ್ ಕಾರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ಬಿಡುಗಡೆಯಾದ ಒಂದು ತಿಂಗಳಲ್ಲೇ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ.

'ರಜನಿಕಾಂತ್ ನನ್ನ ಜೀವ..ಜೀವನ ..ಇದು ನನ್ನ ಕೊನೆಯ ಪೋಸ್ಟ್'...


 
ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ  ನಟ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ನಿರಾಶೆಗೊಂಡ  ಪನಂಪಟ್ಟು ಮೂಲದ 34 ವರ್ಷದ ಅಭಿಮಾನಿಯೊಬ್ಬ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

click me!